ಚಂಡಮಾರುತದಿಂದ ನಲುಗಿದ ಶ್ರೀಲಂಕಾಕ್ಕೆ 4,000 ಕೋಟಿ ರೂ. ಆರ್ಥಿಕ ಪ್ಯಾಕೇಜ್ ಘೋಷಿಸಿದ ಭಾರತ

ದಿತ್ವ ಚಂಡಮಾರುತದಿಂದ ಶ್ರೀಲಂಕಾದಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಹೀಗಾಗಿ, ಶ್ರೀಲಂಕಾದ ಪುನರ್ನಿರ್ಮಾಣಕ್ಕೆ ಭಾರತವು 4,000 ಕೋಟಿ ರೂ.ಗಳ ಪುನರ್ನಿರ್ಮಾಣ ಪ್ಯಾಕೇಜ್ ಅನ್ನು ಪ್ರಕಟಿಸಿದೆ. ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸಾನಾಯಕ ಅವರನ್ನು ಇಂದು ಮುಂಜಾನೆ ಭೇಟಿ ಮಾಡಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್​. ಜೈಶಂಕರ್ ಶ್ರೀಲಂಕಾಕ್ಕೆ 450 ಮಿಲಿಯನ್ ಡಾಲರ್ ಪುನರ್ನಿರ್ಮಾಣ ಪ್ಯಾಕೇಜ್ ಅನ್ನು ನೀಡುವ ಪ್ರಧಾನಿ ನರೇಂದ್ರ ಮೋದಿಯವರ ಪತ್ರವನ್ನು ಹಸ್ತಾಂತರಿಸಿದರು.

ಚಂಡಮಾರುತದಿಂದ ನಲುಗಿದ ಶ್ರೀಲಂಕಾಕ್ಕೆ 4,000 ಕೋಟಿ ರೂ. ಆರ್ಥಿಕ ಪ್ಯಾಕೇಜ್ ಘೋಷಿಸಿದ ಭಾರತ
Minister Jaishankar In Sri Lanka

Updated on: Dec 23, 2025 | 10:45 PM

ಕೊಲಂಬೊ, ಡಿಸೆಂಬರ್ 23: ಭಾರತದ ನೆರೆಹೊರೆ ಮೊದಲು ಮತ್ತು ಮಹಾಸಾಗರ್ ನೀತಿಗಳ ಅಡಿಯಲ್ಲಿ ಶ್ರೀಲಂಕಾಕ್ಕೆ (Sri Lanka) ಭಾರತ ಸಹಾಯಹಸ್ತ ಚಾಚಿದೆ. ದಿತ್ವಾ ಚಂಡಮಾರುತದಿಂದ ತತ್ತರಿಸಿರುವ ಶ್ರೀಲಂಕಾದ ಪುನರ್ಮಿರ್ಮಾಣಕ್ಕೆ ಭಾರತ 4 ಸಾವಿರ ಕೋಟಿ ರೂ. ಪರಿಹಾರ ಪ್ಯಾಕೇಜ್ ಘೋಷಿಸಿದೆ. ಈ ಬಗ್ಗೆ ಎಕ್ಸ್​​ನಲ್ಲಿ ಪೋಸ್ಟ್ ಮಾಡಿರುವ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ದಿತ್ವ ಚಂಡಮಾರುತದ ನಂತರ ದ್ವೀಪ ರಾಷ್ಟ್ರದಲ್ಲಿ ಬಿಕ್ಕಟ್ಟಿನ ಸಮಯದಲ್ಲಿ ಸಹಾಯ ಮಾಡಬೇಕಿರುವುದು ನಮ್ಮ ಕರ್ತವ್ಯ ಎಂದು ಹೇಳಿದ್ದಾರೆ.

ಶ್ರೀಲಂಕಾ ದೇಶಕ್ಕೆ ಚಂಡಮಾರುತದಿಂದ ಅಪಾರ ಹಾನಿಯಾಗಿದೆ. ಈ ಸಂದರ್ಭದಲ್ಲಿ ಭಾರತವು ನೆರೆಯ ದೇಶಕ್ಕೆ ನಿರಂತರವಾಗಿ ಸಹಾಯವನ್ನು ನೀಡುತ್ತಿದೆ. ವಿದೇಶಾಂಗ ಸಚಿವ ಎಸ್. ಜೈಶಂಕರ್ ಶ್ರೀಲಂಕಾಕ್ಕೆ 450 ಮಿಲಿಯನ್ ಯುಎಸ್ ಡಾಲರ್ ನೆರವು ಘೋಷಿಸಿದ್ದಾರೆ.

ಇದನ್ನೂ ಓದಿ: ಭಯೋತ್ಪಾದನೆ ಬಗ್ಗೆ ಸಮರ್ಥನೆಗೆ ಅವಕಾಶವೇ ಇಲ್ಲ; SCO ಶೃಂಗಸಭೆಯಲ್ಲಿ ಸಚಿವ ಜೈಶಂಕರ್ ಸಂದೇಶ

ದಿತ್ವ ಚಂಡಮಾರುತವು ಶ್ರೀಲಂಕಾದಲ್ಲಿ ಅಪಾರ ಹಾನಿಯನ್ನುಂಟುಮಾಡಿದ್ದು, ಅದು ಚೇತರಿಸಿಕೊಳ್ಳಲು ವರ್ಷಗಳೇ ಬೇಕಾಗುತ್ತದೆ. ಚಂಡಮಾರುತದ ಸಮಯದಲ್ಲಿ ಭಾರತ ಶ್ರೀಲಂಕಾದೊಂದಿಗೆ ನಿಂತಿದೆ ಮತ್ತು 450 ಮಿಲಿಯನ್ ಯುಎಸ್ ಡಾಲರ್ ನೆರವು ಪ್ಯಾಕೇಜ್ ನೀಡಿದೆ ಎಂದು ಅವರು ಹೇಳಿದ್ದಾರೆ.


ಜೈಶಂಕರ್ ಎರಡು ದಿನಗಳ ಶ್ರೀಲಂಕಾ ಭೇಟಿಯಲ್ಲಿದ್ದಾರೆ. ಇಂದು (ಡಿಸೆಂಬರ್ 23) ಶ್ರೀಲಂಕಾದ ವಿದೇಶಾಂಗ ಸಚಿವೆ ವಿಜಿತಾ ಹೆರಾತ್ ಅವರೊಂದಿಗಿನ ಸಂಭಾಷಣೆಯ ಸಂದರ್ಭದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ಪ್ರಧಾನಿ ಮೋದಿ ಬರೆದ ಪತ್ರವನ್ನು ಅವರು ಅಧ್ಯಕ್ಷ ಅನುರ ಕುಮಾರ ದಿಸಾನಾಯಕ ಅವರಿಗೆ ನೀಡಿದರು. “ದಿತ್ವ ಚಂಡಮಾರುತದ ಸಮಯದಲ್ಲಿ ಭಾರತ ಶ್ರೀಲಂಕಾದೊಂದಿಗೆ ನಿಲ್ಲಲು ಹೆಮ್ಮೆಪಡುತ್ತದೆ” ಎಂದು ಜೈಶಂಕರ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