ಇಸ್ರೇಲ್​​​ ವೈಮಾನಿಕ ದಾಳಿ: ಹಮಾಸ್​​ ಉಗ್ರರ ಒತ್ತೆಯಾಳಾಗಿದ್ದ 13 ಇಸ್ರೇಲಿಗರು ಸಾವು

|

Updated on: Oct 13, 2023 | 4:32 PM

ಇಸ್ರೇಲ್​​ ಗಾಜಾ ಪಟ್ಟಿಯಲ್ಲಿರುವ ಉಗ್ರರ ಅಡಗುತಾಣಗಳ ಮೇಲೆ ಇಸ್ರೇಲ್​ ಸೈನಿಕರು ದಾಳಿ ನಡೆಸಿ 250 ಮಂದಿಯನ್ನು ರಕ್ಷಿಸಿದ್ದಾರೆ ಎಂದು ಹೇಳಲಾಗಿದೆ. ಆದರೆ ಹಮಾಸ್​​ ಉಗ್ರರು ನೀಡಿರುವ ಮಾಹಿತಿ ಪ್ರಕಾರ ಇಸ್ರೇಲ್​​ 24 ಗಂಟೆಯಲ್ಲಿ ನಡೆಸಿದ ವೈಮಾನಿಕ ದಾಳಿಯಲ್ಲಿ 13 ಇಸ್ರೇಲಿಗರು ಮತ್ತು ವಿದೇಶಿ ಒತ್ತೆಯಾಳುಗಳು ಸಾವನ್ನಪ್ಪಿದ್ದಾರೆ ಎಂದು ಹೇಳಿದೆ.

ಇಸ್ರೇಲ್​​​ ವೈಮಾನಿಕ ದಾಳಿ: ಹಮಾಸ್​​ ಉಗ್ರರ ಒತ್ತೆಯಾಳಾಗಿದ್ದ 13 ಇಸ್ರೇಲಿಗರು ಸಾವು
Follow us on

ಇಸ್ರೇಲ್​​ ಮತ್ತು ಹಮಾಸ್​​ ಭಯೋತ್ಪಾದಕರ ನಡುವೆ ನಡೆಯುತ್ತಿರುವ ಯುದ್ಧ 6ನೇ ದಿನಕ್ಕೆ ಕಾಲಿಟ್ಟಿದೆ. ಒಂದು ಕಡೆ ಇಸ್ರೇಲ್​​​ ಗಾಜಾ ಪಟ್ಟಿಯ ಮೇಲೆ ದಾಳಿ ಮಾಡಿ ಹಮಾಸ್​​ ಉಗ್ರರ ನೆಲೆಯನ್ನು ನಾಶ ಮಾಡುತ್ತಿದೆ. ಇನ್ನೊಂದು ಕಡೆ ಹಮಾಸ್​ ಉಗ್ರರರು, ಇಸ್ರೇಲ್​​​​ ನಾಗರಿಕರನ್ನು ಹಾಗೂ ವಿದೇಶಿಗರನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡಿತ್ತು. ಈ ಕಾರಣಕ್ಕೆ ಹಮಾಸ್​​ ಭಯೋತ್ಪಾದಕರು ಇಸ್ರೇಲ್​​ಗೆ ಬೆದರಿಕೆಯನ್ನು ಹಾಕಿತ್ತು. ಯುದ್ಧವನ್ನು ನಿಲ್ಲಿಸಿ ಇಲ್ಲವೆಂದರೆ ನಮ್ಮ ವಶದಲ್ಲಿರುವ ಇಸ್ರೇಲ್​​​​ ನಾಗರಿಕರನ್ನು ಹಾಗೂ ವಿದೇಶಿಗರನ್ನು ಕೊಲ್ಲುವುದಾಗಿ ಹೇಳಿತ್ತು. ಆದರೆ ಈ ಯಾವ ಬೆದರಿಕೆಗೂ ಜಗ್ಗದ ಇಸ್ರೇಲ್​​ ಇದೀಗ ಗಾಜಾ ಪಟ್ಟಿಯಲ್ಲಿರುವ ಉಗ್ರರ ಅಡಗುತಾಣಗಳ ಮೇಲೆ ಇಸ್ರೇಲ್​ ಸೈನಿಕರು ದಾಳಿ ನಡೆಸಿ 250 ಮಂದಿಯನ್ನು ರಕ್ಷಿಸಿದ್ದಾರೆ ಎಂದು ಹೇಳಲಾಗಿದೆ. ಆದರೆ ಹಮಾಸ್​​ ಉಗ್ರರು ನೀಡಿರುವ ಮಾಹಿತಿ ಪ್ರಕಾರ ಇಸ್ರೇಲ್​​ 24 ಗಂಟೆಯಲ್ಲಿ ನಡೆಸಿದ ವೈಮಾನಿಕ ದಾಳಿಯಲ್ಲಿ 13 ಇಸ್ರೇಲಿಗರು ಮತ್ತು ವಿದೇಶಿ ಒತ್ತೆಯಾಳುಗಳು ಸಾವನ್ನಪ್ಪಿದ್ದಾರೆ ಎಂದು ಹೇಳಿದೆ.

