ಬ್ರಿಟನ್ನಲ್ಲಿರುವ ಭಾರತೀಯ ರಾಯಭಾರಿ ಗುರುದ್ವಾರ ಪ್ರವೇಶಿಸದಂತೆ ತಡೆದ ಖಲಿಸ್ತಾನಿ ಕಾರ್ಯಕರ್ತರು
ಘಟನೆಗೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಮಂಜಿಂದರ್ ಸಿಂಗ್ ಸಿರ್ಸಾ, "ನಾನು ಇದನ್ನು ಬಲವಾಗಿ ಖಂಡಿಸುತ್ತೇನೆ. ಯಾವುದೇ ಧರ್ಮ ಅಥವಾ ಸಮುದಾಯದವರು ಇಲ್ಲಿಗೆ (ಗುರುದ್ವಾರ) ಬರಬಹುದು. ನಾವು ಹಿಂಸೆಯನ್ನು ನಂಬುವ ಆ ಧರ್ಮವಲ್ಲ ಬದಲಿಗೆ ಮಾನವೀಯತೆಯನ್ನು ರಕ್ಷಿಸುವವರು. ಸಿಖ್ಖರು ರಕ್ಷಕರು. ನಮ್ಮ ಸಮುದಾಯದ ಕೆಲಸವನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾ

ಸ್ಕಾಟ್ಲೆಂಡ್ ಸೆಪ್ಟೆಂಬರ್ 30: ಸ್ಕಾಟ್ಲೆಂಡ್‌ನ (Scotland) ಗ್ಲಾಸ್ಗೋದಲ್ಲಿರುವ ಗುರುದ್ವಾರಕ್ಕೆ ಪ್ರವೇಶಿಸದಂತೆ ತೀವ್ರಗಾಮಿ ಸಿಖ್ ಕಾರ್ಯಕರ್ತರು ಯುಕೆಯಲ್ಲಿರುವ (UK) ಭಾರತೀಯ ಹೈಕಮಿಷನರ್ ವಿಕ್ರಮ್ ದೊರೈಸ್ವಾಮಿ (Vikram Doraiswami) ಅವರನ್ನು ನಿರ್ಬಂಧಿಸಿದಕ್ಕೆ ಬಿಜೆಪಿ ಶನಿವಾರ ತೀವ್ರವಾಗಿ ಪ್ರತಿಕ್ರಿಯಿಸಿದೆ. ‘ಸಿಖ್ ಯೂತ್ ಯುಕೆ’ ನ (Sikh Youth UK) ಇನ್‌ಸ್ಟಾಗ್ರಾಮ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಲಾದ ವಿಡಿಯೊದ ಪ್ರಕಾರ, ಖಲಿಸ್ತಾನಿ ಪರ ಕಾರ್ಯಕರ್ತನೊಬ್ಬ, ಆಲ್ಬರ್ಟ್ ಡ್ರೈವ್‌ನಲ್ಲಿರುವ ಗ್ಲಾಸ್ಗೋ ಗುರುದ್ವಾರವನ್ನು ಪ್ರವೇಶಿಸದಂತೆ ದೊರೈಸ್ವಾಮಿಯನ್ನು ತಡೆಯುತ್ತಿರುವುದು ವಿಡಿಯೊದಲ್ಲಿದೆ.
ಘಟನೆಗೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಮಂಜಿಂದರ್ ಸಿಂಗ್ ಸಿರ್ಸಾ, “ನಾನು ಇದನ್ನು ಬಲವಾಗಿ ಖಂಡಿಸುತ್ತೇನೆ (ಸ್ಕಾಟ್ಲೆಂಡ್‌ನ ಗುರುದ್ವಾರಕ್ಕೆ ವಿಕ್ರಮ್ ದೊರೈಸ್ವಾಮಿಯನ್ನು ಪ್ರವೇಶಿಸದಂತೆ ತಡೆಯಲಾಗಿದೆ ಎಂದು ಆರೋಪಿಸಲಾಗಿದೆ). ಯಾವುದೇ ಧರ್ಮ ಅಥವಾ ಸಮುದಾಯದವರು ಇಲ್ಲಿಗೆ (ಗುರುದ್ವಾರ) ಬರಬಹುದು. ನಾವು ಹಿಂಸೆಯನ್ನು ನಂಬುವ ಆ ಧರ್ಮವಲ್ಲ ಬದಲಿಗೆ ಮಾನವೀಯತೆಯನ್ನು ರಕ್ಷಿಸುವವರು. ಸಿಖ್ಖರು ರಕ್ಷಕರು. ನಮ್ಮ ಸಮುದಾಯದ ಕೆಲಸವನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ. ಪ್ರಪಂಚದ ಎಲ್ಲೆಡೆ ಸಿಖ್ಖರನ್ನು ಪ್ರತಿನಿಧಿಸಲಾಗುತ್ತದೆ. ಜಗತ್ತಿನಲ್ಲಿ ಸಿಖ್ಖರಿಗೆ ಸುರಕ್ಷಿತವಾದ ಸ್ಥಳವೆಂದರೆ ಅದು ಭಾರತ ಎಂದು ಹೇಳಿದ್ದಾರೆ.
