AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡೊನಾಲ್ಡ್​ ಟ್ರಂಪ್​, ನೆತನ್ಯಾಹು ವಿರುದ್ಧ ‘ಫತ್ವಾ’ ಹೊರಡಿಸಿದ ಇರಾನ್ ಧರ್ಮಗುರು

ಇರಾನ್‌ನ ಉನ್ನತ ಶಿಯಾ ಧರ್ಮಗುರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ಫತ್ವಾ ಹೊರಡಿಸಿದ್ದಾರೆ. ಇದರಲ್ಲಿ ಅವರನ್ನು ದೇವರ ಶತ್ರುಗಳೆಂದು ಕರೆಯಲಾಗಿದೆ. ಗ್ರ್ಯಾಂಡ್ ಅಯತೊಲ್ಲಾ ನಾಸಿರ್ ಮಕರಿಮ್ ಶಿರಾಜಿ , ಪ್ರಪಂಚದಾದ್ಯಂತದ ಮುಸ್ಲಿಮರು ಒಂದಾಗಲು ಕೇಳಿಕೊಂಡಿದ್ದಾರೆ. ಇರಾನ್ ವಿರುದ್ಧ ಕ್ರಮ ಕೈಗೊಳ್ಳುತ್ತಿರುವ ಅಮೆರಿಕ ಮತ್ತು ಇಸ್ರೇಲ್‌ಗೆ ಪಾಠ ಕಲಿಸಲು ಎಲ್ಲರೂ ಒಗ್ಗಟ್ಟಾಗಿರುವಂತೆ ಸೂಚಿಸಲಾಗಿದೆ.

ಡೊನಾಲ್ಡ್​ ಟ್ರಂಪ್​, ನೆತನ್ಯಾಹು ವಿರುದ್ಧ ‘ಫತ್ವಾ’ ಹೊರಡಿಸಿದ ಇರಾನ್ ಧರ್ಮಗುರು
ಡೊನಾಲ್ಡ್​ ಟ್ರಂಪ್ Image Credit source: MSNBC
ನಯನಾ ರಾಜೀವ್
|

Updated on: Jun 30, 2025 | 2:22 PM

Share

ಟೆಹ್ರಾನ್, ಜೂನ್ 30: ಇರಾನ್(Iran)​ ವಿರುದ್ಧ ಅಮೆರಿಕ ಹಾಗೂ ಇಸ್ರೇಲ್(Israel) ದಾಳಿಯಿಂದ ಕೋಪಗೊಂಡಿರುವ ಇರಾನ್ ಧರ್ಮಗುರು ನಾಸೆರ್ ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಹಾಗೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ಫತ್ವಾ ಹೊರಡಿಸಿದ್ದಾರೆ. ನ್ಯೂಯಾರ್ಕ್ ಸನ್ ವರದಿಯ ಪ್ರಕಾರ, ಶಿಯಾ ಧರ್ಮಗುರು ನಾಸೆರ್ ಮಕರಿಮ್ ಶಿರಾಜಿ ಅವರು ಪ್ರಪಂಚದಾದ್ಯಂತದ ಇರುವ ಮುಸ್ಲಿಮರು ಒಂದಾಗುವಂತೆ ಕರೆ ನೀಢೀ ಫತ್ವಾ ಹೊರಡಿಸಿದ್ದಾರೆ.

ಜಾಗತಿಕ ಇಸ್ಲಾಮಿಕ್ ಸಮುದಾಯದ ನಾಯಕತ್ವಕ್ಕೆ ಬೆದರಿಕೆ ಒಡ್ಡುವ ಯಾವುದೇ ವ್ಯಕ್ತಿ ಅಥವಾ ಸರ್ಕಾರಕ್ಕೆ ಸೂಕ್ತ ಉತ್ತರ ನೀಡಲಾಗುವುದು ಎಂದು ಈ ಫತ್ವಾ ಹೇಳುತ್ತದೆ. ಇರಾನ್‌ನ ಸರ್ವೋಚ್ಚ ನಾಯಕನನ್ನು ಬೆದರಿಸುವ ಅಥವಾ ಹತ್ಯೆ ಮಾಡಲು ಪ್ರಯತ್ನಿಸುವವರು ಅಲ್ಲಾಹನ ಕೋಪಕ್ಕೆ ಗುರಿಯಾಗುತ್ತಾರೆ. ಅಂತಹ ಕೃತ್ಯವನ್ನು ಅಲ್ಲಾಹನಿಗೆ ಮಾಡಿದ ಅವಮಾನವೆಂದು ಪರಿಗಣಿಸಲಾಗುತ್ತದೆ ಮತ್ತು ಅಲ್ಲಾಹನ ವಿರುದ್ಧದ ಯುದ್ಧವೆಂದು ಪರಿಗಣಿಸಲಾಗುತ್ತದೆ ಎಂದು ಫತ್ವಾದಲ್ಲಿ ಹೇಳಲಾಗಿದೆ.

