AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ-ಪಾಕಿಸ್ತಾನದ ಯುದ್ಧ ಇಸ್ಲಾಂ ಯುದ್ಧವಲ್ಲ, ಮೌಲಾನಾ ಅಬ್ದುಲ್ ಅಜೀಜ್ ಹೇಳಿದ್ದೇನು?

ಭಾರತ-ಪಾಕಿಸ್ತಾನ ಯುದ್ಧ ಇಸ್ಲಾಂ ಯುದ್ಧ(War)ವಲ್ಲ ಎಂದು ಮೌಲಾನಾ ಅಬ್ದುಲ್ ಅಜೀಜ್ ಘಾಜಿ ಹೇಳಿದ್ದಾರೆ. ಅಮೆರಿಕದಲ್ಲಿರುವ ಪಾಕಿಸ್ತಾನದ ಮಾಜಿ ರಾಯಭಾರಿ ಹುಸೇನ್ ಹಕ್ಕಾನಿ ಅವರು ಅಪ್‌ಲೋಡ್ ಮಾಡಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಭಾರತ-ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಒಂದೆಡೆಯಾದರೆ ಮತ್ತೊಂದೆಡೆ ಪಾಕಿಸ್ತಾನದಲ್ಲಿ ಹೆಚ್ಚುತ್ತಿರುವ ಅಸಮಾಧಾನವನ್ನು ಬಹಿರಂಗಪಡಿಸಿದೆ.

ಭಾರತ-ಪಾಕಿಸ್ತಾನದ ಯುದ್ಧ ಇಸ್ಲಾಂ ಯುದ್ಧವಲ್ಲ, ಮೌಲಾನಾ ಅಬ್ದುಲ್ ಅಜೀಜ್ ಹೇಳಿದ್ದೇನು?
ಭಾರತ-ಪಾಕಿಸ್ತಾನ ಯುದ್ಧ ಇಸ್ಲಾಂ ಯುದ್ಧವಲ್ಲ ಎಂದು ಮೌಲಾನಾ ಅಬ್ದುಲ್ ಅಜೀಜ್ ಘಾಜಿ ಹೇಳಿದ್ದಾರೆ. ಅಮೆರಿಕದಲ್ಲಿರುವ ಪಾಕಿಸ್ತಾನದ ಮಾಜಿ ರಾಯಭಾರಿ ಹುಸೇನ್ ಹಕ್ಕಾನಿ ಅವರು ಅಪ್‌ಲೋಡ್ ಮಾಡಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಪಾಕಿಸ್ತಾನದಲ್ಲಿರುವಷ್ಟು ದಬ್ಬಾಳಿಕೆ ಭಾರತದಲ್ಲಿಲ್ಲ ಎಂದು ಅಜೀಜ್ ಹೇಳಿದ್ದಾರೆ. ಧಾರ್ಮಿಕ ಗುಂಪುಗಳನ್ನು ಕೈಗೊಂಬೆಗಳಾಗಿ ಬಳಸುತ್ತಿರುವ ಪಾಕಿಸ್ತಾನವನ್ನು ಅವರು ಟೀಕಿಸಿದರು. ರಾಜಕಾರಣಿ ಅಲಿ ಮುಹಮ್ಮದ್ ಖಾನ್ ಮರ್ವಾತ್ ಅವರ ಮತ್ತೊಂದು ವೈರಲ್ ವಿಡಿಯೋ ಭಾನುವಾರ ಬೆಳಕಿಗೆ ಬಂದಿದೆ. Image Credit source: Siasat.com
ನಯನಾ ರಾಜೀವ್
|

