“ಸ್ಪಾಂಜ್ ಬಾಂಬ್ಸ್” ಪ್ರಯೋಗಕ್ಕೆ ಮುಂದಾದ ಇಸ್ರೇಲ್​​​, ಹಮಾಸ್ ಸುರಂಗಗಳ ನಾಶಕ್ಕೆ ಹೊಸ ಪ್ಲಾನ್​ ​​

|

Updated on: Oct 28, 2023 | 10:37 AM

ಇಸ್ರೇಲ್,​​ ಹಮಾಸ್​​ ಹುಟ್ಟಡಗಿಸಲು ಮತ್ತೆ ದಾಳಿ ಮಾಡಲು ಮುಂದಾಗಿದೆ. ಇದೀಗ ಇಸ್ರೇಲ್​​, ಹಮಾಸ್​​​ ನಿರ್ಮಾಣ ಮಾಡಿದ ಸುರಂಗಗಳನ್ನು ಧ್ವಂಸ ಮಾಡಲು ಮುಂದಾಗಿದೆ. ಇಸ್ರೇಲ್​​​ ಜನರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದ ಹಾಗೂ ದಾಳಿ ಮಾಡಲು ಪ್ಲಾನ್​ ಮಾಡುತ್ತಿದ್ದ ಹಮಾಸ್​​​ ಸುರಂಗವನ್ನು ಧ್ವಂಸ ಮಾಡಲು ಸಿದ್ಧವಾಗಿದೆ.

ಸ್ಪಾಂಜ್ ಬಾಂಬ್ಸ್ ಪ್ರಯೋಗಕ್ಕೆ ಮುಂದಾದ ಇಸ್ರೇಲ್​​​, ಹಮಾಸ್ ಸುರಂಗಗಳ ನಾಶಕ್ಕೆ ಹೊಸ ಪ್ಲಾನ್​ ​​
ಸಾಂದರ್ಭಿಕ ಚಿತ್ರ
Follow us on

ಇಸ್ರೇಲ್​​​ ಮತ್ತು ಹಮಾಸ್​​ (srael-Hamas war) ಉಗ್ರರ ನಡುವೆ ನಡೆಯುತ್ತಿರುವ ಘರ್ಷಣೆ ನೋಡಿದ್ರೆ ಇದು ಮುಗಿಯುವಂತೆ ಕಾಣುತ್ತಿಲ್ಲ. ಇಸ್ರೇಲ್​​ ಮತ್ತು ಹಮಾಸ್ ಯುದ್ಧ 21ನೇ ದಿನಕ್ಕೆ ಕಾಲಿಟ್ಟಿದೆ. ಅಕ್ಟೋಬರ್​​ 7ರಂದು ಹಮಾಸ್​​ ಉಗ್ರರು ಇಸ್ರೇಲ್​​ ಮೇಲೆ ದಾಳಿ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್​​ ಕೂಡ ಹಮಾಸ್​​ ತಾಣಗಳ ಮೇಲೆ ದಾಳಿ ಮಾಡಿದೆ. ಈ ದಾಳಿಯಲ್ಲಿ ಇಸ್ರೇಲ್ 17000 ಜನರು ಸಾವನ್ನಪ್ಪಿದ್ದಾರೆ. ಆದರೆ ಇಸ್ರೇಲ್​​ ನೀಡಿದ ಉತ್ತರ ಭೀಕರವಾಗಿತ್ತು. ಇಸ್ರೇಲ್,​ ಹಮಾಸ್​​ ಮೇಲೆ ನಡೆಸಿದ ದಾಳಿಯಲ್ಲಿ ಹಮಾಸ್ ಮತ್ತು ಪ್ಯಾಲೆಸ್ಟೀನಿಯನ್ನರು ಸೇರಿ 7000 ಜನ ಸಾವನ್ನಪ್ಪಿದ್ದಾರೆ. ಇದೀಗ ಇಸ್ರೇಲ್,​​ ಹಮಾಸ್​​ ಹುಟ್ಟಡಗಿಸಲು ಮತ್ತೆ ದಾಳಿ ಮಾಡಲು ಮುಂದಾಗಿದೆ. ಇದೀಗ ಇಸ್ರೇಲ್​​, ಹಮಾಸ್​​​ ನಿರ್ಮಾಣ ಮಾಡಿದ ಸುರಂಗಗಳನ್ನು ಧ್ವಂಸ ಮಾಡಲು ಮುಂದಾಗಿದೆ.

