AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂತರಿಕ್ಷಕ್ಕೆ ಹಾರಲಿದ್ದಾರೆ ಅಮೆಜಾನ್​ ಸಂಸ್ಥಾಪಕ ಜೆಫ್ ಬೆಜೋಸ್; ಇಂದು ಸಂಜೆ ನೇರಪ್ರಸಾರ ವೀಕ್ಷಿಸಲು ಮರೆಯದಿರಿ

Jeff Bezos's Blue origin Space flight: ಈ ಅಂತರಿಕ್ಷ ಯಾನದ ನೇರಪ್ರಸಾರ ವೀಕ್ಷಣೆಗೆ ಬ್ಲೂ ಒರಿಜಿನ್ ಸಂಸ್ಥೆ ವ್ಯವಸ್ಥೆ ಮಾಡಿದ್ದು, BlueOrigin.com ವೆಬ್​ಸೈಟ್ ಹಾಗೂ ಸಂಸ್ಥೆಯ ಟ್ವಿಟರ್, ಫೇಸ್​ಬುಕ್, ಯೂಟ್ಯೂಬ್ ಚಾನೆಲ್​ಗಳಲ್ಲಿ ಇದನ್ನು ವೀಕ್ಷಿಸಬಹುದಾಗಿದೆ.

ಅಂತರಿಕ್ಷಕ್ಕೆ ಹಾರಲಿದ್ದಾರೆ ಅಮೆಜಾನ್​ ಸಂಸ್ಥಾಪಕ ಜೆಫ್ ಬೆಜೋಸ್; ಇಂದು ಸಂಜೆ ನೇರಪ್ರಸಾರ ವೀಕ್ಷಿಸಲು ಮರೆಯದಿರಿ
Jeff Bezos
TV9 Web
| Edited By: |

Updated on: Jul 20, 2021 | 12:33 PM

Share

ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಹೊಸದೊಂದು ಸಾಹಸಕ್ಕೆ ಕೈ ಹಾಕಿದ್ದು, ತಾವು ಹುಟ್ಟುಹಾಕಿರುವ ಬ್ಲೂ ಒರಿಜಿನ್ ಸಂಸ್ಥೆಯ ಸಬ್​ ಆರ್ಬಿಟಲ್ ಬಾಹ್ಯಾಕಾಶ ರಾಕೆಟ್ ನ್ಯೂ ಶೆಫರ್ಡ್ ಮೂಲಕ ಇಂದು ಅಂತರಿಕ್ಷಕ್ಕೆ ಜಿಗಿಯುತ್ತಿದ್ದಾರೆ. ಜೆಫ್ ಬೆಜೋಸ್ ಜತೆ ಅವರ ಸಹೋದರ ಮಾರ್ಕ್​ ಬೆಜೋಸ್​ ಹಾಗೂ ಇತರ ಇಬ್ಬರು ಗಗನ ಯಾತ್ರಿಗಳು ಈ ನೌಕೆಯನ್ನೇರಲಿದ್ದು ಇಡೀ ವಿಶ್ವದ ಗಮನ ಸೆಳೆದಿದ್ದಾರೆ. ನಾನು ಐದು ವರ್ಷದ ಬಾಲಕನಾಗಿದ್ದಾಗಿಂದಲೂ ಅಂತರಿಕ್ಷಕ್ಕೆ ಜಿಗಿಯುವ ಕನಸು ಹೊತ್ತುಕೊಂಡಿದ್ದೆ. ಅಂತಿಮವಾಗಿ ಅದು ಈಡೇರುವ ಸಮಯ ಬಂದಿದ್ದು ನನ್ನ ಸಹೋದರನ ಜತೆ ಆಕಾಶಕ್ಕೆ ಹಾರಲಿದ್ದೇನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಂತಸ ಹಂಚಿಕೊಂಡಿದ್ದಾರೆ.

ಜೆಫ್ ಬೆಜೋಸ್, ಮಾರ್ಕ್​ ಬೆಜೋಸ್ ಅವರೊಟ್ಟಿಗೆ ವ್ಯಾಲಿ ಫಂಕ್ ಹಾಗೂ ಆಲಿವರ್ ಡೇಮನ್​ ಎಂಬ ಇನ್ನಿಬ್ಬರು ಸಾಥ್ ನೀಡುತ್ತಿದ್ದು, ಬ್ಲೂ ಒರಿಜಿನ್​ ತಯಾರಿಸಿದ ಮೊಟ್ಟ ಮೊದಲ ಮಾನವ ಚಾಲಿತ ವಿಮಾನ ಎಂಬ ಕೀರ್ತಿಯನ್ನು ಇದು ಹೊತ್ತುಕೊಂಡಿದೆ. ಇದು 60 ಅಡಿ ಎತ್ತರದ ಬೂಸ್ಟರ್‌ ಹಾಗೂ ಆರು ಮಂದಿ ಕೂರಬಹುದಾದ ಕ್ಯಾಪ್ಸೂಲ್‌ ಅನ್ನು ಒಳಗೊಂಡಿದ್ದು, ಭೂಮಿಯಿಂದ 76 ಕಿಲೋ ಮೀಟರ್ ಎತ್ತರಕ್ಕೇರಿದ ನಂತರ ಬೂಸ್ಟರ್‌ ಮತ್ತು ಕ್ಯಾಪ್ಸೂಲ್‌ ಬೇರ್ಪಡಲಿವೆ. ಈ ವೇಳೆ ಬೂಸ್ಟರ್‌ ನಿಗದಿತ ಸ್ಥಳದಲ್ಲಿ ಇಳಿದರೆ ಕ್ಯಾಪ್ಸೂಲ್‌ 100 ಕಿಲೋ ಮೀಟರ್ ಎತ್ತರಕ್ಕೆ ಹೋದ ಬಳಿಕ ಭೂಮಿಯತ್ತ ಮುಖ ಮಾಡಲಿದೆ.

