ಚಿಂತೆ ಮಾಡಬೇಡಿ, ಕೊಹಿನೂರ್ ವಜ್ರವನ್ನು ಭಾರತಕ್ಕೆ ತಂದೇ ತರುವೆ :ಸ್ವಯಂಘೋಷಿತ ದೇವಮಾನವ ಬಾಗೇಶ್ವರ ಬಾಬಾ ಲಂಡನ್‌ನಲ್ಲಿ ಸಂಚಲನಾತ್ಮಕ ಹೇಳಿಕೆ

|

Updated on: Jul 28, 2023 | 7:29 AM

Koh-i-Noor: ಚಿಂತೆ ಮಾಡಬೇಡಿ ಅಮೂಲ್ಯ ಕೊಹಿನೂರ್ ವಜ್ರವನ್ನು ಭಾರತಕ್ಕೆ ತಂದೇ ತರುವೆ ಎಂದು ಸ್ವಯಂಘೋಷಿತ ದೇವಮಾನವ, ಮೂಲತಃ ಮಧ್ಯಪ್ರದೇಶದ ಛತ್ತಾರ್ಪುರ ಜಿಲ್ಲೆಯ ಬಾಗೇಶ್ವರ ಬಾಬಾ ಲಂಡನ್​ನಲ್ಲಿ ಹೇಳಿದ್ದಾರೆ 

ಚಿಂತೆ ಮಾಡಬೇಡಿ, ಕೊಹಿನೂರ್ ವಜ್ರವನ್ನು ಭಾರತಕ್ಕೆ ತಂದೇ ತರುವೆ :ಸ್ವಯಂಘೋಷಿತ ದೇವಮಾನವ ಬಾಗೇಶ್ವರ ಬಾಬಾ  ಲಂಡನ್‌ನಲ್ಲಿ ಸಂಚಲನಾತ್ಮಕ ಹೇಳಿಕೆ
ಸ್ವಯಂಘೋಷಿತ ದೇವಮಾನವ, ಆಂಜನೇಯ ಸ್ವಾಮಿಯ ಪರಮ ಭಕ್ತ ಬಾಗೇಶ್ವರ್ ಬಾಬಾ
Follow us on

Bageshwar Dham: ಚಿಂತೆ ಮಾಡಬೇಡಿ ಬ್ರಿಟಿಷರು (British) ಭಾರತದಿಂದ ಹೊತ್ತುಕೊಂಡುಹೋಗಿರುವ ಅಮೂಲ್ಯ ಕೊಹಿನೂರ್ ವಜ್ರವನ್ನು (Koh-i-Noor) ಭಾರತಕ್ಕೆ ತಂದೇ ತರುವೆ ಎಂದು ಪ್ರಸ್ತುತ ಲಂಡನ್‌ನಲ್ಲಿರುವ (London) ಸ್ವಯಂಘೋಷಿತ ದೇವಮಾನವ (Self Styled God Man), ಆಂಜನೇಯ ಸ್ವಾಮಿಯ ಪರಮ ಭಕ್ತ, ಮೂಲತಃ ಮಧ್ಯಪ್ರದೇಶದ ಛತ್ತಾರ್ಪುರ ಜಿಲ್ಲೆಯ 26 ವರ್ಷದ ಪಂಡಿತ್ ಧೀರೇಂದ್ರ ಕೃಷ್ಣ ಶಾಸ್ತ್ರಿ ಅಲಿಯಾಸ್ ಬಾಗೇಶ್ವರ ಬಾಬಾ (Dhirendra Shastri of Bageshwar Dham) ಘೋಷಿಸಿದ್ದಾರೆ (Spiritual Leader).

