Shinzo Abe Funeral: ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಅಂತ್ಯಕ್ರಿಯೆ; ಗೆಳೆಯನಿಗೆ ಪಿಎಂ ನರೇಂದ್ರ ಮೋದಿ ಪುಷ್ಪ ನಮನ
ವಿಶ್ವದ ಹಲವಾರು ನಾಯಕರು ಶಿಂಜೋ ಅಬೆ ಅವರಿಗೆ ತಮ್ಮ ಅಂತಿಮ ನಮನವನ್ನು ಸಲ್ಲಿಸಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಕೂಡ ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ್ದಾರೆ.
ನವದೆಹಲಿ: ಜಪಾನ್‌ನ ಟೋಕಿಯೊದಲ್ಲಿ ಮಾಜಿ ಪ್ರಧಾನಿ ಶಿಂಜೋ ಅಬೆ (Japanese PM Shinzo Abe Funeral) ಅವರ ಅಂತ್ಯಕ್ರಿಯೆಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಪಾಲ್ಗೊಂಡಿದ್ದಾರೆ. ಕಳೆದ ತಿಂಗಳು ಚುನಾವಣಾ ಪ್ರಚಾರದ ವೇಳೆ ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು. ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಇಂದು ಶಿಂಜೋ ಅಬೆ ಅವರ ಅಂತ್ಯ ಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿದ್ದು, ವಿಶ್ವದ ಹಲವಾರು ನಾಯಕರು ಶಿಂಜೋ ಅಬೆ ಅವರಿಗೆ ತಮ್ಮ ಅಂತಿಮ ನಮನವನ್ನು ಸಲ್ಲಿಸಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಕೂಡ ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ್ದಾರೆ.
ಮಾಜಿ ಪ್ರಧಾನಿ ಶಿಂಜೋ ಅಬೆ ಅವರಿಗೆ ಸರ್ಕಾರ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸುವ ಸರ್ಕಾರದ ನಿರ್ಧಾರಕ್ಕೆ ಜಪಾನ್ನಲ್ಲಿ ಸಾರ್ವಜನಿಕರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಇದರಿಂದ ಭಾರೀ ವೆಚ್ಚಗಳಾಗುತ್ತವೆ ಮತ್ತು ರಾಜ್ಯ ಅಂತ್ಯಕ್ರಿಯೆಗಳು ಸಾಮ್ರಾಜ್ಯಶಾಹಿ ಕುಟುಂಬಕ್ಕೆ ಮೀಸಲಾಗಿವೆ ಎಂಬ ಆರೋಪ ಕೇಳಿಬಂದಿತ್ತು. ವಿವಾದದ ನಡುವೆಯೇ ಇಂದು ಶಿಂಜೋ ಅಬೆ ಅವರ ಅಂತ್ಯಕ್ರಿಯೆ ನೆರವೇರಿದೆ.
ಇದನ್ನೂ ಓದಿ: ಜಪಾನ್ ಮಾಜಿ ಪಿಎಂ ಶಿಂಜೋ ಅಬೆ ಅಂತ್ಯಕ್ರಿಯೆ ವಿರೋಧಿಸಿ ಪ್ರಧಾನ ಮಂತ್ರಿ ಕಚೇರಿ ಮುಂದೆ ಬೆಂಕಿ ಹಚ್ಚಿಕೊಂಡ ವ್ಯಕ್ತಿ
ಕಪ್ಪು ಕಿಮೋನೊವನ್ನು ಧರಿಸಿ, ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ಗೌರವಾರ್ಥವಾಗಿ 19 ಬಾರಿ ಗನ್ ಸೆಲ್ಯೂಟ್ ಸದ್ದು ಮಾಡುತ್ತಿದ್ದಂತೆ ಅವರ ಪತ್ನಿ ಅಕಿ ಬುಡೋಕನ್ ಆ ಸ್ಥಳಕ್ಕೆ ಅಲಂಕಾರಿಕ ಬಟ್ಟೆಯಿಂದ ಮುಚ್ಚಿದ ಪೆಟ್ಟಿಗೆಯಲ್ಲಿ ಶಿಂಜೋ ಅಬೆ ಅವರ ಚಿತಾಭಸ್ಮವನ್ನು ತೆಗೆದುಕೊಂಡು ಬಂದರು. ಮಾಜಿ ಪ್ರಧಾನಿ ಶಿಂಜೋ ಅಬೆ ಜಪಾನ್‌ನ ವಿದೇಶಾಂಗ ನೀತಿಯನ್ನು ಮರುರೂಪಿಸಿದವರು. ಅಲ್ಲದೆ, ಜಪಾನ್ ಅನ್ನು ಅತ್ಯಧಿಕ ಅವಧಿಯವರೆಗೆ ಆಳಿದ ಪ್ರಧಾನಿಯೆಂಬ ಹಿರಿಮೆಯೂ ಅವರದ್ದು.
