ದೀಪಾವಳಿ ಗಿಫ್ಟ್, ನರಕಾಸುರ ಫಿನಿಷ್! US ದಾಳಿಗೆ ಐಸಿಸ್ ಕ್ರೂರಿ ಬಗ್ದಾದಿ ಬೂದಿ
ವಾಷಿಂಗ್ಟನ್: ಅಬೂಬಕರ್ ಅಲ್ ಬಗ್ದಾದಿ -ಜಗತ್ತಿನ ಮೋಸ್ಟ್ ವಾಂಟೆಡ್ ಉಗ್ರ. ಕಳೆದ 10 ವರ್ಷಗಳಿಂದ ಇರಾಕ್ ಮತ್ತು ಸಿರಿಯಾದಲ್ಲಿ ಅಟ್ಟಹಾಸ ಮೆರೆದು, ಸಾವಿರಾರು ಜನರ ರಕ್ತ ಹೀರಿದ್ದ. ಯೂರೋಪ್ ಸೇರಿದಂತೆ ಬಲಿಷ್ಠ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲೂ ನೆತ್ತರ ಕೋಡಿ ಹರಿಸಿದ್ದ. ಐದು ವರ್ಷಗಳಿಂದ ತಲೆಮರೆಸಿಕೊಂಡಿದ್ದ ನರರಾಕ್ಷಸನನ್ನ ಇದೀಗ ಅಮೆರಿಕ ಸೇನೆ ಹೊಡೆದು ಹಾಕಿದೆ. ಲಾಡೆನ್ ಮಾದರಿಯಲ್ಲಿ ಸಿರಿಯಾದಲ್ಲಿ ನಡೆದ ಲೇಟ್ ನೈಟ್ ಆಪರಷೇನ್ ವೇಳೆ ಬಗ್ದಾದಿ ಹೆಣವಾಗಿದ್ದಾನೆ. ಈ ಮೂಲಕ ಐಸಿಸ್ ಸಂಘಟನೆ ಸತ್ತು ಹೋಗಿದೆ. ಅಬೂಬಕರ್ ಅಲ್ […]
ವಾಷಿಂಗ್ಟನ್: ಅಬೂಬಕರ್ ಅಲ್ ಬಗ್ದಾದಿ -ಜಗತ್ತಿನ ಮೋಸ್ಟ್ ವಾಂಟೆಡ್ ಉಗ್ರ. ಕಳೆದ 10 ವರ್ಷಗಳಿಂದ ಇರಾಕ್ ಮತ್ತು ಸಿರಿಯಾದಲ್ಲಿ ಅಟ್ಟಹಾಸ ಮೆರೆದು, ಸಾವಿರಾರು ಜನರ ರಕ್ತ ಹೀರಿದ್ದ. ಯೂರೋಪ್ ಸೇರಿದಂತೆ ಬಲಿಷ್ಠ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲೂ ನೆತ್ತರ ಕೋಡಿ ಹರಿಸಿದ್ದ. ಐದು ವರ್ಷಗಳಿಂದ ತಲೆಮರೆಸಿಕೊಂಡಿದ್ದ ನರರಾಕ್ಷಸನನ್ನ ಇದೀಗ ಅಮೆರಿಕ ಸೇನೆ ಹೊಡೆದು ಹಾಕಿದೆ. ಲಾಡೆನ್ ಮಾದರಿಯಲ್ಲಿ ಸಿರಿಯಾದಲ್ಲಿ ನಡೆದ ಲೇಟ್ ನೈಟ್ ಆಪರಷೇನ್ ವೇಳೆ ಬಗ್ದಾದಿ ಹೆಣವಾಗಿದ್ದಾನೆ. ಈ ಮೂಲಕ ಐಸಿಸ್ ಸಂಘಟನೆ ಸತ್ತು ಹೋಗಿದೆ.
ಅಬೂಬಕರ್ ಅಲ್ ಬಗ್ದಾದಿ, ಒಸಮಾ ಬಿನ್ ಲಾಡೆನ್ ಬಳಿಕ ಇಡೀ ಜಗತ್ತಿಗೇ ಮಹಾ ಕಂಟಕವಾಗಿದ್ದ ನರ ಪಿಶಾಚಿ. ಇರಾಕ್ ಮತ್ತು ಸಿರಿಯಾದಲ್ಲಿ ರಕ್ತದೋಕುಳಿ ಹರಿಸಿ. 10 ವರ್ಷಗಳ ಕಾಲ ಎರಡೂ ರಾಷ್ಟ್ರಗಳನ್ನ ಅಕ್ಷರಶಃ ನರಕವನ್ನಾಗಿಸಿದ ನರ ರಾಕ್ಷಸ. ಕೇವಲ ಇರಾಕ್, ಸಿರಿಯಾದಲ್ಲಷ್ಟೇ ಅಲ್ಲ, ಅಮೆರಿಕದಿಂದ ಹಿಡಿದು ಅಫ್ಘಾನಿಸ್ತಾನದವರೆಗೂ ಬಗ್ದಾದಿ ಕಂಬಂಧ ಬಾಹುಗಳು ಜಗತ್ತಿನಾದ್ಯಂತ ಚಾಚಿತ್ತು. ಅಂಥಾ ಪರಮಕ್ರೂರಿಯ ಕಂಬಂಧ ಬಾಹುವನ್ನ ಅಮೆರಿಕ ಸೇನೆ ಕತ್ತರಿಸಿ ಬಿಸಾಕಿದೆ.
