ಟೋಕಿಯೊ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಜಪಾನ್‌ನ ಟೋಕಿಯೊದಲ್ಲಿ(Tokyo) ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿದ್ದು ಭಾರತ ಮತ್ತು ಜಪಾನ್ (Japan) ‘ನೈಸರ್ಗಿಕ ಪಾಲುದಾರರು’ ಎಂದಿದ್ದಾರೆ. ಈ ಸಂಬಂಧವು ಅನ್ಯೋನ್ಯತೆ,ಆಧ್ಯಾತ್ಮಿಕತೆ, ಸಹಕಾರ ಮತ್ತು ಒಗ್ಗೂಡಿವಿಕೆಯಿಂದ ಕೂಡಿದೆ ಎಂದು ಮೋದಿ ಹೇಳಿದ್ದಾರೆ. “ಭಾರತೀಯರು ನಮ್ಮ ‘ಕರ್ಮಭೂಮಿ’ಯೊಂದಿಗೆ ಹೃದಯಸಂಬಂಧವನ್ನಿಟ್ಟುಕೊಂಡಿರುತ್ತಾರೆ. ಆದರೆ ನಮ್ಮ ‘ಮಾತೃಭೂಮಿ’ ಮೇಲಿನ ಪ್ರೀತಿ ಎಂದಿಗೂ ಮರೆಯಾಗುವುದಿಲ್ಲ. ನಾವು ನಮ್ಮ ಮಾತೃಭೂಮಿಯಿಂದ ದೂರವಿರಲು ಸಾಧ್ಯವಿಲ್ಲ. ಇದು ನಮ್ಮ ದೊಡ್ಡ ಸಾಮರ್ಥ್ಯಗಳಲ್ಲಿ ಒಂದಾಗಿದೆ ಎಂದು ಮೋದಿ ಹೇಳಿದ್ದಾರೆ. ಚಿಕಾಗೋಗೆ ಹೋಗುವ ಮೊದಲು, ಸ್ವಾಮಿ ವಿವೇಕಾನಂದರು ಜಪಾನ್‌ಗೆ ಬಂದರು. ದೇಶವು ಅವರ ಮನಸ್ಸಿನಲ್ಲಿ ದೊಡ್ಡ ಛಾಪು ಮೂಡಿಸಿದೆ. ಭಾರತದ ಯುವಕರು ತನ್ನ ಜೀವನದಲ್ಲಿ ಒಮ್ಮೆಯಾದರೂ ಜಪಾನ್‌ಗೆ ಭೇಟಿ ನೀಡಬೇಕು ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರು. ಸ್ವಾಮಿ ವಿವೇಕಾನಂದರ ಈ ಸದ್ಭಾವನೆಯನ್ನು ಮುಂದಿಟ್ಟುಕೊಂಡು, ಜಪಾನ್‌ನ ಯುವ ಜನಾಂಗ ತಮ್ಮ ಜೀವನದಲ್ಲಿ ಒಮ್ಮೆಯಾದರೂ ಭಾರತಕ್ಕೆ ಭೇಟಿ ನೀಡಬೇಕೆಂದು ನಾನು ಬಯಸುತ್ತೇನೆ ಎಂದು ಮೋದಿ ಹೇಳಿದ್ದಾರೆ. ಲಸಿಕೆಗಳು ಲಭ್ಯವಾದಾಗ ಭಾರತವು ತನ್ನ ಕೋಟಿಗಟ್ಟಲೆ ನಾಗರಿಕರಿಗೆ ‘ಮೇಡ್ ಇನ್ ಇಂಡಿಯಾ’ ಲಸಿಕೆಗಳನ್ನು ಪೂರೈಸಿದೆ ಮತ್ತು ಅವುಗಳನ್ನು ವಿಶ್ವದ 100 ಕ್ಕೂ ಹೆಚ್ಚು ದೇಶಗಳಿಗೆ ಕಳುಹಿಸಿದೆ. ಭಾರತವು ಗೌತಮ ಬುದ್ಧನ ಆಶೀರ್ವಾದವನ್ನು ಪಡೆಯುವಷ್ಟು ಅದೃಷ್ಟಶಾಲಿಯಾಗಿದೆ. ಎಷ್ಟೇ ದೊಡ್ಡ ಸವಾಲು ಎದುರಾದರೂ ಭಾರತವು ಮಾನವೀಯತೆಯ ಸೇವೆಯನ್ನು ನಿರಂತರವಾಗಿ ಮಾಡುತ್ತಿದೆ, ಭಾರತವು ಅದಕ್ಕೆ ಪರಿಹಾರವನ್ನು ಕಂಡುಕೊಳ್ಳುತ್ತದೆ. ಕಳೆದ 100 ವರ್ಷಗಳಲ್ಲಿ ಅತಿದೊಡ್ಡ ಬಿಕ್ಕಟ್ಟು ಕೊವಿಡ್ ಸಮಯದಲ್ಲಿ, ಭಾರತವು ಜಗತ್ತಿನಾದ್ಯಂತ ಜನರಿಗೆ ಸಹಾಯ ಮಾಡಿದೆ ಎಂದಿದ್ದಾರೆ ಮೋದಿ.
Be it Mumbai-Ahmedabad high-speed Rail, Delhi-Mumbai Industrial Corridor, or dedicated freight corridor, these are great examples of India-Japan cooperation: Prime Minister Narendra Modi interacting with the Indian diaspora in Tokyo pic.twitter.com/TH6CO2t8jv
— ANI (@ANI) May 23, 2022
ಇದನ್ನೂ ಓದಿ
ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲು, ದೆಹಲಿ-ಮುಂಬೈ ಕೈಗಾರಿಕಾ ಕಾರಿಡಾರ್ ಅಥವಾ ಮೀಸಲಾದ ಸರಕು ಸಾಗಣೆ ಕಾರಿಡಾರ್ ಆಗಿರಲಿ, ಇವು ಭಾರತ-ಜಪಾನ್ ಸಹಕಾರಕ್ಕೆ ಉತ್ತಮ ಉದಾಹರಣೆಗಳಾಗಿವೆ. ಇಂದು, ಭಾರತವು ತನ್ನ ಮೂಲಸೌಕರ್ಯ ಮತ್ತು ಸಾಮರ್ಥ್ಯದ ನಿರ್ಮಾಣವನ್ನು ಹೆಚ್ಚಿಸುವ ವೇಗ ಮತ್ತು ಪ್ರಮಾಣವನ್ನು ಜಗತ್ತು ಅರಿತುಕೊಳ್ಳುತ್ತಿದೆ. ನಮ್ಮ ಈ ಸಾಮರ್ಥ್ಯವನ್ನು ಬೆಳೆಸುವಲ್ಲಿ ಜಪಾನ್ ಪ್ರಮುಖ ಪಾಲುದಾರ ಎಂದು ಮೋದಿ ಹೇಳಿದ್ದಾರೆ.
ಮೋದಿ ಭಾಷಣದ ಮುಖ್ಯಾಂಶಗಳು
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 4:58 pm, Mon, 23 May 22