ಬ್ರೆಜಿಲ್ ಸಾವೋ ಪಾಲೋನಲ್ಲಿ ವಾಮಾಚಾರದ ಭಾಗವಾಗಿ 7-ತಿಂಗಳು ಗರ್ಭಿಣಿಯ ಹೊಟ್ಟೆ ಬಗೆದು ಕೊಲೆ ಮಾಡಲಾಗಿದೆ!
ಮೂರು ಮಕ್ಕಳ ತಾಯಿಯಾಗಿದ್ದ ಕೆರೊಲೀನ್ ಳನ್ನು ಯಾವುದೋ ವಿಕೃತ, ವಿಲಕ್ಷಣ, ಅಮಾನವೀಯ ಮತ್ತು ಭೀಕರ ಸಂಪ್ರದಾಯದ ಭಾಗವಾಗಿ ಹಲ್ಲೆ ನಡೆಸಿ ಕೊಲ್ಲಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ವಿಲಕ್ಷಣ ಸಂಪ್ರದಾಯಗಳು, ವಾಮಾಚಾರ, ಮೂಢನಂಬಿಕೆಗಳು ಎಲ್ಲ ದೇಶಗಳಲ್ಲಿ ಇವೆ ಅನಿಸುತ್ತೆ. ಇದನ್ನು ಯಾಕೆ ಹೇಳಬೇಕಾಗಿದೆಯೆಂದರೆ, ಬ್ರೆಜಿಲ್ ಸಾವೋ ಪಾಲೋನಲ್ಲಿರುವ (Sao Paulo) ಮೋಗಿ ಗಾಕು ಎಂಬಲ್ಲಿ ಒಂದು ಕ್ರೂರ ಮತ್ತು ಭಯಾನಕ ಸಂಪ್ರದಾಯದ (ritual) ಭಾಗವಾಗಿ, 7-ತಿಂಗಳು ಗರ್ಭಿಣಿಯಾಗಿದ್ದ ಮಹಿಳೆಯೊಬ್ಬಳ ಹೊಟ್ಟೆ ಬಗೆದು ಭೀಕರವಾಗಿ ಕೊಲೆ ಮಾಡಲಾಗಿದೆ. ಮೈತುಂಬಾ ಗಾಯಗಳಿದ್ದ 24-ವರ್ಷ ವಯಸ್ಸಿನ ಒಹಾನಾ ಕೆರೊಲೀನ್ (Ohana Karoline) ಹೆಸರಿನ ಮಹಿಳೆಯ ದೇಹ ಸೆಪ್ಟೆಂಬರ್ 21 ರಂದು ಪೊಲೀಸರಿಗೆ ಸಿಕ್ಕಿದೆ.
ಅವಳ ದೇಹವನ್ನು ನೋಡಿದ ದಾರಿಹೋಕರು ಪೌರ ಸೇವೆಗಳ ಕಚೇರಿಗೆ ಮಾಹಿತಿ ನೀಡಿದ್ದಾರೆ. ಆದರೆ ಸಿವಿಲ್ ಗಾರ್ಡ್ಸ್ ಅಲ್ಲಿಗೆ ಬಂದಾಗ ಅದಾಗಲೇ ಮೂರು ಮಕ್ಕಳ ತಾಯಿಯಾಗಿದ್ದ ಕೆರೊಲೀನ್ ಸತ್ತು ಬಹಳ ಸಮಯ ಕಳೆದಿತ್ತು.
ದೇಹ ಪತ್ತೆಯಾದಾಗ ಕೆರೊಲೀನ್ ಒಂದು ಟಿ-ಶರ್ಟ್ ಮತ್ತು ಫ್ಲಿಪ್-ಫ್ಲಾಪ್ ಧರಿಸಿದ್ದಳು. ಅವಳ ಮೃತ ದೇಹದ ಸುತ್ತ ನೂರಾರು ನಾಣ್ಯಗಳು ಬಿದ್ದಿದ್ದವು.
ಸ್ಥಳೀಯ ಮಾಧ್ಯಮಗಳ ಪ್ರಕಾರ ಅವಳ ಹೊಟ್ಟೆಯನ್ನು ಬಗೆದು ಒಳಗಿದ್ದ ಭ್ರೂಣವನ್ನು ಹೊರಗೆಳೆಯಲಾಗಿದೆ. ಭ್ರೂಣದ ಸ್ಥಿತಿಯ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಮೂರು ಮಕ್ಕಳ ತಾಯಿಯಾಗಿದ್ದ ಕೆರೊಲೀನ್ ಳನ್ನು ಯಾವುದೋ ವಿಕೃತ, ವಿಲಕ್ಷಣ, ಅಮಾನವೀಯ ಮತ್ತು ಭೀಕರ ಸಂಪ್ರದಾಯದ ಭಾಗವಾಗಿ ಹಲ್ಲೆ ನಡೆಸಿ ಕೊಲ್ಲಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ ಪ್ರಕರಣವನ್ನು ಪ್ರತಿಯೊಂದು ಆಯಾಮದ ಹಿನ್ನೆಲೆಯಲ್ಲಿ ತನಿಖೆ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ದೇಹ ಪತ್ತೆಯಾದ ಕೂಡಲೇ ಪೊಲೀಸರು ಅವಳ ಮಾಜಿ ಪತಿಯನ್ನು ಸ್ಥಳಕ್ಕೆ ಕರೆಸಿ ದೇಹವನ್ನು ಗುರುತು ಹಚ್ಚುವುದಕ್ಕೆ ಕರೆಸಿದ್ದಾರೆ.
ಏತನ್ಮಧ್ಯೆ, ಅವಳ ಸ್ನೇಹಿತನೊಬ್ಬ ಪೊಲೀಸರಿಗೆ ಹೇಳಿಕೆ ನೀಡಿ ಕೊಲೆ ನಡೆದ ದಿನ ಮಧ್ಯರಾತ್ರಿಯಲ್ಲಿ ಕಪ್ಪು ಬಣ್ಣದ ಕಾರೊಂದರಲ್ಲಿ ಕೆರೊಲೀನ್ ಳನ್ನು ನೋಡಿದ್ದಾಗಿ ಹೇಳಿದ್ದಾನೆ.
ಆದೇ ದಿನ ಬೆಳಗಿನ ಜಾವ 3 ಗಂಟೆಗೆ ಕಪ್ಪುಬಣ್ಣದ ಕಾರಲ್ಲಿ ನೋಡಿರುವುದಾಗಿ ಬೇರೆ ಸಾಕ್ಷಿಗಳು ಸಹ ಹೇಳಿದ್ದಾರೆ.
ಪೊಲೀಸರು ಘಟನೆಗೆ ಸಂಬಂಧಿಸಿದಂತೆ ತನಿಖೆ ಆರಂಭಿಸಿದ್ದಾರೆ ಮತ್ತು ಲೀಗಲ್ ಮೆಡಿಕಲ್ ಇನ್ ಸ್ಟಿಟ್ಯೂಟ್ ಹಾಗೂ ಇನ್ ಸ್ಟಿಟ್ಯೂಟ್ ಆಫ್ ಕ್ರಿಮಿನಾಲಿಸ್ಟಿಕ್ಸ್ ಗಳಿಂದ ವಿಶ್ಲೇಷಣಾ ವರದಿಗಳಿಗಾಗಿ ಕಾಯುತ್ತಿದ್ದಾರೆ.
ಕಳೆದ ಶುಕ್ರವಾರದಂದು ಅಮೆರಿಕಾದಲ್ಲಿ ನಡೆದ ಮತ್ತೊಂದು ಪ್ರಕರಣವೊಂದರಲ್ಲಿ ಪೂರ್ಣ ಗರ್ಭಿಣಿಯಾಗಿದ್ದ ಮಹಿಳೆಯೊಬ್ಬಳನ್ನು ಅವಳ ಸೀಮಂತದ ಒಂದು ದಿನ ಮೊದಲು ಗುಂಡಿಟ್ಟು ಕೊಂದ ಪ್ರಕರಣ ವರದಿಯಾಗಿದೆ.
ಎಂಟು ತಿಂಗಳು ಗರ್ಭಿಣಿಯಾಗಿದ್ದ ಜೆನ್ನಿಫರ್ ಹರ್ನಾಂಡೆಜ್ ಹೆಸರಿನ 20-ವರ್ಷದ ಮಹಿಳೆಯ ದೇಹ ಟೆಕ್ಸಾಸ್ ನ ನಾರ್ಥ್ ಹ್ಯಾರಿಸ್ ಕೌಂಟಿಯಲ್ಲಿ ಸಿಕ್ಕಿದೆ.
ಆಕೆ ಶಂಕಿತ ರೋಡ್-ರೇಜ್ ಗೆ ಬಲಿಯಾಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಹಂತಕರು ಅವಳು ಪ್ರಯಾಣಿಸಿತ್ತಿದ್ದ ಮಾಡುತ್ತಿದ್ದ ಕಾರಿನ ಮೇಲೆ ಗುಂಡಿನ ಸುರಿಮಳೆಗೈದು ಜೆನ್ನಿಫರ್ ಮತ್ತು ಅವಳ ಗರ್ಭದಲ್ಲಿದ್ದ ಮಗುವನ್ನು ಕೊಂದಿದ್ದಾರೆ.
ಸ್ಥಳೀಯ ಮಾಧ್ಯಮಗಳ ಪ್ರಕಾರ ಜೆನ್ನಿಫರ್ ಗಂಡುಮಗುವಿನ ತಾಯಿಯಾಗಲಿದ್ದಳು. ಹ್ಯಾರಿಸ್ ಕೌಂಟಿ ಶರೀಫ್ ಕಚೇರಿ ನೀಡಿರುವ ಮಾಹಿತಿಯಂತೆ ಅವಳ ದೇಹ ಕಾರಿನ ಪ್ಯಾಸೆಂಜರ್ ಸೀಟಿನಲ್ಲಿ ಪತ್ತೆಯಾಗಿದೆ.
ಅವಳ 17-ವರ್ಷದ ಬಾಯ್ ಫ್ರೆಂಡ್ ಮೇಲೂ ಎರಡು ಸಲ ಫೈರ್ ಮಾಡಲಾಗಿದೆ, ಅದರೆ ಅವನು ಬದುಕುಳಿದಿದ್ದಾನೆ.
ಜೆನ್ನಿಫರ್ ಗಾಗಿ ಅರಂಭಿಸಲಾಗಿರುವ GoFundMe ಪೇಜ್ ನಲ್ಲಿ ‘ಜೆನ್ನಿಫರ್ ಸಾವು ನಮ್ಮನ್ನು ದಿಗ್ಮೂಢರನ್ನಾಗಿಸಿದೆ,’ ಅಂತ ಬರೆಯಲಾಗಿದೆ.
‘ನಾನಾ (ಜೆನ್ನಿಫರ್) ಒಬ್ಬ ಅದ್ಭುತವಾದ ತಾಯಿ, ಅದ್ಭುತವಾದ ಸಹೋದರಿ ಆಗಿದ್ದಳು ಮತ್ತು ನಿಸ್ಸಂದೇಹವಾಗಿ ಒಬ್ಬ ಅದ್ಭುತವಾದ ತಾಯಿಯೆನಿಸಿಕೊಳ್ಳುತ್ತಿದ್ದಳು.’