ಜಪಾನ್ ಮೇಲೆ ಕ್ಷಿಪಣಿ ಹಾರಿಸಿದ ಉತ್ತರ ಕೊರಿಯಾ; ಸುರಕ್ಷಿತ ಸ್ಥಳಕ್ಕೆ ತೆರಳಲು ಜಪಾನ್ ಜನರಿಗೆ ಪ್ರಧಾನಿ ಸೂಚನೆ

| Updated By: ಸುಷ್ಮಾ ಚಕ್ರೆ

Updated on: Oct 04, 2022 | 11:43 AM

ಉತ್ತರ ಕೊರಿಯಾ ನಮ್ಮ ದೇಶದ ಮೇಲೆ ಕ್ಷಿಪಣಿ ದಾಳಿ ನಡೆಸಿರುವ ಸೂಚನೆಗಳಿವೆ. ಹೀಗಾಗಿ, ಆದಷ್ಟು ಬೇಗ ಜನರನ್ನು ಸುರಕ್ಷಿತ ಶೆಲ್ಟರ್​ಗಳಿಗೆ ಸ್ಥಳಾಂತರಿಸಿ ಎಂದು ಜಪಾನ್ ಸರ್ಕಾರ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ಜಪಾನ್ ಮೇಲೆ ಕ್ಷಿಪಣಿ ಹಾರಿಸಿದ ಉತ್ತರ ಕೊರಿಯಾ; ಸುರಕ್ಷಿತ ಸ್ಥಳಕ್ಕೆ ತೆರಳಲು ಜಪಾನ್ ಜನರಿಗೆ ಪ್ರಧಾನಿ ಸೂಚನೆ
ಜಪಾನ್​ನಲ್ಲಿ ಕ್ಷಿಪಣಿ ದಾಳಿ
Follow us on

ಟೋಕಿಯೊ: ಜಪಾನ್ (Japan) ಮೇಲೆ ಉತ್ತರ ಕೊರಿಯಾ (North Korea) ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಹಾರಿಸಿದೆ. ಹೀಗಾಗಿ, ಆ ಪ್ರದೇಶದ ಜನರನ್ನು ಬೇರೆಡೆಗೆ ಸ್ಥಳಾಂತರಿಸಲು ಸೂಚನೆ ನೀಡಲಾಗಿದೆ. ಎಲ್ಲರೂ ಶೆಲ್ಟರ್​​ಗಳಲ್ಲಿ ಸುರಕ್ಷಿತ ಸ್ಥಳಗಳಲ್ಲಿರಲು ಜಪಾನ್ ಪ್ರಧಾನ ಮಂತ್ರಿ ತನ್ನ ದೇಶದ ನಿವಾಸಿಗಳಿಗೆ ಮನವಿ ಮಾಡಿದ್ದಾರೆ. ಉತ್ತರ ಕೊರಿಯಾ ನಮ್ಮ ದೇಶದ ಮೇಲೆ ಕ್ಷಿಪಣಿ ದಾಳಿ ನಡೆಸಿರುವ ಸೂಚನೆಗಳಿವೆ. ಹೀಗಾಗಿ, ಆದಷ್ಟು ಬೇಗ ಜನರನ್ನು ಸುರಕ್ಷಿತ ಶೆಲ್ಟರ್​ಗಳಿಗೆ ಸ್ಥಳಾಂತರಿಸಿ ಎಂದು ಜಪಾನ್ ಸರ್ಕಾರ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ಈ ಹಿನ್ನೆಲೆಯಲ್ಲಿ ಜಪಾನ್​ನ ಉತ್ತರ ಭಾಗದ 2 ಪ್ರದೇಶಗಳಲ್ಲಿ ಹೈ ಅಲರ್ಟ್​ ಘೋಷಿಸಲಾಗಿದೆ. “ಉತ್ತರ ಕೊರಿಯಾ ಕ್ಷಿಪಣಿಯನ್ನು ಉಡಾಯಿಸಿರುವಂತೆ ತೋರುತ್ತಿದೆ. ದಯವಿಟ್ಟು ಕಟ್ಟಡಗಳು ಅಥವಾ ಭೂಗತಕ್ಕೆ ಜನರನ್ನು ಸ್ಥಳಾಂತರಿಸಿ” ಎಂದು ಜಪಾನ್ ಪ್ರಧಾನಿ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: Shinzo Abe Funeral: ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಅಂತ್ಯಕ್ರಿಯೆ; ಗೆಳೆಯನಿಗೆ ಪಿಎಂ ನರೇಂದ್ರ ಮೋದಿ ಪುಷ್ಪ ನಮನ

ಇಂದು ಬೆಳಿಗ್ಗೆ 8 ಗಂಟೆಯ ಸುಮಾರಿಗೆ ಜಪಾನ್ ಪ್ರಧಾನಮಂತ್ರಿ ಕಾರ್ಯಾಲಯವು ಟ್ವೀಟ್ ಮಾಡಿದೆ. ಉತ್ತರ ಕೊರಿಯಾದ ಬ್ಯಾಲಿಸ್ಟಿಕ್ ಕ್ಷಿಪಣಿ ಜಪಾನ್ ಮೇಲೆ ಹಾರಿರುವ ಸಾಧ್ಯತೆಯಿದೆ ಕ್ಷಿಪಣಿಯು ಈಗಾಗಲೇ ಸಮುದ್ರದಲ್ಲಿ ಇಳಿದಂತೆ ತೋರುತ್ತಿದೆ. ಮೇಲಿನಿಂದ ಬೀಳುವ ಯಾವುದೇ ವಸ್ತುಗಳ ಬಳಿ ಹೋಗದಂತೆ ಹಡಗುಗಳಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಜಪಾನ್‌ನ ಕೋಸ್ಟ್‌ಗಾರ್ಡ್ ಹೇಳಿಕೆಯಲ್ಲಿ ತಿಳಿಸಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