ಕಾಬೂಲ್: ಅಮೆರಿಕ ಘೋಷಿತ ಜಾಗತಿಕ ಉಗ್ರಗಾಮಿ ಖಲೀಲ್ ಹಕ್ಕಾನಿ ಕಾಬೂಲ್‌ನಲ್ಲಿ ರಾಜಾರೋಷವಾಗಿ ಓಡಾಟ ನಡೆಸಿರುವುದು ಕಂಡುಬಂದಿದೆ. ಈ ಹಿಂದೆ, ಖಲೀಲ್ ಮಾಹಿತಿ ನೀಡಿದರೆ 6 ಮಿಲಿಯನ್ ಡಾಲರ್ ಬಹುಮಾನ ನೀಡುವುದಾಗಿ ಅಮೆರಿಕ ಘೋಷಿಸಿತ್ತು. ಆದರೆ, ಇದೀಗ ಅದೇ ಖಲೀಲ್ ಹಕ್ಕಾನಿಯ ನೆರವನ್ನು ಅಮೆರಿಕ ಕೋರಿದೆ. ಕಾಬೂಲ್ ರಕ್ಷಣೆ ಹೊಣೆಯನ್ನು ತಾಲಿಬಾನ್ ಹಕ್ಕಾನಿಗೆ ನೀಡಿದೆ. ಈ ಹಿನ್ನೆಲೆಯಲ್ಲಿ, ಅಮೆರಿಕನ್ನರನ್ನ ಕಾಬೂಲ್ ಏರ್‌ಪೋರ್ಟ್‌ಗೆ ತಲುಪಿಸಲು ಅಮೆರಿಕ ಮನವಿ ಮಾಡಿದೆ. ಅಮೆರಿಕ ಖಲೀಲ್ ಹಕ್ಕಾನಿ ನೆರವು ಕೋರಿದೆ.
ಖಲೀಲ್ ಹಕ್ಕಾನಿ ಕಾಬೂಲ್ನ ಉಸ್ತುವಾರಿ ವಹಿಸಿಕೊಂಡಿದ್ದಾನೆ. ಕಾಬೂಲ್ ಬೀದಿಗಳಿಗೆ ಹಕ್ಕಾನಿ ಆಗಮಿಸಿದಾಗ ತಾಲಿಬಾನಿಗಳು ಆತನನ್ನು ಸ್ವಾಗತಿಸಿದ್ದರು. ಖಲೀಲ್ ಹಕ್ಕಾನಿ, ಸಿರಾಜುದ್ದೀನ್ ಹಕ್ಕಾನಿಯ ಸಂಬಂಧಿ ಆಗಿದ್ದಾನೆ. ಸಿರಾಜುದ್ದೀನ್ ಹಕ್ಕಾನಿ, ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿರುವ ತಾಲಿಬಾನಿ ಕೌನ್ಸಿಲ್ನ ನಾಯಕ ಆಗಿದ್ದಾನೆ. ಹಕ್ಕಾನಿ ನೆಟ್ವರ್ಕ್ ಮುಖ್ಯವಾಗಿ ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿದೆ. ಅಂತಾರಾಷ್ಟ್ರೀಯ ಗ್ರೂಪ್ಗಳು, ವಿವಿಧ ದೇಶಗಳು ಹಕ್ಕಾನಿ ಕಾಬೂಲ್ ಉಸ್ತುವಾರಿ ವಹಿಸಿರುವ ಹಿನ್ನೆಲೆಯಲ್ಲಿ ಆತಂಕ ವ್ಯಕ್ತಪಡಿಸಿವೆ.