ಮತ್ತಷ್ಟು ಓದಿ: ತೀವ್ರ ಹಾನಿಯಾಗಿದೆ; ಅಮೆರಿಕದ ದಾಳಿಯನ್ನು ಮೊದಲ ಬಾರಿ ಒಪ್ಪಿಕೊಂಡ ಇರಾನ್

ಇತ್ತೀಚಿನ ದಿನಗಳಲ್ಲಿ, ಅಮೆರಿಕ ಅಧ್ಯಕ್ಷ ಮತ್ತು ಇಸ್ರೇಲಿ ನಾಯಕರು ಇರಾನ್‌ನ ಸರ್ವೋಚ್ಚ ನಾಯಕನಿಗೆ ಪದೇ ಪದೇ ಬೆದರಿಕೆ ಹಾಕುತ್ತಿದ್ದಾರೆ. ಇರಾನ್‌ನ ಸರ್ವೋಚ್ಚ ನಾಯಕ ಅಥವಾ ಧಾರ್ಮಿಕ ನಾಯಕರನ್ನು ಹತ್ಯೆ ಮಾಡಲು ಯೋಜಿಸುವ ಯಾರಾದರೂ ಇಸ್ಲಾಮಿಕ್ ಕಾನೂನಿನಡಿಯಲ್ಲಿ ಅತ್ಯಂತ ಕಠಿಣ ಶಿಕ್ಷೆಗೆ ಅರ್ಹರಾಗಿರುತ್ತಾರೆ ಎಂದು ಫತ್ವಾದಲ್ಲಿ ತಿಳಿಸಲಾಗಿದೆ.

ಪ್ರಪಂಚದಾದ್ಯಂತದ ಎಲ್ಲಾ ಮುಸ್ಲಿಮರು ಈ ಶತ್ರುಗಳನ್ನು ಗುರುತಿಸಿ ಸೇಡು ತೀರಿಸಿಕೊಳ್ಳುವುದು ಮುಖ್ಯ. ಅಲ್ಲಾಹನು ಸರ್ವೋಚ್ಚ ನಾಯಕನನ್ನು ರಕ್ಷಿಸಲಿ. ಅಲ್ಲಾಹುವಿನ ಆಶೀರ್ವಾದ ಆತನ ಮೇಲೆ ಇರಲಿ. ಇಸ್ಲಾಮಿಕ್ ಏಕತೆಗೆ ಬೆದರಿಕೆ ಒಡ್ಡುವ ಯಾರನ್ನಾದರೂ ಅಲ್ಲಾಹನ ವಿರುದ್ಧ ಬಂಡಾಯವೆದ್ದವರೆಂದು ಪರಿಗಣಿಸಲಾಗುತ್ತದೆ ಎಂದು ಫತ್ವಾದಲ್ಲಿ ತಿಳಿಸಲಾಗಿದೆ.

