ನಿಮ್ಮ ಮಾತನ್ನು ಗೌರವಿಸುತ್ತೇವೆ ಜೈಶಂಕರ್​​, ಖಂಡಿತ 17 ಭಾರತೀಯರನ್ನು ಬಿಡುಗಡೆ ಮಾಡುತ್ತೇವೆ ಎಂದ ಇರಾನ್

ಇರಾನ್​​ ವಶದಲ್ಲಿರುವ ಇಸ್ರೇಲ್​​ ಹಡಗಿನಲ್ಲಿದ್ದ 17 ಭಾರತೀಯರನ್ನು ಭಾರತ ಅಧಿಕಾರಿಗಳು ಭೇಟಿ ಮಾಡಲು ಇರಾನ್​​ ಅವಕಾಶ ನೀಡಿದೆ. ಭಾನುವಾರದಂದು ಇರಾನ್ ವಿದೇಶಾಂಗ ಸಚಿವ ಹೊಸೈನ್ ಅಮೀರ್-ಅಬ್ದುಲ್ಲಾಹಿಯಾನ್ ಅವರಿಗೆ ಕರೆ ಮಾಡಿ ಭಾರತದ ವಿದೇಶಾಂಗ ಸಚಿವ ಜೈಶಂಕರ್​​ ಮಾತನಾಡಿದ್ದಾರೆ. ಇದೀಗ ಅವರ ಮಾತಿಗೆ ಗೌರವ ನೀಡಿ. ಭಾರತ ಅಧಿಕಾರಿಗಳು 17 ಸಿಬ್ಬಂದಿಗಳನ್ನು ಭೇಟಿಯಾಗಲು ಅವಕಾಶ ನೀಡಿದೆ. ಇಂದು ಸಂಜೆಯೊಳಗೆ ಅವರನ್ನು ಬಿಡುಗಡೆ ಮಾಡುವ ಸಾಧ್ಯ ಇದೆ.

ನಿಮ್ಮ ಮಾತನ್ನು ಗೌರವಿಸುತ್ತೇವೆ ಜೈಶಂಕರ್​​, ಖಂಡಿತ 17 ಭಾರತೀಯರನ್ನು ಬಿಡುಗಡೆ ಮಾಡುತ್ತೇವೆ ಎಂದ ಇರಾನ್

Updated on: Apr 15, 2024 | 12:45 PM

ಇರಾನ್, (Iran) ಹಾರ್ಮುಜ್ ಜಲಮಾರ್ಗದ ಬಳಿ ಇಸ್ರೇಲ್​​ ಧ್ವಜವಿದ್ದ ಸರಕು ಸಾಗಿಸುವ ಹುಡಗನ್ನು ವಶಪಡಿಸಿಕೊಂಡಿತ್ತು. ಇದರಲ್ಲಿ 17 ಭಾರತೀಯ ಸಿಬ್ಬಂದಿಗಳಿದ್ದು, ಇದೀಗ ಅವರನ್ನು ಭೇಟಿ ಮಾಡಲು ಅವಕಾಶ ನೀಡಬೇಕು ಹಾಗೂ ಅವರನ್ನು ಬಿಡುಗಡೆ ಮಾಡಬೇಕು ಎಂದು ಭಾರತದ ವಿದೇಶಾಂಗ ಸಚಿವ ಎಸ್​​​. ಜೈಶಂಕರ್​​​ ಇರಾನ್ ವಿದೇಶಾಂಗ ಸಚಿವ ಹೊಸೈನ್ ಅಮೀರ್-ಅಬ್ದುಲ್ಲಾಹಿಯಾನ್ ಅವರಿಗೆ ಕರೆ ಮಾಡಿದ್ದಾರೆ. ಜೈಶಂಕರ್​​ ಅವರ ಮಾತನ್ನು ಗೌರವಿಸಿ ಇರಾನ್ ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ ಭೇಟಿ ಮಾಡಲು ಅವಕಾಶ ನೀಡಿದೆ.

ಅಮೀರ್-ಅಬ್ದುಲ್ಲಾಹಿಯಾನ್ ಮತ್ತು ಎಸ್ ಜೈಶಂಕರ್ ಅವರು ಭಾನುವಾರ ದೂರವಾಣಿ ಸಂಭಾಷಣೆ ನಡೆಸಿದ್ದಾರೆ. ಈ ಸಮಯದಲ್ಲಿ 17 ಭಾರತೀಯ ಸಿಬ್ಬಂದಿಗಳನ್ನು ಭಾರತ ಭೇಟಿ ಮಾಡಬಹುದು ಎಂದು ಹೇಳಿದ್ದಾರೆ. ಈ ಮಾತುಕತೆಯಲ್ಲಿ MSC ಏರೀಸ್‌ ಹಡಗಿನಲ್ಲಿರುವ ಭಾರತೀಯರನ್ನು ಬಿಡುಗಡೆ ಮಾಡುವಂತೆ ಕೂಡ ಕೇಳಿಕೊಂಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಅಮೀರ್-ಅಬ್ದುಲ್ಲಾಹಿಯಾನ್ ಖಂಡಿತವಾಗಿ ಜೈಶಂಕರ್​​ ನಿಮ್ಮ ಮನವಿಯನ್ನು ಗೌರವಿಸುತ್ತೇವೆ. ಈಗಾಗಗಲೇ ನಾವು ವಶಪಡಿಸಿಕೊಂಡಿರುವ ಹಡಗಿನ ಎಲ್ಲ ಮಾಹಿತಿಯನ್ನು ಪಡೆಯುತ್ತಿದ್ದೇವೆ. ನಿಮ್ಮ ಅಧಿಕಾರಿಗಳು ಹಡಗಿನಲ್ಲಿದ್ದ 17 ಭಾರತೀಯರನ್ನು ಭೇಟಿಯಾಗಲು ಅವಕಾಶ ನೀಡುತ್ತೇವೆ ಎಂದು ಹೇಳಿದ್ದಾರೆ. ಇನ್ನು ಇರಾನ್​​​​ ಈ ಕ್ರಮದಿಂದ ಜೈಶಂಕರ್ ಅವರು 17 ಭಾರತೀಯ ಸಿಬ್ಬಂದಿಗಳ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ

ಈಗಾಗಲೇ ಇರಾನ್ ಮತ್ತು ಇಸ್ರೇಲ್​​ ನಡುವೆ ಯುದ್ಧ ಸ್ಥಿತಿ ಇದೆ. ಈ ಕಾರಣದಿಂದ ಇರಾನ್​​​ ಇಸ್ರೇಲ್​​ನ ಈ ಹಡಗನ್ನು ವಶಪಡಿಸಿಕೊಂಡಿದೆ. ಆದರೆ ಅದರಲ್ಲಿರುವ ಎಲ್ಲ ಸಿಬ್ಬಂದಿ ಯೋಗಕ್ಷೇಮ ಸ್ಥಿರವಾಗಿದೆ ಎಂದು ಹೇಳಿದ್ದಾರೆ. ಇನ್ನು ಈ ಬಗ್ಗೆ ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ಪ್ರಕಾರ ಅಡ್ರಿಯೆನ್ನೆ ವ್ಯಾಟ್ಸನ್ ಹಡಗಿನ ಸಿಬ್ಬಂದಿ ಭಾರತೀಯ, ಫಿಲಿಪಿನೋ, ಪಾಕಿಸ್ತಾನಿ, ರಷ್ಯನ್ ಮತ್ತು ಎಸ್ಟೋನಿಯನ್ ಪ್ರಜೆಗಳು ಎಂದು ಗುರುತಿಸಿದೆ. ಇದರ ಜತೆಗೆ ಭಾರತ ಇರಾನ್​​ ವಶದಲ್ಲಿರುವ ಭಾರತೀಯರನ್ನು ಬಿಡುಗಡೆ ಮಾಡಲು ಇರಾನ್​​ ಜತೆಗೆ ಸಂಪರ್ಕದಲ್ಲಿದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಇಸ್ರೇಲ್​ ಮೇಲೆ ಇರಾನ್​ನಿಂದ ಕ್ಷಿಪಣಿ ದಾಳಿ

ಇಸ್ರೇಲ್​ ಮೇಲೆ ಇರಾನ್ ಕ್ಷಿಪಣಿ ಹಾಗೂ ಡ್ರೋನ್​ ದಾಳಿ

ಇಸ್ರೇಲ್​ ಮೇಲೆ ಇರಾನ್ ಏ.13ರಂದು ಕ್ಷಿಪಣಿ ಹಾಗೂ ಡ್ರೋನ್​ ದಾಳಿ ನಡೆಸಿತ್ತು. ಕಿಲ್ಲರ್ ಡ್ರೋನ್​ಗಳು, ಬ್ಯಾಲಿಸ್ಟಿಕ್ ಕ್ಷಿಪಣಿಗಳು ಹಾಗೂ ಕ್ರೂಸ್​ ಕ್ಷಿಪಣಿಗಳು ಸೇರಿದಂತೆ ಇರಾನ್ 200ಕ್ಕೂ ಹೆಚ್ಚು ಬಗೆಯ ಡ್ರೋನ್​ ದಾಳಿಗಳನ್ನು ನಡೆಸಿದೆ. ಸಿರಿಯಾದ ರಾಜಧಾನಿ ಡಮಾಸ್ಕಸ್​ನಲ್ಲಿರುವ ತನ್ನ ರಾಯಭಾರ ಕಚೇರಿ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಗೆ ಪ್ರತಿಯಾಗಿ ಇರಾನ್ ಈ ಕ್ರಮ ಕೈಗೊಂಡಿದೆ. ಇರಾನ್ ಸೇನೆಯು ಡ್ರೋನ್ ಮತ್ತು ಕ್ಷಿಪಣಿಗಳ ಮೂಲಕ ಇಸ್ರೇಲ್ ಮೇಲೆ ದಾಳಿ ಮಾಡಿದೆ. ಇರಾನ್ ಇಸ್ರೇಲ್ ಮೇಲೆ 100ಕ್ಕೂಹೆಚ್ಚು ಡ್ರೋನ್​ಗಳನ್ನು ಹಾರಿಸಿದೆ. ಇರಾನ್ ದಾಳಿಯ ನಂತರ ಇಸ್ರೇಲ್ ರಕ್ಷಣಾ ಪಡೆ ತೀವ್ರ ಕಟ್ಟೆಚ್ಚರವಹಿಸಿದೆ. ಇಸ್ರೇಲಿ ವಾಯುಪ್ರದೇಶವನ್ನು ಪ್ರವೇಶಿಸುವ ಮೊದಲೇ ಡ್ರೋನ್ ಮತ್ತು ಕ್ಷಿಪಣಿದಾಳಿಗಳನ್ನು ತಡೆಹಿಡಿಯಲಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

 

 

Akshay Pallamajalu

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Follow Us