ವಿದೇಶಗಳಲ್ಲಿ ಆಫ್ಘನ್ ಪ್ರಜೆಗಳ ಆಕ್ರೋಶ
ಅಫ್ಘಾನಿಸ್ತಾನವನ್ನು ತಾಲಿಬಾನರು ವಶಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ, ಇಟಲಿ ರಾಜಧಾನಿ ರೋಮ್ ನಗರದಲ್ಲಿ ಆಫ್ಘನ್ನರು ಧರಣಿ ನಡೆಸಿದ್ದಾರೆ. ಪಾಕ್ ವಿರುದ್ಧ ಧಿಕ್ಕಾರ ಕೂಗಿ ಆಫ್ಘನ್ ಪ್ರಜೆಗಳು ಆಕ್ರೋಶ ಹೊರಹಾಕಿದ್ದಾರೆ. ಲಂಡನ್‌ನಲ್ಲಿ ಕೂಡ ಸಾವಿರಾರು ಆಫ್ಘನ್ ಪ್ರಜೆಗಳಿಂದ ಪ್ರತಿಭಟನೆ ವ್ಯಕ್ತವಾಗಿದೆ. ಆಫ್ಘನ್ ಧ್ವಜ ನಮ್ಮ ಗೌರವ, ಆಫ್ಘನ್‌ನಲ್ಲಿ ಶಾಂತಿ ನೆಲೆಸಬೇಕು. ಆಫ್ಘನ್‌ನಲ್ಲಿ ಭಯೋತ್ಪಾದನೆಗೆ ಅವಕಾಶ ನೀಡಬಾರದು ಎಂದು ಧರಣಿ ನಡೆಸಿದ್ದಾರೆ. ಅಫ್ಘಾನಿಸ್ತಾನವನ್ನು ತಾಲಿಬಾನಿಗಳಿಂದ ಬಿಡುಗಡೆಗೊಳಿಸಿ, ಆಫ್ಘನ್ನರಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಲಂಡನ್‌ನ ಮುಖ್ಯ ರಸ್ತೆಗಳಲ್ಲಿ ಆಫ್ಘನ್ ಪ್ರಜೆಗಳಿಂದ ಧರಣಿ ನಡೆದಿದೆ.
ಅಫ್ಘಾನಿಸ್ತಾನದಿಂದ ಭಾರತೀಯರ ಏರ್‌ಲಿಫ್ಟ್
ಆಫ್ಘನ್‌ನಿಂದ ಮೊದಲ ಬ್ಯಾಚ್‌ನಲ್ಲಿ 135 ಜನ ಸ್ಥಳಾಂತರ ಮಾಡಲಾಗುವುದು. ದೋಹಾ ಮೂಲಕ ಒಟ್ಟು 135 ಭಾರತೀಯರ ಸ್ಥಳಾಂತರ ಮಾಡಲಾಗುತ್ತದೆ ಎಂದು ಕತಾರ್‌ನಲ್ಲಿರುವ ಭಾರತದ ದೂತಾವಾಸದಿಂದ ಮಾಹಿತಿ ಲಭ್ಯವಾಗಿದೆ. ಅಫ್ಘಾನಿಸ್ತಾನ ತಾಲಿಬಾನಿಗಳ ವಶವಾದ ಹಿನ್ನೆಲೆಯಲ್ಲಿ ಅಲ್ಲಿನ ಜನರು ಹಾಗೂ ಅಫ್ಘಾನ್ನಲ್ಲಿ ನೆಲೆಸಿರುವ ವಿವಿಧ ದೇಶಗಳ ಪ್ರಜೆಗಳು ಅಭದ್ರತೆ, ಆತಂಕದಿಂದ ಇದ್ದಾರೆ. ಹೀಗಾಗಿ, ಹಲವು ದೇಶಗಳು ತಮ್ಮ ನಾಗರಿಕರನ್ನು ಸ್ವದೇಶಕ್ಕೆ ಮರಳಿ ಕರೆತರುವ ಪ್ರಯತ್ನದಲ್ಲಿ ಇದೆ. ಇದೀಗ ಆಫ್ಘನ್‌ನಿಂದ ಮೊದಲ ಬ್ಯಾಚ್‌ನಲ್ಲಿ 135 ಜನರನ್ನು ಸ್ಥಳಾಂತರ ಮಾಡಲಾಗುವುದು ಎಂದು ಮಾಹಿತಿ ತಿಳಿದುಬಂದಿದೆ.
