ಇರಾನ್​ನಲ್ಲಿ ಮಹಿಳೆಯರ ಹೋರಾಟಕ್ಕೆ ಕಟ್ಟರ್​ ಸರ್ಕಾರವೇ ಕಂಗಾಲು: ಸರ್ವೋಚ್ಛ ನಾಯಕನಿಂದ ಮೊದಲ ಬಹಿರಂಗ ಹೇಳಿಕೆ

ಇರಾನ್ ಬೂದಿ ಮುಚ್ಚಿದ ಕೆಂಡದಂತಾಗಿದೆ. ಮಹಿಳೆಯರು, ಪುರುಷಕರು, ಮಕ್ಕಳು ಬೀದಿಗಿಳಿದು ಮಹ್ಸಾ ಅಮಿನಿ ಸಾವಿಗೆ ನ್ಯಾಯ ಕೇಳುತ್ತಿದ್ದಾರೆ. ಹಾಗೂ ಪೊಲೀಸರ ದೌರ್ಕನ್ಯದ ವಿರುದ್ಧ ಹೋರಾಡುತ್ತಿದ್ದಾರೆ.

ಇರಾನ್​ನಲ್ಲಿ ಮಹಿಳೆಯರ ಹೋರಾಟಕ್ಕೆ ಕಟ್ಟರ್​  ಸರ್ಕಾರವೇ ಕಂಗಾಲು: ಸರ್ವೋಚ್ಛ ನಾಯಕನಿಂದ ಮೊದಲ ಬಹಿರಂಗ ಹೇಳಿಕೆ
ಸರ್ವೋಚ್ಛ ನಾಯಕ ಆಯಾತುಲ್ಲಾ ಅಲಿ ಖೊಖಮೇನಿ, ಮಹ್ಸಾ ಅಮಿನಿ
Follow us
TV9 Web
| Updated By: ಆಯೇಷಾ ಬಾನು

