ವಿಮಾನದಲ್ಲಿ ಅಪ್ರಾಪ್ತ ಬಾಲಕಿ ಎದುರು ಹಸ್ತಮೈಥುನ: ಭಾರತ ಮೂಲದ ವೈದ್ಯನ ಬಂಧನ

ವಿಮಾನದಲ್ಲಿ ಅಪ್ರಾಪ್ತ ಬಾಲಕಿ ಎದುರು ಹಸ್ತಮೈಥುನ ಮಾಡಿಕೊಂಡ ಭಾರತ ಮೂಲದ ವೈದ್ಯನನ್ನು ಅಮೆರಿಕ ಪೊಲೀಸರು ಬಂಧಿಸಿದ್ದಾರೆ. 14 ವರ್ಷದ ಬಾಲಕಿ ಎದುರು ವಿಮಾನದಲ್ಲಿ ವೈದ್ಯ ಹಸ್ತಮೈಥುನ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.

ವಿಮಾನದಲ್ಲಿ ಅಪ್ರಾಪ್ತ ಬಾಲಕಿ ಎದುರು ಹಸ್ತಮೈಥುನ: ಭಾರತ ಮೂಲದ ವೈದ್ಯನ ಬಂಧನ
ವಿಮಾನ
Follow us
ನಯನಾ ರಾಜೀವ್
|

Updated on:Aug 13, 2023 | 9:13 AM

ವಿಮಾನದಲ್ಲಿ ಅಪ್ರಾಪ್ತ ಬಾಲಕಿ ಎದುರು ಹಸ್ತಮೈಥುನ ಮಾಡಿಕೊಂಡ ಭಾರತ ಮೂಲದ ವೈದ್ಯನನ್ನು ಅಮೆರಿಕ ಪೊಲೀಸರು ಬಂಧಿಸಿದ್ದಾರೆ. 14 ವರ್ಷದ ಬಾಲಕಿ ಎದುರು ವಿಮಾನದಲ್ಲಿ ವೈದ್ಯ ಹಸ್ತಮೈಥುನ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ. ಯುನೈಟೆಡ್ ಸ್ಟೇಟ್ಸ್ ಅಟಾರ್ನಿ ಕಚೇರಿಯ ಪ್ರಕಾರ, ಕಳೆದ ವರ್ಷ ಮೇ ತಿಂಗಳಲ್ಲಿ ಹೊನೊಲುಲುವಿನಿಂದ ಬೋಸ್ಟನ್‌ಗೆ ತೆರಳುತ್ತಿದ್ದ ವಿಮಾನದಲ್ಲಿ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ.

ಡಾ. ಸುದೀಪ್ತ ಮೊಹಾಂತಿ ಎಂದು ಗುರುತಿಸಲಾದ ವೈದ್ಯರನ್ನು ಗುರುವಾರ ಬಂಧಿಸಲಾಯಿತು. ಪ್ರಕಾರ , ಬೋಸ್ಟನ್‌ನ ಬೆತ್ ಇಸ್ರೇಲ್ ಡೀಕಾನೆಸ್ ಮೆಡಿಕಲ್ ಸೆಂಟರ್‌ನಲ್ಲಿ ಪ್ರಾಥಮಿಕ ಚಿಕಿತ್ಸಾ ವೈದ್ಯ ಡಾ ಮೊಹಾಂತಿ ಅವರು ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು.

ಅವರು 14 ವರ್ಷದ ಬಾಲಕಿ ಪಕ್ಕ ಕುಳಿತಿದ್ದರು, ಬೆಡ್​ಶೀಟ್​ನ್ನು ಹೊದ್ದುಕೊಂಡಿದ್ದರು, ಬಳಿಕ ಬೆಡ್​ಶೀಟ್​ ಕೆಳಗೆ ಬಿದ್ದಾಗ ಅವರು ಹಸ್ತಮೈಥುನ ಮಾಡಿಕೊಳ್ಳುತ್ತಿರುವುದು  ಬಾಲಕಿಗೆ ಗೊತ್ತಾಗಿದೆ ಆಕೆಗೆ ಹೇಸಿಗೆಯಾದಂತಾಗಿ ಬೇರೆ ಸೀಟಿನಲ್ಲಿ ಹೋಗಿ ಕೂತಿದ್ದಾಳೆ.

ಮತ್ತಷ್ಟು ಓದಿ: Video News: ದೆಹಲಿ ಮೆಟ್ರೋದಲ್ಲಿ ಹಸ್ತಮೈಥುನ ಮಾಡಿಕೊಂಡ ಯುವಕ, ತೀವ್ರ ಕಳವಳ ವ್ಯಕ್ತಪಡಿಸಿದ ಸ್ವಾತಿ ಮಲಿವಾಲ್

ಬೋಸ್ಟನ್‌ನಲ್ಲಿ ಇಳಿದ ನಂತರ, ಹುಡುಗಿ ತನ್ನ ಕುಟುಂಬಕ್ಕೆ ಘಟನೆಯ ಬಗ್ಗೆ ತಿಳಿಸಿದಳು. ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು. ಡಾ ಮೊಹಾಂತಿ ಅವರು ತನಿಖೆಯ ಸಂದರ್ಭದಲ್ಲಿ ಆರೋಪಗಳನ್ನು ನಿರಾಕರಿಸಿದರು, ಘಟನೆಯ ಬಗ್ಗೆ ನನಗೆ ನೆನಪಿಲ್ಲ ಎಂದು ಹೇಳಿದರು.

ಡಾ ಮೊಹಾಂತಿ ಗುರುವಾರ ಫೆಡರಲ್ ನ್ಯಾಯಾಲಯಕ್ಕೆ ಹಾಜರಾದರು ಮತ್ತು ವಿಮಾನದಲ್ಲಿ ಹದಿಹರೆಯದ ಹುಡುಗಿಯ ಮುಂದೆ ಅಶ್ಲೀಲ ಕೃತ್ಯ ನಡೆಸಿದ ಆರೋಪ ಹೊರಿಸಲಾಯಿತು.

ಈ ಆರೋಪದಲ್ಲಿ 90 ದಿನಗಳ ಜೈಲು ಶಿಕ್ಷೆ, ಮತ್ತು 5,000 ಡಾಲರ್​ವರೆಗೆ ದಂಡವನ್ನು ಒಳಗೊಂಡಿರುತ್ತದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:10 am, Sun, 13 August 23

‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