Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೈಶಂಕರ್-ಆ್ಯಂಟನಿ ಬ್ಲಿಂಕೆನ್ ಭೇಟಿ: ಕೆನಡಾದ ಬಗೆಗಿನ ನಿಲುವು ಈಗಾಗಲೇ ಸ್ಪಷ್ಟವಾಗಿದೆ ಎಂದ ಅಮೆರಿಕ

ಭಾರತ ಮತ್ತು ಕೆನಡಾ ನಡುವೆ ನಡೆಯುತ್ತಿರುವ ರಾಜತಾಂತ್ರಿಕ ಬಿಕ್ಕಟ್ಟಿನ ನಡುವೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಯುಎಸ್ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಅವರನ್ನು ಗುರುವಾರ ಭೇಟಿಯಾಗಲಿದ್ದಾರೆ. ಕೆನಡಾದ ಕುರಿತು ನಿಲುವು ಈಗಾಗಲೇ ಸ್ಪಷ್ಟವಾಗಿದೆ ಎಂದು ಅಮೆರಿಕ ಹೇಳಿದೆ. ಕ್ವಾಡ್ ಸಚಿವರ ಸಭೆಯಲ್ಲಿ ಇಬ್ಬರೂ ಈಗಾಗಲೇ ಭೇಟಿಯಾಗಿದ್ದಾರೆ, ಅಲ್ಲಿ ಜಪಾನ್ ಮತ್ತು ಆಸ್ಟ್ರೇಲಿಯಾದ ವಿದೇಶಾಂಗ ಸಚಿವರು ಸಹ ಉಪಸ್ಥಿತರಿದ್ದರು.

ಜೈಶಂಕರ್-ಆ್ಯಂಟನಿ ಬ್ಲಿಂಕೆನ್ ಭೇಟಿ: ಕೆನಡಾದ ಬಗೆಗಿನ ನಿಲುವು ಈಗಾಗಲೇ ಸ್ಪಷ್ಟವಾಗಿದೆ ಎಂದ ಅಮೆರಿಕ
ಎಸ್​ ಜೈಶಂಕರ್Image Credit source: Hindustan Times
Follow us
ನಯನಾ ರಾಜೀವ್
|

Updated on: Sep 28, 2023 | 8:56 AM

ಭಾರತ(India) ಮತ್ತು ಕೆನಡಾ(Canada) ನಡುವೆ ನಡೆಯುತ್ತಿರುವ ರಾಜತಾಂತ್ರಿಕ ಬಿಕ್ಕಟ್ಟಿನ ನಡುವೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಯುಎಸ್ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಅವರನ್ನು ಗುರುವಾರ ಭೇಟಿಯಾಗಲಿದ್ದಾರೆ. ಕೆನಡಾದ ಕುರಿತು ನಿಲುವು ಈಗಾಗಲೇ ಸ್ಪಷ್ಟವಾಗಿದೆ ಎಂದು ಅಮೆರಿಕ ಹೇಳಿದೆ. ಕ್ವಾಡ್ ಸಚಿವರ ಸಭೆಯಲ್ಲಿ ಇಬ್ಬರೂ ಈಗಾಗಲೇ ಭೇಟಿಯಾಗಿದ್ದಾರೆ, ಅಲ್ಲಿ ಜಪಾನ್ ಮತ್ತು ಆಸ್ಟ್ರೇಲಿಯಾದ ವಿದೇಶಾಂಗ ಸಚಿವರು ಸಹ ಉಪಸ್ಥಿತರಿದ್ದರು.

ಅದು ದ್ವಿಪಕ್ಷೀಯ ಸಭೆಯಲ್ಲದ ಕಾರಣ ಕೆನಡಾ ವಿಷಯ ಆ ಸಭೆಯಲ್ಲಿ ಪ್ರಸ್ತಾಪವಾಗಿಲ್ಲ ಎಂದು ವಿದೇಶಾಂಗ ಇಲಾಖೆ ವಕ್ತಾರ ಮ್ಯಾಥ್ಯೂ ಮಿಲ್ಲರ್ ಹೇಳಿದ್ದಾರೆ. ಸಮಸ್ಯೆಯನ್ನು ಇಂದಿನ ಸಭೆಯಲ್ಲಿ ಪ್ರಸ್ತಾಪಿಸಬಹುದು, ಆದರೆ ಮ್ಯಾಥ್ಯೂ ಮಿಲ್ಲರ್ ಯಾವುದೇ ದೃಢೀಕರಣವನ್ನು ನೀಡಲಿಲ್ಲ. ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ಹತ್ಯೆಗೆ ಸಂಬಂಧಿಸಿದಂತೆ ಕೆನಡಾವು ಭಾರತದ ವಿರುದ್ಧ ಕಿಡಿಕಾರಿದ್ದಷ್ಟೇ ಅಲ್ಲದೆ ಆತನ ಸಾವಿಗೆ ಭಾರತದ ಏಜೆಂಟರೇ ಕಾರಣ ಎಂದು ಆರೋಪಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಭಾರತ ಯಾವುದೇ ನಿರ್ದಿಷ್ಟ ಮಾಹಿತಿಯನ್ನು ಹೊಂದಿದ್ದರೆ ಅದನ್ನು ಹಂಚಿಕೊಳ್ಳಲು ಭಾರತವು ಕೆನಡಾಗೆ ಕೇಳಿದೆ. ಪ್ರತ್ಯೇಕತಾವಾದಿ ಶಕ್ತಿಗಳು, ಸಂಘಟಿತ ಅಪರಾಧ, ಹಿಂಸೆ, ಉಗ್ರವಾದಕ್ಕೆ ಸಂಬಂಧಿಸಿದಂತೆ ಕೆನಡಾ ಬಹಳಷ್ಟು ಅಪರಾಧಗಳನ್ನು ನೋಡುತ್ತಿದೆ ಎಂದು ಜೈಶಂಕರ್ ಹೇಳಿದರು.

ಮತ್ತಷ್ಟು ಓದಿ: ಆ ಒಂದು ಕಾರಣಕ್ಕಾಗಿ ಕೆನಡಾ ಭಾರತದ ಮೇಲೆ ಇಂತಹ ಆರೋಪ ಮಾಡುತ್ತಿದೆ: ಎಸ್ ಜೈಶಂಕರ್

ಕೆನಡಾದ ಆರೋಪಗಳ ಬಗ್ಗೆ ಪೂರ್ಣ ಮತ್ತು ನ್ಯಾಯಯುತ ತನಿಖೆಯಾಗಬೇಕು ಎಂದು ಯುನೈಟೆಡ್ ಸ್ಟೇಟ್ಸ್ ಹೇಳಿದೆ. ಈ ಪ್ರಕ್ರಿಯೆಯಲ್ಲಿ ಭಾರತವು ಸಹಕರಿಸಬೇಕೆಂದು ಯುಎಸ್ ಬಯಸಿದೆ.

ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಬೇಕು ಮತ್ತು ಎಲ್ಲಾ ದೇಶಗಳ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಶ್ರೀ ಜೈಶಂಕರ್ ಒತ್ತಾಯಿಸಿದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