ಹೆಗ್ಗಣಗಳ ಮೇಲೆ ಪ್ರಯೋಗಿಸಿ, ಕೊರೊನಾ ವ್ಯಾಕ್ಸಿನ್​ ಕಂಡುಹಿಡಿದ ಇಸ್ರೇಲ್!

ಟೆಲ್​ ಅವೀವ್: ಕೊರೊನಾ ಕ್ರಿಮಿ ತನ್ನ ಅಟ್ಟಹಾಸ ಮೆರೆಯುತ್ತಿದ್ದರೆ, ಪುಟ್ಟ ಆದ್ರೆ ಬಲಿಷ್ಠ ರಾಷ್ಟ್ರವಾದ ಇಸ್ರೇಲ್​ ಮಹತ್ವದ ಸಾಧನೆ ಮಾಡಿದೆ. ಕೊವಿಡ್ 19 ವೈರಸ್​ಗೆ ಆಂಟಿಬಾಡಿ ಕಂಡುಹಿಡಿಯುವ ಹಾದಿಯಲ್ಲಿ ಒಂದು ಹಂತವನ್ನು ಯಶಸ್ವಿಯಾಗಿ ದಾಟಿದೆ. ಈ ಕುರಿತು ಮಹತ್ವದ ಸುಳಿವು ನೀಡಿರುವ ಇಸ್ರೇಲ್​ನ ರಕ್ಷಣಾ ಸಚಿವ ನಫ್ತಾಲಿ ಬೆನೆಟ್, ಕೊರೊನಾ ವೈರಸ್​ ಮಟ್ಟ ಹಾಕಲು ವ್ಯಾಕ್ಸಿನ್​ ಸಿದ್ಧಪಡಿಸುವಲ್ಲಿ ನಮ್ಮ ಜೈವಿಕ ಸಂಶೋಧನಾ ಪ್ರಯೋಗಾಲಯದಲ್ಲಿ (IIBR) ಮಹತ್ವದ ಸಾಧನೆ ಮಾಡಲಾಗಿದೆ. IIBR ಲ್ಯಾಬ್​ಗಳಲ್ಲಿ ಅಭಿವೃದ್ಧಿಪಡಿಸಲಾಗಿರುವ ವ್ಯಾಕ್ಸಿನ್​ಅನ್ನು ಸದ್ಯದಲ್ಲೇ ಕೊರೊನಾ […]

ಹೆಗ್ಗಣಗಳ ಮೇಲೆ ಪ್ರಯೋಗಿಸಿ, ಕೊರೊನಾ ವ್ಯಾಕ್ಸಿನ್​ ಕಂಡುಹಿಡಿದ ಇಸ್ರೇಲ್!
ಸಾಧು ಶ್ರೀನಾಥ್​

Updated on: May 05, 2020 | 2:04 PM

ಟೆಲ್​ ಅವೀವ್: ಕೊರೊನಾ ಕ್ರಿಮಿ ತನ್ನ ಅಟ್ಟಹಾಸ ಮೆರೆಯುತ್ತಿದ್ದರೆ, ಪುಟ್ಟ ಆದ್ರೆ ಬಲಿಷ್ಠ ರಾಷ್ಟ್ರವಾದ ಇಸ್ರೇಲ್​ ಮಹತ್ವದ ಸಾಧನೆ ಮಾಡಿದೆ. ಕೊವಿಡ್ 19 ವೈರಸ್​ಗೆ ಆಂಟಿಬಾಡಿ ಕಂಡುಹಿಡಿಯುವ ಹಾದಿಯಲ್ಲಿ ಒಂದು ಹಂತವನ್ನು ಯಶಸ್ವಿಯಾಗಿ ದಾಟಿದೆ.

ಈ ಕುರಿತು ಮಹತ್ವದ ಸುಳಿವು ನೀಡಿರುವ ಇಸ್ರೇಲ್​ನ ರಕ್ಷಣಾ ಸಚಿವ ನಫ್ತಾಲಿ ಬೆನೆಟ್, ಕೊರೊನಾ ವೈರಸ್​ ಮಟ್ಟ ಹಾಕಲು ವ್ಯಾಕ್ಸಿನ್​ ಸಿದ್ಧಪಡಿಸುವಲ್ಲಿ ನಮ್ಮ ಜೈವಿಕ ಸಂಶೋಧನಾ ಪ್ರಯೋಗಾಲಯದಲ್ಲಿ (IIBR) ಮಹತ್ವದ ಸಾಧನೆ ಮಾಡಲಾಗಿದೆ. IIBR ಲ್ಯಾಬ್​ಗಳಲ್ಲಿ ಅಭಿವೃದ್ಧಿಪಡಿಸಲಾಗಿರುವ ವ್ಯಾಕ್ಸಿನ್​ಅನ್ನು ಸದ್ಯದಲ್ಲೇ ಕೊರೊನಾ ಸೋಂಕು ಪೀಡಿತ ವ್ಯಕ್ತಿ ಮೇಲೆ ಪ್ರಯೋಗಿಸಲಾಗುವುದು. ಅದರಲ್ಲಿಯೂ ಯಶಸ್ಸು ಸಾಧಿಸಿದ ಬಳಿಕ ಅದನ್ನು ವಾಣಿಜ್ಯಿಕವಾಗಿ ಅಭಿವೃದ್ಧಿಪಡಿಸುವ ಬಗ್ಗೆ ರಕ್ಷಣಾ ಸಚಿವಾಲಯ ಕ್ರಮ ಕೈಗೊಳ್ಳಲಿದೆ ಎಂದು ಸಚಿವ ನಫ್ತಾಲಿ ಬೆನೆಟ್ ತಿಳಿಸಿದ್ದಾರೆ.

ಕೊರೊನಾ ಸೋಂಕಿಗೆ ವ್ಯಾಕ್ಸಿನ್​ ಸಿದ್ಧಪಡಿಸುವ ಮೂಲಕ ಹೊಸಹೊಸ ಸಂಶೋಧನೆಗಳಿಗೆ ಹಪಹಪಿಸುವ ಯಹೂದಿಗಳು ಮತ್ತೊಮ್ಮೆ ಜಗತ್ತಿಗೆ ತಮ್ಮ ಶಕ್ತಿಯನ್ನು ತೋರಿಸಲಿದ್ದಾರೆ ಎಂದು ಅವರು ಹೆಮ್ಮೆಪಟ್ಟಿದ್ದಾರೆ. ಅಂದಹಾಗೆ, IIBR ಸಂಶೋಧಕರು ಮೊದಲು ಹೆಗ್ಗಣಗಳ ಮೇಲೆ ಕೊರೊನಾ ವ್ಯಾಕ್ಸಿನ್​ ಅನ್ನ ಪ್ರಯೋಗಿಸಿ, ಯಶಸ್ಸು ಕಂಡಿದ್ದಾರೆ.

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us