ಭಾರತ- ಉಕ್ರೇನ್ ನಡುವೆ ವಿಮಾನ ಹಾರಾಟ ಸಂಖ್ಯೆಯನ್ನು ಹೆಚ್ಚಿಸಲು ವಿವಿಧ ಏರ್​​ಲೈನ್​ಗಳೊಂದಿಗೆ ಭಾರತ ಮಾತುಕತೆ ನಡೆಸಿದೆ: ವರದಿ

| Updated By: shivaprasad.hs

Updated on: Feb 17, 2022 | 7:17 AM

ರಷ್ಯಾ ಅತಿಕ್ರಮಣ ನಡೆಸುವ ಹುನ್ನಾರ ನಡೆಸುತ್ತಿದೆ ಎಂದು ಉಕ್ರೇನ್ ಹಾಗೂ ಯುಎಸ್; ರಷ್ಯಾ ವಿರುದ್ಧ ಗಂಭೀರ ಆರೋಪ ಮಾಡುತ್ತಿವೆ. ಆದರೆ ಈ ಆರೋಪಗಳನ್ನು ತಳ್ಳಿ ಹಾಕಿರುವ ಮಾಸ್ಕೋ, ಉಕ್ರೇನ್ ಸೇರಿದಂತೆ ಯಾವುದೇ ದೇಶದ ಮೇಲೆ ಆಕ್ರಮಣ ನಡೆಸುವ ಉದ್ದೇಶ ತನಗಿಲ್ಲ ಎಂದು ಅದು ಪದೇಪದೆ ಸ್ಪಷ್ಟಪಡಿಸುತ್ತಿದೆ.

ಭಾರತ-  ಉಕ್ರೇನ್ ನಡುವೆ ವಿಮಾನ ಹಾರಾಟ ಸಂಖ್ಯೆಯನ್ನು ಹೆಚ್ಚಿಸಲು ವಿವಿಧ ಏರ್​​ಲೈನ್​ಗಳೊಂದಿಗೆ ಭಾರತ ಮಾತುಕತೆ ನಡೆಸಿದೆ: ವರದಿ
ಉಕ್ರೇನ್ ಗಡಿಭಾಗದಲ್ಲಿ ರಷ್ಯನ್ ಸೈನಿಕರು
Follow us on

ಪಾಶ್ಚಿಮಾತ್ಯ ರಾಷ್ಟ್ರಗಳ ಎಚ್ಚರಿಕೆ ಹೊರತಾಗಿಯೂ ರಷ್ಯಾ (Russia) ಮತ್ತು ಅದರ ನೆರೆರಾಷ್ಟ್ರ ಉಕ್ರೇನ್ (Ukraine) ನಡುವೆ ತಲೆದೋರಿರುವ ಬಿಕ್ಕಟ್ಟು ಹಾಗೆಯೇ ಮುಂದುವರಿದಿದೆ. ಏತನ್ಮಧ್ಯೆ, ನಮಗೆ ಲಭ್ಯವಾಗಿರುವ ಮೂಲಗಳ ಪ್ರಕಾರ ಭಾರತ ಮತ್ತು ಉಕ್ರೇನ್ ನಡುವೆ ವಿಮಾನ ಹಾರಾಟ ಸಂಖ್ಯೆಯನ್ನು ಹೆಚ್ಚಿಸಲು ಭಾರತದ ನಾಗರಿಕ ವಿಮಾನಯಾನ ಪ್ರಾಧಿಕಾರದ (civil aviation authority) ಅಧಿಕಾರಿಗಳು ಬೇರೆ ಬೇರೆ ಏರ್ ಲೈನ್ ಗಳ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ಮೂಲಗಳ ಪ್ರಕಾರ ಭಾರತೀಯ ನಾಗರಿಕರ ಪ್ರಶ್ನೆಗಳಿಗೆ ಉತ್ತರ ನೀಡಲು ರಾಯಭಾರಿ ಕಚೇರಿಯ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಕಂಟ್ರೋಲ್ ರೂಮ್ಗಳನ್ನು ಸ್ಥಾಪಿಸಲಾಗಿದೆ.

