ಶಾಲೆಗೆ ಸೇರಿಸುವುದಾಗಿ ಬಾಲಕನನ್ನು ಕರೆತಂದು ಜೀತಕ್ಕಿಟ್ಟ ದಂಪತಿಗೆ 11 ವರ್ಷ ಜೈಲು, 1.8 ಕೋಟಿ ರೂ. ದಂಡ
ಭಾರತದಿಂದ ಬಾಲಕನನ್ನು ಅಮೆರಿಕಕ್ಕೆ ಕರೆತಂದು 3 ವರ್ಷಗಳ ಕಾಲ ಜೀತಕ್ಕಿಟ್ಟಿಕೊಂಡಿದ್ದ ದಂಪತಿಗೆ ಅಮೆರಿಕ ನ್ಯಾಯಾಲಯ 11 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಈ ದಂಪತಿ ತಮ್ಮದೇ ಸಂಬಂಧಿಯ ಮಗನನ್ನು ಕರೆತಂದು ಪೆಟ್ರೋಲ್ ಬಂಕ್ನಲ್ಲಿ ಕೆಲಸಕ್ಕಿಟ್ಟಿದ್ದರು.
ಶಾಲೆಗೆ ಸೇರಿಸಲು ಸಹಾಯ ಮಾಡುವುದಾಗಿ ಹೇಳಿ ಭಾರತದಿಂದ ಅಮೆರಿಕಕ್ಕೆ ಬಾಲಕನೊಬ್ಬನನ್ನು ಕರೆತಂದು ಜೀತಕ್ಕಿಟ್ಟಿದ್ದ ದಂಪತಿಗೆ ಅಮೆರಿಕ ನ್ಯಾಯಾಲಯವು 11 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಅಷ್ಟೇ ಅಲ್ಲದೆ ಬಾಲಕನಿಗೆ 1.8 ಕೋಟಿ ರೂ. ಪರಿಹಾರವನ್ನು ನೀಡುವಂತೆ ನ್ಯಾಯಾಲಯ ಸೂಚಿಸಿದೆ.
ಈ ದಂಪತಿ ತಮ್ಮದೇ ಸಂಬಂಧಿಯ ಮಗನನ್ನು ಕರೆತಂದು ಪೆಟ್ರೋಲ್ ಬಂಕ್ನಲ್ಲಿ ಕೆಲಸಕ್ಕಿಟ್ಟಿದ್ದರು. ಕಳೆದ ಮೂರು ವರ್ಷಗಳಿಂದ ಬಾಲಕ ಗ್ಯಾಸ್ ಸ್ಟೇಷನ್ನಲ್ಲಿ ಕೆಲಸ ಮಾಡುತ್ತಿದ್ದ.
31 ವರ್ಷ ಹರ್ಮನ್ ಪ್ರೀತ್ ಸಿಂಗ್ಗೆ 11 ವರ್ಷಗಳ ಜೈಲು ಶಿಕ್ಷೆ ಹಾಗೂ 43 ವರ್ಷದ ಕುಲಬೀರ್ ಕೌರ್ಗೆ 7 ವರ್ಷಗಳ ಶಿಕ್ಷೆ ವಿಧಿಸಲಾಗಿದೆ. ಹಾಗೆಯೇ ಬಾಲಕನಿಗೆ 1.8 ಕೋಟಿ ರೂ. ಪರಿಹಾರ ನೀಡುವಂತೆ ತಿಳಿಸಲಾಗಿದೆ. ಬಾಲಕನಿಗೆ ಅಮೆರಿಕದಲ್ಲಿ ಒಳ್ಳೆಯ ಶಾಲೆಗೆ ಸೇರಿಸುವುದಾಗಿ ಕುಟುಂಬದವರನ್ನು ನಂಬಿಸಿ ಕರೆತಂದಿದ್ದಾರೆ.
ಮತ್ತಷ್ಟು ಓದಿ: ನ್ಯೂಜಿಲೆಂಡ್: ತನ್ನ ಮೂವರು ಹೆಣ್ಣುಮಕ್ಕಳನ್ನು ಕೊಂದಿದ್ದ ಮಹಿಳೆಗೆ 18 ವರ್ಷಗಳ ಜೈಲು ಶಿಕ್ಷೆ
ಅಷ್ಟೇ ಅಲ್ಲದೆ ಅವರು ಬಾಲಕನ ವಲಸೆ ದಾಖಲೆಗಳನ್ನು ಕೂಡ ತಮ್ಮ ಬಳಿ ಇರಿಸಿಕೊಂಡಿದ್ದರು. ಹಾಗೆಯೇ ನಿನಗೆ ಹಣ ಬೇಕೆಂದರೆ ದಿನಕ್ಕೆ 12 ರಿಂದ 17 ಗಂಟೆಗಳ ಕಾಲ ಕೆಲಸ ಮಾಡಬೇಕೆಂದು ಹೇಳಿದ್ದರು. ಅಷ್ಟೇ ಅಲ್ಲದೆ ದೈಹಿಕವಾಗಿ ಮಾನಸಿಕವಾಗಿ ಕಷ್ಟ ಕೊಟ್ಟಿದ್ದರು.
ಪೆಟ್ರೋಲ್ ಬಂಕ್ನಲ್ಲಿ ಶುಚಿಗೊಳಿಸುವುದು, ಅಡುಗೆ ಮಾಡುವುದು, ಪೆಟ್ರೋಲ್ ಬಂಕ್ನ ದಾಖಲೆ ನಿರ್ವಹಣೆ ಸೇರಿದಂತೆ ಕೆಲವು ಕೆಲಸಗಳನ್ನು ಮಾಡಿಸುತ್ತಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