AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕ್ರಮವಾಗಿ ಭಾರತ ಗಡಿ ದಾಟಲು ಯತ್ನಿಸಿದ ಪಾಕಿಸ್ತಾನದ ಜೋಡಿ: ನೀರಿಲ್ಲದೆ ಮರುಭೂಮಿಯಲ್ಲಿ ದುರಂತ ಸಾವು

ಪ್ರೀತಿಸಿದಾಕೆಯನ್ನು ಮದುವೆಯಾಗಿ ಹೊಸ ಸಂಸಾರ ಕಟ್ಟಿಕೊಂಡು ತಮ್ಮದೇ ಆದ ಕನಸುಗಳನ್ನು ಹೊಂದಿದ್ದ ಅಪ್ರಾಪ್ತ ನವ ದಂಪತಿ ಕುಡಿಯಲು ನೀರಲ್ಲದೇ ಸಾವನ್ನಪ್ಪಿರುವ ಘೋರ ದುರಂತ ರಾಜಸ್ಥಾನದಲ್ಲಿ ನಡೆದಿದೆ. ಮದುವೆಯಾಗಿ ಭಾರತದಲ್ಲಿ ನೆಮ್ಮದಿಯ ಜೀವನ ಕಟ್ಟಿಕೊಳ್ಳಲು ಪಾಕಿಸ್ತಾನದ ಮೂಲದ ಹಿಂದೂ ನವಜೋಡಿ ಬಯಸಿತ್ತು. ಆದರೆ, ವಿಧಿ ವೀಸಾ ಮೂಲಕ ಈ ದಂಪತಿಯನ್ನು ಬಲಿಪಡೆದುಕೊಂಡಿದೆ.

ಅಕ್ರಮವಾಗಿ ಭಾರತ ಗಡಿ ದಾಟಲು ಯತ್ನಿಸಿದ ಪಾಕಿಸ್ತಾನದ ಜೋಡಿ: ನೀರಿಲ್ಲದೆ ಮರುಭೂಮಿಯಲ್ಲಿ ದುರಂತ ಸಾವು
Pakistani Hindu Teen Couple
ರಮೇಶ್ ಬಿ. ಜವಳಗೇರಾ
|

Updated on: Jun 30, 2025 | 9:45 PM

Share

ಜೈಸಲ್ಮೇರ್‌(ರಾಜಸ್ಥಾನ), (ಜೂನ್ 30): ಭಾರತ ಮತ್ತು ಪಾಕಿಸ್ತಾನದ ಗಡಿಯನ್ನು ಅಕ್ರಮವಾಗಿ ದಾಟಲು ಯತ್ನಿಸಿದ್ದ ಅಪ್ರಾಪ್ತ ನವ ದಂಪತಿ  ನೀರಿಲ್ಲದೆ (ನಿರ್ಜಲೀಕರಣದಿಂದ ) ಮೃತಪಟ್ಟಿರುವ ಮನಕಲಕುವ ಘಟನೆ ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯಲ್ಲಿ ನಡೆದಿದೆ. ಪಾಕಿಸ್ತಾನ ಮೂಲದ  ರವಿ ಕುಮಾರ್ (17) ಮತ್ತು ಶಾಂತಿ ಬಾಯಿ (15) ಈ ಹಿಂದೂ ಜೋಡಿ (Pakistani Hindu teen couple )ಮದುವೆಯಾಗಿ ಭಾರತದಲ್ಲಿ ನೆಮ್ಮದಿಯ ಜೀವನ ನಡೆಸುವ ಕನಸು ಕಂಡಿತ್ತು. ಹೀಗಾಗಿ ಈ ದಂಪತಿ ಅಕ್ರಮವಾಗಿ ಭಾರತದ ಗಡಿಯನ್ನು ದಾಟಲು ಯತ್ನಿಸಿದ್ದ ವೇಳೆ ಕುಡಿಯಲು ನೀರಿಲ್ಲದೇ ರಾಜಸ್ಥಾನದ ಜೈಸಲ್ಮೇರ್ ಮರಭೂಮಿಯಲ್ಲಿ  ದುರಂತ ಅಂತ್ಯಕಂಡಿದೆ.

ಪಾಕಿಸ್ತಾನದ ರವಿ ಕುಮಾರ್  ಮತ್ತು ಶಾಂತಿ ಬಾಯಿ  ಭಾರತದಲ್ಲಿ ಬದುಕುವ ಆಶಯ ಹೊಂದಿತ್ತು. ಆದ್ರೆ ದುರ್ವೈವ ಅಂದ್ರೆ ಈ ಜೋಡಿಗೆ ಭಾರತಕ್ಕೆ ಬರಲು ವೀಸಾ ಸಿಕ್ಕಿಲ್ಲ. ಆದರೂ ಈ ದಂಪತಿ ಪಾಕ್​ ನಿಂದ ಅಕ್ರಮವಾಗಿ ಭಾರತದ ಗಡಿದಾಟಲು ಯತ್ನಿಸಿದ್ದು, ಮಾರ್ಗ ಮಧ್ಯೆ ಕುಡಿಯಲು ನೀರಿಲ್ಲದೇ ಬಾಯಾರಿಕೆಯಿಂದ ಬಳಲಿ ಬಳಲಿ ಕೊನೆಗೆ ನಿರ್ಜಲೀಕರಣದಿಂದ ಮೃತಪಟ್ಟಿದೆ ಎಂದು ಶಂಕಿಸಲಾಗಿದೆ

