Kenya Drought: ಕೀನ್ಯಾದಲ್ಲಿ ಭೀಕರ ಬರಗಾಲ, ನೀರು, ಆಹಾರವಿಲ್ಲದೆ 200 ಆನೆಗಳು ಸೇರಿ ಸಾವಿರಾರು ಪ್ರಾಣಿಗಳು ಸಾವು

| Updated By: ನಯನಾ ರಾಜೀವ್

Updated on: Nov 06, 2022 | 9:59 AM

ಕೀನ್ಯಾದಲ್ಲಿ ಕಳೆದ 40 ವರ್ಷಗಳಿಂದ ಕಾಣದ ಭೀಕರ ಬರಗಾಲ ಬಂದೊದಗಿದೆ. 200ಕ್ಕೂ ಹೆಚ್ಚು ಆನೆಗಳು ಮೃತಪಟ್ಟಿವೆ.

Kenya Drought: ಕೀನ್ಯಾದಲ್ಲಿ ಭೀಕರ ಬರಗಾಲ, ನೀರು, ಆಹಾರವಿಲ್ಲದೆ 200 ಆನೆಗಳು ಸೇರಿ ಸಾವಿರಾರು ಪ್ರಾಣಿಗಳು ಸಾವು
Elephant
Image Credit source: France24.com
Follow us on

ಕೀನ್ಯಾದಲ್ಲಿ ಕಳೆದ 40 ವರ್ಷಗಳಿಂದ ಕಾಣದ ಭೀಕರ ಬರಗಾಲ ಬಂದೊದಗಿದೆ. 200ಕ್ಕೂ ಹೆಚ್ಚು ಆನೆಗಳು ಮೃತಪಟ್ಟಿವೆ. ಫೆಬ್ರವರಿಯಿಂದ ಅಕ್ಟೋಬರ್ ವರೆಗೆ ಬರೋಬ್ಬರಿ 205 ಆನೆಗಳು ಅಸುನೀಗಿವೆ. 51 ಎಮ್ಮೆಗಳು, 49 ಗ್ರೆವಿಯ ಜೀಬ್ರಾಗಳು, 512 ಕಾಡಾನೆಗಳು, 381 ಸಾಮಾನ್ಯ ಜೀಬ್ರಾಗಳು ಮತ್ತು 12 ಜಿರಾಫೆಗಳು ಮೃತಪಟ್ಟಿವೆ.

ಕೀನ್ಯಾದ ಬೇರೆ ಬೇರೆ ಭಾಗಗಳಲ್ಲಿ ಕಳೆದ ಎರಡು ವರ್ಷಗಳಲ್ಲಿ ಸತತ ನಾಲ್ಕು ಋತುಗಳಲ್ಲಿ ಅಸಮರ್ಪಕ ಮಳೆಯಾಗಿದ್ದು, ನೀರಿಲ್ಲದೆ, ಆಹಾರ ಬೆಳೆಯದೆ ಜಾನುವಾರುಗಳು ಸೇರಿದಂತೆ ಜನರು ಅಕ್ಷರಶಃ ತತ್ತರಿಸಿ ಹೋಗಿದ್ದಾರೆ.

ತ್ಸಾವೊ ವೆಸ್ಟ್ ನ್ಯಾಷನಲ್ ಪಾರ್ಕ್‌ನಲ್ಲಿರುವ ನ್ಗುಲಿಯಾ ಘೇಂಡಾಮೃಗಗಳ ಅಭಯಾರಣ್ಯದಲ್ಲಿ ಕೇವಲ ಒಂದು ಘೇಂಡಾಮೃಗ ಮೃತಪಟ್ಟಿದ್ದು, ಈ ಬರಗಾಲವು ಘೇಂಡಾಮೃಗಗಳ ಮೇಲೆ ಅಷ್ಟಾಗಿ ಪರಿಣಾಮ ಬೀರಿಲ್ಲ ಎಂದು ಸರ್ಕಾರ ಮಾಹಿತಿ ನೀಡಿದೆ.

ವರದಿ ಪ್ರಕಾರ, ಕೀನ್ಯಾದ ಹೆಚ್ಚು ಜನರು ಭೇಟಿ ನೀಡುವ ಪ್ರದೇಶಗಳಾದ ಅಂಬೋಸೆಲಿ, ತ್ಸಾವೊ ಮತ್ತು ಲೈಕಿಪಿಯಾ ಸಂಬೂರು, ರಾಷ್ಟ್ರೀಯ ಉದ್ಯಾನವನಗಳು ಉದ್ಯಾನವನಗಳ ಪ್ರದೇಶಗಳನ್ನು ಒಳಗೊಂಡಂತೆ ಹಲವು ಪರಿಸರ ವ್ಯವಸ್ಥೆಗಳು ದುಸ್ಥಿತಿಯಲ್ಲಿವೆ.

