ಗಾಜಾದಲ್ಲಿ 20 ಹಮಾಸ್ ಉಗ್ರರನ್ನು ವಶಕ್ಕೆ ಪಡೆದಿರುವ ಇಸ್ರೇಲ್ ಸೇನೆ
ಗಾಜಾಪಟ್ಟಿಯಲ್ಲಿ ಇಸ್ರೇಲ್ ಸೇನೆಯ ಕಾರ್ಯಾಚರಣೆ ಮುಂದುವರೆದಿದ್ದು, 20 ಹಮಾಸ್ ಉಗ್ರರನ್ನು ವಶಕ್ಕೆ ಪಡೆದಿರುವುದಾಗಿ ಸೇನೆ ತಿಳಿಸಿದೆ. 20 ಹಮಾಸ್ ಸದಸ್ಯರನ್ನು ಗಾಜಾ ಪಟ್ಟಿಯ ಹೃದಯ ಭಾಗದಲ್ಲಿ ಬಂಧಿಸಲಾಗಿದೆ. ಇನ್ನು ಗಾಜಾದ ಅತಿದೊಡ್ಡ ಆಸ್ಪತ್ರೆಯಲ್ಲಿ ಆರೋಗ್ಯಾಧಿಕಾರಿಗಳು ಮತ್ತು ಜನರು ಸಿಲುಕಿದ್ದಾರೆ ಅವರ ರಕ್ಷಣೆಗೆ ಇಸ್ರೇಲ್ ಸಹಾಯ ಮಾಡುತ್ತಿದೆ ಎನ್ನುವ ವದಂತಿಯನ್ನು ತಿರಸ್ಕರಿಸಲಾಗಿದೆ.

ಇನ್ಕ್ಯುಬೇಟರ್, ವಿದ್ಯುತ್ ಸೌಲಭ್ಯಗಳಿಲ್ಲದೆ ಹೋರಾಟ ಮುಂದುವರೆದಿದೆ ಎಂದು ಹೇಳಿದ್ದಾರೆ. ಅಕ್ಟೋಬರ್ 7 ರಂದು ಹಮಾಸ್ ಉಗ್ರರು ಇಸ್ರೇಲ್ ಮೇಲೆ 5000 ರಾಕೆಟ್ಗಳಿಂದ ದಾಳಿ ನಡೆಸಿದ್ದರು ಪರಿಣಾಮ 1,400ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಅದಾದ ಬಳಿಕ ಇಸ್ರೇಲ್ ಪ್ರತಿಯಾಗಿ ಗಾಜಾ ಮೇಲೆ ದಾಳಿ ನಡೆಸಿತು.
ಇದೀಗ ಹಲವು ರಾಷ್ಟ್ರಗಳು ಕದನ ವಿರಾಮವನ್ನು ಘೋಷಿಸುವಂತೆ ಇಸ್ರೇಲ್ಗೆ ಮನವಿ ಮಾಡುತ್ತಿದ್ದಾರೆ. ಆದರೆ ಇಸ್ರೇಲ್ ಮಾತ್ರ ಗಾಜಾದಲ್ಲಿ ಹಮಾಸ್ನನ್ನು ಹತ್ತಿಕ್ಕುವವರೆಗೂ ಹಿಂದೆ ಸರಿಯುವ ಮಾತೇ ಇಲ್ಲ, ಯುದ್ಧವನ್ನು ಮುಂದುವರೆಸುತ್ತೇವೆ, ಹಮಾಸ್ ಉಗ್ರರು 240 ಒತ್ತೆಯಾಳುಗಳನ್ನು ಬಿಡುಗಡೆ ಮಾಡುವವರೆಗೂ ಯುದ್ಧ ಮುಂದುವರೆಯಲಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಸ್ಪಷ್ಟನೆ ನೀಡಿದ್ದಾರೆ.
ಮತ್ತಷ್ಟು ಓದಿ: ಗಾಜಾ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ವೈಮಾನಿಕ ದಾಳಿ: 7 ಮಂದಿ ಒತ್ತೆಯಾಳುಗಳು ಸಾವು
ಯುದ್ಧವನ್ನು ಆರಂಭಿಸಿದವರು ನಾವಲ್ಲ ಆದರೆ ಅದನ್ನು ನಾವೇ ಅಂತ್ಯಗೊಳಿಸುತ್ತೇವೆ ಎಂದಿದ್ದಾರೆ. ಇಸ್ರೇಲ್ ಹಾಗೂ ಹಮಾಸ್ ನಡುವೆ ಯುದ್ಧ ಮುಂದುವರೆದಿದ್ದು, ಗಾಜಾದ ಅತಿದೊಡ್ಡ ಆಸ್ಪತ್ರೆಯಾದ ಅಲ್-ಶಿಫಾವನ್ನು ಇಸ್ರೇಲ್ ಸೇನೆ ಸುತ್ತುವರೆದಿದ್ದು, ಆಸ್ಪತ್ರೆ ಸಮೀಪದಲ್ಲಿ ವೈಮಾನಿಕ ದಾಳಿ ಸೇರಿದಂತೆ ಬಾಂಬ್ ಸ್ಫೋಟಗಳು ನಡೆಯು ತ್ತಿರುವುದರಿಂದ ಆಸ್ಪತ್ರೆಯ ಕಾರ್ಡಿಯಾಕ್ ವಾರ್ಡ್ ನಾಶವಾಗಿದೆ ಎಂದು ಆಸ್ಪತ್ರೆಯ ನಿರ್ದೇಶಕ ಮೊಹಮ್ಮದ್ ಅಬು ಸಲ್ಮಿಯಾ ತಿಳಿಸಿದ್ದಾರೆ.
ಆಸ್ಪತ್ರೆಯೊಳಗೆ ಶಸ್ತ್ರ ಚಿಕಿತ್ಸೆಯಾದ 600 ರೋಗಿಗಳು, 37 ರಿಂದ 40 ಶಿಶುಗಳು ಮತ್ತು 17 ಜನರು ತೀವ್ರ ನಿಗಾ ಘಟಕದಲ್ಲಿದ್ದು, ಅವರಿಗೆ ನೀರು, ವಿದ್ಯುತ್, ಆಹಾರ ಅಥವಾ ಇಂಟರ್ನೆಟ್ ಯಾವುದೂ ಲಭ್ಯವಿಲ್ಲ ಎಂದಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