ರಿಷಿ ಸುನಕ್ ಅವರನ್ನು ಬ್ರಿಟನ್ನ ಪ್ರಧಾನಿಯನ್ನಾಗಿ ಕಿಂಗ್ ಚಾರ್ಲ್ಸ್ III ಅಧಿಕೃತವಾಗಿ ಘೋಷಿಸಿದ್ದಾರೆ. ಮೊದಲ ಬಾರಿಗೆ ಓರ್ವ ಭಾರತೀಯ ಮೂಲದ ವ್ಯಕ್ತಿ ಬ್ರಿಟನ್ ಪ್ರಧಾನಿಯಾಗಿದ್ದು ಮಾತ್ರವಲ್ಲದೆ, 200 ವರ್ಷಗಳಲ್ಲಿ ಅತ್ಯಂತ ಕಿರಿಯ ಪ್ರಧಾನಿಯಾಗಿದ್ದಾರೆ.
ಭಾರತವನ್ನು ಆಳಿದ್ದ ಬ್ರಿಟಿಷ್ ಆಡಳಿತ ಇದೀಗ ಭಾರತೀಯನ ಕೈಗೆ ಸಿಕ್ಕಂತಾಗಿದೆ. ಬೋರಿಸ್ ಜಾನ್ಸನ್ ರಾಜೀನಾಮೆಯಿಂದ ತೆರವಾದ ಪ್ರಧಾನಿ ಸ್ಥಾನಕ್ಕೆ ಮತದಾನದ ಮೂಲಕ ಲಿಜ್ ಟ್ರಸ್ ಆಯ್ಕೆಯಾಗಿದ್ದರು. ಈ ಚುನಾವಣೆಯಲ್ಲಿ ರಿಷಿ ಸುನಕ್ ಕೊಂಚ ಹಿನ್ನಡೆ ಅನುಭವಿಸಿದ್ದರು. ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಕೇವಲ 45 ದಿನಕ್ಕೆ ಲಿಜ್ ಟ್ರಸ್ ರಾಜೀನಾಮೆ ನೀಡಿದ್ದರು.
ಇದರ ಬೆನ್ನಲ್ಲೇ ಬೋರಿಸ್ ಜಾನ್ಸನ್ ಹಾಗೂ ಸುನಕ್ ನಡುವೆ ತೀವ್ರ ಸ್ಪರ್ಧೆ ಎರ್ಪಟ್ಟಿತ್ತು. ಆದರೆ ಪ್ರಧಾನಿ ಹುದ್ದೆ ರೇಸ್‌ನಿಂದ ಬೊರಿಸ್ ಜಾನ್ಸನ್ ಹಿಂದೆ ಸರಿದಿದ್ದರು. ಇದರಿಂದ ಸುನಕ್ ಹಾದಿ ಸುಗಮಗೊಂಡಿತ್ತು. ಸುನಕ್ ವಿರುದ್ಧ ಪಕ್ಷದ ನಾಯಕ ಪೆನ್ನಿ ಮೋರ್ಡೆಂಟ್ ಸ್ಪರ್ಧಿಸಿದ್ದರು. ಮೋರ್ಡೆಂಟ್ ಕೇವಲ 26 ನಾಯರ ಬೆಂಬಲ ಪಡೆದರು. ಭಾರೀ ಬಹುಮತದೊಂದಿದೆ ರಿಷಿ ಬ್ರಿಟನ್ ನೂತನ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಅಕ್ಟೋಬರ್ 24ರಂದು ನಡೆದ ಬ್ರಿಟನ್ ಪ್ರಧಾನಿ ಆಯ್ಕೆಯಲ್ಲಿ ಕನ್ಸರ್ವೇಟೀವ್ ಪಕ್ಷದ ರಿಷಿ ಸುನಕ್ ಆಯ್ಕೆಯಾಗಿದ್ದಾರೆ. ಲಿಜ್ ಟ್ರಸ್ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಮುಂದಿನ ಪ್ರಧಾನಿ ಯಾರು ಎನ್ನುವ ಚರ್ಚೆ ಶುರುವಾಗಿತ್ತು. ಇದೀಗ ರಿಷಿ ಸುನಕ್ ಬ್ರಿಟನ್ ನೂತನ ಪ್ರಧಾನಿ ಗದ್ದುಗೆ ಏರಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:48 pm, Tue, 25 October 22