#WATCH | On Vikram Doraiswami, Indian High Commissioner to UK, allegedly stopped from entering a gurdwara in Scotland, BJP leader Manjinder Singh Sirsa says, “I strongly condemn this (that Vikram Doraiswami was allegedly stopped from entering a gurdwara in Scotland)… Anyone… pic.twitter.com/Wdv5UsARgP
— ANI (@ANI) September 30, 2023
ಅವರು ಕೆನಡಾ ಮತ್ತು ಇತರ ಸ್ಥಳಗಳಲ್ಲಿ ಸಿಖ್ಖರನ್ನು ನೋಯಿಸುತ್ತಿದ್ದಾರೆ. ನಾವು ಇಲ್ಲಿ ಗ್ಲಾಸ್ಗೋದಲ್ಲಿ ಮಾಡಿದಂತೆ ಪ್ರತಿಯೊಬ್ಬ ಸಿಖ್ ಯಾವುದೇ ಭಾರತೀಯ ರಾಯಭಾರಿ ವಿರುದ್ಧ ಪ್ರತಿಭಟಿಸಬೇಕು ಎಂದು ಪ್ರತಿಭಟನಾಕಾರರು ಹೇಳುತ್ತಿರುವುದು ವಿಡಿಯೊದಲ್ಲಿದೆ. ಈ ಸಮಸ್ಯೆಯನ್ನು ಯುಕೆ ವಿದೇಶಾಂಗ ಕಚೇರಿ ಮತ್ತು ಪೊಲೀಸರೊಂದಿಗೆ ಪ್ರಸ್ತಾಪಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಎನ್ಐ ವರದಿ ಮಾಡಿದೆ.
View this post on Instagram
ಪಾರ್ಕಿಂಗ್‌ನಲ್ಲಿ ರಾಜತಾಂತ್ರಿಕರ ಕಾರಿನ ಬಳಿ ಇಬ್ಬರು ವ್ಯಕ್ತಿಗಳು ನಿಂತಿರುವುದು ವಿಡಿಯೊದಲ್ಲಿ ಕಾಣಬಹುದು. ಅವರಲ್ಲಿ ಒಬ್ಬರು ಒಳಗಿನಿಂದ ಲಾಕ್ ಆಗಿದ್ದ ಕಾರಿನ ಬಾಗಿಲನ್ನು ತೆರೆಯಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ. ಗುರುದ್ವಾರ ಆವರಣದಿಂದ ಹೈಕಮಿಷನರ್ ಕಾರು ಹೊರಡುವುದನ್ನು ಇದು ತೋರಿಸುತ್ತದೆ.
ಇದನ್ನೂ ಓದಿ: 1980ರಿಂದಲೇ ಕೆನಡಾದೊಂದಿಗೆ ಸಂಘರ್ಷವಿದೆ; ಬ್ಲಿಂಕೆನ್, ಸುಲ್ಲಿವಾನ್ ಜತೆ ಮಾತನಾಡಿರುವೆ: ಜೈಶಂಕರ್
ಮಾಧ್ಯಮ ವರದಿಯ ಪ್ರಕಾರ, ದೊರೈಸ್ವಾಮಿ ಅವರು ಗ್ಲಾಸ್ಗೋ ಗುರುದ್ವಾರದ ಗುರುದ್ವಾರ ಸಮಿತಿಯೊಂದಿಗೆ ಸಭೆಯನ್ನು ಯೋಜಿಸಿದ್ದರು. ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯಲ್ಲಿ ಭಾರತದ ಸಂಭಾವ್ಯ ಕೈವಾಡವಿದೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಹೇಳಿಕೆಯ ನಂತರ ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಉದ್ವಿಗ್ನತೆಯ ನಡುವೆ ಈ ಘಟನೆ ನಡೆದಿದೆ. ಭಾರತವು ಈ ಆರೋಪಗಳನ್ನು “ಅಸಂಬದ್ಧ”ಎಂದು ತಿರಸ್ಕರಿಸಿದ್ದು, ಹಿರಿಯ ಕೆನಡಾದ ರಾಜತಾಂತ್ರಿಕರನ್ನು ಹೊರಹಾಕಿತ್ತು.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



