ಟ್ರಂಪ್ ವಿರುದ್ಧ ಇರಾನ್ ಪ್ರತೀಕಾರ; ಕತಾರ್‌, ಇರಾಕ್​​ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ

ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಅಮೆರಿಕ ಮಧ್ಯ ಪ್ರವೇಶಿಸಿತ್ತು. ಇಸ್ರೇಲ್ ಮತ್ತು ಇರಾನ್ ಪರಸ್ಪರ ವೈಮಾನಿಕ ದಾಳಿಗಳನ್ನು ನಡೆಸುತ್ತಲೇ ಇದೆ. ಈ ನಡುವೆ ಅಮೆರಿಕ ಇರಾನ್​ ಮೇಲೆ ಬಾಂಬ್ ದಾಳಿ ನಡೆಸಿತ್ತು. ಹೀಗಾಗಿ, ಅಮೆರಿಕದ ವಿರುದ್ಧ ಪ್ರತೀಕಾರ ತೀರಿಸಿಕೊಂಡಿರುವ ಇರಾನ್ ಕತಾರ್​​ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಇದರಿಂದ ದೋಹಾ ವಾಯುಪ್ರದೇಶವನ್ನು ಮುಚ್ಚಲಾಗಿದೆ.

ಟ್ರಂಪ್ ವಿರುದ್ಧ ಇರಾನ್ ಪ್ರತೀಕಾರ; ಕತಾರ್‌, ಇರಾಕ್​​ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ
Us Military Base

Updated on: Jun 23, 2025 | 10:59 PM

ನವದೆಹಲಿ, ಜೂನ್ 23: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆಯ ನಡುವೆ ಇಸ್ರೇಲ್ (Israel War) ಮತ್ತು ಇರಾನ್​ ಮಧ್ಯೆ ಅಮೆರಿಕ ಎಂಟ್ರಿಯಾಗಿದೆ. ಇರಾನ್ (Iran) ಮೇಲೆ ಬಾಂಬ್ ದಾಳಿ ನಡೆಸಿದ್ದ ಅಮೆರಿಕದ ವಿರುದ್ಧ ಸೇಡು ತೀರಿಸಿಕೊಂಡಿರುವ ಇರಾನ್ ಅಮೆರಿಕದ ಸೇನಾ ಸಿಬ್ಬಂದಿಯನ್ನು ಹೊಂದಿರುವ ಕತಾರ್‌ನಲ್ಲಿರುವ ಅಲ್ ಉದೈದ್ ವಾಯುನೆಲೆಯನ್ನು ಗುರಿಯಾಗಿಸಿಕೊಂಡು 6 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿದೆ. ಅಮೆರಿಕದ ವಿರುದ್ಧ ಪ್ರತಿದಾಳಿ ಆರಂಭಿಸಿದ ಇರಾನ್​ ಅಮೆರಿಕದ ವಾಯು ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಕತಾರ್-ಇರಾಕ್‌ನಲ್ಲಿರುವ ವಾಯುನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಲಾಗಿದೆ. ಕತಾರ್‌ನ ದೋಹಾದಲ್ಲಿರುವ ಅಮೆರಿಕ ವಾಯುನೆಲೆ ಮೇಲೆ ದಾಳಿಯಾಗಿದ್ದು, ಈ ವಾಯುನೆಲೆ​ ಮೇಲೆ 6 ಖಂಡಾಂತರ ಕ್ಷಿಪಣಿ ಹಾರಿಸಲಾಗಿದೆ. ಈ ದಾಳಿ ಬಳಿಕ ಕತಾರ್ ತನ್ನ ವಾಯುಪ್ರದೇಶವನ್ನು ಬಂದ್​ ಮಾಡಿದೆ. ಹೀಗಾಗಿ, ದೋಹಾಗೆ ತೆರಳುತ್ತಿದ್ದ ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿದೆ.

