ಲುಫ್ತಾನ್ಸಾ ವಿಮಾನದಲ್ಲಿ ಫೋರ್ಕ್ನನಿಂದ ಇಬ್ಬರ ಮೇಲೆ ಹಲ್ಲೆ ನಡೆಸಿ, ಯುವತಿಯ ಕಪಾಳಕ್ಕೆ ಹೊಡೆದ ಭಾರತೀಯನ ಬಂಧನ
ಭಾರತೀಯ ಪ್ರಯಾಣಿಕರೊಬ್ಬರು ಲುಫ್ತಾನ್ಸಾ ವಿಮಾನದಲ್ಲಿ ಪ್ರಯಾಣಿಕರ ಮೇಲೆ ಫೋರ್ಕ್ನಿಂದ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. ಪ್ರಣೀತ್ ಎಂಬಾತ ಪ್ರಣೀತ್ 17 ವರ್ಷದ ಪ್ರಯಾಣಿಕನ ಭುಜಕ್ಕೆ ಪೋರ್ಕ್ನಿಂದ ಇರಿದಿದ್ದಾನೆ ನಂತರ ಮತ್ತೊಬ್ಬ ಬಾಲಕನ ಮೇಲೆ ಅದೇ ಪೋರ್ಕ್ನಿಂದ ಹಲ್ಲೆ ನಡೆಸಿದ್ದಾನೆ. ಆತನ ತಲೆಯ ಹಿಂಭಾಗಕ್ಕೂ ಇರಿದಿದ್ದಾನೆ ಎಂದು ಆರೋಪಿಸಲಾಗಿದೆ.

ಚಿಕಾಗೋ, ಅಕ್ಟೋಬರ್ 29: ಚಿಕಾಗೋದಿಂದ ಜರ್ಮನಿಗೆ ಹೊರಟಿದ್ದ ಲುಫ್ತಾನ್ಸಾ ವಿಮಾನ(Flight)ದಲ್ಲಿ ಭಾರತೀಯ ವ್ಯಕ್ತಿಯೊಬ್ಬ ಇಬ್ಬರ ಮೇಲೆ ಫೋರ್ಕ್ನಿಂದ ದಾಳಿ ನಡೆಸಿದ್ದಷ್ಟೇ ಅಲ್ಲದೆ ಯುವತಿಗೆ ಕಪಾಳಮೋಕ್ಷ ಮಾಡಿರುವ ಘಟನೆ ವರದಿಯಾಗಿದ್ದು, ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಣೀತ್ ಕುಮಾರ್ ಉಸಿರಿಪಲ್ಲಿ ವಿರುದ್ಧ ಪ್ರಕರಣ ದಾಖಲಾಗಿದೆ.
ಪ್ರಣೀತ್ 17 ವರ್ಷದ ಪ್ರಯಾಣಿಕನ ಭುಜಕ್ಕೆ ಪೋರ್ಕ್ನಿಂದ ಇರಿದಿದ್ದಾನೆ ನಂತರ ಮತ್ತೊಬ್ಬ ಬಾಲಕನ ಮೇಲೆ ಅದೇ ಪೋರ್ಕ್ನಿಂದ ಹಲ್ಲೆ ನಡೆಸಿದ್ದಾನೆ. ಆತನ ತಲೆಯ ಹಿಂಭಾಗಕ್ಕೂ ಇರಿದಿದ್ದಾನೆ ಎಂದು ಆರೋಪಿಸಲಾಗಿದೆ.
ಗಾಯಗೊಂಡ ವ್ಯಕ್ತಿ ಮಧ್ಯದ ಸೀಟಿನಲ್ಲಿ ಮಲಗಿದ್ದರು ಎಚ್ಚರವಾದಾಗ ಪ್ರಣೀತ್ ಆತನ ಮೈಮೇಲೆ ಹತ್ತಿ ಹಲ್ಲೆಗೆ ಮುಂದಾಗಿರುವುದನ್ನು ಕಂಡು ಒಮ್ಮೆ ಬೆಚ್ಚಿಬಿದ್ದಿದ್ದ. ನೋಡನೋಡುತ್ತಿದ್ದಂತೆ ಆರೋಪಿ ಕೂಡಲೇ ಬಾಲಕನ ಮೇಲೆ ದಾಳಿ ನಡೆಸಿದ್ದಾನೆ.