ತಮ್ಮ ಭವಿಷ್ಯವಾಣಿಯಿಂದ ಉತ್ತರ ಭಾರತದಲ್ಲಿ ಸಂಚಲನ ಮೂಡಿಸಿದ್ದ ಭಾಗೇಶ್ವರ್ ಬಾಬಾ ಧೀರೇಂದ್ರ ಶಾಸ್ತ್ರಿ ಲಂಡನ್ ನಲ್ಲೂ ಹವಾ ಎಬ್ಬಿಸುತ್ತಿದ್ದಾರೆ. ಲಂಡನ್‌ನಲ್ಲಿ ನಡೆದ ಬಾಗೇಶ್ವರ ಬಾಬಾ ಅವರ ರಾಮ ಕಥಾ ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಲಂಡನ್‌ನಲ್ಲಿರುವ ಕೊಹಿನೂರ್ ವಜ್ರವನ್ನು ಭಾರತಕ್ಕೆ ತರಲು ಎಲ್ಲಾ ಪ್ರಯತ್ನಗಳನ್ನು ಮಾಡುವುದಾಗಿ ಬಾಗೇಶ್ವರ ಬಾಬಾ ಇದೇ ವೇಳೇ ಸಂವೇದನಾಶೀಲ ಘೋಷಣೆ ಮಾಡಿದರು. ಅನಿವಾಸಿ ಭಾರತೀಯರ ಜತೆಗೆ ಬ್ರಿಟನ್ ಪ್ರಜೆಗಳೂ ಬಾಬಾ ದರ್ಬಾರ್ ಗೆ ಮುಗಿಬಿದ್ದಿದ್ದಾರೆ.

ಉತ್ತರ ಭಾರತದಲ್ಲಿ ಜೀವಂತ ದೇವರು ಎಂದು ಕರೆಸಿಕೊಳ್ಳುವ ಧೀರೇಂದ್ರ ಶಾಸ್ತ್ರಿ ಬ್ರಿಟನ್ ಪ್ರಜೆಗಳು ಆಶೀರ್ವಾದ ಪಡೆದರು. ರಾಮನ ಕಥೆಯನ್ನು ಬೋಧಿಸಲು ಬಾಬಾ ಬಾಗೇಶ್ವರ ಲಂಡನ್‌ಗೆ ಬಂದಿದ್ದಾರೆ. ಬ್ರಿಟಿಷ್ ಉನ್ನತ ಅಧಿಕಾರಿಗಳು ಸಹ ಅವರ ಧರ್ಮೋಪದೇಶಗಳನ್ನು ಕೇಳಲು ಹೆಚ್ಚಿನ ಆಸಕ್ತಿಯನ್ನು ತೋರಿಸಿದ್ದಾರೆ. ಬ್ರಿಟಿಷ್ ಪ್ರಜೆ ಸೈಮನ್ ಕೂಡ ಈ ಕಾರ್ಯಕ್ರಮದಲ್ಲಿ ಅತ್ಯಂತ ಆಸಕ್ತಿಯಿಂದ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಕೊಹಿನೂರ್ ವಜ್ರದ ಕುರಿತು ಬಾಬಾ ಬಾಗೇಶ್ವರ ಮಾತನಾಡಿದರು. ಅವರ ಪ್ರವಚನಗಳನ್ನು ಕೇಳಲು ನೂರಾರು ಜನರು ಸರತಿ ಸಾಲಿನಲ್ಲಿ ನಿಂತಿದ್ದರು.