ಆಫ್ಘನ್‌ನಿಂದ ಇಂದು 500ಕ್ಕೂ ಹೆಚ್ಚು ಜನರ ಸ್ಥಳಾಂತರ ಮಾಡಲಾಗುವುದು. ಅಫ್ಘಾನಿಸ್ತಾನದ ವಿವಿಧ ಸ್ಥಳಗಳಿಂದ ಭಾರತಕ್ಕೆ ಏರ್‌ಲಿಫ್ಟ್ ಮಾಡಲಾಗುವುದು ಎಂಬ ಬಗ್ಗೆಯೂ ತಿಳಿದುಬಂದಿದೆ. ಅಫ್ಘಾನಿಸ್ತಾನದ ವಿವಿಧ ಕಡೆಗಳಿಂದ ಸುಮಾರು 500ಕ್ಕೂ ಹೆಚ್ಚು ಜನರನ್ನು ಸ್ಥಳಾಂತರ ಮಾಡಲಾಗುವ ಬಗ್ಗೆ ಮಾಹಿತಿ ಲಭಿಸಿದೆ.
ಆಫ್ಘನ್‌ನ ಕಾಬೂಲ್‌ನಲ್ಲಿ ಸಿಲುಕಿದ್ದ 87 ಭಾರತೀಯರ ರಕ್ಷಣೆ ಮಾಡಲಾಗಿರುವ ಬಗ್ಗೆಯೂ ತಿಳಿದುಬಂದಿದೆ. 87 ಭಾರತೀಯರನ್ನು ರಕ್ಷಿಸಿ ತಜಕಿಸ್ತಾನದಿಂದ ಏರ್‌ಲಿಫ್ಟ್ ಮಾಡಲಾಗಿದೆ. ತಜಕಿಸ್ತಾನದಿಂದ ದೆಹಲಿಗೆ 87 ಭಾರತೀಯರ ಏರ್‌ಲಿಫ್ಟ್ ಮಾಡಲಾಗುತ್ತದೆ. ಭಾರತೀಯರ ಜತೆ ಇಬ್ಬರು ನೇಪಾಳಿಗರು ಕೂಡ ಸ್ಥಳಾಂತರ ಎಂದು ತಿಳಿದುಬಂದಿದೆ. ಅಫ್ಘಾನಿಸ್ತಾನದಲ್ಲಿ ನೆಲೆಸಿರುವ ಭಾರತೀಯರ ರಕ್ಷಣೆ ಮಾಡುವುದಾಗಿ ಭಾರತೀಯ ವಿದೇಶಾಂಗ ವ್ಯವಹಾರಗಳ ಇಲಾಖೆ ಭರವಸೆ ನೀಡಿದೆ.
ಭಾರತೀಯರ ರಕ್ಷಣೆಗೆ ವಾಯುಪಡೆಯ C-17 ಗ್ಲೋಬ್ ಮಾಸ್ಟರ್, C-130J ವಿಮಾನ ಸನ್ನದ್ಧವಾಗಿದೆ. ಭಾರತದ 2 ವಿಮಾನಗಳ ಹಾರಾಟಕ್ಕೆ ಅಮೆರಿಕ ಒಪ್ಪಿಗೆ ನೀಡಿದೆ. ಸದ್ಯ, ಅಮೆರಿಕದ ನಿಯಂತ್ರಣದಲ್ಲಿ ಕಾಬೂಲ್ ಏರ್‌ಪೋರ್ಟ್ ಇದೆ. 107 ಭಾರತೀಯರು ಸೇರಿದಂತೆ 168 ಜನರ ಏರ್‌ಲಿಫ್ಟ್ ಮಾಡಲಾಗಿದೆ.
ಇದನ್ನೂ ಓದಿ: ಅಫ್ಘಾನಿಸ್ತಾನದ ವಿವಿಧ ಸ್ಥಳಗಳಿಂದ 500ಕ್ಕೂ ಹೆಚ್ಚು ಮಂದಿ ಸ್ಥಳಾಂತರ; ಭಾರತಕ್ಕೆ ಏರ್‌ಲಿಫ್ಟ್
Published On - 8:58 am, Sun, 22 August 21