ಟೆಹ್ರಾನ್: ಹಿಜಾಬ್ (Hijab) ಧರಿಸದ ಮಹಿಳೆಗೆ ಬ್ಯಾಂಕ್ ಸೇವೆ ನೀಡಿದ ಇರಾನ್ನ (Iran)ಬ್ಯಾಂಕ್ ಮ್ಯಾನೇಜರ್ ಅನ್ನು ವಜಾ ಮಾಡಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ಭಾನುವಾರ ವರದಿ ಮಾಡಿವೆ. ಇರಾನ್‌ನಲ್ಲಿ ಕಡ್ಡಾಯ ಹಿಜಾಬ್ (Hijab) ನಿಯಮ ವಿರುದ್ಧ ಪ್ರತಿಭಟನೆಗಳು ಮಂದುವರಿದಿದೆ. 80 ಮಿಲಿಯನ್‌ಗಿಂತಲೂ ಹೆಚ್ಚು ಜನರಿರುವ ದೇಶದಲ್ಲಿ ಮಹಿಳೆಯರು ತಮ್ಮ ತಲೆ, ಕುತ್ತಿಗೆ ಮತ್ತು ಕೂದಲನ್ನು ಮುಚ್ಚುವ ಅಗತ್ಯವಿದೆ. ಈ ಕಾನೂನನ್ನು ದೇಶದ ನೈತಿಕ ಪೊಲೀಸರು ಜಾರಿಗೊಳಿಸಿದ್ದಾರೆ. ಡ್ರೆಸ್ ಕೋಡ್ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ 22 ವರ್ಷದ ಮಹ್ಸಾ ಅಮಿನಿ ನೈತಿಕ ಪೊಲೀಸ್ ಕಸ್ಟಡಿಯಲ್ಲಿ ಸೆಪ್ಟೆಂಬರ್ 16ರಂದು ಸಾವಿಗೀಡಾಗಿದ್ದು ಇದು ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕಾರಣವಾಯಿತು., ಇದನ್ನು ಅಧಿಕಾರಿಗಳು ಗಲಭೆ ಎಂದಿದ್ದಾರೆ. ರಾಜಧಾನಿ ಟೆಹ್ರಾನ್ ಬಳಿಯ ಕೋಮ್ ಪ್ರಾಂತ್ಯದ ಬ್ಯಾಂಕ್ ಮ್ಯಾನೇಜರ್ ಗುರುವಾರ ಹಿಜಾಬ್ ಧರಿಸದ ಮಹಿಳೆಗೆ ಬ್ಯಾಂಕ್ ಸೇವೆಗಳನ್ನು ಒದಗಿಸಿದ್ದಾರೆ. ಹೀಗೆ ಸೇವೆ ಒದಗಿಸಿದ ಬ್ಯಾಂಕ್ ಮ್ಯಾನೇಜರ್ನ್ನು ರಾಜ್ಯಪಾಲರ ಆದೇಶದ ಮೇರೆಗೆ ಅವರ ಸ್ಥಾನದಿಂದ ತೆಗೆದುಹಾಕಲಾಯಿತು ಎಂದು ಡೆಪ್ಯೂಟಿ ಗವರ್ನರ್ ಅಹ್ಮದ್ ಹಾಜಿಜಾದೆ ಅವರನ್ನು ಉಲ್ಲೇಖಿಸಿ ಮೆಹರ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಹಿಜಾಬ್ ಧರಿಸದ ಮಹಿಳೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಟೀಕೆಗಳನ್ನು ಹುಟ್ಟು ಹಾಕಿದೆ ಎಂದು ಮೆಹರ್ ಹೇಳಿದೆ.
ಇರಾನ್‌ನಲ್ಲಿ ಹೆಚ್ಚಿನ ಬ್ಯಾಂಕುಗಳು ರಾಜ್ಯನಿಯಂತ್ರಿತವಾಗಿವೆ. ಹಿಜಾಬ್ ಕಾನೂನನ್ನು ಜಾರಿಗೆ ತರುವುದು ಅಂತಹ ಸಂಸ್ಥೆಗಳಲ್ಲಿನ ವ್ಯವಸ್ಥಾಪಕರ ಜವಾಬ್ದಾರಿಯಾಗಿದೆ ಎಂದು ಹಾಜಿಜಾದೆ ಹೇಳಿದರು.
ಡಜನ್‌ಗಟ್ಟಲೆ ಜನರು ಮುಖ್ಯವಾಗಿ ಪ್ರತಿಭಟನಾಕಾರರು ಭದ್ರತಾ ಪಡೆಗಳ ಸದಸ್ಯರು ಪ್ರತಿಭಟನೆ ವೇಳೆ ಕೊಲ್ಲಲ್ಪಟ್ಟರು. ತನ್ನ ಪಾಶ್ಚಾತ್ಯ “ಶತ್ರುಗಳಿಂದ” ಇದು ನಡೆಯುತ್ತಿದೆ ಎಂದು ಇರಾನ್ ದೂರಿದೆ. ಅಮೆರಿಕ ಬೆಂಬಲಿತ ರಾಜಪ್ರಭುತ್ವವನ್ನು ಉರುಳಿಸಿ ಇಸ್ಲಾಮಿಕ್ ಗಣರಾಜ್ಯವನ್ನು ಸ್ಥಾಪಿಸಿದ 1979 ರ ಕ್ರಾಂತಿಯ ನಾಲ್ಕು ವರ್ಷಗಳ ನಂತರ ಹಿಜಾಬ್ ಕಡ್ಡಾಯವಾಯಿತು.
ನಂತರ ಬದಲಾದ ಉಡುಗೆ ನಿಯಮಗಳ ನಂತರ ಮಹಿಳೆಯರು ಬಿಗಿಯಾದ ಜೀನ್ಸ್ ಮತ್ತು ಸಡಿಲವಾದ, ಬಣ್ಣದ ಹಿಜಾಬ್ಗಳನ್ನು ಧರಿಸುವುದು ಸಾಮಾನ್ಯವಾಗಿದೆ. ಆದರೆ ಈ ವರ್ಷದ ಜುಲೈನಲ್ಲಿ, ಅಲ್ಟ್ರಾ-ಕನ್ಸರ್ವೇಟಿವ್ ಅಧ್ಯಕ್ಷ ಇಬ್ರಾಹಿಂ ರೈಸಿ ಹಿಜಾಬ್ ಧರಿಸುವ ಕಾನೂನನ್ನು ಜಾರಿಗೊಳಿಸಲು ಎಲ್ಲಾ ರಾಜ್ಯ ಸಂಸ್ಥೆಗಳಿಗೆ ಕರೆ ನೀಡಿದರು. ಏತನ್ಮಧ್ಯೆ ಅನೇಕ ಮಹಿಳೆಯರು ನಿಯಮಗಳನ್ನು ಇದನ್ನು ಪ್ರತಿಭಟಿಸಿ ಬೀದಿಗಿಳಿದಿದ್ದಾರೆ.
Published On - 7:37 pm, Sun, 27 November 22