Updated on: Oct 04, 2022 | 10:33 AM

ತೆಹರಾನ್: ಷಿಯಾ ಮುಸ್ಲಿಮರೇ ಬಹುಸಂಖ್ಯಾತವಾಗಿರುವ ಇಸ್ಲಾಮಿಕ್ ದೇಶ ಇರಾನ್‌ನಲ್ಲಿ (Iran)  ಹಿಜಾಬ್ (Hijab) ವಿರೋಧದ ಪ್ರತಿಭಟನೆಯ ಕಾವು ಹೆಚ್ಚಾಗಿದೆ. ಇರಾನ್​ನ ಕುರ್ದಿಷ್‌ ಪ್ರಾಂತ್ಯದಲ್ಲಿ ಹಿಜಾಬ್‌ ಧರಿಸದಿದಕ್ಕೆ 22 ವರ್ಷದ ಮಹ್ಸಾ ಅಮಿನಿ ಎಂಬ ಯುವತಿ ಪೊಲೀಸರು ನಡೆಸಿದ ಹಲ್ಲೆಯಿಂದ ಮೃತಪಟ್ಟ ನಂತರ ಪ್ರತಿಭಟನೆ ಮತ್ತಷ್ಟು ತೀವ್ರಗೊಂಡಿತ್ತು. ದಿನದಿಂದ ದಿನಕ್ಕೆ ಹಿಜಾಬ್‌ ವಿರೋಧಿ ಹೋರಾಟ ಉಗ್ರ ಸ್ವರೂಪ ಪಡೆದುಕೊಂಡಿದೆ. ಅಲ್ಲದೆ ಹೋರಾಟಕ್ಕಿಳಿದವರ ಮೇಲೂ ಪೊಲೀಸರು ದೌರ್ಜನ್ಯ ನಡೆಸುತ್ತಿದ್ದಾರೆ. ಸದ್ಯ ಈ ಬಗ್ಗೆ ಇರಾನ್ ಸರ್ವೋಚ್ಛ ನಾಯಕ ಆಯಾತುಲ್ಲಾ ಅಲಿ ಖೊಖಮೇನಿ ಮೊದಲ ಬಾರಿಗೆ ಮೌನ ಮುರಿದಿದ್ದು ಇಸ್ರೇಲ್ ಹಾಗೂ ಅಮೆರಿಕಾದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಇರಾನ್ ಬೂದಿ ಮುಚ್ಚಿದ ಕೆಂಡದಂತಾಗಿದೆ. ಮಹಿಳೆಯರು, ಪುರುಷರು, ಮಕ್ಕಳು ಬೀದಿಗಿಳಿದು ಮಹ್ಸಾ ಅಮಿನಿ ಸಾವಿಗೆ ನ್ಯಾಯ ಕೇಳುತ್ತಿದ್ದಾರೆ. ಪೊಲೀಸರ ದೌರ್ಜನ್ಯ ವಿರುದ್ಧ ಹೋರಾಡುತ್ತಿದ್ದಾರೆ. ಮಹಿಳೆಯರು, ಮಕ್ಕಳು ರಸ್ತೆಯಲ್ಲೇ ಹಿಜಾಬ್‌ಗಳನ್ನು ಬೆಂಕಿಗೆ ಹಾಕಿ ಆಕ್ರೋಶ ಹೊರ ಹಾಕಿದ್ದಾರೆ. ನೂರಾರು ಮಂದಿ ಹೋರಾಟಗಾರರು ತಮ್ಮ ತಲೆಗೂದಲನ್ನು ಕತ್ತರಿಸಿಕೊಂಡು ಖಂಡನೆ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆಂದು ಸೇನೆ ಹಾಗೂ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಈವರೆಗೂ ಸುಮಾರು 75 ಮಂದಿ ಮೃತಪಟ್ಟಿದ್ದಾರೆ. ಪ್ರತಿಭಟನಾಕಾರರ ಮೇಲೆ ಪ್ರತಿದಿನ ಎಂಬಂತೆ ಲಾಠಿ ಚಾರ್ಚ್ ನಡೆಯುತ್ತಿದೆ. ಪೊಲೀಸರು ನಡೆಸಿದ ಹಲ್ಲೆಯಿಂದ 17 ವರ್ಷದ ನಿಕಾ ಶಕರಾಮಿ ಎಂಬ ಯುವತಿ ಮೃತಪಟ್ಟಿದ್ದಾಳೆ. ಈಕೆಯ ಮೃತ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಬಂಧನದಲ್ಲಿದ್ದಾಗಲೇ ನಿಕಾ ಶಕರಾಮಿಯ ಮೂಗು, ತಲೆ ಬುರುಡೆ ಒಡೆಯಲಾಗಿದೆ ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ.

ಅಮೆರಿಕಾ ಇಸ್ರೇಲ್ ವಿರುದ್ಧ ಗುಡುಗಿದ ಆಯಾತುಲ್ಲಾ ಅಲಿ ಖೊಮೇನಿ

ಹಿಜಾಬ್​ ಹೋರಾಟಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಮೌನ ಮುರಿದಿರುವ ಇರಾನ್​ನ ಸರ್ವೋಚ್ಛ ನಾಯಕ ಆಯಾತುಲ್ಲಾ ಅಲಿ ಖೊಮೇನಿ ಅಮೆರಿಕಾ ಮತ್ತು ಇಸ್ರೇಲ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಇರಾನ್ ಶತ್ರುಗಳಾದ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಮತ್ತು ಇಸ್ರೇಲ್ ದೇಶಗಳು ಮಾಹ್ಸಾ ಅಮಿನಿಯ ಸಾವನ್ನು ನೆಪವಾಗಿರಿಸಿಕೊಂಡು ರಾಷ್ಟ್ರವ್ಯಾಪಿ ಅಶಾಂತಿಯ ಅಲೆಯನ್ನು ಎಬ್ಬಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಅಮೆರಿಕಾ ಮತ್ತು ಝಿಯೋನಿಸ್ಟ್ ಆಡಳಿತ ಹಾಗೂ ಅವರು ಪಾವತಿಸಿದ ಏಜೆಂಟ್‌ಗಳು ಇರಾನ್​ನಲ್ಲಾಗುತ್ತಿರುವ ಗಲಭೆಗಳು ಮತ್ತು ಅಭದ್ರತೆಗೆ ಕಾರಣ ಎಂದು ನಾನು ಸ್ಪಷ್ಟವಾಗಿ ಹೇಳುತ್ತೇನೆ ಎಂದು ಆಯಾತುಲ್ಲಾ ಅಲಿ ಖೊಮೇನಿ ಆರೋಪಿಸಿದ್ದಾರೆ. ಪೊಲೀಸರೊಂದಿಗೆ ಶಸ್ತ್ರಧಾರಿ ಸ್ವಯಂಸೇವಕರ ಗುಂಪುಗಳು ಪ್ರತಿಭಟನೆ ನಿಯಂತ್ರಿಸುತ್ತಿವೆ. ಇರಾನ್​ನಲ್ಲಿ ಈವರೆಗೆ ಸಾವಿರಾರು ಜನರನ್ನು ಬಂಧಿಸಲಾಗಿದೆ ಮತ್ತು ನೂರಾರು ಜನರು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ 130ಕ್ಕಿಂತ ಹೆಚ್ಚಿದೆ ಎಂದರು.

