Shark: ಡಾಲ್ಫಿನ್​ಗಳೊಂದಿಗೆ ನದಿಯಲ್ಲಿ ಈಜುತ್ತಿದ್ದ ಬಾಲಕಿಯ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿದ ಶಾರ್ಕ್​ ಮೀನು

ನದಿಯಲ್ಲಿ ಈಜುತ್ತಿದ್ದ ಬಾಲಕಿ ಮೇಲೆ ಶಾರ್ಕ್​(Shark) ಮೀನು ದಾಳಿ ನಡೆಸಿದ್ದು, ಬಾಲಕಿ ಮೃತಪಟ್ಟಿರುವ ಘಟನೆ ಪಶ್ಚಿಮ ಆಸ್ಟ್ರೇಲಿಯಾದಲ್ಲಿ ನಡೆದಿದೆ.

Shark: ಡಾಲ್ಫಿನ್​ಗಳೊಂದಿಗೆ ನದಿಯಲ್ಲಿ ಈಜುತ್ತಿದ್ದ ಬಾಲಕಿಯ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿದ ಶಾರ್ಕ್​ ಮೀನು
ಶಾರ್ಕ್​ ಮೀನು

Updated on: Feb 05, 2023 | 10:05 AM

ನದಿಯಲ್ಲಿ ಈಜುತ್ತಿದ್ದ ಬಾಲಕಿ ಮೇಲೆ ಶಾರ್ಕ್​(Shark) ಮೀನು ದಾಳಿ ನಡೆಸಿದ್ದು, ಬಾಲಕಿ ಮೃತಪಟ್ಟಿರುವ ಘಟನೆ ಪಶ್ಚಿಮ ಆಸ್ಟ್ರೇಲಿಯಾದಲ್ಲಿ ನಡೆದಿದೆ. ಉತ್ತರ ಫ್ರೀಮೆಂಟಲ್​ನ ಪರ್ತ್​ ಉಪನಗರದಲ್ಲಿರುವ ಸ್ವಾನ್ ನದಿಯಲ್ಲಿ 16 ವರ್ಷ ಬಾಲಕಿ ಈಜಲು ಹೋಗಿದ್ದಳು, ಆ ಸಮಯದಲ್ಲಿ ಶಾರ್ಕ್​ ಮೀನೊಂದು ಆಕೆಯನ್ನು ಕಚ್ಚಿ ಘಾಸಿಗೊಳಿಸಿತ್ತು. ತೀವ್ರವಾಗಿ ಗಾಯಗೊಂಡಿದ್ದ ಬಾಲಕಿಯನ್ನು ನೀರಿನಿಂದ ಹೊರತೆಗೆಯಲಾಗಿದ್ದು, ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಯಾವ ರೀತಿಯ ಶಾರ್ಕ್ ಬಾಲಕಿಯ ಮೇಲೆ ದಾಳಿ ಮಾಡಿದೆ ಎಂದು ಅಧಿಕಾರಿಗಳಿಗೆ ಖಚಿತವಾಗಿಲ್ಲ ಎಂದು ಎಬಿಸಿ ವರದಿ ಮಾಡಿದೆ. ಫ್ರಿಮೆಂಟಲ್ ಜಿಲ್ಲಾ ಪೊಲೀಸರು ನೀರಿನಿಂದ ಬಾಲಕಿಯನ್ನು ಹೊರತೆಗೆಯಲು ಪ್ರಯತ್ನಿಸಿದ್ದರು ಆದರೆ ಆಕೆ ಬದುಕುಳಿಯಲಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.
ಆಕೆ ನದಿಯಲ್ಲಿ ಜೆಟ್​ ಸ್ಕೀ ಮಾಡುತ್ತಿದ್ದಳು, ಜೆಟ್​ ಸ್ಕೀ ಸಮೀಪವೇ ಸಾಗುತ್ತಿದ್ದ ಡಾಲ್ಫಿನ್​ ಜತೆ ಈಜಲು ತೆರಳಿದ್ದಳು. ಆ ಸಮಯದಲ್ಲಿ ಶಾರ್ಕ್ ಮೀನು ದಾಳಿ ನಡೆಸಿದೆ.

ಮತ್ತಷ್ಟು ಓದಿ: Fish: ಚಳಿಗಾಲದಲ್ಲಿ ಮೀನು ಸೇವನೆಯಿಂದ ನೀವು ಈ ಲಾಭ ಪಡೆಯುತ್ತೀರಿ!

ಸ್ವಾನ್ ನದಿಯಲ್ಲಿ ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಮತ್ತು ಯಾವುದೇ ಬೀಚ್‌ಗಳ ಬಳಿ ಹೋಗದಂತೆ ರಾಜ್ಯ ಸರ್ಕಾರ ಜನರಿಗೆ ಎಚ್ಚರಿಕೆ ನೀಡಿದೆ. ಪಶ್ಚಿಮ ಆಸ್ಟ್ರೇಲಿಯನ್ ನೀರಿನಲ್ಲಿ 2021ರ ನವೆಂಬರ್​ನಲ್ಲಿ ಪರ್ತ್​ನ ಪೋರ್ಟ್​ ಬೀಚ್​ನಲ್ಲಿ 57 ವರ್ಷದ ವ್ಯಕ್ತಿಯನ್ನು ಬಿಳಿ ಶಾರ್ಕ್​ ಒಂದು ದಾಳಿ ನಡೆಸಿ ಹತ್ಯೆ ಮಾಡಿತ್ತು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us