ಬಾಗೇಶ್ವರ ಬಾಬಾ ರಾಮಕಥಾ ಪ್ರವಚನ ನೀಡಲು ಲಂಡನ್‌ಗೆ ಬಂದಿಳಿದಾಗ ವ್ಯಕ್ತಿಯೊಬ್ಬರಿಂದ ಕರೆ ಬಂದಿತ್ತು. ಬ್ರಿಟಿಷರು ಕೊಹಿನೂರ್ ವಜ್ರವನ್ನು ಭಾರತದಿಂದ ತೆಗೆದುಕೊಂಡು ಬಂದಿದ್ದಾರೆ. ಆ ವಜ್ರವನ್ನು ಭಾರತಕ್ಕೆ ವಾಪಸ್​ ಕೊಂಡೊಯ್ಯುವ ಇಚ್ಛೆ ತನಗಿದೆ ಎಂದು ಬಾಬಾಗೆ ಹೇಳಿದರಂತೆ. ಅದಕ್ಕೆ ಬಾಬಾ ಸತ್ಸಂಗದಲ್ಲಿ ಇಂತಹ ಮಾತುಗಳನ್ನಾಡುವುದು ಒಳ್ಳೆಯದಲ್ಲ. ಅಂತಹ ಬೇಡಿಕೆ ಇಟ್ಟರೆ ಲಂಡನ್‌ಗೆ ಹಿಂತಿರುಗಲು ಬಿಡುವುದಿಲ್ಲ ಎಂದೂ ತನಗೆ ತಿಳಿದಿದೆ ಎಂದು ಬಾಗೇಶ್ವರ ಬಾಬಾ ಹೇಳಿದ್ದಾರೆ. ಆ ವ್ಯಕ್ತಿ ತಮಾಷೆಯಾಗಿ ಹೇಳಿರುವುದನ್ನು ಯಾರೂ ಗಂಭೀರವಾಗಿ ಪರಿಗಣಿಸಬಾರದು ಎಂದು ಬಾಬಾ ಸಲಹೆ ನೀಡಿದರು.

ಮುಂದುವರಿದು ಮಾತನಾಡಿದ ಬಾಗೇಶ್ವರ ಬಾಬಾ ಚಿಂತಿಸಬೇಡಿ.. ಕೊಹಿನೂರ್ ವಜ್ರವನ್ನು ಭಾರತಕ್ಕೆ ತರುವುದು ಖಂಡಿತಾ.. ಆದರೆ ಕೊಹಿನೂರ್ ವಾಪಸ್ ತರುವುದು ತುಂಬಾ ಕಷ್ಟ. ನಾನು ಇಲ್ಲಿಗೆ ಹಲವು ಬಾರಿ ಬರಬೇಕು. ಕೊಹಿನೂರ್ ಕೇಳಿದರೆ ಅರಾಜಕತೆ ಸೃಷ್ಟಿಸಿದ ಆರೋಪ ಮಾಡುತ್ತಾರೆ. ನಾನು ಏನನ್ನೂ ಮುಚ್ಚಿಡುವುದಿಲ್ಲ. ನನ್ನ ಮನಸ್ಸಿನಲ್ಲಿರುವುದನ್ನು ಹೇಳಿದ್ದೇನೆ ಎಂದಿದ್ದಾರೆ.

ಅತ್ಯಮೂಲ್ಯ ಕೊಹಿನೂರ್ ವಜ್ರವನ್ನು 1849 ರಲ್ಲಿ ಈಸ್ಟ್ ಇಂಡಿಯಾ ಕಂಪನಿಯು ಬ್ರಿಟನ್‌ಗೆ ಸಾಗಿಸಿತು. ವಜ್ರವನ್ನು ರಾಣಿ ವಿಕ್ಟೋರಿಯಾಗೆ ನೀಡಲಾಯಿತು. ಕೊಹಿನೂರ್ ವಜ್ರವು ಪ್ರಸ್ತುತ ಬ್ರಿಟಿಷ್ ರಾಜಮನೆತನದ ಒಡೆತನದಲ್ಲಿದೆ. ಆ ವಜ್ರವನ್ನು ಭಾರತಕ್ಕೆ ತರಲು ಆಗಾಗ್ಗೆ ಹಲವು ಪ್ರಯತ್ನಗಳು ನಡೆಯುತ್ತಿವೆ. ಪರಿಸ್ಥಿತಿ ಹೀಗಿರುವಾಗ, ಬಾಗೇಶ್ವರ ಬಾಬಾ ಲಂಡನ್‌ಗೆ ಹೋಗಿ ಕೊಹಿನೂರ್ ವಜ್ರವನ್ನು ಭಾರತಕ್ಕೆ ತೆಗೆದುಕೊಂಡು ಬರುವೆ ಎಂಬ ಸಂಚಲನಾತ್ಮಕ ಹೇಳಿಕೆ ನೀಡಿದ್ದಾರೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:09 am, Fri, 28 July 23