ನಾಯಿಯಂತೆ ಕಾಣಲು ಬರೋಬ್ಬರಿ 12 ಲಕ್ಷ ರೂ. ಖರ್ಚು ಮಾಡಿದ್ದ ಜಪಾನ್(Japan) ವ್ಯಕ್ತಿಗೆ ಈಗ ಪಾಂಡ ಅಥವಾ ಬೆಕ್ಕಾಗುವ ಆಸೆಯಂತೆ. ಸಾಕು ಪ್ರಾಣಿಗಳೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ, ಮನುಷ್ಯರಿಗಿಂತಲೂ ಪ್ರಾಣಿಗಳನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಾರೆ, ತಮ್ಮ ಮುದ್ದು ಪ್ರಾಣಿಗಳಿಗಾಗಿ ಜನ ಏನೆಲ್ಲಾ ಮಾಡುತ್ತಾರೆ ಎಂದು ನಾವು ಸಾಕಷ್ಟು ನಿದರ್ಶನಗಳನ್ನು ನೋಡಿದ್ದೇವೆ. ಅವುಗಳ ಆಹಾರ ನಿರ್ವಹಣೆಗಾಗಿಯೇ ಜನ ಲಕ್ಷಾಂತರ ರೂ ವ್ಯಯಿಸುವ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿದೆ.
ಆದರೆ ಈ ವ್ಯಕ್ತಿ ಖುದ್ದಾಗಿ ನಾಯಿಯಂತೆ ಕಾಣಲು 12 ಲಕ್ಷ ರೂ. ವ್ಯಯಿಸಿದ್ದರು. ಟೊಕೊ ಎಂಬಾತನ ಈ ನಾಯಿ ಕಾಸ್ಟ್ಯೂಮ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು.
ಟೊಕೊ ಯಾವಾಗಲೂ ಒಂದೇ ರೀತಿಯ ಬಟ್ಟೆಗಳನ್ನು ಧರಿಸುತ್ತಾರೆ. ಈ ಬಟ್ಟೆಗಳಲ್ಲಿ ಈ ಮನುಷ್ಯ ಸೇಮ್ ನಾಯಿಯಂತೆ ಕಾಣುತ್ತಾರೆ. ಇವರನ್ನು ನೋಡಿದರೆ ನಾಯಿಯಲ್ಲ ಮನುಷ್ಯ ಎಂದು ಯಾರೂ ನಂಬಲು ಸಾಧ್ಯವಾಗುವುದಿಲ್ಲ. ಅಷ್ಟರ ಮಟ್ಟಿಗೆ ಈ ನಾಯಿ ಕಾಸ್ಟ್ಯೂಮ್ ನೈಜವಾಗಿದೆ.
ಮತ್ತಷ್ಟು ಓದಿ: ‘ನಾಯಿಯಂತೆ ಕಾಣಲು ನಾನು ರೂ. 12 ಲಕ್ಷ ಖರ್ಚು ಮಾಡಿದ್ದೆ’ ವರ್ಷದ ಹಿಂದಿನ ರಹಸ್ಯ ಬಿಚ್ಚಿಟ್ಟ ವ್ಯಕ್ತಿ
ಟೊಕೊ ಪ್ರಕಾರ, ಅವರು ಬಾಲ್ಯದಿಂದಲೂ ಪ್ರಾಣಿಗಳಂತೆ ಬದುಕಲು ಬಯಸಿದ್ದರು. ಇವರಿಗೆ ನಾಯಿಗಳ ಮೇಲೆ ವಿಶೇಷ ಪ್ರೀತಿ ಇತ್ತು. ಹಾಗಾಗಿ ನಾವು ನಾಯಿಗಳಂತೆ ಬದುಕಬೇಕೆಂದು ಅವರು ಬಯಸಿದ್ದರು.
ಇದೀಗ ಅವರಿಗೆ ಪಾಂಡ ಆಗಬೇಕೆಂದೆನಿಸುತ್ತಿದೆಯಂತೆ, ಹಾಗಾಗಿ ಅವರು ಆದಷ್ಟು ಬೇಗ ಬೆಕ್ಕು ಅಥವಾ ಪಾಂಡಾ ರೀತಿ ಕಾಸ್ಟ್ಯೂಮ್ ಸಿದ್ಧಪಡಿಸಲಿದ್ದಾರೆ.
ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ, ವ್ಯಕ್ತಿ ನಾಯಿಯಂತೆ ನಡೆಯುವ ಹಲವಾರು ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾನೆ. ಸಾವಿರಾರು ವೀಕ್ಷಣೆಗಳನ್ನು ಗಳಿಸಿರುವ ಈ ವೀಡಿಯೊಗಳಲ್ಲಿ, ಈ ಟೊಕೋ ನಾಯಿ ಧಿರಿಸು ಧರಿಸಿ ಹುಲ್ಲುಹಾಸಿನ ಮೇಲೆ ಕುಣಿದು ಕುಪ್ಪಳಿಸುವುದು, ನೆಲದ ಮೇಲೆ ಉರುಳಾಡುವುದು ಮತ್ತು ನಾಯಿಯಂತೆ ಆಟವಾಡುವುದನ್ನು ನೋಡಬಹುದಾಗಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