ಇಸ್ರೇಲ್​​​ ಜನರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದ ಹಾಗೂ ದಾಳಿ ಮಾಡಲು ಪ್ಲಾನ್​ ಮಾಡುತ್ತಿದ್ದ ಹಮಾಸ್​​​ ಸುರಂಗವನ್ನು ಧ್ವಂಸ ಮಾಡಲು ಸಿದ್ಧವಾಗಿದೆ. ಹಮಾಸ್ ವಿವಿಧ ರೀತಿಯ ಸುರಂಗಗಳನ್ನು ಹೊಂದಿದೆ ಎಂದು ವರದಿಯಾಗಿದೆ. ನೂರಾರು ಕಿಲೋಮೀಟರ್ ಉದ್ದ ಮತ್ತು 80 ಮೀಟರ್ ಆಳ ಸುರಂಗವನ್ನು ಹಮಾಸ್​​ ನಿರ್ಮಾಣ ಮಾಡಿದೆ. ಇದರ ಜತೆಗೆ ಮರುಳು ಪ್ರದೇಶದಲ್ಲಿ ಮಾಡಿದ 360 ಚದರ ಮೀಟರ್​​​ ಹಾಗೂ ಕರಾವಳಿ ಪ್ರದೇಶಗಳಲ್ಲೂ ಸುರಂಗವನ್ನು ನಿರ್ಮಾಣ ಮಾಡಲಾಗಿದೆ.

ಇದರ ಮೇಲೆ ದಾಳಿ ಮಾಡಲು ಇಸ್ರೇಲ್​​ “ಸ್ಪಾಂಜ್ ಬಾಂಬುಗಳನ್ನು” ತಯಾರಿಸಲಾಗಿದೆ. ಈ ಬಾಂಬ್​​ ವೇಗವಾಗಿ ಸಾಗಿ, ಸ್ಫೋಟಗೊಂಡು ಸುರಂಗ ಭಾಗವನ್ನು ನಾಶ ಮಾಡುತ್ತದೆ. ದಿ ಟೆಲಿಗ್ರಾಫ್‌ನಲ್ಲಿನ ವರದಿಯ ಪ್ರಕಾರ , ಇಸ್ರೇಲ್​​ ಈಗಾಗಲೇ ರಾಸಾಯನಿಕ ಗ್ರೆನೇಡ್‌ಗಳನ್ನು ಪರೀಕ್ಷಿಸುತ್ತಿದೆ. ಇನ್ನು ಇದು ಯಾವುದೇ ಸ್ಫೋಟಗಳನ್ನು ಉಂಟು ಮಾಡುವುದಿಲ್ಲ ಬದಲಾಗಿ, ಹಮಾಸ್ ಉಗ್ರರು ಇವರ ಪ್ರದೇಶವನ್ನು ಪತ್ತೆ ಮಾಡುತ್ತದೆ ಹಾಗೂ ಇದನ್ನು ಸುರಂಗ ಪ್ರವೇಶದ್ವಾರಗಳನ್ನು ಮುಚ್ಚಲು ಬಳಸಲಾಗುತ್ತದೆ.

ಇದನ್ನೂ ಓದಿ: ಇಸ್ರೇಲ್ ಕದನ: ಹಮಾಸ್ ಕುರಿತು ಉಲ್ಲೇಖಿಸದ ವಿಶ್ವಸಂಸ್ಥೆ ನಿರ್ಣಯ, ಮತದಾನದಿಂದ ದೂರವುಳಿದ ಭಾರತ

ಈ ರಾಸಾಯನಿಕ ಗ್ರೆನೇಡ್‌ಗಳನ್ನು ವಿಭಜಿಸುವ ಲೋಹದ ತಡೆಗೋಡೆ ಹೊಂದಿರುವ ರಕ್ಷಣಾತ್ಮಕ ಪ್ಲಾಸ್ಟಿಕ್ ಕಂಟೇನರ್‌ನಲ್ಲಿ ಸುತ್ತುವರಿಯಲ್ಪಟ್ಟಿವೆ. ಇಸ್ರೇಲ್​​ ಸೇನೆ 2021ರಲ್ಲಿ ಇಂತಹ ತಂತ್ರಗಳನ್ನು ಬಳಸಲು ಅಣಕು ಸುರಂಗ ವ್ಯವಸ್ಥೆಗಳನ್ನು ಮಾಡಿ, ಆ ಮೂಲಕ ಇದರ ಪ್ರಯೋಗವನ್ನು ಮಾಡುತ್ತಿತ್ತು ಎಂದು ಹೇಳಿದೆ. ಇನ್ನು 1987ರಲ್ಲಿ ಗಾಜಾದಲ್ಲಿ ಹಮಾಸ್ ಸಂಘಟನೆ ಪ್ರಾರಂಭವಾಗಿತ್ತು. 1990ರ ದಶಕದ ಮಧ್ಯಭಾಗದಲ್ಲಿ ಹಮಾಸ್​​​ ಈ ಸುರಂಗಗಳನ್ನು ಅಗೆಯಲು ಪ್ರಾರಂಭಿಸಿತ್ತು ಎಂದು ಹೇಳಲಾಗಿದೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:37 am, Sat, 28 October 23