ಶತ್ರುವಿಗೆ ಮುಸ್ಲಿಮರು ಅಥವಾ ಇಸ್ಲಾಮಿಕ್ ರಾಷ್ಟ್ರಗಳು ನೀಡುವ ಯಾವುದೇ ಸಹಕಾರ ಅಥವಾ ಬೆಂಬಲ ಹರಾಮ್ ಅಥವಾ ನಿಷಿದ್ಧ. ಪ್ರಪಂಚದಾದ್ಯಂತದ ಎಲ್ಲಾ ಮುಸ್ಲಿಮರು ಈ ಶತ್ರುಗಳು ತಮ್ಮ ಮಾತುಗಳು ಮತ್ತು ತಪ್ಪುಗಳಿಗೆ ವಿಷಾದಿಸುವಂತೆ ಮಾಡುವುದು ಮಾಡುವ ಅಗತ್ಯವಿದೆ ಎಂದು ಫತ್ವಾದಲ್ಲಿ ಹೇಳಲಾಗಿದೆ. ಇಸ್ರೇಲ್ ಇರಾನ್‌ನ ಪರಮಾಣು ತಾಣಗಳ ಮೇಲೆ ದಾಳಿ ಮಾಡಿತ್ತು. ಇದಕ್ಕೆ ಪ್ರತಿಯಾಗಿ, ಇರಾನ್ ಇಸ್ರೇಲ್‌ಗೆ ಸಾಕಷ್ಟು ಹಾನಿ ಮಾಡಿತ್ತು. ಅಮೆರಿಕ ಕೂಡ ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧಕ್ಕೆ ಪ್ರವೇಶಿಸಿತ್ತು. ಅದು ಇರಾನ್‌ನ ಪರಮಾಣು ತಾಣಗಳ ಮೇಲೂ ದಾಳಿ ಮಾಡಿತ್ತು.

ಇರಾನ್ ಕೂಡ ಅಮೆರಿಕಕ್ಕೆ ಪ್ರತಿಕ್ರಿಯಿಸಿತ್ತು. ಇದರ ನಂತರ ಕದನ ವಿರಾಮಕ್ಕೆ ಒಪ್ಪಿಗೆ ಸಿಕ್ಕಿದ್ದರೂ, ಇರಾನ್ ಮತ್ತು ಇಸ್ರೇಲ್ ನಡುವೆ ಇನ್ನೂ ಉದ್ವಿಗ್ನತೆಯ ಪರಿಸ್ಥಿತಿ ಇದೆ.

ಫತ್ವಾ ಎಂದರೇನು?

ಫತ್ವಾ ಎಂಬುದು ಧಾರ್ಮಿಕ ತೀರ್ಪು, ಸಾಮಾಜಿಕವಾಗಿ, ರಾಜಕೀಯ, ಆರ್ಥಿಕ ಹಾಗೂ ಧಾರ್ಮಿಕ ವಿಷಯಗಳಲ್ಲಿ ಸ್ಪಷ್ಟವಾದ ಉತ್ತರ ಅಥವಾ ಅಭಿಪ್ರಾಯ ಇಲ್ಲದಿರುವ ಸಂದರ್ಭದಲ್ಲಿ ಫತ್ವಾ ಹೊರಡಿಸಲಾಗುತ್ತದೆ.