Updated on: May 06, 2025 | 12:02 PM

Share

ಇಸ್ಲಾಮಾಬಾದ್, ಮೇ 06: ಭಾರತ-ಪಾಕಿಸ್ತಾನ ಯುದ್ಧ ಇಸ್ಲಾಂ ಯುದ್ಧ(War)ವಲ್ಲ ಎಂದು ಮೌಲಾನಾ ಅಬ್ದುಲ್ ಅಜೀಜ್ ಘಾಜಿ ಹೇಳಿದ್ದಾರೆ. ಅಮೆರಿಕದಲ್ಲಿರುವ ಪಾಕಿಸ್ತಾನದ ಮಾಜಿ ರಾಯಭಾರಿ ಹುಸೇನ್ ಹಕ್ಕಾನಿ ಅವರು ಅಪ್‌ಲೋಡ್ ಮಾಡಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಭಾರತ-ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಒಂದೆಡೆಯಾದರೆ ಮತ್ತೊಂದೆಡೆ ಪಾಕಿಸ್ತಾನದಲ್ಲಿ ಹೆಚ್ಚುತ್ತಿರುವ ಅಸಮಾಧಾನವನ್ನು ಬಹಿರಂಗಪಡಿಸಿದೆ. 2 ನಿಮಿಷ 14 ಸೆಕೆಂಡುಗಳ ಈ ವಿಡಿಯೋ ಈಗ ವೈರಲ್ ಆಗಿದೆ. ಪಾಕಿಸ್ತಾನ ಮತ್ತು ಭಾರತದ ನಡುವಿನ ಯುದ್ಧವು ಇಸ್ಲಾಂ ಯುದ್ಧವಲ್ಲ, ಭಾರತದೊಂದಿಗಿನ ಯುದ್ಧದಲ್ಲಿ ಪಾಕಿಸ್ತಾನವನ್ನು ಯಾರು ಗೆಲ್ಲಿಸುತ್ತೀರಾ ಕೈ ಎತ್ತಿ ಎಂದಾಗ ಎಲ್ಲರೂ ಮೌನವಾಗಿದ್ದರು.

ಇದನ್ನೂ ಓದಿ
Image
ನಾವು 3 ದಶಕಗಳಿಂದ ಈ ನೀಚ ಕೆಲಸ ಮಾಡ್ತಿದ್ದೀವಿ: ಪಾಕ್ ರಕ್ಷಣಾ ಸಚಿವ ಖ್ವಾಜಾ
Image
ಪಹಲ್ಗಾಮ್ ಉಗ್ರ ದಾಳಿ, ಎಕೆ-47 ಹಿಡಿದ ಶಂಕಿತ ಉಗ್ರನ ಫೋಟೋ ಬಹಿರಂಗ
Image
ಪ್ಯಾಂಟ್​ ಬಿಚ್ಚಿ, ಐಡಿ ಪರಿಶೀಲಿಸಿ ಹಿಂದೂಗಳನ್ನು ಗುರಿಯಾಗಿಸಿ ಉಗ್ರರ ದಾಳಿ
Image
ಪಹಲ್ಗಾಮ್ ಉಗ್ರ ದಾಳಿಯ ಮಾಸ್ಟರ್​ಮೈಂಡ್ ಸೈಫುಲ್ಲಾ ಖಾಲಿದ್ ಯಾರು?

ಪಾಕಿಸ್ತಾನದಲ್ಲಿರುವಷ್ಟು ದಬ್ಬಾಳಿಕೆ ಭಾರತದಲ್ಲಿಲ್ಲ ಎಂದು ಅಜೀಜ್ ಹೇಳಿದ್ದಾರೆ. ಧಾರ್ಮಿಕ ಗುಂಪುಗಳನ್ನು ಕೈಗೊಂಬೆಗಳಾಗಿ ಬಳಸುತ್ತಿರುವ ಪಾಕಿಸ್ತಾನವನ್ನು ಅವರು ಟೀಕಿಸಿದರು. ರಾಜಕಾರಣಿ ಅಲಿ ಮುಹಮ್ಮದ್ ಖಾನ್ ಮರ್ವಾತ್ ಅವರ ಮತ್ತೊಂದು ವೈರಲ್ ವಿಡಿಯೋ ಭಾನುವಾರ ಬೆಳಕಿಗೆ ಬಂದಿದೆ.

ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆದರೆ ನೀವು ಹೋರಾಡುತ್ತೀರಾ ಎಂದು ಸ್ಥಳೀಯ ಮಾಧ್ಯಮಗಳು ಪ್ರಶ್ನಿಸಿದಾಗ ಅವರು ಒಂದೊಮ್ಮೆ ಯುದ್ಧ ಉಲ್ಬಣಗೊಂಡರೆ ನಾನು ಇಂಗ್ಲೆಂಡ್​ಗೆ ಹೋಗುತ್ತೇನೆ ಎಂದು ಹೇಳಿದ್ದಾರೆ.

