AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕ: ಶಾರ್ಕ್​ನಿಂದ ಕಚ್ಚಿಸಿಕೊಂಡ 10-ವರ್ಷದ ಬಾಲಕನ ಜೀವ ಉಳಿಸಲಾಯಿತಾದರೂ ಕಾಲು ಕತ್ತರಿಸಬೇಕಾಯಿತು!

ಸರ್ಜರಿಯ ಬಳಿಕ ಅವನನ್ನು ವಾರ್ಡ್​ಗೆ ಕರೆತರಲಾಗಿದ್ದು ವಿಶ್ರಾಂತಿ ಪಡೆಯುತ್ತಿದ್ದಾನೆ ಎಂದು ಬರೆದಿರುವ ಜೊಶವಾ ರೀಡರ್, ದೇವರಲ್ಲಿ ಅವನು ಅಪಾರ ನಂಬಿಕೆಯಿಟ್ಟುಕೊಂಡಿದ್ದರಿಂದಲೇ ಬದುಕುಳಿಯುವುದು ಸಾಧ್ಯವಾಗಿದೆ ಅಂತ ಹೇಳಿದ್ದಾರೆ.

ಅಮೆರಿಕ: ಶಾರ್ಕ್​ನಿಂದ ಕಚ್ಚಿಸಿಕೊಂಡ 10-ವರ್ಷದ ಬಾಲಕನ ಜೀವ ಉಳಿಸಲಾಯಿತಾದರೂ ಕಾಲು ಕತ್ತರಿಸಬೇಕಾಯಿತು!
ಜೇಮ್ಸನ್ ರೀಡರ್ ಜ್ಯೂನಿಯರ್
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Aug 18, 2022 | 8:07 AM

Share

ರಜೆ ಕಳೆಯಲು ಫ್ಲೊರಿಡಾ ಕೀಸ್ ಗೆ ತೆರಳಿ ಈಜುತ್ತಿದ್ದ 10-ವರ್ಷದ ಬಾಲಕನಿಗೆ ಶಾರ್ಕೊಂದು (shark) ಕಚ್ಚಿದ್ದರಿಂದ ಅವನ ಕಾಲನ್ನೇ ಕತ್ತರಿಸಿಬೇಕಾಯಿತು ಎಂದು ಅವನ ಕುಟುಂಬ ಹೇಳಿದೆ. ಕಾಲು ಕಳೆದುಕೊಂಡಿರುವ ಬಾಲಕ ಜೇಮ್ಸನ್ ರೀಡರ್ ಜ್ಯೂನಿಯರ್ (Jameson Reeder Jr.) ಶನಿವಾರಂದು ಲೂ ಕೀ ಕರಾವಳಿ ಭಾಗದಲ್ಲಿ ಈಜುತ್ತಿದ್ದಾಗ ಶಾರ್ಕ್ ನಿಂದ ಹಲ್ಲೆಗೊಳಗಾದ ಎಂದ ಫ್ಲೋರಿಡಾ ಫಿಶ್ ಅಂಡ್ ವೈಲ್ಡ್ ಲೈಫ್ ಕನ್ಸರ್ವೇಶನ್ ಕಮೀಶನ್ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಬಾಲಕನ ಚಿಕ್ಕಪ್ಪ ಜೊಶುವಾ ರೀಡರ್ ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ, ಜೇಮ್ಸನ್ ತನ್ನ ತಂದೆತಾಯಿ ಮತ್ತು ಮೂವರು ಸಹೋದರರೊಂದಿಗೆ ಬೋಟ್ ಟ್ರಿಪ್ ತೆರಳಿ ಕಡಿದಾದ ಕಣಿವೆ ಪ್ರದೇಶದಲ್ಲಿ ಈಜುತ್ತಿದ್ದಾಗ ಸುಮಾರು 8 ಅಡಿ ಉದ್ದವಿದ್ದ ಗಂಡು ಶಾರ್ಕ್ ಅವನು ಮೊಣಕಾಲಿನ ಕೆಳಭಾಗವನ್ನು ಬಲವಾಗಿ ಕಚ್ಚಿದೆ ಎಂದು ಹೇಳಿದ್ದಾರೆ.

ಶಾರ್ಕ್ ನಿಂದ ಕಡಿತಕ್ಕೊಳಗಾದರೂ ಜೇಮ್ಸನ್ ನೂಡಲ್ ಫ್ಲೋಟ್ ಅನ್ನು ಹಿಡಿದಿಟ್ಟುಕೊಳ್ಳುವಲ್ಲಿ ಸಫಲನಾಗಿದ್ದರಿಂದ ಅವನ ತಂದೆಗೆ ರಕ್ಷಿಸಲು ಸಾಧ್ಯವಾಗಿದೆ, ಅವರು ಅವನ ಕಾಲಿಗೆ ಕೂಡಲೇಅ ಟೂರ್ನಿಕೆಟ್ ಲೇಪನ ಮಾಡಿ ಹತ್ತಿರದಲ್ಲೇ ಇದ್ದ ಹೆಚ್ಚು ವೇಗದಿಂದ ಸಾಗುವ ದೋಣಿಯಲ್ಲಿ ಜೇಮ್ಸನ್ ಮತ್ತು ಕುಟುಂಬದ ಇತರ ಸದಸ್ಯರನ್ನು ತೀರಕ್ಕೆ ಕರೆತರಲಾಗಿದೆ. ನಂತರ ತೀವ್ರವಾಗಿ ಗಾಯಗೊಂಡಿದ್ದ ಬಾಲಕನನ್ನು ವಿಮಾನದಲ್ಲಿ ಮಿಯಾಮಿಯಲ್ಲಿನ ಮಕ್ಕಳ ಆಸ್ಪತ್ರೆಗೆ ಸಾಗಿಸಲಾಗಿದೆ.

