AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನ್ಯೂಜಿಲೆಂಡ್​: ತನ್ನ ಮೂವರು ಹೆಣ್ಣುಮಕ್ಕಳನ್ನು ಕೊಂದಿದ್ದ ಮಹಿಳೆಗೆ 18 ವರ್ಷಗಳ ಜೈಲು ಶಿಕ್ಷೆ

ಮೂರು ಮಕ್ಕಳನ್ನು ಕೊಂದಿದ್ದ ನ್ಯೂಜಿಲೆಂಡ್ ಮಹಿಳೆಗೆ ನ್ಯಾಯಾಲಯವು 18 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಪತಿ ಮನೆಯಲ್ಲಿಲ್ಲದ ಸಮಯ ನೋಡಿ ಮೂವರು ಹೆಣ್ಣುಮಕ್ಕಳನ್ನು ಮಹಿಳೆ ಹತ್ಯೆ ಮಾಡಿದ್ದಳು. 2021ರಲ್ಲಿ ಈ ಘಟನೆ ನಡೆದಿತ್ತು.

ನ್ಯೂಜಿಲೆಂಡ್​: ತನ್ನ ಮೂವರು ಹೆಣ್ಣುಮಕ್ಕಳನ್ನು ಕೊಂದಿದ್ದ ಮಹಿಳೆಗೆ 18 ವರ್ಷಗಳ ಜೈಲು ಶಿಕ್ಷೆ
ನಯನಾ ರಾಜೀವ್
|

Updated on: Jun 26, 2024 | 11:08 AM

Share

ತನ್ನ ಮೂವರು ಹೆಣ್ಣುಮಕ್ಕಳನ್ನು ಕೊಂದಿದ್ದ ಮಹಿಳೆಗೆ ನ್ಯಾಯಾಲಯವು 18 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ನ್ಯೂಜಿಲೆಂಡ್(New Zealand)​ನಲ್ಲಿ ನಡೆದ ಘಟನೆ ಇದಾಗಿದ್ದು, ಮಹಿಳೆ ಲಾರೆನ್ ಡಿಕಾಸನ್ 2021ರಲ್ಲಿ ತನ್ನ ಮೂರು ಮಕ್ಕಳನ್ನು ಹತ್ಯೆಗೈದಿದ್ದರು.

ನನ್ನ ಕೃತ್ಯದಿಂದ ನನ್ನ ಕುಟುಂಬಕ್ಕೆ ಅಪಾರ ನೋವು ಉಂಟಾಗಿದೆ, ನಾನು ಪಶ್ಚಾತಾಪ ಪಡುತ್ತಿದ್ದೇನೆ ಎಂದು ಆಕೆ ಹೇಳಿದ್ದಾರೆ.

ಡಿಕಾಸನ್ ಎರಡು ವರ್ಷಗಳ ಹಿಂದೆ ತನ್ನ ಅವಳಿ ಮಕ್ಕಳಾದ ಮಾಯಾ ಹಾಗೂ ಕಾರ್ಲಾ ಮೊದಲ ಮಗಳಾದ ಲಿಯಾನ್​ ಹತ್ಯೆ ಮಾಡಿದ ಮೂರು ಪ್ರಕರಣಗಳಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿದೆ.

ಮತ್ತಷ್ಟು ಓದಿ: ಮಕ್ಕಳಿಬ್ಬರೂ ಲೈಂಗಿಕ ಆರೋಪಗಳಲ್ಲಿ ಜೈಲು ಸೇರಿದರೂ ರೇವಣ್ಣನ ಮೊಗದಲ್ಲಿ ಮಾಸದ ಮುಗುಳ್ನಗು!

2021ರ ಸೆಪ್ಟೆಂಬರ್​ನಲ್ಲಿ ಆಕೆಯ ಪತಿ ಸಹೋದ್ಯೋಗಿಗಳೊಂದಿಗೆ ಊಟಕ್ಕೆ ಹೋಗಿದ್ದ ಹೊತ್ತಿನಲ್ಲಿ ಆಕೆ ಕೊಲೆ ಮಾಡಿದ್ದಳು, ಪತಿ ಹಿಂದಿರುಗಿದಾಗ ಮಕ್ಕಳು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡಿದ್ದರು.