ಇದಕ್ಕೆ ಮೊದಲು ಉಕ್ರೇನ್ ನಲ್ಲಿರುವ ಭಾರತದ ರಾಯಭಾರಿ ಕಚೇರಿಯು, ಉಕ್ರೇನಲ್ಲಿ ವಾಸವಾಗಿರುವ ಭಾರತೀಯರಿಗೆ ಅಲ್ಲೇ ವಾಸ ಮುಂದುವರಿಸುವ ಅವಶ್ಯಕತೆ ಅಷ್ಟಾಗಿ ಇಲ್ಲ ಅಂತಾದರೆ, ತಾತ್ಕಾಲಿಕವಾಗಿ ಕೀವ್ ತ್ಯಜಿಸಿ ಸ್ವದೇಶಕ್ಕೆ ವಾಪಸ್ಸು ಹೋಗುವ ತಯಾರಿ ಮಾಡಿಕೊಳ್ಳಲು ಹೇಳಿದೆ. ಒಂದು ಅಂದಾಜಿನ ಪ್ರಕಾರ ಸುಮಾರು 15,000 ಭಾರತೀಯರು ಉಕ್ರೇನಲ್ಲಿ ವಾಸಿಸುತ್ತಿದ್ದು ಅವರಲ್ಲಿ ಹೆಚ್ಚಿನವರು ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಾಗಿದ್ದಾರೆ.

ಭಾರತ ಸರ್ಕರವೂ ಉಕ್ರೇನಲ್ಲಿರುವ ತನ್ನ ಪ್ರಜೆಗಳಿಗೆ ತಾವಿರುವ ಸ್ಥಳದಲ್ಲಿ ಏನಾದರೂ ಸಮಸ್ಯೆ ಎದುರಾಗುತ್ತಿದ್ದರೆ ಕೂಡಲೇ ಅದನ್ನು ಅಲ್ಲಿನ ತನ್ನ ರಾಯಭಾರಿ ಕಚೇರಿಯ ಗಮನಕ್ಕೆ ತರುವಂತೆ ಸಲಹೆ ನೀಡಿದೆ. ಅಲ್ಲಿನ ಅಧಿಕಾರಿಗಳು ಸಾಧ್ಯವಾದಷ್ಟು ಬೇಗ ನೆರವು ಒದಗಿಸುತ್ತಾರೆ ಎಂಬ ಭರವಸೆಯನ್ನು ಸರ್ಕಾರ ನೀಡಿದೆ.

ಅವರ ವಿಳಾಸ ಮತ್ತು ಪೋನ್ ನಂಬರಗಳನ್ನು ಸಹ ರಾಯಭಾರಿ ಕಚೇರಿಗೆ ಒದಗಿಸಿದರೆ ತುರ್ತುಸ್ಥಿತಿ ಎದುರಾದಲ್ಲಿ ಸಂಪರ್ಕಿಸಿವುದು ಸುಲಭವಾಗುತ್ತದೆ ಎಂದು ಭಾರತ ಸರ್ಕಾರ ಹೇಳಿದೆ.

ಕಳೆದ ಕೆಲವು ತಿಂಗಳುಗಳಿಂದ ಉಕ್ರೇನ್ ಮತ್ತು ರಷ್ಯಾ ನಡುವೆ ಉದ್ವಿಗ್ನ ಸ್ಥಿತಿ ತಲೆದೋರಿದೆ. ರಷ್ಯಾ ಮತ್ತು ಉಕ್ರೇನ್ ಗಡಿಭಾಗದಲ್ಲಿ ಸೇನಾಪಡೆಗಳ ಜಮಾವಣೆ ಆಗುತ್ತಿದೆ ಎಂದು ರಷ್ಯಾ ಮತ್ತು ನ್ಯಾಟೋ ಪರಸ್ಪರ ದೋಷಾರೋಪಣೆಯಲ್ಲಿ ತೊಡಗಿವೆ.