ಮದುವೆಯಾಗಿ ಭಾರತದಲ್ಲಿ ನೆಮ್ಮದಿಯ ಜೀವನ ನಡೆಸುವ ಕನಸು ಹೊತ್ತಿದ್ದ ಈ ಜೋಡಿ, ವೀಸಾಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ಪಹಲ್ಗಾಮ್‌ ಭಯೋತ್ಪಾದಕರ ದಾಳಿ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆಯಾದ ಘರ್ಷಣೆಯಿಂದಾಗಿ ವೀಸಾ ಸಿಕ್ಕಿಲ್ಲ.  ವೀಸಾ ಬಾರದ ಕಾರಣ ಅವರು ಅಕ್ರಮವಾಗಿ ಭಾರತ-ಪಾಕಿಸ್ತಾನ ಗಡಿಯನ್ನು ದಾಟಲು ಪ್ರಯತ್ನಿಸಿದ್ದು, ಮಾರ್ಗ ಮಧ್ಯೆ ಈ ಅಪ್ರಾಪ್ತ ವಯಸ್ಕ ಜೋಡಿ ನಿರ್ಜಲೀಕರಣದಿಂದ ಮೃತಪಟ್ಟಿದೆ.

ಈ ಬಗ್ಗೆ ಪೊಲೀಸ್ ಅಧಿಕಾರಿ ಸುಧೀರ್ ಚೌಧರಿ ಪ್ರತಿಕ್ರಿಯಿಸಿದ್ದು, ಅಪ್ರಾಪ್ತ ದಂಪತಿಗಳ ಮೃತದೇಹ ಭಿಭಿಯಾನ್ ಮರುಭೂಮಿಯಲ್ಲಿ ಪತ್ತೆಯಾಗಿವೆ. ವೀಸಾ ಸಿಗದ ಕಾರಣ ಭಾರತದಲ್ಲಿ ಹೊಸ ಜೀವನವನ್ನು ಪ್ರಾರಂಭಿಸಲು ರವಿ ಕುಮಾರ್‌ಮತ್ತು ಶಾಂತಿ ಬಾಯಿ ಅಕ್ರಮವಾಗಿ ಗಡಿ ದಾಟಲು ಯತ್ನಿಸಿದ್ದರು. ಒಂದು ವಾರದ ಹಿಂದೆ ಗಡಿ ದಾಟಿದ ನಂತರ, ಅವರು ದಾರಿ ತಪ್ಪಿ ನಿರ್ಜನ ಪ್ರದೇಶದಲ್ಲಿ ಸಿಲುಕಿಕೊಂಡಿದ್ದರು. ಆ ವೇಳೆ ಕುಡಿಯಲು ನೀರಿಲ್ಲದೆ ಬಾಯಾರಿಕೆಯಿಂದ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಅವರ ಬಳಿ  ಖಾಲಿ ಜರ್ರಿ ಬಾಟಲ್ ಪತ್ತೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಸದ್ಯ ರವಿ ಕುಮಾರ್‌ಮತ್ತು ಶಾಂತಿ ಬಾಯಿ ಮೃತದೇಹ ಮರಣೋತ್ತರ ಪರೀಕ್ಷೆ ಆಗಿದ್ದು, ಸಾವಿಗೆ ನಿಖರವಾದ ಕಾರಣ ಏನು ಎನ್ನುವುದು ತಿಳಿದುಬರಬೇಕಿದೆ ಎಂದು ಎಸ್ಪಿ ಸುಧೀರ್ ಚೌಧರಿ ತಿಳಿಸಿದ್ದಾರೆ.

ಇನ್ನು ಭಾರತ ಸರ್ಕಾರವು ಅನುಮತಿ ನೀಡಿದ ಮೃತದೇಹಗಳನ್ನು ಜೈಸಲ್ಮೇರ್‌ನಲ್ಲಿರುವ ಸಂಬಂಧಿಕರು ಸ್ವೀಕರಿಸಲು ಸಿದ್ಧರಿದ್ದಾರೆ.ಹಾಗೇ ಒಂದು ವೇಳೆ ಮೃತದೇಹಗಳನ್ನು ಪಾಕಿಸ್ತಾನಕ್ಕೆ ಕಳುಹಿಸದಿದ್ದರೆ, ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಲು ಸಿದ್ಧರಿದ್ದೇವೆ ಎಂದು ಹಿಂದೂ ಪಾಕಿಸ್ತಾನಿ ಡಿಸ್ಪ್ಲೇಸ್ಡ್ ಯೂನಿಯನ್ ಮತ್ತು ಬಾರ್ಡರ್ ಪೀಪಲ್ ಆರ್ಗನೈಸೇಶನ್‌ನ ಜಿಲ್ಲಾ ಸಂಯೋಜಕ ದಿಲೀಪ್ ಸಿಂಗ್ ಸೋಧಾ ಹೇಳಿದ್ದಾರೆ.

ಒಟ್ಟಿನಲ್ಲಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿ ಹೊಸ ಸಂಸಾರ ಕಟ್ಟಿಕೊಂಡು ತಮ್ಮದೇ ಆದ ಕನಸುಗಳನ್ನು ಕಟ್ಟಿಕೊಂಡಿತ್ತು. ಆದ್ರೆ ರೀತಿಯ ಸಾವು ಕಂಡಿದ್ದು ನಿಜಕ್ಕೂ ಬೇಸರ ತರಿಸಿದೆ.