ಭೂಗತ ಪಾತಕಿ ದಾವೂದ್ ಇಬ್ರಾಹಿಂಗೂ ಕೊರೊನಾ ಅಟ್ಯಾಕ್
ಕರಾಚಿ: ಇಡೀ ವಿಶ್ವದ ಉದ್ದಗಲಕ್ಕೂ ತನ್ನ ಕಬಂಧ ಬಾಹು ಚಾಚಿರೋ ಕೊರೊನಾ, ಎಲ್ಲೆಡೆ ರಣಕೇಕೆ ಹಾಕುತ್ತಿದೆ. ಇದೀಗ ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಕೊವಿಡ್-19 ಟೆಸ್ಟ್ ವೇಳೆ ದಾವೂದ್ ಇಬ್ರಾಹಿಂಗೆ ಸೋಂಕು ಪತ್ತೆಯಾಗಿದೆ. ಭಾರತಕ್ಕೆ ಮೋಸ್ಟ್ ವಾಂಟೆಡ್ ಭೂಗತ ಪಾತಕಿಯಾಗಿರುವ ದಾವೂದ್ ಇಬ್ರಾಹಿಂ, ಪಾಕಿಸ್ತಾನದ ಕರಾಚಿಯಲ್ಲಿದ್ದಾರೆ. ದಾವೂದ್ ಪತ್ನಿಗೂ ಮಹಾಮಾರಿ ಕೊರೊನಾ ವೈರಸ್ ವಕ್ಕರಿಸಿದೆ. ಹೀಗಾಗಿ ದಾವೂದ್ ಇಬ್ರಾಹಿಂ ಸೆಕ್ಯೂರಿಟಿ ಗಾರ್ಡ್ಗಳಿಗೆ ಕ್ವಾರಂಟೈನ್ ಮಾಡಲಾಗಿದೆ.
ಕರಾಚಿ: ಇಡೀ ವಿಶ್ವದ ಉದ್ದಗಲಕ್ಕೂ ತನ್ನ ಕಬಂಧ ಬಾಹು ಚಾಚಿರೋ ಕೊರೊನಾ, ಎಲ್ಲೆಡೆ ರಣಕೇಕೆ ಹಾಕುತ್ತಿದೆ. ಇದೀಗ ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಕೊವಿಡ್-19 ಟೆಸ್ಟ್ ವೇಳೆ ದಾವೂದ್ ಇಬ್ರಾಹಿಂಗೆ ಸೋಂಕು ಪತ್ತೆಯಾಗಿದೆ.
ಭಾರತಕ್ಕೆ ಮೋಸ್ಟ್ ವಾಂಟೆಡ್ ಭೂಗತ ಪಾತಕಿಯಾಗಿರುವ ದಾವೂದ್ ಇಬ್ರಾಹಿಂ, ಪಾಕಿಸ್ತಾನದ ಕರಾಚಿಯಲ್ಲಿದ್ದಾರೆ. ದಾವೂದ್ ಪತ್ನಿಗೂ ಮಹಾಮಾರಿ ಕೊರೊನಾ ವೈರಸ್ ವಕ್ಕರಿಸಿದೆ. ಹೀಗಾಗಿ ದಾವೂದ್ ಇಬ್ರಾಹಿಂ ಸೆಕ್ಯೂರಿಟಿ ಗಾರ್ಡ್ಗಳಿಗೆ ಕ್ವಾರಂಟೈನ್ ಮಾಡಲಾಗಿದೆ.
Published On - 3:47 pm, Fri, 5 June 20