ಈ ಕ್ಯಾಪ್ಸೂಲ್ ಸುಮಾರು 3 ನಿಮಿಷಗಳ ಕಾಲ ಅಂತರಿಕ್ಷದಲ್ಲಿ ತೇಲಲಿದ್ದು ಅಷ್ಟು ಹೊತ್ತು ಒಳಗಿದ್ದವರು ಶೂನ್ಯ ಗುರುತ್ವಾಕರ್ಷಣೆಯ ಅನುಭವ ಪಡೆಯಲಿದ್ದಾರೆ. ನಂತರ ಕ್ಯಾಪ್ಸೂಲ್‌ ಭೂಮಿಗೆ ಇಳಿಯಲಿದ್ದು, ಏರ್‌ ಬ್ಯಾಗ್‌ ಸಹಾಯದಿಂದ ಹಿಂದಿರುಗಲಿದೆ. ಕ್ಯಾಪ್ಸೂಲ್‌ ಗಂಟೆಗೆ 1.6 ಕಿಲೋ ಮೀಟರ್ ವೇಗದಲ್ಲಿ ಭೂಮಿಯತ್ತ ಧಾವಿಸಲಿದ್ದು, 26 ಕಿಲೋ ಮೀಟರ್ ದೂರದಲ್ಲಿದ್ದಾಗಲೇ ಪ್ಯಾರಾಚ್ಯೂಟ್‌ ತೆರೆದುಕೊಳ್ಳುವಂತೆ ವ್ಯವಸ್ಥೆ ರೂಪಿಸಲಾಗಿದೆ.

ಈ ಅಂತರಿಕ್ಷ ಯಾನದ ನೇರಪ್ರಸಾರ ವೀಕ್ಷಣೆಗೆ ಬ್ಲೂ ಒರಿಜಿನ್ ಸಂಸ್ಥೆ ವ್ಯವಸ್ಥೆ ಮಾಡಿದ್ದು, BlueOrigin.com ವೆಬ್​ಸೈಟ್ ಹಾಗೂ ಸಂಸ್ಥೆಯ ಟ್ವಿಟರ್, ಫೇಸ್​ಬುಕ್, ಯೂಟ್ಯೂಬ್ ಚಾನೆಲ್​ಗಳಲ್ಲಿ ಇದನ್ನು ವೀಕ್ಷಿಸಬಹುದಾಗಿದೆ. ಭಾರತೀಯ ಕಾಲಮಾನದಲ್ಲಿ ಇಂದು (ಜುಲೈ 20) ಸಂಜೆ 5 ಗಂಟೆಗೆ ಇದರ ನೇರಪ್ರಸಾರ ವೀಕ್ಷಣೆ ಸಾಧ್ಯವಿದ್ದು, ಆಸಕ್ತರಿಗೆ ಇದೊಂದು ಉತ್ತಮ ಅವಕಾಶವಾಗಿದೆ.

ಪ್ರಯಾಣ ಹೇಗಿರಲಿದೆ? ವಿವಿಧ ಹಂತಗಳನ್ನೊಳಗೊಂಡ ಈ ಪ್ರಯಾಣದಲ್ಲಿ ಕ್ಯಾಪ್ಸೂಲ್‌ ಹಾಗೂ ಬೂಸ್ಟರ್​ ಮೊದಲು ರಾಕೆಟ್‌ ರೀತಿ ನೇರವಾಗಿ ಗಗನಕ್ಕೆ ಚಿಮ್ಮಲಿವೆ. ಭೂಮಿಯಿಂದ 76 ಕಿಲೋ ಮೀಟರ್ (2.50 ಲಕ್ಷ ಅಡಿ) ದೂರದಲ್ಲಿ ಕ್ಯಾಪ್ಸೂಲ್‌ ಬೂಸ್ಟರ್‌ನಿಂದ ಬೇರ್ಪಡಲಿದೆ. ಬಳಿಕ 106 ಕಿಲೋ ಮೀಟರ್ (3.50 ಲಕ್ಷ ಅಡಿ) ಎತ್ತರಕ್ಕೆ ಕ್ಯಾಪ್ಸೂಲ್‌ ಸಾಗಲಿದ್ದು, ಲಾಂಚ್‌ಪ್ಯಾಡ್‌ನಿಂದ 2 ಮೈಲಿ ದೂರದಲ್ಲಿ ಬೂಸ್ಟರ್‌ ಇಳಿಯಲಿದೆ. ಬಳಿಕ ಪ್ಯಾರಾಚ್ಯೂಟ್‌ ಸಹಾಯದಿಂದ ಕ್ಯಾಪ್ಸೂಲ್‌ ಮರುಭೂಮಿಯಲ್ಲಿ ಇಳಿಯಲಿದ್ದು, ಈ ಯೋಜನೆ ಬಗ್ಗೆ ಭಾರೀ ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿದೆ.

Follow Us
TV9 Web
TV9 Web

TV9 Kannada

Read More
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