ಭಾರತದಲ್ಲಿ ಫೆಬ್ರವರಿಯಲ್ಲಿ ಕೊರೊನಾ ಉತ್ತುಂಗಕ್ಕೆ, ದಿನಕ್ಕೆ 5 ಲಕ್ಷದಷ್ಟು ಕೇಸ್​ಗಳು ದಾಖಲಾಗುವ ಸಾಧ್ಯತೆ; ಅಮೆರಿಕ ಆರೋಗ್ಯ ತಜ್ಞರ ಎಚ್ಚರಿಕೆ

ಭಾರತದಲ್ಲಿ ಇದೀಗ ಕೊರೊನಾ ಮತ್ತು ಒಮಿಕ್ರಾನ್ ಸೊಂಕಿತರ ಸಂಖ್ಯೆ ದಿನೇದಿನೆ ಏರಿಕೆಯಾಗುತ್ತಿರುವ ಬೆನ್ನಲ್ಲೇ ಒಂದೊಂದೇ ರಾಜ್ಯಗಳು ವೀಕೆಂಡ್ ಕರ್ಫ್ಯೂ ಸೇರಿ ನಿರ್ಬಂಧಗಳನ್ನು ಹೇರುತ್ತಿವೆ. ಅದರಲ್ಲೂ ಅಂತಾರಾಷ್ಟ್ರೀ ಯ ಪ್ರಯಾಣಿಕರಿಗೆ ಕಟ್ಟುನಿಟ್ಟಿನ ಕ್ರಮ ಹೇರಲಾಗಿದೆ.

ಭಾರತದಲ್ಲಿ ಫೆಬ್ರವರಿಯಲ್ಲಿ ಕೊರೊನಾ ಉತ್ತುಂಗಕ್ಕೆ, ದಿನಕ್ಕೆ 5 ಲಕ್ಷದಷ್ಟು ಕೇಸ್​ಗಳು ದಾಖಲಾಗುವ ಸಾಧ್ಯತೆ; ಅಮೆರಿಕ ಆರೋಗ್ಯ ತಜ್ಞರ ಎಚ್ಚರಿಕೆ
ಸಾಂಕೇತಿಕ ಚಿತ್ರ
Updated By: Lakshmi Hegde

Updated on: Jan 08, 2022 | 2:17 PM

ದೆಹಲಿ: ಭಾರತದಲ್ಲಿ ಈಗಾಗಲೇ ಒಂದು ದಿನದಲ್ಲಿ ಪತ್ತೆಯಾಗುವ ಕೊರೊನಾ ಸೋಂಕಿತರ (Corona Cases In India) ಸಂಖ್ಯೆ 1 ಲಕ್ಷವನ್ನು ದಾಟಿದೆ. ಆದರೆ ಇದು ಇಷ್ಟಕ್ಕೇ ಮುಗಿಯುವುದಿಲ್ಲ. ಫೆಬ್ರವರಿ ಹೊತ್ತಿಗೆ ಇನ್ನಷ್ಟು ಉತ್ತುಂಗಕ್ಕೆ ಏರಲಿದೆ ಎಂದು ಅಮೆರಿಕದ ಆರೋಗ್ಯ ತಜ್ಞರೊಬ್ಬರು ಹೇಳಿದ್ದಾರೆ. ಭಾರತದಲ್ಲಿ ಫೆಬ್ರವರಿಯಲ್ಲಿ ದಿನವೊಂದಕ್ಕೆ 5 ಲಕ್ಷದಷ್ಟು ಕೊರೊನಾ ಕೇಸ್​ಗಳು ದಾಖಲಾಗಲಿದೆ ಎಂದು ಹೇಳಿರುವ ವಾಷಿಂಗ್ಟನ್​ ಇನ್ಸ್ಟಿಟ್ಯೂಟ್ ಫಾರ್ ಹೆಲ್ತ್ ಮೆಟ್ರಿಕ್ಸ್ ಮತ್ತು ಮೌಲ್ಯಮಾಪನದಿಂದ ನಿರ್ದೇಶಕ ಡಾ. ಕ್ರಿಸ್ಟೋಫರ್ ಮುರ್ರೆ, ಒಮಿಕ್ರಾನ್​ ಗಂಭೀರ ರೋಗ ಉಂಟು ಮಾಡುವ ಸೋಂಕಲ್ಲ. ಡೆಲ್ಟಾ ರೂಪಾಂತರಕ್ಕೆ ಹೋಲಿಸಿದರೆ ಒಮಿಕ್ರಾನ್​​(Omicron)ನಲ್ಲಿ ಆಸ್ಪತ್ರೆಗೆ ದಾಖಲಾಗುವ ಮತ್ತು ಸಾವಿನ ಪ್ರಮಾಣ ತುಂಬ ಕಡಿಮೆ ಎಂದು ಹೇಳಿದ್ದಾರೆ.  ಇನ್ನು ಒಮಿಕ್ರಾನ್​ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (WHO) ಸೇರಿ ಎಲ್ಲ ಆರೋಗ್ಯ ತಜ್ಞರೂ ಕೂಡ ಗಂಭೀರ ಸ್ವರೂಪದ್ದಲ್ಲ ಎಂದೇ ಹೇಳುತ್ತಿದ್ದಾರೆ. ಈ ಮಧ್ಯೆ ಡಬ್ಲ್ಯೂಎಚ್​ಒ ಪ್ರಧಾನ ನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರು, ಒಮಿಕ್ರಾನ್​ ಡೆಲ್ಟಾಕ್ಕಿಂತಲೂ ಕಡಿಮೆ ತೀವ್ರತೆಯ ರೋಗ ಉಂಟು ಮಾಡುವುದು ಹೌದು. ಅಷ್ಟಾದ ಮಾತ್ರಕ್ಕೆ ಅದನ್ನು ಸೌಮ್ಯ ಎಂದು ವರ್ಗೀಕರಣ ಮಾಡಿಡಲು ಸಾಧ್ಯವಿಲ್ಲ. ನಮ್ಮ ಎಚ್ಚರಿಕೆಯಲ್ಲಿ ನಾವಿರಬೇಕು ಎಂದು ಹೇಳಿದ್ದಾರೆ.  