ಇರಾನಿನ ಪರಮಾಣು ಸೌಲಭ್ಯಗಳ ಮೇಲಿನ ಅಮೆರಿಕದ ದಾಳಿಗೆ ಶೀಘ್ರದಲ್ಲೇ ಪ್ರತೀಕಾರ ತೀರಿಸಿಕೊಳ್ಳಲಾಗುವುದು ಎಂಬ ಇರಾನಿನ ಎಚ್ಚರಿಕೆಗಳ ನಡುವೆ ಕತಾರ್ ತನ್ನ ವಾಯುಪ್ರದೇಶವನ್ನು ತಾತ್ಕಾಲಿಕವಾಗಿ ಮುಚ್ಚಿದ ಸ್ವಲ್ಪ ಸಮಯದ ನಂತರ ಈ ದಾಳಿ ನಡೆದಿದೆ. ಇಂದು ರಾತ್ರಿ ಕತಾರ್‌ನ ಆಕಾಶದಲ್ಲಿ ಸ್ಫೋಟಗಳು ಕಂಡುಬಂದವು. ಆದರೂ ಸಾವುನೋವುಗಳು ಅಥವಾ ಹಾನಿಯ ಅಧಿಕೃತ ದೃಢೀಕರಣ ಬಾಕಿ ಉಳಿದಿದೆ.

ಇದನ್ನೂ ಓದಿ: ಇರಾನ್​​ನ ಹಾರ್ಮುಜ್ ಜಲಸಂಧಿಯಲ್ಲಿ ಹೊತ್ತಿ ಉರಿದ ತೈಲ ಟ್ಯಾಂಕರ್

ಇದನ್ನೂ ಓದಿ
ಟ್ರಂಪ್​ಗೆ ಶಾಂತಿ ಪುರಸ್ಕಾರ ಘೋಷಿಸಿ, ಈಗ ಪ್ರತಿಭಟನೆ ಮಾಡಿದ ಪಾಕಿಸ್ತಾನ
ಇರಾನ್ ಮೇಲೆ ದಾಳಿ ನಡೆಸಿ ಸುಮ್ಮನಾದ ಟ್ರಂಪ್, ರಷ್ಯಾಗೆ ಹೊರಟ ಅಬ್ಬಾಸ್
ಅಮೆರಿಕ-ಇರಾನ್ ನಡುವೆ ಹೆಚ್ಚಿದ ಉದ್ವಿಗ್ನತೆ, ರಷ್ಯಾದ ಮೊರೆ ಹೋದ ಇರಾನ್
ಅಮೆರಿಕ ದೊಡ್ಡ ತಪ್ಪು ಮಾಡಿದೆ, ತಕ್ಕ ಶಿಕ್ಷೆ ಅನುಭವಿಸಲಿದೆ: ಖಮೇನಿ

ಇರಾನ್‌ನಿಂದ ಹೆಚ್ಚುತ್ತಿರುವ ಬೆದರಿಕೆಗಳಿಗೆ ಮುನ್ನೆಚ್ಚರಿಕೆಯಾಗಿ ಕತಾರ್ ವಿದೇಶಾಂಗ ಸಚಿವಾಲಯವು ದಿನದ ಆರಂಭದಲ್ಲಿ ರಾಷ್ಟ್ರೀಯ ವಾಯುಪ್ರದೇಶವನ್ನು ಮುಚ್ಚುವುದಾಗಿ ಘೋಷಿಸಿತು. ಕತಾರ್‌ನಲ್ಲಿರುವ ತಮ್ಮ ನಾಗರಿಕರು ಆ ಸ್ಥಳದಲ್ಲಿಯೇ ಆಶ್ರಯ ಪಡೆಯುವಂತೆ ಒತ್ತಾಯಿಸಿ ಅಮೆರಿಕ ಮತ್ತು ಯುಕೆ ನೀಡಿದ ಸಲಹೆಗಳನ್ನು ಅನುಸರಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಪ್ರದೇಶದಲ್ಲಿ ಅಮೆರಿಕದ ಪಡೆಗಳಿಗೆ ಕಾರ್ಯತಂತ್ರದ ಕೇಂದ್ರವಾಗಿರುವ ಅಲ್ ಉದೈದ್ ವಾಯುನೆಲೆ ಈಗ ಇರಾನ್, ಯುನೈಟೆಡ್ ಸ್ಟೇಟ್ಸ್ ಮತ್ತು ಇಸ್ರೇಲ್ ನಡುವಿನ ಹೆಚ್ಚುತ್ತಿರುವ ಸಂಘರ್ಷದ ಕೇಂದ್ರಬಿಂದುವಾಗಿದೆ.