ಅಲ್ಲಿನ ವೈದ್ಯಕೀಯ ತಂಡವು ಅವನ ಜೀವವನ್ನೇನೋ ಉಳಿಸಿತು ಆದರೆ ಅವನ ಮೊಣಕಾಲಿನಿಂದ ಕೆಳಭಾಗದ ಕಾಲನ್ನು ಕತ್ತರಿಸಲೇಬೇಕಾದ ಅನಿವಾರ್ಯತೆಗೆ ಒಳಗಾಯಿತು.

ಸರ್ಜರಿಯ ಬಳಿಕ ಅವನನ್ನು ವಾರ್ಡ್​ಗೆ ಕರೆತರಲಾಗಿದ್ದು ವಿಶ್ರಾಂತಿ ಪಡೆಯುತ್ತಿದ್ದಾನೆ ಎಂದು ಬರೆದಿರುವ ಜೊಶವಾ ರೀಡರ್, ದೇವರಲ್ಲಿ ಅವನು ಅಪಾರ ನಂಬಿಕೆಯಿಟ್ಟುಕೊಂಡಿದ್ದರಿಂದಲೇ ಬದುಕುಳಿಯುವುದು ಸಾಧ್ಯವಾಗಿದೆ ಅಂತ ಹೇಳಿದ್ದಾರೆ.

ಜೇಮ್ಸನ್ ನ ಆಸ್ಪತ್ರೆಯ ವೆಚ್ಚ ಭರಿಸಲು ಕುಟುಂಬವು ಗಿವ್ ಸೆಂಡ್ ಗೋ ಮೂಲಕ ಮನವಿ ಮಾಡಿಕೊಂಡ ಬಳಿಕ ಮಂಗಳವಾರದ ಮಧ್ಯಾಹ್ನದರೆಗೆ ಸುಮಾರು 40 ಲಕ್ಷ ರೂ. ಸಂಗ್ರಹವಾಗಿದೆ.

ನ್ಯೂ ಯಾರ್ಕ್ ನ ಕರಾವಳಿ ಪ್ರದೇಶದಲ್ಲಿ ಈ ಬಾರಿಯ ಬೇಸಿಗೆಯಲ್ಲಿ ಶಾರ್ಕ್ ಮತ್ತು ಮಾನವರ ನಡುವಿನ ಚಕಮಕಿಗಳು ಸಾಮಾನ್ಯಕ್ಕಿಂತ ಹೆಚ್ಚು ವರದಿಯಾಗಿದ್ದರೂ ಮಾನವರು ಅವುಗಳಿಂದ ಕಚ್ಚಿಸಿಕೊಂಡಿರುವ ಪ್ರಕರಣಗಳು ತೀರ ಕಮ್ಮಿ ಎನ್ನಲಾಗಿದೆ.

ಕಳೆದ 30 ವರ್ಷಗಳಲ್ಲಿ ಶಾರ್ಕ್ ಎನ್ ಕೌಂಟರ್ ಗಳ ಜಾಗತಿಕ ದಾಖಲೆ ನೋಡುವುದಾದರೆ, ಕೊಂಚಮಟ್ಟಿನ ಏರಿಕೆ ಕಂಡ ನಂತರ ಈಗ ಸ್ಥಿರಗೊಂಡಿವೆ. ಸಮುದ್ರ ತೀರಗಳಲ್ಲಿ ಮನರಂಜನೆಗಾಗಿ ಮಾನವರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಸಮುದ್ರಕ್ಕಿಳಿಯಲು ಆರಂಭಿಸಿದ್ದರಿಂದ ಮತ್ತು ಅವನತಿಯತ್ತ ಸಾಗುತ್ತಿದ್ದ ಶಾರ್ಕ್ ಸಂತತಿ ಚೇತರಿಕೆ ಕಂಡಿದ್ದರಿಂದ ಕೆಲ ಸಮಯದವರೆಗೆ ಅವುಗಳ ಉಪಟಳ ಜಾಸ್ತಿಯಾಗಿತ್ತು ಎನ್ನಲಾಗಿದೆ.

ಕಳೆದ ವರ್ಷ ಜಾಗತಿಕವಾಗಿ ಮಾನವರ ಮೇಲೆ 73 ಅಪ್ರಚೋದಿತ ಶಾರ್ಕ್ ದಾಳಿಗಳು ದಾಖಲಾಗಿವೆ ಎಂದು ಫ್ಲೋರಿಡಾ ಮ್ಯೂಸಿಯಮ್ ವರದಿ ಮಾಡಿದೆ. ಈ ಎಲ್ಲ ಹಲ್ಲೆಗಳು ಆಕಸ್ಮಿಕ, ಯಾಕೆಂದರೆ ಶಾರ್ಕ್ ಗಳು ಯಾವತ್ತೂ ಉದ್ದೇಶಪೂರ್ವಕವಾಗಿ ಮಾನವರ ಮೇಲೆ ಆಕ್ರಮಣ ಮಾಡುವುದಿಲ್ಲ ಎಂದು ವರದಿ ಹೇಳುತ್ತದೆ.

ಅಮೆರಿಕದಲ್ಲಿ ವರದಿಯಾಗುವ ಹೆಚ್ಚಿನ ಶಾರ್ಕ್ ಹಲ್ಲೆಗಳು ಫ್ಲೋರಿಡಾನಲ್ಲಿ ಅಟ್ಲಾಂಟಿಕ್ ಸಾಗರದ ಕರಾವಳಿ ಪ್ರದೇಶದಲ್ಲಿ ಸಂಭವಿಸಿವೆ.

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