ಅಲ್ಲಿನ ಕಾಡು ಪ್ರಾಣಿಗಳ ಮೇಲೆ ಬರದ ಪ್ರಭಾವದ ವಿಶಾಲ ನೋಟದ ಮಾಹಿತಿ ಪಡೆಯಲು ಅಂಬೋಸೆಲಿಯಲ್ಲಿ ವನ್ಯಜೀವಿಗಳ ತುರ್ತು ವೈಮಾನಿಕ ಗಣತಿ ನಡೆಸಲು ಸೂಚಿಸಲಾಗಿದೆ. ತಜ್ಞರು ಬರ ಪೀಡಿತ ಪ್ರದೇಶಗಳಲ್ಲಿ ನೀರು ಮತ್ತು ಉಪ್ಪು ನೆಕ್ಕಲು ತಕ್ಷಣವೇ ವ್ಯವಸ್ಥೆ ಒದಗಿಸುವಂತೆ ಶಿಫಾರಸು ಮಾಡಿದ್ದಾರೆ.

ನಾವು ಜಾನುವಾರುಗಳನ್ನು ಕಳೆದುಕೊಳ್ಳುತ್ತಿದ್ದೇವೆ ಮತ್ತು ಲಕ್ಷಾಂತರ ನಾಗರಿಕರು ಈ ಸಮಸ್ಯೆಯಿಂದ ನಿಜವಾಗಿಯೂ ಬಾಧಿತರಾಗಿದ್ದಾರೆ ಎಂದು ಆಫ್ರಿಕಾ ವೈಲ್ಡ್‌ಲೈಫ್ ಫೌಂಡೇಶನ್‌ನ ಸಂರಕ್ಷಣಾವಾದಿ ನ್ಯಾನ್ಸಿ ಗಿಥೈಗಾ ತಿಳಿಸಿದ್ದಾರೆ.

ನಾವು ಪ್ರಾಣಿಗಳನ್ನು ಕಳೆದುಕೊಳ್ಳುತ್ತಿದ್ದೇವೆ, ನಾವು ವನ್ಯಜೀವಿಗಳನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ನೋವಿನ ನುಡಿಗಳನ್ನಾಡಿದ್ದಾರೆ.

ಗ್ರೇವಿಯ ಝಿಬ್ರಾಗಳಿಗೆ, ತಜ್ಞರು ತಕ್ಷಣ ಹುಲ್ಲು ನೀಡಲು ಒತ್ತಾಯಿಸಿದ್ದಾರೆ. ಆನೆಗಳು ದಿನಕ್ಕೆ 240 ಲೀಟರ್ ನೀರು ಕುಡಿಯುತ್ತವೆ ಎಂದು ಎಲಿಫೆಂಟ್ ನೈಬರ್ಸ್ ಸೆಂಟರ್‌ನ ಕಾರ್ಯನಿರ್ವಾಹಕ ನಿರ್ದೇಶಕ ಜಿಮ್ ಜಸ್ಟಸ್ ನ್ಯಾಮು ತಿಳಿಸಿದ್ದಾರೆ.

ಉತ್ತರ ಕೀನ್ಯಾದ ತುರ್ಕಾನಾ ಪ್ರದೇಶದಲ್ಲಿ 500,000 ಕ್ಕೂ ಹೆಚ್ಚು ಜನರು ಹಸಿವಿನಿಂದ ಬಳಲುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಹಾರ ಸಂಪನ್ಮೂಲಗಳ ಸವಕಳಿ ಮತ್ತು ನೀರಿನ ಕೊರತೆಯಿಂದಾಗಿ ಸಾವುಗಳು ಸಂಭವಿಸಿವೆ ಹೇಳಿದ್ದಾರೆ.
ಪ್ರವಾಸೋದ್ಯಮ ಸಚಿವಾಲಯದ ಪ್ರಕಾರ, ಕೀನ್ಯಾ ಕಳೆದ ವರ್ಷ 36,000 ಆನೆಗಳನ್ನು ಹೊಂದಿತ್ತು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

 

Published On - 9:53 am, Sun, 6 November 22