ಹಮಾಸ್ ಮಾಡಿದ ತಪ್ಪಿಗೆ ಇಂದು ಇಡೀ ಗಾಜಾ ಪಟ್ಟಿ ಹಾಗೂ ಇಸ್ರೇಲ್​​ ನಾಗರಿಕರು ಶಿಕ್ಷೆ ಅನುಭವಿಸುತ್ತಿದ್ದಾರೆ. ಕರಾಳ ಯುದ್ಧಕ್ಕೆ ಹಮಾಸ್​​ ಉಗ್ರರು ಸಾಕ್ಷಿಯಾಗಿದ್ದಾರೆ. ಯಾವುದೇ ತಪ್ಪು ಮಾಡದ ಮಕ್ಕಳು, ಮಹಿಳೆಯರು, ವೃದ್ಧರು ನೋವು – ಸಾವು ಅನುಭವಿಸಿದ್ದಾರೆ. ಈ ಹಿಂದೆಯೆ ಇಸ್ರೇಲ್​​ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಹೇಳಿದರು ಯಾವುದೇ ಕಾರಣಕ್ಕೂ ಹಮಾಸ್​​​ ಉಗ್ರರನ್ನು ಬೀಡುವ ಮಾತಿಲ್ಲ ಎಂದು. ಅದೇ ರೀತಿ ಇದೀಗ ಹಮಾಸ್​​ ಉಗ್ರರನ್ನು ಹುಡುಕಿ ಹೊಡೆಯುತ್ತಿದ್ದಾರೆ. ತನ್ನ ದೇಶದ ಪ್ರಜೆಗಳನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡಿದ ಹಮಾಸ್​​ ಉಗ್ರ ನಲೆ ಮೇಲೆ ದಾಳಿ ಮಾಡಿ, ಅಲ್ಲಿರುವ ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಕರೆದುಕೊಂಡು ಬಂದಿದ್ದಾರೆ. ಆದರೆ ಹಮಾಸ್,​​​ ಇಸ್ರೇಲ್​​ ನಡೆಸಿದ 24 ಗಂಟೆಯ ವೈಮಾನಿಕ ದಾಳಿಯಲ್ಲಿ 13 ಜನ ಸಾವನ್ನಪ್ಪಿದ್ದಾರೆ ಎಂದು ಹೇಳಿದೆ.

ಇದನ್ನೂ ಓದಿ: ಗಾಜಾದಲ್ಲಿ ಹಮಾಸ್​ನ ಅಡಗುತಾಣಗಳ ಮೇಲೆ ದಾಳಿ ನಡೆಸಿ ಒತ್ತೆಯಾಳುಗಳನ್ನು ರಕ್ಷಿಸಿದ ಇಸ್ರೇಲ್ ಸೈನಿಕರು

ಎಝೆಡಿನ್ ಅಲ್-ಕಸ್ಸಾಮ್ ಬ್ರಿಗೇಡ್ಸ್ ನೀಡಿದ ಹೇಳಿಕೆ ಪ್ರಕಾರ ಇಸ್ರೇಲಿ ಫೈಟರ್ ಜೆಟ್‌ಗಳು ಗುರಿಯಾಗಿಸಿದ ಐದು ಸ್ಥಳಗಳಲ್ಲಿ ಹದಿಮೂರು ಕೈದಿಗಳು ಹಾಗೂ ವಿದೇಶಿಯರು ಸಾವನ್ನಪ್ಪಿದ್ದಾರೆ ಎಂದು ಹೇಳಿದೆ. ಗಾಜಾ ಪಟ್ಟಿಯ ಮೇಲೆ ಇಸ್ರೇಲ್​​ ನಡೆಸಿದ ವಾಯು ಮತ್ತು ಫಿರಂಗಿ ದಾಳಿಯಲ್ಲಿ 2.4 ಮಿಲಿಯನ್ ಜನಸಂಖ್ಯೆಯ ಜನನಿಬಿಡ ಪ್ರದೇಶವನ್ನು ಧ್ವಂಸ ಮಾಡಿದ್ದಾರೆ. ಇದರಲ್ಲಿ 1,500 ಕ್ಕೂ ಹೆಚ್ಚು ಜನರನ್ನು ಸಾವನ್ನಪ್ಪಿದ್ದಾರೆ ಎಂದು ಹೇಳಿದೆ.

ಗಾಜಾದ ಹಮಾಸ್​​​​ ಮಾಧ್ಯಮಗಳು ತಿಳಿಸಿದ ಪ್ರಕಾರ ಈ ದಾಳಿಯಲ್ಲಿ ಸಾವನ್ನಪ್ಪಿರುವವರಲ್ಲಿ 500 ಮಕ್ಕಳೇ ಎಂದು ಹೇಳಿದೆ. ಈ ಹಿಂದೆ ಎಝೆಡಿನ್ ಅಲ್-ಕಸ್ಸಾಮ್ ಬ್ರಿಗೇಡ್‌ಗಳು ನಮ್ಮ ಜನರ ಮೇಲೆ ದಾಳಿ ಮಾಡಿದ್ರೆ ನಮ್ಮ ವಶದಲ್ಲಿರುವ ನಿಮ್ಮ ಜನರನ್ನು ಹತ್ಯೆ ಮಾಡುತ್ತೇವೆ ಎಂದು ಹೇಳಿದರು. ಈಗಾಗಲೇ ಹಲವು ಸಾವು-ನೋವುಗಳು ಎರಡು ಕಡೆಯಾಗಿದೆ. ಇಸ್ರೇಲ್​​ ಯುದ್ಧ ಭೀಕರತೆಯಲ್ಲಿದೆ. ನಮ್ಮ ದೇಶ ಸಂಕಷ್ಟದಲ್ಲಿದೆ ಎಂದಾಗ ಇಡೀ ಇಸ್ರೇಲ್​​, ಸೈನ್ಯದ ಜತೆಗೆ ನಿಂತಿದೆ. ಇದರ ಜತೆಗೆ ಭಾರತ ಸೇರಿದಂತೆ ಅನೇಕ ರಾಷ್ಟ್ರಗಳು ಇಸ್ರೇಲ್​​ಗೆ ಬೆಂಬಲ ನೀಡಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 4:28 pm, Fri, 13 October 23