ಇಸ್ರೇಲ್ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ಇರಾನಿನ ಪ್ರದೇಶದೊಳಗೆ ವಿಸ್ತರಿಸುತ್ತಿದ್ದಂತೆ ಈ ಬೆಳವಣಿಗೆಗಳು ಬಂದಿವೆ. ಇಂದು ಇಸ್ರೇಲಿ ಪಡೆಗಳು ಇರಾನಿನ ಪ್ರಸಿದ್ಧ ಎವಿನ್ ಜೈಲು ಮತ್ತು ಇರಾನ್‌ನ ಕ್ರಾಂತಿಕಾರಿ ಗಾರ್ಡ್‌ನ ಪ್ರಧಾನ ಕಚೇರಿ ಸೇರಿದಂತೆ ಹಲವು ಸ್ಥಳಗಳನ್ನು ಗುರಿಯಾಗಿಸಿಕೊಂಡಿವೆ. ಭೂಗತ ಫೋರ್ಡೊ ತಾಣ ಸೇರಿದಂತೆ ಮೂರು ಇರಾನಿನ ಪರಮಾಣು ಸೌಲಭ್ಯಗಳ ಮೇಲೆ ಯುನೈಟೆಡ್ ಸ್ಟೇಟ್ಸ್ ದಾಳಿಗಳನ್ನು ನಡೆಸಿದ ನಂತರ ಉದ್ವಿಗ್ನತೆ ಹೆಚ್ಚಾಯಿತು.

ಇದನ್ನೂ ಓದಿ: ಟ್ರಂಪ್ ವಿರುದ್ಧ ಇರಾನ್ ಪ್ರತೀಕಾರ; ಕತಾರ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ

ದೋಹಾದಲ್ಲಿರುವ ಯುಎಸ್ ಸೇನಾನೆಲೆ:

ದೋಹಾದ ನೈಋತ್ಯಕ್ಕೆ 24 ಹೆಕ್ಟೇರ್ (60 ಎಕರೆ) ವಿಸ್ತೀರ್ಣದಲ್ಲಿರುವ ಅಲ್ ಉದೈದ್ ವಾಯುನೆಲೆಯು ಯುಎಸ್ ಸೆಂಟ್ರಲ್ ಕಮಾಂಡ್ (CENTCOM)ನ ಪ್ರಧಾನ ಕಚೇರಿಯಾಗಿ ಕಾರ್ಯನಿರ್ವಹಿಸುತ್ತದೆ. CENTCOM ಪಶ್ಚಿಮದಲ್ಲಿ ಈಜಿಪ್ಟ್‌ನಿಂದ ಪೂರ್ವದಲ್ಲಿ ಕಝಕಿಸ್ತಾನ್‌ವರೆಗಿನ ವಿಶಾಲ ಪ್ರದೇಶದಾದ್ಯಂತ ಅಮೆರಿಕನ್ ಮಿಲಿಟರಿ ಕಾರ್ಯಾಚರಣೆಗಳನ್ನು ನೋಡಿಕೊಳ್ಳುತ್ತದೆ. 1996ರಲ್ಲಿ ರಕ್ಷಣಾ ಸಹಕಾರ ಒಪ್ಪಂದದ ಅಡಿಯಲ್ಲಿ ಸ್ಥಾಪನೆಯಾದ ಅಲ್ ಉದೈದ್ ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಅತಿದೊಡ್ಡ ನೆಲೆಯಾಗಿದ್ದು, ಸುಮಾರು 10,000 ಸೈನಿಕರನ್ನು ಹೊಂದಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 10:46 pm, Mon, 23 June 25