ಜಕಾರ್ತದಿಂದ ಟೇಕ್​ ಆಫ್​ ಆದ ಇಂಡೋನೇಷ್ಯಾದ ವಿಮಾನ ನಾಪತ್ತೆ!

| Updated By: ಸಾಧು ಶ್ರೀನಾಥ್​

Updated on: Jan 09, 2021 | 5:43 PM

ಈ ವಿಮಾನ ಸೂಕರ್ನೊ-ಹಟ್ಟಾ ವಿಮಾನ ನಿಲ್ದಾಣದಿಂದ ಟೇಕ್​ಆಫ್​ ಆಗಿತ್ತು. ವಿಮಾನದಲ್ಲಿ ಒಟ್ಟು 59 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಈ ವಿಮಾನ ಸಂಪರ್ಕ ಕಳೆದುಕೊಂಡು ಸಮುದ್ರಕ್ಕೆ ಬಿದ್ದಿರುವ ಶಂಕೆ ಇದೆ.

ಜಕಾರ್ತದಿಂದ ಟೇಕ್​ ಆಫ್​ ಆದ ಇಂಡೋನೇಷ್ಯಾದ ವಿಮಾನ ನಾಪತ್ತೆ!
ಸಾಂದರ್ಭಿಕ ಚಿತ್ರ
Follow us on

ನವದೆಹಲಿ: ಜಕಾರ್ತದಿಂದ ಹೊರಟಿದ್ದ ಆದ ಇಂಡೋನೇಷ್ಯಾದ ಶ್ರೀವಿಜಯ ಏರ್ SJ 182 ಡೊಮೆಸ್ಟಿಕ್ ವಿಮಾನ ನಾಪತ್ತೆ ಆಗಿದೆ. ಟೇಕ್​ ಆಫ್​ ಆದ ಕೆಲವೇ ಕ್ಷಣದಲ್ಲಿ ವಿಮಾನ ಸಂಪರ್ಕ ಕಳೆದುಕೊಂಡಿದೆ.

ಈ ವಿಮಾನ ಸೂಕರ್ನೊ-ಹಟ್ಟಾ ವಿಮಾನ ನಿಲ್ದಾಣದಿಂದ ಟೇಕ್ ​ಆಫ್​ ಆಗಿತ್ತು. ವಿಮಾನದಲ್ಲಿ ಒಟ್ಟು 59 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಈ ವಿಮಾನ ಸಂಪರ್ಕ ಕಳೆದುಕೊಂಡು ಸಮುದ್ರಕ್ಕೆ ಬಿದ್ದಿರುವ ಶಂಕೆ ಇದೆ. ವಿಮಾನಕ್ಕಾಗಿ ರಕ್ಷಣಾಪಡೆ ಹುಡುಕಾಟ ಆರಂಭಿಸಿದೆ.

ಜಕಾರ್ತದಿಂದ ಹೊರಟ ವಿಮಾನ ನಾಲ್ಕು ನಿಮಿಷಗಳಲ್ಲಿ ಸಂಪರ್ಕ ಕಳೆದುಕೊಂಡಿದೆ. ಕೇವಲ ಒಂದೇ ನಿಮಿಷದಲ್ಲಿ 10 ಸಾವಿರ ಅಡಿ ವಿಮಾನ ಕುಸಿತ ಕಂಡಿದೆ ಎಂದು ತಿಳಿದು ಬಂದಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದ ಮೊದಲ ರೈಲು! ಮೆಜೆಸ್ಟಿಕ್​ನಿಂದ 45 ನಿಮಿಷ ಮಾತ್ರ

Published On - 4:33 pm, Sat, 9 January 21