ಸಿರಿಯಾದಲ್ಲಿ ದೊಡ್ಡಣ್ಣನ ಮಹಾ ಬೇಟೆ! 2011ರಲ್ಲಿ ಒಸಮಾ ಬಿನ್ ಲಾಡೆನ್ನನ್ನ ಹೊಡೆದು ಹಾಕಿದ್ದ ಅಮೆರಿಕ ಸೇನೆ, 2014ರಿಂದ ಮತ್ತೊಬ್ಬ ಮೋಸ್ಟ್ ವಾಂಟೆಡ್ ಉಗ್ರನ ತಲೆಗಾಗಿ ಹುಡುಕಾಡ್ತಿತ್ತು. ಬರೋಬ್ಬರಿ ಐದು ವರ್ಷಗಳಿಂದ ಅಮೆರಿಕ ಸೇನೆ ಆಪರೇಷನ್ ಬಗ್ದಾದಿ ನಡೆಸ್ತಿತ್ತು. ಇರಾಕ್ ಮತ್ತು ಸಿರಿಯಾದ ಮೂಲೆ ಮೂಲೆಯನ್ನೂ ಜಾಲಾಡಿತ್ತು. ಇದೀಗ, ಗುಪ್ತಚರ ಇಲಾಖೆ ಸಿಐಎ ಸಂಗ್ರಹಿಸಿದ ಖಚಿತ ಮಾಹಿತಿ ಮೇರೆಗೆ, ನಿನ್ನೆ ಸಿರಿಯಾದ ಇದ್ಲಿಬ್ ಎಂಬಲ್ಲಿ ಅಮೆರಿಕನ್ ಸ್ಪೆಷಲ್ ಕಮಾಂಡೋ ಟೀಂ ಬಗ್ದಾದಿ ಅಡಗಿದ್ದ ಜಾಗದ ಮೇಲೆ ದಾಳಿ ನಡೆಸಿದೆ.
ಅಚ್ಚರಿಯಂದ್ರೆ ಜಗತ್ತನ್ನೇ ಗೆಲ್ಲಲು ಹೊರಟಿದ್ದ ಮಹಾಕ್ರೂರಿ ಅಮೆರಿಕ ಸೇನೆ ತನ್ನ್ನನ್ನ ಅಟ್ಟಾಡಿಸಿಕೊಂಡು ಬರುತ್ತಲೇ ಹೆದರಿ ಕಂಗಾಲಾಗಿದ್ದಾನೆ. ಯುದ್ಧ ವಿಮಾನಗಳು ಬಾಂಬ್ ಸುರಿಮಳೆಗೆರೆಯುತ್ತಲೇ, ಬಗ್ದಾದಿ ಅರ್ಧ ಜೀವ ಹಾರಿ ಹೋಗಿದೆ. ಕಮಾಂಡೋಗಳು ಬಗ್ದಾದಿ ಅಡಗಿದ್ದ ಗುಹೆ ಹೊಕ್ಕು ಆತನ ಸಹಚರರನ್ನಲ್ಲಾ ಹತ್ಯೆಗೈದಿದ್ದಾರೆ. ಈ ವೇಳೆ ಅಮೆರಿಕನ್ನರ ಕೈಗೆ ಸಿಗೋದಕ್ಕಿಂತ ಸಾಯೋದೆ ಲೇಸು ಅಂತಾ ಸೊಂಟಕ್ಕೆ ಬಾಂಬ್ ಕಟ್ಟಿಕೊಂಡು ತನ್ನನ್ನು ತಾನೇ ಸ್ಫೋಟಿಸಿಕೊಂಡಿದ್ದಾನೆ.
ಜಗತ್ತನ್ನೇ ತುದಿಗಾಲಲ್ಲಿ ನಿಲ್ಲಿಸಿದ ಟ್ರಂಪ್ ಟ್ವೀಟ್! ಈ ಮಧ್ಯೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇಂದು ಬೆಳ್ಳಂಬೆಳಗ್ಗೆಯೇ ಒಂದು ಟ್ವೀಟ್ ಮಾಡೋ ಮೂಲಕ ಇಡೀ ಜಗತ್ತನ್ನೇ ತುದಿಗಾಲಲ್ಲಿ ನಿಲ್ಲಿಸಿದ್ದಾರೆ. ಈಗಷ್ಟೇ ಏನೋ ದೊಡ್ಡ ಘಟನೆಯೊಂದು ನಡೆದು ಹೋಗಿದೆ ಅಂತಾ ಅನ್ನೋ ಒಂದೇ ವಾಕ್ಯದ ದೊಡ್ಡಣ್ಣನ ಟ್ವೀಟ್ ಎಲ್ಲರನ್ನೂ ಕೂತೂಹಲದಲ್ಲಿ ಕೆಡವಿತ್ತು. ಸಂಜೆಯಾಗ್ತಿದ್ದಂತೆ ಸುದ್ದಿಗೋಷ್ಠಿ ನಡೆಸಿದ್ದ ಟ್ರಂಪ್, ಬಗ್ದಾದಿ ಬೇಟೆ ಕುರಿತು ಜಗತ್ತಿ ಮುಂದೆ ಮಾಹಿತಿ ಬಿಚ್ಚಿಟ್ರು.
Abu Bakr al-Baghdadi was violently eliminated last night. He will never again harm another innocent man, woman, or child.
The world is now a much safer place. pic.twitter.com/CWGoXs7Mb1
— The White House (@WhiteHouse) October 27, 2019
Published On - 10:44 pm, Sun, 27 October 19