ರಷ್ಯಾ ಅತಿಕ್ರಮಣ ನಡೆಸುವ ಹುನ್ನಾರ ನಡೆಸುತ್ತಿದೆ ಎಂದು ಉಕ್ರೇನ್ ಹಾಗೂ ಯುಎಸ್; ರಷ್ಯಾ ವಿರುದ್ಧ ಗಂಭೀರ ಆರೋಪ ಮಾಡುತ್ತಿವೆ. ಆದರೆ ಈ ಆರೋಪಗಳನ್ನು ತಳ್ಳಿ ಹಾಕಿರುವ ಮಾಸ್ಕೋ, ಉಕ್ರೇನ್ ಸೇರಿದಂತೆ ಯಾವುದೇ ದೇಶದ ಮೇಲೆ ಆಕ್ರಮಣ ನಡೆಸುವ ಉದ್ದೇಶ ತನಗಿಲ್ಲ ಎಂದು ಅದು ಪದೇಪದೆ ಸ್ಪಷ್ಟಪಡಿಸುತ್ತಿದೆ.

ಭಾರತವೂ ಸೇರಿದಂತೆ ಬೇರೆ ಯಾವುದೇ ರಾಷ್ಟ್ರ ರಷ್ಯಾ ಮತ್ತು ಉಕ್ರೇನ್ ನಡುವೆ ಹೆಚ್ಚುತ್ತಿರುವ ಪ್ರಕ್ಷುಬ್ಧ ಸ್ಥಿತಿಯನ್ನು ಕಡಿಮೆ ಮಾಡಲು ಮುಂದಾದರೆ ಯುಎಸ್ ಅಂಥ ಪ್ರಯತ್ನವನ್ನು ಸ್ವಾಗತಿಸುತ್ತದೆ ಎಂದು ಶ್ವೇತ ಭವನದ ವಕ್ತಾರ ಬುಧವಾರ ಹೇಳಿದ್ದಾರೆ.

ಒಂದು ಪಕ್ಷ ರಷ್ಯಾದ ಸೇನೆ ಉಕ್ರೇನ್ ಮೇಲೆ ದಾಳಿ ನಡೆಸಿದ್ದೇಯಾದರೆ, ಯುರೋಪ್ಗೆ ರಷ್ಯಾ ಮಾಡುತ್ತಿರುವ ಅನಿಲ ಪೂರೈಕೆಯನ್ನು ದ್ವಿಗುಣಗೊಳಿಸುವ ನಾರ್ಡ್ ಸ್ಟ್ರೀಮ್ 2 ಪೈಪ್ ಲೈನ್ ಮೇಲೆ ಆರ್ಥಿಕ ದಿಗ್ಭಂದನಗಳನ್ನು ವಿಧಿಸಲಾಗುವುದು ಅಂತ ಪಾಶ್ಚಿಮಾತ್ಯ ರಾಷ್ಟ್ರಗಳು ಮಂಗಳವಾರ ಮಾಸ್ಕೋಗೆ ಎಚ್ಚರಿಕೆ ನೀಡಿವೆ.

ರಷ್ಯಾದ ನಾರ್ಡ್ ಸ್ಟ್ರೀಮ್ 2 ಪೈಪ್‌ಲೈನ್ ಅನ್ನು ಕೆಲವು ಪಾಶ್ಚಿಮಾತ್ಯ ದೇಶಗಳು ಭೌಗೋಳಿಕ ರಾಜಕೀಯ ಅಸ್ತ್ರವೆಂದು ಟೀಕಿಸಿದ್ದು, ಇದು ರಷ್ಯಾದ ಅನಿಲದ ಮೇಲೆ ಯುರೋಪ್ ಅವಲಂಬನೆಯನ್ನು ಹೆಚ್ಚಿಸುತ್ತದೆ ಎಂದು ಎಚ್ಚರಿಸಿವೆ.

ಇದನ್ನೂ ಓದಿ:   Russia-Ukraine Crisis: ಉಕ್ರೇನ್ ಗಡಿಯಲ್ಲಿ ರಷ್ಯನ್ ಮಿಲಿಟರಿ ಕಾರ್ಯಾಚರಣೆ ಅಂತ್ಯ; ಸೇನಾ ಪಡೆಯನ್ನು ಹಿಂಪಡೆದ ರಷ್ಯಾ