ಎಫ್​ಟಿಎಫ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವ ಭಾರತ ಮೂಲದ ರಾಜಾ ಕುಮಾರ್ ಯಾರು?

ಅಂತಾರಾಷ್ಟ್ರೀಯ ಹಣಕಾಸು ಕ್ರಿಯಾ ಕಾರ್ಯಪಡೆ( ಎಫ್​ಎಟಿಎಫ್​)ಅಧ್ಯಕ್ಷರಾಗಿ ಭಾರತೀಯ ಮೂಲಕ ಟಿ ರಾಜಾ ಕುಮಾರ್ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಅವರು ಜಾಗತಿಕ ಅಕ್ರಮ ಹಣ ವರ್ಗಾವಣೆ ಮತ್ತು ಭಯೋತ್ಪಾದನಾ ನಿಗ್ರಹ ಕ್ರಮಗಳ ಪರಿಣಾಮಕಾರಿತ್ವವನ್ನು ಹೆಚ್ಚಿಸುವುದು, ಆಸ್ತಿ ಮರುಪಡೆಯುವಿಕೆ ಹಾಗೂ ಇತರೆ ಉಪಕ್ರಮಗಳನ್ನು ಸುಧಾರಿಸುವತ್ತ ಗಮನಹರಿಸುತ್ತಾರೆ ಎಂದು ಎಫ್‌ಎಟಿಎಫ್ ಟ್ವೀಟ್ ಮೂಲಕ ತಿಳಿಸಿದೆ.

ಎಫ್​ಟಿಎಫ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವ ಭಾರತ ಮೂಲದ ರಾಜಾ ಕುಮಾರ್ ಯಾರು?
T Raja Kumar
TV9kannada Web Team

| Edited By: Nayana Rajeev

Jul 02, 2022 | 1:54 PM

ಅಂತಾರಾಷ್ಟ್ರೀಯ ಹಣಕಾಸು ಕ್ರಿಯಾ ಕಾರ್ಯಪಡೆ( ಎಫ್​ಎಟಿಎಫ್​)ಅಧ್ಯಕ್ಷರಾಗಿ ಭಾರತೀಯ ಮೂಲಕ ಟಿ ರಾಜಾ ಕುಮಾರ್ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಅವರು ಜಾಗತಿಕ ಅಕ್ರಮ ಹಣ ವರ್ಗಾವಣೆ ಮತ್ತು ಭಯೋತ್ಪಾದನಾ ನಿಗ್ರಹ ಕ್ರಮಗಳ ಪರಿಣಾಮಕಾರಿತ್ವವನ್ನು ಹೆಚ್ಚಿಸುವುದು, ಆಸ್ತಿ ಮರುಪಡೆಯುವಿಕೆ ಹಾಗೂ ಇತರೆ ಉಪಕ್ರಮಗಳನ್ನು ಸುಧಾರಿಸುವತ್ತ ಗಮನಹರಿಸುತ್ತಾರೆ ಎಂದು ಎಫ್‌ಎಟಿಎಫ್ ಟ್ವೀಟ್ ಮೂಲಕ ತಿಳಿಸಿದೆ.

ಅವರು ಸಿಂಗಾಪುರದ ಗೃಹ ಸಚಿವಾಲಯ ಮತ್ತು ಪೊಲೀಸ್ ಪಡೆಗಳಲ್ಲಿ 35 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಎಫ್‌ಎಟಿಎಫ್‌ನ ಮುಖ್ಯಸ್ಥರಾದ ಡಾ ಮಾರ್ಕಸ್ ಪ್ಲೆಯರ್ ಅವರ ನಂತರ ರಾಜಾ ಕುಮಾರ್ ಅವರು ಎರಡು ವರ್ಷಗಳ ಅವಧಿಗೆ ಸೇವೆ ಸಲ್ಲಿಸಲಿದ್ದಾರೆ.

ಭಯೋತ್ಪಾದಕರಿಗೆ ಹಣಕಾಸು ನೆರವು ನೀಡುವುದನ್ನು ತಡೆಗಟ್ಟುವ ಕಾರ್ಯವನ್ನು ಮಾಡುತ್ತಿದೆ. ಹೊಸ ಅಧ್ಯಕ್ಷ ರಾಜಾ ಕುಮಾರ್ ಅವರು ಜಾಗತಿಕ ಅಕ್ರಮ ಹಣ ವರ್ಗಾವಣೆ ಮತ್ತು ಭಯೋತ್ಪಾದನೆ-ವಿರೋಧಿ ಹಣಕಾಸು ಕ್ರಮಗಳ ಪರಿಣಾಮಕಾರಿತ್ವವನ್ನು ಮೇಲ್ವಿಚಾರಣೆ ಮಾಡುತ್ತಾರೆ ಎಂದು FATF ಟ್ವೀಟ್ ಮಾಡಿದೆ, ಆಸ್ತಿ ಮರುಪಡೆಯುವಿಕೆ ಮತ್ತು ಇತರ ವಿಷಯಗಳಿಗೆ ಒತ್ತು ನೀಡಲಿದ್ದಾರೆ.

ರಾಜ ಕುಮಾರ್ ಅವರು ಸಿಂಗಾಪುರದ ನ್ಯಾಷನಲ್ ಯೂನಿವರ್ಸಿಟಿಯಿಂದ LLB ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ತತ್ವಶಾಸ್ತ್ರದಲ್ಲಿ (ಅಪರಾಧಶಾಸ್ತ್ರ ಮತ್ತು ಕಾನೂನು) ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

2006 ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಅಡ್ವಾನ್ಸ್ಡ್ ಮ್ಯಾನೇಜ್ಮೆಂಟ್ ಪ್ರೋಗ್ರಾಂನಲ್ಲಿ ಪಾಲ್ಗೊಂಡಿದ್ದರು. 2014 ರಿಂದ 2018 ರ ನಡುವೆ ಹೋಮ್ ಟೀಮ್ ಅಕಾಡೆಮಿಯ ಮುಖ್ಯ ಕಾರ್ಯನಿರ್ವಾಹಕರಾಗಿದ್ದರು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada