ಇಂಟರ್ನೆಟ್ನ ಜನಪ್ರಿಯ ಈಮು ಪಕ್ಷಿ ‘ಇಮ್ಯಾನುಯೇಲ್’ ಮಾರಣಾಂತಿಕ ಹಕ್ಕಿಜ್ವರದಿಂದ ಬಳಲುತ್ತಿದೆ!
ಅದು ಚೇತರಿಸಿಕೊಳ್ಳಲು ಬಹಳ ಸಮಯ ಹಿಡಿಯಲಿದೆ ಎಂದು ಹೇಳಿರುವ ಶ್ರೀಮತಿ ಬ್ಲೇಕ್ ಅದರೆ ಅದನ್ನು ‘ಹೋರಾಟಗಾರ’ ಎಂದು ಬಣ್ಣಿಸಿ ಸೋಂಕಿನಿಂದ ಮುಕ್ತಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಿಮಗೆ ಇಮ್ಯಾನುಯೇಲ್ (Emmanuel) ಗೊತ್ತಿರಬಹುದು ಅಂತ ಭಾವಿಸುತ್ತೇವೆ. ಆದೇ ಮಾರಾಯ್ರೇ ತನ್ನ ವಿಚಿತ್ರ ಹಾವಭಾವಗಳಿಂದ ನೆಟ್ಟಿಗರ ಗಮನವನ್ನು ತನ್ನೆಡೆ ಸೆಳೆದುಕೊಳ್ಳುತ್ತಿರುವ ಈಮು (emu) ಪಕ್ಷಿ. ಅದು ಮಾರಣಾಂತಿಕ ಹಕ್ಕಿಜ್ವರದ ಸೋಂಕಿನಿಂದ ಬಳಲುತ್ತಿದೆ ಎಂದು ವಾಷಿಂಗ್ಟನ್ ಪೋಸ್ಟ್ (Washington Post) ವರದಿ ಮಾಡಿದೆ. ಅದನ್ನು ಸಾಕಿರುವ ವ್ಯಕ್ತಿ ಕೃಷಿ ತರಬೇತಿ ವಿಡಿಯೋಗಳನ್ನು ಮಾಡುವ ವೃತ್ತಿಯಲ್ಲಿದ್ದು ಅವರ ಫೋನನ್ನು ನೋಡುಗರು ಹುಣ್ಣಾಗುವಂತೆ ನಗುವ ಹಾಗೆ ಈಮು ಕುಕ್ಕುವ ಟಿಕ್ ಟಾಕ್ ವಿಡಿಯೋಗಳು ಬಹಳ ಜನಪ್ರಿಯ. ಪೋಸ್ಟ್ ವರದಿಯ ಪ್ರಕಾರ ಈಮು ಸಾವು ಬದುಕಿನೊಂದಿಗೆ ಹೋರಾಟ ನಡೆಸುತ್ತಿದೆ. ಕಳೆದ ಬಾರಿಯೂ ಹಕ್ಕಿ ಜ್ವರದ ಪಿಡುಗು ಫಾರ್ಮ್ ನಲ್ಲಿದ್ದ ಅಸಂಖ್ಯಾತ ಪಕ್ಷಿಗಳನ್ನು ಬಲಿತೆಗೆದುಕೊಂಡಿತ್ತು.
ಹವ್ಯಾಸಿ ಕೃಷಿಕ ಮತ್ತು ಕಂಟೆಂಟ್ ನಿರ್ಮಾಪಕ ಟೇಲರ್ ಬ್ಲೇಕ್ ರವಿವಾರದಂದು ಟ್ವಿಟರ್ ನಲ್ಲಿ ಒಂದ ಥ್ರೆಡ್ ಅನ್ನು ಪೋಸ್ಟ್ ಮಾಡಿದ್ದಾರೆ. ಅವರ ಪತ್ನಿಯೂ ಈಮು ಚಿಕಿತ್ಸೆ ನೀಡುತ್ತಿರುವುದನ್ನು ತೋರುವ ಹಲವಾರು ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.
Hi friends. I’ve tried countless times to write this post, but it’s been extremely difficult for me. We had a massive tragedy strike the farm, and I have been doing my best to wrap my head around it.
— eco sister (@hiitaylorblake) October 15, 2022
ಇಮ್ಯಾನುಯೇಲ್ ಬಲಗಾಲಿನ ನರಕ್ಕೆ ತೀವ್ರ ಸ್ವರೂಪದ ಗಾಯವಾಗಿದೆ. ಅದು ಆಹಾರ ಮತ್ತು ನೀರನ್ನು ತಾನಾಗೇ ಸೇವಿಸುವುದಕ್ಕೂ ಶಕ್ತವಾಗಿಲ್ಲ.
ದಕ್ಷಿಣ ಫ್ಲೋರಿಡಾನಲ್ಲಿ ನಕ್ಕಲ್ ಬಂಪ್ ಫಾರ್ಮ್ ಗಳನ್ನು ಶ್ರೀಮತಿ ಬ್ಲೇಕ್ ಅವರ ಕುಟುಂಬ ನಡೆಸುತ್ತಿದ್ದು ಇಮ್ಯಾನುಯೇಲ್ ಮತ್ತು ರಿಕೋ ಹೆಸರಿನ ಹಂಸಪಕ್ಷಿಯನ್ನು ಹೊರತುಪಡಿಸಿ ಫಾರ್ಮ್ನಲ್ಲಿದ್ದ 50 ಕ್ಕೂ ಹೆಚ್ಚು ಪಕ್ಷಿಗಳು ಸೋಂಕಿಗೆ ಬಲಿಯಾಗಿವೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಜುಲೈನಲ್ಲಿ, 5 ಅಡಿ 8 ಇಂಚು ಉದ್ದ ಮತ್ತು ಸುಮಾರು 55 ಕೆಜಿ ತೂಕದ ಇಮ್ಯಾನುಯೇಲ್ ನ ಸಂದರ್ಶನ್ನು ವಾಷಿಂಗ್ಟನ್ ಪೋಸ್ಟ್ ಮಾಡಿತ್ತು. ಅದು ಚೇತರಿಸಿಕೊಳ್ಳಲು ಬಹಳ ಸಮಯ ಹಿಡಿಯಲಿದೆ ಎಂದು ಹೇಳಿರುವ ಶ್ರೀಮತಿ ಬ್ಲೇಕ್ ಅದರೆ ಅದನ್ನು ‘ಹೋರಾಟಗಾರ’ ಎಂದು ಬಣ್ಣಿಸಿ ಸೋಂಕಿನಿಂದ ಮುಕ್ತಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಏವಿಯನ್ ಇನ್ಫ್ಲುಯೆಂಜಾ ಅಮೆರಿಕದಲ್ಲಿ ವ್ಯಾಪಕವಾಗಿ ಹಬ್ಬಿದೆ. ವಿಜ್ಞಾನಿಗಳು ಹೇಳುವ ಪ್ರಕಾರ ಇದು 2015 ರಲ್ಲಿ ಕಾಣಿಸಿಕೊಂಡಿದ್ದ ಅಪಾಯಕಾರಿ ವೈರಸ್ ನ ರೂಪಾಂತರಿ ಇದಾಗಿದ್ದು ಅದಕ್ಕಿಂತಲೂ ಹೆಚ್ಚು ಮಾರಣಾಂತಿಕ ಎನಿಸಿದೆ. ಇದುವರೆಗೆ ಅದು 490 ಲಕ್ಷಕ್ಕೂ ಹೆಚ್ಚು ಪಕ್ಷಿಗಳನ್ನು ಸೋಂಕಿಗೀಡು ಮಾಡಿದೆ. ಯುಎಸ್ ಕೃಷಿ ಇಲಾಖೆಯು ರಾಷ್ಟ್ರದ ಇತಿಹಾಸದಲ್ಲೇ ಭಾರಿ ವೆಚ್ಚದ ಪ್ರಾಣಿಗಳ ಆರೋಗ್ಯಕ್ಕೆ ಸಂಬಂಧಿಸಿದ ತುರ್ತುಸ್ಥಿತಿ ಉಂಟಾಗಿದೆ ಅಂತ ಹೇಳಿರುವುದನ್ನು ಪೋಸ್ಟ್ ವರದಿ ಮಾಡಿದೆ.
ಈಜಿಪ್ಟ್ ನ ವನ್ಯ ಹೆಬ್ಬಾತುಗಳ ಹಿಂಡಿನಿಂದ ಫಾರ್ಮ್ಸ್ ಏವಿಯನ್ ಇನ್ಫ್ಲುಯೆಂಜ ಅಮೆರಿಕದಲ್ಲಿ ಹಬ್ಬಿದೆ ಎಂದು ಶ್ರೀಮತಿ ಬ್ಲೇಕ್ ಭಾವಿಸುತ್ತಾರೆ. ಆ ದೇಶದ ಸಾಕು ಪಕ್ಷಿಗಳಲ್ಲೂ ಈ ಸೋಂಕು ಹರಡಿದೆ ಎಂದು ಅವರು ಹೇಳುತ್ತಾರೆ.