ಪತಿ ಮನೆಯನ್ನು ಶುಚಿಯಾಗಿಟ್ಟಿಲ್ಲವೆಂದು ಕೋಪಗೊಂಡು ಆತನ ಕತ್ತು ಸೀಳಿದ ಪತ್ನಿ, ಅಮೆರಿಕದಲ್ಲಿ ಘಟನೆ
ಮನೆಯ ಕೆಲಸದ ವಿಚಾರವಾಗಿ ಗಂಡ-ಹೆಂಡತಿ ನಡುವೆ ಜಗಳ(Clash)ವಾಗುವುದು ಸಾಮಾನ್ಯ ಆದರೆ ಎಲ್ಲವೂ ಮಾತಿನಿಂದಲೇ ಬಗೆಹರಿಯುತ್ತದೆ. ಆದರೆ ಇಲ್ಲೊಬ್ಬ ಮಹಿಳೆ ತನ್ನ ಗಂಡ ಮನೆಯನ್ನು ಶುಚಿಯಾಗಿಟ್ಟುಕೊಂಡಿಲ್ಲ ಎಂಬ ಕಾರಣಕ್ಕೆ ಕೋಪಗೊಂಡು ಆತನ ಕುತ್ತಿಗೆಗೆ ಚಾಕುವಿನಿಂದ ಇರಿದಿರುವ ಘಟನೆ ಅಮೆರಿಕದಲ್ಲಿ ನಡೆದಿದೆ. ಅಮೆರಿಕದ ಉತ್ತರ ಕೆರೊಲಿನಾದಲ್ಲಿ ಭಾರತ ಮೂಲದ ಅಮೆರಿಕನ್ ಮಹಿಳೆಯೊಬ್ಬರು ತನ್ನ ಪತಿಯ ಮೇಲೆ ಚಾಕುವಿನಿಂದ ಹಲ್ಲೆ ಡನೆಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದಾರೆ. ಮನೆಯನ್ನು ಸ್ವಚ್ಛಗೊಳಿಸುವ ವಿಷಯಕ್ಕೆ ಇಬ್ಬರ ನಡುವೆ ಜಗಳ ನಡೆದಿತ್ತು ಎನ್ನಲಾಗಿದೆ.

ವಾಷಿಂಗ್ಟನ್, ಅಕ್ಟೋಬರ್ 28: ಮನೆಯ ಕೆಲಸದ ವಿಚಾರವಾಗಿ ಗಂಡ-ಹೆಂಡತಿ ನಡುವೆ ಜಗಳ(Clash)ವಾಗುವುದು ಸಾಮಾನ್ಯ ಆದರೆ ಎಲ್ಲವೂ ಮಾತಿನಿಂದಲೇ ಬಗೆಹರಿಯುತ್ತದೆ. ಆದರೆ ಇಲ್ಲೊಬ್ಬ ಮಹಿಳೆ ತನ್ನ ಗಂಡ ಮನೆಯನ್ನು ಶುಚಿಯಾಗಿಟ್ಟುಕೊಂಡಿಲ್ಲ ಎಂಬ ಕಾರಣಕ್ಕೆ ಕೋಪಗೊಂಡು ಆತನ ಕುತ್ತಿಗೆಗೆ ಚಾಕುವಿನಿಂದ ಇರಿದಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.
ಅಮೆರಿಕದ ಉತ್ತರ ಕೆರೊಲಿನಾದಲ್ಲಿ ಭಾರತ ಮೂಲದ ಅಮೆರಿಕನ್ ಮಹಿಳೆಯೊಬ್ಬರು ತನ್ನ ಪತಿಯ ಮೇಲೆ ಚಾಕುವಿನಿಂದ ಹಲ್ಲೆ ಡನೆಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದಾರೆ. ಮನೆಯನ್ನು ಸ್ವಚ್ಛಗೊಳಿಸುವ ವಿಷಯಕ್ಕೆ ಇಬ್ಬರ ನಡುವೆ ಜಗಳ ನಡೆದಿತ್ತು ಎನ್ನಲಾಗಿದೆ. ಮಹಿಳೆಯನ್ನು ಚಂದ್ರಪ್ರಭಾ ಸಿಂಗ್ ಎಂದು ಗುರಿತಿಸಲಾಗಿದೆ. ಅವರು ಶಾಲೆಯಲ್ಲಿ ಶಿಕ್ಷಕ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ಚಂದ್ರಪ್ರಭಾ ಅವರನ್ನು ಅಕ್ಟೋಬರ್ 12 ರಂದು ಪತಿಯ ಮೇಲೆ ಉದ್ದೇಶಪೂರ್ವಕವಾಗಿ ದಾಳಿ ಮಾಡಿದ್ದ ಆರೋಪದ ಮೇಲೆ ಬಂಧಿಸಲಾಗಿತ್ತು.