#WATCH | Prime Minister Narendra Modi pays respect to former Japanese PM Shinzo Abe at the latter’s State funeral in Tokyo
“India is missing former Japanese PM Shinzo Abe,” said PM Modi earlier today
(Source: DD) pic.twitter.com/8psvtnEUiA
— ANI (@ANI) September 27, 2022
ಇಂದು ಮುಂಜಾನೆ ಜಪಾನ್‌ನ ಟೋಕಿಯೋ ತಲುಪಿರುವ ಪ್ರಧಾನಿ ನರೇಂದ್ರ ಮೋದಿ ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರನ್ನು ಭೇಟಿ ಮಾಡಿದರು. ಶಿಂಜೋ ಅಬೆ ಜಪಾನ್‌ನ ದೀರ್ಘಾವಧಿಯ ಪ್ರಧಾನ ಮಂತ್ರಿ ಮತ್ತು ದೇಶದ ಅತ್ಯಂತ ಪ್ರಭಾವಿ ರಾಜಕೀಯ ನಾಯಕರಾಗಿದ್ದರು.
ನಿನ್ನೆ ಟ್ವೀಟ್ ಮಾಡಿದ್ದ ಪ್ರಧಾನಿ ಮೋದಿ, “ಆತ್ಮೀಯ ಸ್ನೇಹಿತ ಮತ್ತು ಭಾರತ-ಜಪಾನ್ ಸ್ನೇಹದ ಶ್ರೇಷ್ಠ ಚಾಂಪಿಯನ್ ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಲು ನಾನು ಇಂದು ರಾತ್ರಿ ಟೋಕಿಯೊಗೆ ಪ್ರಯಾಣಿಸುತ್ತಿದ್ದೇನೆ. ಎಲ್ಲಾ ಭಾರತೀಯರ ಪರವಾಗಿ ಸಂತಾಪ ಸೂಚಿಸಲು ಜಪಾನ್ ಪ್ರಧಾನಿ ಕಿಶಿದಾ ಮತ್ತು ಶ್ರೀಮತಿ ಅಬೆ ಅವರನ್ನು ಭೇಟಿ ಮಾಡಲಿದ್ದೇನೆ” ಎಂದಿದ್ದರು.
PM @narendramodi offering floral tributes. pic.twitter.com/84wgVE5UaI
— Arindam Bagchi (@MEAIndia) September 27, 2022
ಜಪಾನ್ ಪ್ರಧಾನಿಯಾಗಿ ಸುದೀರ್ಘ ಅವಧಿಗೆ ಸೇವೆ ಸಲ್ಲಿಸಿದ ಪ್ರಧಾನಿ ಶಿಂಜೋ ಅಬೆ ಅವರನ್ನು ಜುಲೈ 8ರಂದು ದೇಶದ ಪಶ್ಚಿಮ ಪ್ರದೇಶದಲ್ಲಿ ಚುನಾವಣಾ ಪ್ರಚಾರದ ವೇಳೆ ದುಷ್ಕರ್ಮಿಯೊಬ್ಬ ಗುಂಡಿಕ್ಕಿ ಹತ್ಯೆಗೈದಿದ್ದ. 55 ವರ್ಷಗಳಲ್ಲಿ ಮಾಜಿ ಪ್ರಧಾನಿಯೊಬ್ಬರಿಗೆ ಜಪಾನ್ನಲ್ಲಿ ಮೊದಲ ಬಾರಿ ರಾಜ್ಯ ಅಂತ್ಯಕ್ರಿಯೆ ನಡೆಸಲಾಯಿತು. ಹತ್ಯೆಗೀಡಾದ ಮಾಜಿ ಪ್ರಧಾನಿ ಶಿಂಜೊ ಅಬೆ ಅವರನ್ನು ಹೂವುಗಳು, ಪ್ರಾರ್ಥನೆಗಳು ಮತ್ತು 19 ಗನ್ ಸೆಲ್ಯೂಟ್‌ನೊಂದಿಗೆ ಗೌರವಿಸಲಾಯಿತು. ಈ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್, ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.