ಪಾಕಿಸ್ತಾನಿ ನಾಯಕತ್ವದ ಬದ್ಧತೆ ಮತ್ತು ಮಿಲಿಟರಿಯ ಮೇಲಿನ ನಂಬಿಕೆಯ ಕೊರತೆಯ ಬಗ್ಗೆ ಪ್ರತಿಕ್ರಿಯೆಗಳು ಹುಟ್ಟಿಕೊಂಡಿವೆ. ದೇಶೀಯ ಆಡಳಿತದ ಬಗ್ಗೆ ಹೆಚ್ಚುತ್ತಿರುವ ಸಾರ್ವಜನಿಕ ಅಪನಂಬಿಕೆಯನ್ನು ಬಹಿರಂಗಪಡಿಸಿವೆ.

ಮತ್ತಷ್ಟು ಓದಿ: ಭಾರತದ ಸಿದ್ಧತೆ ನೋಡಿಯೇ ಬೆವರಿದ ಪಾಕಿಸ್ತಾನ, ಯುದ್ಧ ಭೀತಿ ಇದೆ ಎಂದ ಪಾಕ್ ರಕ್ಷಣಾ ಸಚಿವ

ಈ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವಾಗ, ಸಾಮಾಜಿಕ ಮಾಧ್ಯಮಗಳ ಮೂಲಕ ಜನರ ಧ್ವನಿಯು ಹೊಣೆಗಾರಿಕೆ, ಸಮಗ್ರತೆ ಮತ್ತು ರಾಷ್ಟ್ರೀಯ ನಿರೂಪಣೆಯಲ್ಲಿ ಬದಲಾವಣೆಗೆ ಕರೆ ನೀಡುತ್ತಿದೆ.

ಈ ಎರಡು ವೀಡಿಯೊಗಳು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪ್ರತಿಕ್ರಿಯೆಗಳ ಉಲ್ಬಣವನ್ನು ಉಂಟುಮಾಡಿವೆ. ಅಧಿಕಾರದಲ್ಲಿರುವವರು ದೇಶಕ್ಕಾಗಿ ನಿಲ್ಲದಿದ್ದರೆ ಸಾಮಾನ್ಯ ನಾಗರಿಕರು ಯುದ್ಧದ ಹೊರೆ ಹೊರುತ್ತಾರೆಯೇ ಎಂದು ಬಳಕೆದಾರರೊಬ್ಬರು ಪ್ರಶ್ನಿಸಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಡಿಕಾಕ್ ಸಿಡಿಲಬ್ಬರ... ಸನ್​ರೈಸರ್ಸ್ ತಂಡಕ್ಕೆ ಬೋನಸ್ ಪಾಯಿಂಟ್
ಡಿಕಾಕ್ ಸಿಡಿಲಬ್ಬರ... ಸನ್​ರೈಸರ್ಸ್ ತಂಡಕ್ಕೆ ಬೋನಸ್ ಪಾಯಿಂಟ್
ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು: ಪಬ್​ಗಳಲ್ಲಿ ಹೇಗಿದೆ ಸುರಕ್ಷತೆ?
ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು: ಪಬ್​ಗಳಲ್ಲಿ ಹೇಗಿದೆ ಸುರಕ್ಷತೆ?
ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ
ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ
ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ
ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು
ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​
ಚಿತ್ರದುರ್ಗದಲ್ಲೂ ಮೊಳಗಿದ ಜೆಸಿಬಿ ಗರ್ಜನೆ: ಗೂಡಂಗಡಿಗಳು ನೆಲಸಮ
ಚಿತ್ರದುರ್ಗದಲ್ಲೂ ಮೊಳಗಿದ ಜೆಸಿಬಿ ಗರ್ಜನೆ: ಗೂಡಂಗಡಿಗಳು ನೆಲಸಮ
ಚಳಿ ಎಂದು ಕ್ಯಾಬ್ ಚಾಲಕ ಕಾರಿನೊಳಗೆ ಮಾಡಿದ ಈ ತಪ್ಪಿನಿಂದ ಪ್ರಾಣವೇ ಹೋಯ್ತು
ಚಳಿ ಎಂದು ಕ್ಯಾಬ್ ಚಾಲಕ ಕಾರಿನೊಳಗೆ ಮಾಡಿದ ಈ ತಪ್ಪಿನಿಂದ ಪ್ರಾಣವೇ ಹೋಯ್ತು
ಗಿಲ್ಲಿಯನ್ನು ಎದುರುಹಾಕಿಕೊಂಡಿದ್ದಕ್ಕೆ ಸತೀಶ್ ಪಾಡು ನೋಡಿ
ಗಿಲ್ಲಿಯನ್ನು ಎದುರುಹಾಕಿಕೊಂಡಿದ್ದಕ್ಕೆ ಸತೀಶ್ ಪಾಡು ನೋಡಿ