ಪೊಲೀಸರ ಪ್ರಕಾರ, ಈ ಘಟನೆ ಉತ್ತರ ಕೆರೊಲಿನಾದ ಚಾರ್ಲೊಟ್‌ನ ಬ್ಯಾಲಂಟೈನ್ ಪ್ರದೇಶದ ಫಾಕ್ಸ್‌ಹೇವನ್ ಡ್ರೈವ್‌ನಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ. ಚಂದ್ರಪ್ರಭಾ ಅವರು ಎಂಡ್‌ಹೇವನ್ ಕಿಂಡರ್‌ಗಾರ್ಟನ್‌ನಿಂದ ಮೂರನೇ ತರಗತಿಗೆ ಪಾಠ ಮಾಡುತ್ತಿದ್ದರು.
ಮತ್ತಷ್ಟು ಓದಿ: ನೀರು ಕೊಡದಿದ್ದಕ್ಕೆ ಪತಿಯಿಂದ ಹಲ್ಲೆ: ಕೋಮಾಗೆ ಜಾರಿದ್ದ ಮಹಿಳೆ ಸಾವು
ನ್ಯಾಯಾಲಯದಲ್ಲಿ ಸಲ್ಲಿಸಲಾದ ಅಫಿಡವಿಟ್ ಪ್ರಕಾರ, ಸಿಂಗ್ ಅವರ ಪತಿ ಅರವಿಂದ್ ಸಿಂಗ್ ಎಂದು ಗುರುತಿಸಲಾದ ವ್ಯಕ್ತಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಮನೆ ಸ್ವಚ್ಛವಾಗಿಲ್ಲದ ಕಾರಣ ತನ್ನ ಹೆಂಡತಿ ಕೋಪಗೊಂಡು ಉದ್ದೇಶಪೂರ್ವಕವಾಗಿ ಚಾಕುವಿನಿಂದ ಹಲ್ಲೆ ನಡೆಸಿದ್ದಾಳೆ ಎನ್ನಲಾಗಿದೆ.
ಆದರೆ, ಚಂದ್ರಪ್ರಭಾ ಸಿಂಗ್ ಘಟನೆಗಳ ಬಗ್ಗೆ ಬೇರೆಯದೇ ಆದ ವಿವರಣೆಯನ್ನು ನೀಡಿದ್ದಾರೆ. ತಾನು ಊಟ ತಯಾರಿಸುತ್ತಿದ್ದಾಗ, ತನ್ನ ಪತಿ ಬಳಿ ಸಹಾಯ ಮಾಡಬಹುದೇ ಎಂದು ಕೇಳಿದ್ದಾಗಿ ಅವರು ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ. ಆ ಸಮದಲ್ಲಿ ಇಬ್ಬರ ನಡುವೆ ಜಗಳ ನಡೆದಿದೆ. ಆಕಸ್ಮಿಕವಾಗಿ ಚಾಕು ಗಂಡನ ಕುತ್ತಿಗೆಗೆ ಇರಿದಿದೆ ಎಂದಿದ್ದಾರೆ.
ಬೆಳಗ್ಗೆ ಸುಮಾರು 10.49 ಕ್ಕೆ ಪೊಲೀಸರು ಸ್ಥಳಕ್ಕೆ ಬರುವ ಹೊತ್ತಿಗೆ, ಅರವಿಂದ್ ಸಿಂಗ್ ಅವರನ್ನು ಕುತ್ತಿಗೆಗೆ ಆಗಿದ್ದ ಗಂಭೀರ ಗಾಯಗಳಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಬಂಧನದ ನಂತರ, ಮ್ಯಾಜಿಸ್ಟ್ರೇಟ್ ಆರಂಭದಲ್ಲಿ ಚಂದ್ರಪ್ರಭಾ ಸಿಂಗ್ ಅವರಿಗೆ ಜಾಮೀನು ನಿರಾಕರಿಸಿದರು. ಆದಾಗ್ಯೂ, ಅಕ್ಟೋಬರ್ 13 ರಂದು ನ್ಯಾಯಾಲಯಕ್ಕೆ ಹಾಜರಾದಾಗ, ಅವರ ಜಾಮೀನು 10,000 ಡಾಲರ್ಗೆ ಗೆ ನಿಗದಿಪಡಿಸಲಾಯಿತು.
ಎಲೆಕ್ಟ್ರಾನಿಕ್ ಮಾನಿಟರಿಂಗ್ ಸಾಧನವನ್ನು ಧರಿಸುವುದು ಮತ್ತು ಪತಿಯೊಂದಿಗೆ ಯಾವುದೇ ಸಂಪರ್ಕವನ್ನು ಹೊಂದಿರದಿರುವುದು ಸೇರಿದಂತೆ ಕೆಲವು ಷರತ್ತುಗಳೊಂದಿಗೆ ಅವರು ಸೋಮವಾರ ಜೈಲಿನಿಂದ ಬಿಡುಗಡೆ ಮಾಡಲಾಯಿತು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:34 pm, Tue, 28 October 25