1989 ರಲ್ಲಿ ಲೇಖಕ ಸಲ್ಮಾನ್ ರಶೀದಿ ಅವರ ಕಾದಂಬರಿ ದಿ ಸ್ಯಾಟಾನಿಕ್ ವರ್ಸಸ್ ಬಿಡುಗಡೆಯಾದ ಬಳಿಕ ಅವರ ವಿರುದ್ಧ ಕೂಡಾ ಫತ್ವಾ ಹೊರಡಿಸಲಾಗಿತ್ತು. ಆ ಫತ್ವಾ ರಶೀದಿಯನ್ನು ತಲೆಮರೆಸಿಕೊಳ್ಳುವಂತೆ ಮಾಡಿತ್ತು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಹತ್ಯೆಗೈದು ಎಲ್ಲರ ಮುಂದೆ ನಾಟಕವಾಡಿದ್ದ ಆರೋಪಿಗಳು ಸಿಕ್ಕಿಬಿದ್ದಿದ್ದೇಗೆ?
ಹತ್ಯೆಗೈದು ಎಲ್ಲರ ಮುಂದೆ ನಾಟಕವಾಡಿದ್ದ ಆರೋಪಿಗಳು ಸಿಕ್ಕಿಬಿದ್ದಿದ್ದೇಗೆ?
ವೈಭವ್ ಸೂರ್ಯವಂಶಿ ವಿಕೆಟ್ ಹಾರಿಸಿದ ಕೊಹ್ಲಿಯ ಅಪ್ಪಟ ಅಭಿಮಾನಿ
ವೈಭವ್ ಸೂರ್ಯವಂಶಿ ವಿಕೆಟ್ ಹಾರಿಸಿದ ಕೊಹ್ಲಿಯ ಅಪ್ಪಟ ಅಭಿಮಾನಿ
ಬಿಗ್ ಬಾಸ್ ಫಿನಾಲೆ: ಗಿಲ್ಲಿ ಗೆಲ್ಲಲಿ ಎಂದು ವಿಶೇಷ ಪೂಜೆ ಮಾಡಿಸಿದ ಫ್ಯಾನ್ಸ್
ಬಿಗ್ ಬಾಸ್ ಫಿನಾಲೆ: ಗಿಲ್ಲಿ ಗೆಲ್ಲಲಿ ಎಂದು ವಿಶೇಷ ಪೂಜೆ ಮಾಡಿಸಿದ ಫ್ಯಾನ್ಸ್
ಗವಿಗಂಗಾಧರೇಶ್ವರ ಸನ್ನಿಧಿಯಲ್ಲಿ ವಿಸ್ಮಯ: ಶಿವಲಿಂಗಕ್ಕೆ ಸೂರ್ಯರಶ್ಮಿ ಸ್ಪರ್ಶ
ಗವಿಗಂಗಾಧರೇಶ್ವರ ಸನ್ನಿಧಿಯಲ್ಲಿ ವಿಸ್ಮಯ: ಶಿವಲಿಂಗಕ್ಕೆ ಸೂರ್ಯರಶ್ಮಿ ಸ್ಪರ್ಶ
ತರಕಾರಿ ಮಾರಿದ ಹಣದಲ್ಲಿ ಬೆಳ್ಳಿ ಬಾಗಿಲು ಮಾಡಿಸಿದ್ದ ದಾನಜ್ಜಿ ಭೀಕರ ಹತ್ಯೆ
ತರಕಾರಿ ಮಾರಿದ ಹಣದಲ್ಲಿ ಬೆಳ್ಳಿ ಬಾಗಿಲು ಮಾಡಿಸಿದ್ದ ದಾನಜ್ಜಿ ಭೀಕರ ಹತ್ಯೆ
ಮೊದಲ ಪಂದ್ಯದಲ್ಲೇ 5 ವಿಕೆಟ್ ಉರುಳಿಸಿದ ಹೆನಿಲ್ ಪಟೇಲ್
ಮೊದಲ ಪಂದ್ಯದಲ್ಲೇ 5 ವಿಕೆಟ್ ಉರುಳಿಸಿದ ಹೆನಿಲ್ ಪಟೇಲ್
ಶ್ರೀರಾಮನಿಗೆ ಮುಸ್ಲಿಂ ಶಾಸಕ ಪೂಜೆ , ಹಿಂದೂ ಧರ್ಮದ ಬಗ್ಗೆ ಹೇಳಿದ್ದಿಷ್ಟು
ಶ್ರೀರಾಮನಿಗೆ ಮುಸ್ಲಿಂ ಶಾಸಕ ಪೂಜೆ , ಹಿಂದೂ ಧರ್ಮದ ಬಗ್ಗೆ ಹೇಳಿದ್ದಿಷ್ಟು
ಬೆಂಗಳೂರಿನ ಗವಿ ಗಂಗಾಧರೇಶ್ವರನಿಗೆ ಸೂರ್ಯದೇವನ ನಮನ, ಇಲ್ಲಿದೆ ನೇರಪ್ರಸಾರ
ಬೆಂಗಳೂರಿನ ಗವಿ ಗಂಗಾಧರೇಶ್ವರನಿಗೆ ಸೂರ್ಯದೇವನ ನಮನ, ಇಲ್ಲಿದೆ ನೇರಪ್ರಸಾರ
‘ಚೌಕಿಧಾರ್’: ಸಾಯಿ ಕುಮಾರ್ ಬಗ್ಗೆ ನಟಿ ಧನ್ಯಾ ಮಾತು
‘ಚೌಕಿಧಾರ್’: ಸಾಯಿ ಕುಮಾರ್ ಬಗ್ಗೆ ನಟಿ ಧನ್ಯಾ ಮಾತು
ಪ್ರಯಾಗರಾಜ್​ನ ಮಾಘ ಮೇಳದಲ್ಲಿ ಭಕ್ತಸಾಗರ; ಡ್ರೋನ್ ವಿಡಿಯೋ ಇಲ್ಲಿದೆ
ಪ್ರಯಾಗರಾಜ್​ನ ಮಾಘ ಮೇಳದಲ್ಲಿ ಭಕ್ತಸಾಗರ; ಡ್ರೋನ್ ವಿಡಿಯೋ ಇಲ್ಲಿದೆ