ಅಮೆರಿಕದ ಜಿಮ್​ನಲ್ಲಿ ಭಾರತೀಯ ವಿದ್ಯಾರ್ಥಿ ಮೇಲೆ ಚಾಕುವಿನಿಂದ ಹಲ್ಲೆ, ಆರೋಗ್ಯ ಸ್ಥಿತಿ ಗಂಭೀರ

ಅಮೆರಿಕದಲ್ಲಿ ಭಾರತೀಯ ಪ್ರಜೆಯನ್ನು ಗುರಿಯಾಗಿಸಿ ಕೊಲ್ಲುವ ಯತ್ನ ನಡೆದಿದೆ. 24 ವರ್ಷದ ವಿದ್ಯಾರ್ಥಿಯೊಬ್ಬನನ್ನು ಜಿಮ್​ನಲ್ಲಿ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ವರದಿಯಾಗಿದೆ. ಸದ್ಯ ವಿದ್ಯಾರ್ಥಿಯ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಕಳೆದ ಭಾನುವಾರ ವರುಣ್ ಇಂಡಿಯಾನಾದ ವಾಲ್ಪಾರೈಸೊದಲ್ಲಿ ಸಾರ್ವಜನಿಕ ಜಿಮ್‌ನಲ್ಲಿದ್ದಾಗ ಈ ಘಟನೆ ನಡೆದಿದೆ.

ಅಮೆರಿಕದ ಜಿಮ್​ನಲ್ಲಿ ಭಾರತೀಯ ವಿದ್ಯಾರ್ಥಿ ಮೇಲೆ ಚಾಕುವಿನಿಂದ ಹಲ್ಲೆ, ಆರೋಗ್ಯ ಸ್ಥಿತಿ ಗಂಭೀರ
ಪೊಲೀಸ್
Image Credit source: NDTV

Updated on: Nov 01, 2023 | 9:44 AM

ಅಮೆರಿಕದಲ್ಲಿ ಭಾರತೀಯ ಪ್ರಜೆಯನ್ನು ಗುರಿಯಾಗಿಸಿ ಕೊಲ್ಲುವ ಯತ್ನ ನಡೆದಿದೆ. 24 ವರ್ಷದ ವಿದ್ಯಾರ್ಥಿಯೊಬ್ಬನನ್ನು ಜಿಮ್​ನಲ್ಲಿ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ವರದಿಯಾಗಿದೆ. ಸದ್ಯ ವಿದ್ಯಾರ್ಥಿಯ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಕಳೆದ ಭಾನುವಾರ ವರುಣ್ ಇಂಡಿಯಾನಾದ ವಾಲ್ಪಾರೈಸೊದಲ್ಲಿ ಸಾರ್ವಜನಿಕ ಜಿಮ್‌ನಲ್ಲಿದ್ದಾಗ ಈ ಘಟನೆ ನಡೆದಿದೆ.

ಕೊಲೆ ಆರೋಪಿಯನ್ನು ಬಂಧಿಸಲಾಗಿದೆ. ಆತನನ್ನು ಜೋರ್ಡಾನ್ ಆಂಡ್ರೇಡ್ ಎಂದು ಗುರುತಿಸಲಾಗಿದೆ. ಆಂಡ್ರೇಡ್ ಸಾರ್ವಜನಿಕ ಜಿಮ್​ನಲ್ಲಿ ವರುಣ್​ಗೆ ಹಲವು ಬಾರಿ ಇರಿದಿದ್ದಾನೆ, ದಾಳಿಯ ನಂತರ, ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಗಳ ಮೇಲೆ ಮಾರಕಾಯುಧಗಳಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಆರೋಪವನ್ನು ಹೊರಿಸಲಾಗಿದೆ.

ಗಾಯಗೊಂಡ ವಿದ್ಯಾರ್ಥಿಯ ಸ್ಥಿತಿ ಚಿಂತಾಜನಕವಾಗಿದೆ

ದಾಳಿ ನಡೆದ ತಕ್ಷಣ ವರುಣ್ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಭಾರತೀಯ ವಿದ್ಯಾರ್ಥಿ ಬದುಕುಳಿಯುವ ಸಾಧ್ಯತೆ ಕಡಿಮೆ ಎಂದು ವೈದ್ಯರು ಹೇಳಿದ್ದಾರೆ.

ದಾಳಿಯ ಹಿಂದಿನ ನಿಜವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನೆಯ ದಿನ ಮಸಾಜ್​ ಮಾಡಿಸಿಕೊಳ್ಳಲು ಕೋಣೆಗೆ ಮಸಾಜ್​ ಕೋಣೆಗೆ ಹೋದಾಗ ಅಲ್ಲಿ ಅಪರಿಚಿತ ವ್ಯಕ್ತಿಯನ್ನು ನೋಡಿದೆ ನನಗೇನೋ ವಿಚಿತ್ರ ಎನಿಸಿತು , ಆ ವ್ಯಕ್ತಿಯಿಂದ ಅಪಾಯವಿದೆ ಎಂದೆನಿಸಿತು ಹಾಗಾಗಿ ಹಲ್ಲೆ ಮಾಡಿದೆ ಎಂದು ದಾಳಿಕೋರ ತಿಳಿಸಿದ್ದಾನೆ.

ಆದರೆ, ಪೊಲೀಸರು ಸಂಪೂರ್ಣ ತನಿಖೆ ನಡೆಸುತ್ತಿದ್ದು, ಕೊಲೆ ಪ್ರಕರಣದ ಹಿಂದಿನ ಉದ್ದೇಶವನ್ನು ತಿಳಿಯಲು ಪ್ರಯತ್ನಿಸುತ್ತಿದ್ದಾರೆ. ಅದೇ ಸಮಯದಲ್ಲಿ, ವರುಣ್ ಸ್ಥಿತಿ ಗಂಭೀರವಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