ಪ್ರವಾಸಕ್ಕೆ ಹೋಗಿ ಹಿಮಪಾತಕ್ಕೆ ಬಲಿಯಾದ 16ಕ್ಕೂ ಹೆಚ್ಚು ಮಂದಿ; ಹಿಮದಡಿ ಸಿಲುಕಿದ ಕಾರಿನಲ್ಲಿ ಶವಗಳು, ಸೇನೆಯಿಂದ ರಕ್ಷಣಾ ಕಾರ್ಯಾಚರಣೆ

ಪ್ರವಾಸಕ್ಕೆ ಹೋಗಿ ಹಿಮಪಾತಕ್ಕೆ ಬಲಿಯಾದ 16ಕ್ಕೂ ಹೆಚ್ಚು ಮಂದಿ; ಹಿಮದಡಿ ಸಿಲುಕಿದ ಕಾರಿನಲ್ಲಿ ಶವಗಳು, ಸೇನೆಯಿಂದ ರಕ್ಷಣಾ ಕಾರ್ಯಾಚರಣೆ
ಮುರ್ರೆ ಚಿತ್ರಣ

Pakistan: ಸುಮಾರು 1000 ವಾಹನಗಳು ಹಿಮದಡಿ ಸಿಲುಕಿವೆ. 16-19ಜನರು ಮೃತಪಟ್ಟಿರಬಹುದು. ಇನ್ನು ಅಲ್ಲಿ ಸಿಲುಕಿರುವ ಜನರಿಗೆ ಸ್ಥಳೀಯರು ಕಂಬಳಿ, ಆಹಾರ ನೀಡುತ್ತಿದ್ದಾರೆ.  ಇಂದು ಸಂಜೆಯೊಳಗೆ ವಾಹನಗಳನ್ನು ತೆರವುಗೊಳಿಸಲಾಗುವುದು ಎಂದು ಪಾಕ್ ಸಚಿವರು ತಿಳಿಸಿದ್ದಾರೆ.

TV9kannada Web Team

| Edited By: Lakshmi Hegde

Jan 08, 2022 | 2:53 PM

ಪಾಕಿಸ್ತಾನದ ಗುಡ್ಡಗಾಡು ಪ್ರವಾಸಿ ಸ್ಥಳ ಮುರ್ರೆ(Murree)ಯಲ್ಲಿ ವಿಪರೀತ ಹಿಮಪಾತವಾಗಿ (Snowfall) ಪ್ರವಾಸಿಗರ ವಾಹನಗಳೆಲ್ಲ ಹಿಮದಡಿ ಸಿಲುಕಿದ ಪರಿಣಾಮ ಸುಮಾರು 16 ಜನರು ಅವರ ವಾಹನದೊಳಗೆ ಇದ್ದಂತೆಯೇ ಮೃತಪಟ್ಟಿದ್ದಾರೆ. ಸದ್ಯ ಅಲ್ಲಿ ಹಿಮದಲ್ಲಿ ಸಿಲುಕಿರುವವರನ್ನು ರಕ್ಷಣೆ ಮಾಡಲು ಪಾಕಿಸ್ತಾನ ಸರ್ಕಾರ ಸೇನಾ ಸಿಬ್ಬಂದಿ ಮತ್ತು ಇತರ ನಾಗರಿಕ ರಕ್ಷಣಾ ಪಡೆಯ ಸಿಬ್ಬಂದಿಯನ್ನು ನಿಯೋಜಿಸಿದೆ. ಹಿಮಪಾತದಿಂದ ಮುರ್ರೆಗೆ ಹೋಗುವ ಎಲ್ಲ ರಸ್ತೆಗಳೂ ಬ್ಲಾಕ್​ ಆಗಿದ್ದು, ನಗರದಲ್ಲೀಗ 10 ಸಾವಿರಕ್ಕೂ ಅಧಿಕ ಪ್ರವಾಸಿಗರು ಸಿಲುಕಿದ್ದಾರೆ. ಅವರಿಗೆ ಯಾವುದೇ ಮಾರ್ಗದ ಮೂಲಕವೂ ಮುರ್ರೆಯಿಂದ ಹೊರಬೀಳಲು ಸಾಧ್ಯವಾಗುತ್ತಿಲ್ಲ. ಸದ್ಯ ಮುರ್ರೆಯಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ ಎಂದು ವರದಿಯಾಗಿದೆ. 

ಪಾಕಿಸ್ತಾನದ ರಾವಲ್ಪಿಂಡಿ ಜಿಲ್ಲೆಯ ಪಿರ್​ ಪಂಜಾಲ್​ ವಲಯದ ಗಲ್ಯಾಟ್ ಪ್ರದೇಶದಲ್ಲಿ ಇರುವ ಈ ಮುರ್ರೆ ಎಂಬುದು ಹಿಮತುಂಬಿದ ಗುಡ್ಡಪ್ರದೇಶ. ಇದೊಂದು ಪ್ರವಾಸಿ ಸ್ಥಳ. ಕಳೆದ ಕೆಲವು ದಿನಗಳಿಂದ ಸುಮಾರು 10 ಸಾವಿರದಷ್ಟು ಪ್ರವಾಸಿಗರು ಅಲ್ಲಿಗೆ ಹೋಗಿದ್ದಾರೆ. ಆದರೆ ವಾಪಸ್ ಬರಲು ಸಾಧ್ಯವಾಗದ ಕಾರಣ ಅವರಷ್ಟೂ ಜನ ಅಲ್ಲಿಯೇ ಇರುವಂತಾಗಿದೆ. ಹೀಗಾಗಿ ಇನ್ನಷ್ಟು ಅವ್ಯವಸ್ಥೆ ಉಂಟಾಗಿದೆ. ಕಳೆದ 15-120 ವರ್ಷಗಳಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಪ್ರವಾಸಿಗರನ್ನು ಇಲ್ಲಿ ನೋಡಿರಲಿಲ್ಲ ಎಂದು ಪಾಕಿಸ್ತಾನ ಆಂತರಿಕ ವ್ಯವಹಾರಗಳ ಸಚಿವ ಶೇಖ್​ ರಶೀದ್​ ತಿಳಿಸಿದ್ದಾರೆ. ಹಾಗೇ, ಹಿಮದಡಿ ಸಿಲುಕಿರುವವರನ್ನು ರಕ್ಷಿಸಲು ಪಾಕಿಸ್ತಾನ ಕೇಂದ್ರ ಸರ್ಕಾರ ಮತ್ತು ರಾವಲ್ಪಿಂಡಿ ಸರ್ಕಾರ ಜತೆಯಾಗಿ ಶ್ರಮಿಸುತ್ತಿದೆ ಎಂದೂ ಮಾಹಿತಿ ನೀಡಿದ್ದಾರೆ.

ಸುಮಾರು 1000 ವಾಹನಗಳು ಹಿಮದಡಿ ಸಿಲುಕಿವೆ. 16-19ಜನರು ಮೃತಪಟ್ಟಿರಬಹುದು. ಇನ್ನು ಅಲ್ಲಿ ಸಿಲುಕಿರುವ ಜನರಿಗೆ ಸ್ಥಳೀಯರು ಕಂಬಳಿ, ಆಹಾರ ನೀಡುತ್ತಿದ್ದಾರೆ.  ಇಂದು ಸಂಜೆಯೊಳಗೆ ವಾಹನಗಳನ್ನು ತೆರವುಗೊಳಿಸಲಾಗುವುದು. ಆದರೆ ನಾಳೆ ಸಂಜೆ 9ಗಂಟೆಯವರೆಗೂ ಮುರ್ರೆಯ ಎಲ್ಲ ರೋಡ್​ಗಳು ಬಂದ್​ ಇರುತ್ತವೆ. ಸದ್ಯ ನಾವು ಮುರ್ರೆಗೆ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಲಿದ್ದೇವೆ. ಯಾಕೆಂದರೆ ಇಲ್ಲಿಗೆ ಆಗಮಿಸಲು ಇದು ಸೂಕ್ತ ಸಮಯವಲ್ಲ ಎಂದೂ ಶೇಖ್​ ರಶೀದ್ ಹೇಳಿದ್ದಾರೆ.

ಜನರು ಸತ್ತಿದ್ದು ಚಳಿಯಿಂದ ಅಲ್ಲ ! ಮುರ್ರೆಯಲ್ಲಿ ಸದ್ಯ 4 ರಿಂದ 4.5 ಅಡಿಗಳಷ್ಟು ಹಿಮಪಾತ ಆಗುತ್ತಿದೆ. ಇಷ್ಟು ಪ್ರಮಾಣದ ಹಿಮಪಾತವನ್ನು ಹಿಂದೆಂದೂ ಇಲ್ಲಿ ಕಂಡಿರಲಿಲ್ಲ. ಆದರೆ ಇಲ್ಲಿ ಸಿಲುಕಿ ಮೃತಪಟ್ಟವರಲ್ಲಿ ಬಹುಪಾಲು ಜನರು ಹಿಮದ ಚಳಿಯಿಂದ ಸತ್ತಿಲ್ಲ. ಕಾರಿನಲ್ಲಿ ಹೀಟರ್​ ಹಾಕಿಕೊಂಡು ಮಲಗಿ, ಅದರ ಹೊಗೆಗೆ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಅಂದಹಾಗೆ ಈ ಮುರ್ರೆ ಪಂಜಾಬ್​ ಪ್ರಾಂತ್ಯಕ್ಕೆ ಸೇರುತ್ತದೆ. ಅಲ್ಲಿ ಇಷ್ಟು ದೊಡ್ಡಮಟ್ಟದಲ್ಲಿ ಹಿಮಪಾತವಾಗಿ ಜನರ ಜೀವ ಹೋದ ಬೆನ್ನಲ್ಲೇ, ಮುರ್ರೆಯನ್ನು ವಿಪತ್ತು ಪೀಡಿತ ಪ್ರದೇಶ ಎಂದು ಪಂಜಾಬ್​ ಸರ್ಕಾರ ಘೋಷಣೆ ಮಾಡಿದೆ.

ಇದನ್ನೂ ಓದಿ: ‘ಮುಂಗಾರು ಮಳೆ’ ತಂಡದಲ್ಲೂ ಮನಸ್ತಾಪ ಆಗಿತ್ತು; ಸ್ನೇಹದ ಅಸಲಿ ವಿಚಾರ ತೆರೆದಿಟ್ಟ ಗಣೇಶ್​

Follow us on

Related Stories

Most Read Stories

Click on your DTH Provider to Add TV9 Kannada