ಮತ್ತಷ್ಟು ಓದಿ: ಏರ್ ಇಂಡಿಯಾ ವಿಮಾನದ ಊಟದಲ್ಲಿ ಕೂದಲು ಸಿಕ್ಕಿದ್ದ ಪ್ರಕರಣ, 20 ವರ್ಷಗಳ ಬಳಿಕ ಸಿಕ್ತು ಪ್ರಯಾಣಿಕನಿಗೆ ಪರಿಹಾರ
ವಿಚಿತ್ರವೆಂದರೆ ವಿಮಾನ ಸಿಬ್ಬಂದಿ ಪ್ರಣೀತ್ನನ್ನು ತಡೆಯಲು ಪ್ರಯತ್ನಿಸಿದಾಗ ಆಟಿಕೆ ಪಿಸ್ತೂಲ್ ತೆಗೆದು ತನ್ನ ಬಾಯಲ್ಲಿಟ್ಟುಕೊಂಡು ಟ್ರಿಗರ್ ಎಳೆದಿದ್ದಾನೆ. ನಂತರ ಮಹಿಳಾ ಪ್ರಯಾಣಿಕರೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದಾನೆ. ನಂತರ ಸಿಬ್ಬಂದಿಗೂ ಹೊಡೆದಿದ್ದಾನೆ.
🚨#FBI Boston has charged Praneeth Kumar Usiripalli, an Indian national, with allegedly stabbing two minor victims with a metal fork while on board a Lufthansa flight from Chicago to Germany. Learn more: https://t.co/PRVulpkuaQ pic.twitter.com/VDkyAqM0x1
— FBI Boston (@FBIBoston) October 28, 2025
ದಾಳಿಯ ನಂತರ ವಿಮಾನವನ್ನು ಬೋಸ್ಟನ್ ಲೋಗನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಯಿತು. ಅಲ್ಲಿ ಪ್ರಣೀತ್ನನ್ನು ವಶಕ್ಕೆ ಪಡೆಯಲಾಯಿತು. ವಿಚಾರಣೆ ಸಂದರ್ಭದಲ್ಲಿ ಆತ ಅಮೆರಿಕದ ಪ್ರಜೆಯಲ್ಲ, ವಿದ್ಯಾರ್ಥಿ ವೀಸಾ ಮೇಲೆ ಅಮೆರಿಕದಲ್ಲಿದ್ದಾನೆ ಎಂಬುದು ತಿಳಿಯಿತು. ಅಮೆರಿಕದ ವಿಶೇಷ ವಿಮಾನದಲ್ಲಿ ಪ್ರಯಾಣಿಸುವಾಗ ದೈಹಿಕ ಹಾನಿ ಮಾಡುವ ಉದ್ದೇಶದಿಂದ ಅಪಾಯಕಾರಿ ಆಯುಧದಿಂದ ಹಲ್ಲೆ ನಡೆಸಿದ ಆರೋಪದ ಮೇಲೆ ಪ್ರಣೀತ್ ವಿರುದ್ಧ ಆರೋಪ ಹೊರಿಸಲಾಗಿದೆ.
ಆರೋಪ ಸಾಬೀತಾದರೆ, ಅವನಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ, 250,000 ಡಾಲರ್ವರೆಗೆ ದಂಡ ವಿಧಿಸಬಹುದು. ಆದರೆ ಪ್ರಣೀತ್ ಈ ರೀತಿ ನಡೆದುಕೊಳ್ಳಲು ಕಾರಣ ಏನೆಂಬುದು ಇನ್ನೂ ತಿಳಿದುಬಂದಿಲ್ಲ, ಆತನ ಮಾನಸಿಕ ಸ್ಥಿತಿ ಸರಿ ಇಲ್ಲವೇ ಅಥವಾ ಎಲ್ಲವೂ ತಿಳಿದೂ ಕೂಡ ಈ ತಪ್ಪು ಮಾಡಿದ್ದಾರೆಯೇ ಎಂಬುದು ಕಾದು ನೋಡಬೇಕಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




