Pakistan Drones: ಭಾರತಕ್ಕೆ ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡಲು ಡ್ರೋನ್‌ಗಳನ್ನು ಬಳಸಲಾಗುತ್ತಿದೆ ಎಂದು ಒಪ್ಪಿಕೊಂಡ ಪಾಕ್
ಡ್ರೋನ್ ಮೂಲಕ ಪಾಕಿಸ್ತಾನದಿಂದ ಭಾರತಕ್ಕೆ ಡ್ರಗ್ಸ್ ಕಳ್ಳಸಾಗಣೆ ಮಾಡಲಾಗುತ್ತಿದೆ. ಇದರಲ್ಲಿ 10 ಕಿಲೋಗ್ರಾಂನಷ್ಟು ಮಾತ್ರ ಸಾಗಣೆ ಮಾಡಲಾಗುತ್ತಿದೆ ಎಂದು ಪಾಕ್ ಪ್ರಧಾನಿ ಶೆಹಬಾಜ್ ಪರೀಷ್ ಅವರ ಸಲಹೆಗಾರ ಒಪ್ಪಿಕೊಂಡಿದ್ದಾರೆ.
ದೆಹಲಿ, ಜು.28: ಡ್ರೋನ್ ಮೂಲಕ ಪಾಕಿಸ್ತಾನದಿಂದ ಭಾರತಕ್ಕೆ ಡ್ರಗ್ಸ್ ಕಳ್ಳಸಾಗಣೆ ಮಾಡಲಾಗುತ್ತಿದೆ. ಇದರಲ್ಲಿ 10 ಕಿಲೋಗ್ರಾಂನಷ್ಟು ಮಾತ್ರ ಸಾಗಣೆ ಮಾಡಲಾಗುತ್ತಿದೆ ಎಂದು ಪಾಕ್ ಪ್ರಧಾನಿ ಶೆಹಬಾಜ್ ಪರೀಷ್ ಅವರ ಸಲಹೆಗಾರ ಒಪ್ಪಿಕೊಂಡಿದ್ದಾರೆ. ಈ ಹಿಂದೆ ಪಾಕಿಸ್ತಾನ ಇಂತಹ ಕೃತ್ಯವನ್ನು ಮಾಡುತ್ತಿಲ್ಲ ಎಂದು ಮೊಂಡುವಾದವನ್ನು ಮಾಡಿತ್ತು. ಆದರೆ ಇದೀಗ ಮಾದಕವಸ್ತುಗಳ ಕಳ್ಳಸಾಗಣೆಯ ಬಗ್ಗೆ ಮೊದಲ ಬಾರಿಗೆ ಪಾಕ್ ಒಪ್ಪಿಕೊಂಡಿದೆ.
ಭಾರತ-ಪಾಕಿಸ್ತಾನ ಗಡಿಯಲ್ಲಿ ಭಾರತೀಯ ಭದ್ರತಾ ಪಡೆಗಳು ಹೆರಾಯಿನ್ ಮತ್ತು ಇತರ ನಿಷೇಧಿತ ವಸ್ತುಗಳನ್ನು ನಿರಂತರವಾಗಿ ಸಾಗಿಸುತ್ತಿದ್ದ ಡ್ರೋನ್‌ಗಳನ್ನು ಹೊಡೆದುರುಳಿಸುತ್ತಿವೆ. ಇನ್ನೂ ಇಂತಹ ಘಟನೆಗಳು ಪಂಜಾಬ್ ಗಡಿ ಪ್ರದೇಶದಲ್ಲಿ ಹೆಚ್ಚಾಗಿ ನಡೆಯುತ್ತಿತ್ತು ಎಂದು ಹೇಳಲಾಗಿದೆ.
Big disclosure by PM’s advisor Malik Muhammad Ahmad Khan. Smugglers using drones In the flood affected areas of Kasur near Pakistan-India border to transport Heroin. He demanded a special package for the rehabilitation of the flood victims otherwise victims will join smugglers. pic.twitter.com/HhWNSNuiKp
— Hamid Mir حامد میر (@HamidMirPAK) July 17, 2023
ಈ ಬಗ್ಗೆ ಗಡಿಯಲ್ಲಿರುವ ಕಸೂರ್ ನಗರದಲ್ಲಿ ಪ್ರವಾಹ ಪರಿಸ್ಥಿತಿ ಕುರಿತು ಪಾಕಿಸ್ತಾನಿ ಪತ್ರಕರ್ತ ಹಮೀದ್ ಮಿರ್, ಪ್ರಧಾನಿ ಸಲಹೆಗಾರ ಮಲಿಕ್ ಮುಹಮ್ಮದ್ ಅಹ್ಮದ್ ಖಾನ್ ಅವರೊಂದಿಗೆ ಮಾತನಾಡುತ್ತಿರುವಾಗ ಈ ಪ್ರದೇಶದಲ್ಲಿ ಡ್ರಗ್ಸ್ ಕಳ್ಳಸಾಗಣೆ ಮಾಡಲಾಗುತ್ತಿದೆ ಎಂದು ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ: ಪಂಜಾಬ್ನಲ್ಲಿ ಪಾಕಿಸ್ತಾನದ ಡ್ರೋನ್ ಬೆನ್ನಟ್ಟಿ ಹೊಡೆದುರುಳಿಸಿದ ಬಿಎಸ್ಎಫ್ ಯೋಧರು
ಖಂಡಿತವಾಗಿಯೂ ಇಂತಹ ಘಟನೆಗಳು ಗಡಿಯಲ್ಲಿ ನಡೆಯುತ್ತಿದೆ. ಇತ್ತೀಚೆಗೆ ತಲಾ ಎರಡು ಡ್ರೋನ್‌ಗಳಲ್ಲಿ 10 ಕಿಲೋಗ್ರಾಂಗಳಷ್ಟು ಹೆರಾಯಿನ್ ಅನ್ನು ಕಟ್ಟಿ ಭಾರತಕ್ಕೆ ಕಳುಹಿಸಲಾಗಿತ್ತು. ಇದರಲ್ಲಿ ಏಜೆನ್ಸಿಗಳ ಪಾತ್ರವು ಇದೆ ಎಂದು ಜುಲೈ 17 ರಂದು ಪತ್ರಕರ್ತರು ಟ್ವಿಟರ್ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:24 am, Fri, 28 July 23