ವಾರದ ಹಿಂದಷ್ಟೇ ಕುಟುಂಬವು ದಕ್ಷಿಣ ಆಫ್ರಿಕಾದಿಂದ ನ್ಯೂಜಿಲೆಂಡ್‌ಗೆ ತೆರಳಿತ್ತು. ವಿಚಾರಣೆಯಲ್ಲಿ ಆಕೆ ಮಕ್ಕಳನ್ನು ಕೊಂದಿರುವುದನ್ನು ಒಪ್ಪಿಕೊಂಡಿದ್ದಾರೆ. ಜತೆಗೆ ತನ್ನ ಮಾನಸಿಕ ಸ್ಥಿತಿ ಅಷ್ಟು ಸರಿ ಇಲ್ಲ ಎಂದೂ ಹೇಳಿದ್ದಾರೆ.

ಸಂಬಂಧಿಯನ್ನು ಪೆಟ್ರೋಲ್​ ಬಂಕ್​ನಲ್ಲಿ ಕೆಲಸ ಮಾಡಲು ಒತ್ತಾಯಿಸಿದ ದಂಪತಿ ಬಂಧನ

ಶಾಲೆಗೆ ಸೇರಿಸಲು ಸಹಾಯ ಮಾಡುವ ನೆಪದಲ್ಲಿ ಅಮೆರಿಕಕ್ಕೆ ಕರೆತಂದು ಮೂರು ವರ್ಷಗಳ ಕಾಲ ತಮ್ಮ ಪೆಟ್ರೋಲ್​ ಬಂಕ್​ನಲ್ಲಿ ಕೆಲಸ ಮಾಡಲು ಒತ್ತಾಯಿಸಿದ ಭಾರತೀಯ-ಅಮೆರಿಕನ್ ದಂಪತಿಗೆ ಯುಎಸ್ ನ್ಯಾಯಾಲಯವು ಜೈಲು ಶಿಕ್ಷೆ ವಿಧಿಸಿದೆ.

ಸಿಂಗ್ ಮತ್ತು ಕೌರ್ ಸಂತ್ರಸ್ತೆಯನ್ನು ಅಂಗಡಿಯಲ್ಲಿ ಶುಚಿಗೊಳಿಸುವುದು, ಅಡುಗೆ ಮಾಡುವುದು, ಸಂಗ್ರಹಣೆ ಮತ್ತು ನಗದು ರಿಜಿಸ್ಟರ್ ಮತ್ತು ಅಂಗಡಿಯ ದಾಖಲೆಗಳನ್ನು ನಿರ್ವಹಿಸುವುದು ಸೇರಿದಂತೆ ಎಲ್ಲಾ ಕೆಲಸವನ್ನು ಮಾಡಿಸುತ್ತಿದ್ದರು. ತಾನು ತನ್ನ ದೇಶಕ್ಕೆ ವಾಪಸ್ ಹೋಗುವುದಾಗಿ ಹೇಳಿದಾಗ ಅವರು ಆಕೆಗೆ ಥಳಿಸುತ್ತಿದ್ದರು ಎಂಬುದು ತಿಳಿದುಬಂದಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನನಗೆ ಅಶ್ವಿನಿ ಗೌಡ ಇಷ್ಟ, ಅವರೇ ಬಿಗ್ ಬಾಸ್ ಗೆಲ್ಲಬೇಕು: ಮಾಜಿ ಸ್ಪರ್ಧಿ
ನನಗೆ ಅಶ್ವಿನಿ ಗೌಡ ಇಷ್ಟ, ಅವರೇ ಬಿಗ್ ಬಾಸ್ ಗೆಲ್ಲಬೇಕು: ಮಾಜಿ ಸ್ಪರ್ಧಿ
ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಗೃಹಲಕ್ಷ್ಮಿ ಬಗ್ಗೆ ತಪ್ಪು ಮಾಹಿತಿ: ವಿಷಾದ ವ್ಯಕ್ತಪಡಿಸಿದ ಹೆಬ್ಬಾಳ್ಕರ್
ಗೃಹಲಕ್ಷ್ಮಿ ಬಗ್ಗೆ ತಪ್ಪು ಮಾಹಿತಿ: ವಿಷಾದ ವ್ಯಕ್ತಪಡಿಸಿದ ಹೆಬ್ಬಾಳ್ಕರ್