‘ಯುವತಿಯ ಸಾವಿನ ಸುದ್ದಿ ಕೇಳಿ ನನ್ನ ಹೃದಯ ಚೂರಾಯಿತು‘ ಎಂದು ಖೊಮೇನಿ ಹೇಳಿದರು. ‘ಆದರೆ ಅದರ ನಂತರದ ಬೆಳವಣಿಗೆಗಳೂ ಸಾಮಾನ್ಯ ಸಂಗತಿಯಲ್ಲ, ಕೆಲ ಜನರು, ಪುರಾವೆ ಹುಡುಕುವ ಅಥವಾ ತನಿಖೆ ನಡೆಸುವ ಮೊದಲೇ ರಸ್ತೆಗಿಳಿದು ಕುರಾನ್ ಸುಟ್ಟುಹಾಕಿದ್ದಾರೆ. ಮಹಿಳೆಯರು ಹಿಜಾಬ್ ತೆಗೆದು ಮಸೀದಿಗಳು ಮತ್ತು ಕಾರುಗಳಿಗೆ ಬೆಂಕಿ ಹಚ್ಚಿದ್ದಾರೆ. ದೇಶದಲ್ಲಿ ಮೂಡಿರುವ ಅಶಾಂತಿಗೆ ಶತ್ರು ರಾಷ್ಟ್ರಗಳೇ ಕಾರಣ’ ಎಂದು ಸರ್ವೋಚ್ಛ ನಾಯಕ ಆಯತುಲ್ಲಾ ಅಲಿ ಖೊಮೇನಿ ಆರೋಪಿಸಿದ್ದಾರೆ.

ಹಿಜಾಬ್​ ನೆಪದಲ್ಲಿ ಆರಂಭವಾಗಿರುವ ಪ್ರತಿಭಟನೆಗಳಿಗೆ ಸ್ವತಃ ಸರ್ವೋಚ್ಛ ನಾಯಕರೇ ಬಹಿರಂಗ ಹೇಳಿಕೆ ನೀಡಿರುವುದು ಅಲ್ಲಿನ ಮಹಿಳೆಯರ ಆಕ್ರೋಶಕ್ಕೆ ಸರ್ಕಾರ ಮಣಿಯುತ್ತಿರುವುದರ ಸೂಚನೆ ಎಂದು ವಿಶ್ಲೇಷಿಸಲಾಗುತ್ತಿದೆ.

ವಿದ್ಯಾರ್ಥಿಗಳ ಮೇಲೆ ಹಲ್ಲೆ: ಅಮೆರಿಕ ಖಂಡನೆ

ತೆಹರಾನ್​ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಭದ್ರತಾ ಪಡೆಗಳು ಭಾನುವಾರ ರಾತ್ರಿ ಹಲ್ಲೆ ನಡೆಸಿದ್ದವು. ಭದ್ರತಾ ಸಿಬ್ಬಂದಿಯಿಂದ ನಡೆಯುತ್ತಿರುವ ಹಿಂಸಾಚಾರ ಮತ್ತು ಸಾಮೂಹಿಕ ಬಂಧನಗಳನ್ನು ಅಮೆರಿಕ ಖಂಡಿಸಿದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್-ಪಿಯರ್ ಹೇಳಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