ಭಾರತದಲ್ಲಿ ಇದೀಗ ಕೊರೊನಾ ಮತ್ತು ಒಮಿಕ್ರಾನ್ ಸೊಂಕಿತರ ಸಂಖ್ಯೆ ದಿನೇದಿನೆ ಏರಿಕೆಯಾಗುತ್ತಿರುವ ಬೆನ್ನಲ್ಲೇ ಒಂದೊಂದೇ ರಾಜ್ಯಗಳು ವೀಕೆಂಡ್ ಕರ್ಫ್ಯೂ ಸೇರಿ ನಿರ್ಬಂಧಗಳನ್ನು ಹೇರುತ್ತಿವೆ. ಅದರಲ್ಲೂ ಅಂತಾರಾಷ್ಟ್ರೀ ಯ ಪ್ರಯಾಣಿಕರಿಗೆ ಕಟ್ಟುನಿಟ್ಟಿನ ಕ್ರಮ ಹೇರಲಾಗಿದೆ. ವಿದೇಶದಿಂದ ಯಾರೇ ಬಂದರೂ ಅವರಿಗೆ ಟೆಸ್ಟ್​ ಮಾಡಿ, ನೆಗೆಟಿವ್ ಬಂದರೂ ಕೂಡ ಏಳು ದಿನಗಳ ಕಾಲ ಹೋಂ ಕ್ವಾರಂಟೈನ್​ನಲ್ಲಿಯೇ ಇರಬೇಕು. 8ನೇ ದಿನಕ್ಕೆ ಮತ್ತೊಮ್ಮೆ ಆರ್​ಟಿ-ಪಿಸಿಆರ್ ಟೆಸ್ಟ್ ಮಾಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ಸ್ಪಷ್ಟಪಡಿಸಿದೆ. ನಿನ್ನೆ ಕೇಂದ್ರ ಸರ್ಕಾರ ಈ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಜನವರಿ 11ರಿಂದ ಅನ್ವಯ ಆಗಲಿದೆ.  ಇಷ್ಟು ದಿನ ಒಮಿಕ್ರಾನ್​ ಮತ್ತು ಕೊರೊನಾ ಹೈ ರಿಸ್ಕ್​ ದೇಶಗಳಿಂದ ಬಂದವರಿಗೆ ಮಾತ್ರ ಈ ನಿಯಮ ಅನ್ವಯ ಆಗುತ್ತಿತ್ತು.

ಇದನ್ನೂ ಓದಿ: ಫೇಸ್​ಬುಕ್ ಹಾಗೂ ಗೂಗಲ್​ಗೆ ಫ್ರಾನ್ಸ್​​ನಲ್ಲಿ ದಂಡದ ಬರೆ; ಅಷ್ಟಕ್ಕೂ ಈ ಟೆಕ್ ದೈತ್ಯರು ಮಾಡಿದ ತಪ್ಪೇನು?

Published On - 8:01 am, Sat, 8 January 22