Unilever: ಕ್ಯಾನ್ಸರ್​ಕಾರಕಗಳು ಪತ್ತೆ, ಡವ್​ ಸೇರಿದಂತೆ ಇತರೆ ಡ್ರೈ ಶಾಂಪೂಗಳನ್ನು ಹಿಂಪಡೆದ ಯೂನಿಲಿವರ್

ಶಾಂಪೂವಿನಲ್ಲಿ ಕ್ಯಾನ್ಸರ್​ ಕಾರಕಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಯೂನಿಲಿವರ್ ಪಿಎಲ್​ಸಿಯು ಕಂಪನಿಯು ಡವ್ ಸೇರಿದಂತೆ ಏರೋಸಾಲ್ ಡ್ರೈ ಶಾಂಪೂಗಳ ಜನಪ್ರಿಯ ಉತ್ಪನ್ನಗಳನ್ನು ಮಾರುಕಟ್ಟೆಯಿಂದ ಹಿಂಪಡೆದಿದೆ.

Unilever: ಕ್ಯಾನ್ಸರ್​ಕಾರಕಗಳು ಪತ್ತೆ, ಡವ್​ ಸೇರಿದಂತೆ ಇತರೆ ಡ್ರೈ ಶಾಂಪೂಗಳನ್ನು ಹಿಂಪಡೆದ ಯೂನಿಲಿವರ್
Unilever
Follow us
TV9 Web
| Updated By: ನಯನಾ ರಾಜೀವ್

Updated on: Oct 25, 2022 | 2:08 PM

ಶಾಂಪೂವಿನಲ್ಲಿ ಕ್ಯಾನ್ಸರ್​ ಕಾರಕಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಯೂನಿಲಿವರ್ ಪಿಎಲ್​ಸಿಯು ಕಂಪನಿಯು ಡವ್ ಸೇರಿದಂತೆ ಏರೋಸಾಲ್ ಡ್ರೈ ಶಾಂಪೂಗಳ ಜನಪ್ರಿಯ ಉತ್ಪನ್ನಗಳನ್ನು ಮಾರುಕಟ್ಟೆಯಿಂದ ಹಿಂಪಡೆದಿದೆ. ಈ ಶಾಂಪೂಗಳಲ್ಲಿ ಬೆಂಜೀನ್ ಎನ್ನುವ ಕ್ಯಾನ್ಸರ್​ಕಾರಕ ಅಂಶವಿದ್ದು, ಇದು ಮಾನವನ ದೇಹವನ್ನು ಹಲವು ರೀತಿಯಲ್ಲಿ ಪ್ರವೇಶಿಸುವ ಅಪಾಯವಿದೆ ಎಂದು ಹೇಳಲಾಗಿದೆ.

ಮೂಗಿನ ಮೂಲಕ, ಬಾಯಿಯ ಮೂಲಕ ಮತ್ತು ಚರ್ಮದ ಮೂಲಕ ದೇಹವನ್ನು ಪ್ರವೇಶಿಸಬಹುದು. ಇದು ರಕ್ತದ ಕ್ಯಾನ್ಸರ್​ಗೆ ಕಾರಣವಾಗಬಹುದು. ಜನರು ಅಂತಹ ಉತ್ಪನ್ನಗಳನ್ನು ಬಳಸುವುದನ್ನು ನಿಲ್ಲಿಸಬೇಕು ಮತ್ತು ತಮ್ಮ ಹಣವನ್ನು ಮರಳಿ ಪಡೆಯಲು UnileverRecall.com ನ ವೆಬ್‌ಸೈಟ್‌ಗೆ ಭೇಟಿ ನೀಡಬೇಕು ಎಂದು FDA ಹೇಳಿದೆ.. ಯೂನಿಲಿವರ್ ಇನ್ನೂ ಈ ಕುರಿತು ಪ್ರತಿಕ್ರಿಯೆ ನೀಡಿಲ್ಲ.

ಯೂನಿಲಿವರ್ Nexxus, Suave, Tresemme ಹಾಗೂ Tigiತಹ ಬ್ರ್ಯಾಂಡ್‌ಗಳನ್ನು ಒಳಗೊಂಡಿದೆ. ಕಳೆದ ಒಂದೂವರೆ ವರ್ಷಗಳಲ್ಲಿ ಹಲವು ಸನ್​ಸ್ಕ್ರೀನ್ ಲೋಷನ್​ಗಳನ್ನು ಹಿಂಪಡೆಯಲಾಗಿದೆ. ಉದಾಹರಣೆಗೆ ಜಾನ್ಸನ್ ಮತ್ತು ಜಾನ್ಸನ್‌ನ ನ್ಯೂಟ್ರೋಜೆನಾ, ಎಡ್ಜ್‌ವೆಲ್ ಪರ್ಸನಲ್ ಕೇರ್ ಕಂ.ನ ಬನಾನಾ ಬೋಟ್ ಮತ್ತು  ಬೈರ್ಸ್‌ಡಾರ್ಫ್ ಎಜಿಯ ಕಾಪರ್‌ಟೋನ್ ಜೊತೆಗೆ ಸ್ಪ್ರೇ-ಆನ್ ಆಂಟಿಪೆರ್ಸ್‌ಪಿರಂಟ್‌ಗಳಾದ ಪ್ರಾಕ್ಟರ್ ಹಾಗೂ ಗ್ಯಾಂಬಲ್ ಕೋಸ್ ಸೀಕ್ರೆಟ್ ಮತ್ತು ಓಲ್ಡ್ ಸ್ಪೈಸ್ ಮತ್ತು ಯೂನಿಲಿವರ್ಸ್ ಸುವೇವ್.

ಲಿಸೂರ್‌ನ ಸಂಶೋಧನೆಗಳನ್ನು ಅನುಸರಿಸಿ P&G ತನ್ನ ಏರೋಸಾಲ್ ಉತ್ಪನ್ನಗಳ ಸಂಪೂರ್ಣ ಪೋರ್ಟ್‌ಫೋಲಿಯೊವನ್ನು ಪರೀಕ್ಷಿಸಿದೆ. ಬೆಂಜೀನ್ ಮಾಲಿನ್ಯವನ್ನು ಉಲ್ಲೇಖಿಸಿ ಕಂಪನಿಯು ಡಿಸೆಂಬರ್‌ನಲ್ಲಿ ಅದರ ಪ್ಯಾಂಟೆನ್ ಮತ್ತು ಹರ್ಬಲ್ ಎಸೆನ್ಸಸ್ ಡ್ರೈ ಶ್ಯಾಂಪೂಗಳನ್ನು ಹಿಂತೆಗೆದುಕೊಂಡಿತು.

ಯೂನಿಲಿವರ್‌ನ ಕ್ರಮವು ಮತ್ತೊಮ್ಮೆ ವೈಯಕ್ತಿಕ ಆರೈಕೆ ಉತ್ಪನ್ನಗಳಲ್ಲಿ ಏರೋಸಾಲ್‌ಗಳ ಉಪಸ್ಥಿತಿಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ. ಕಳೆದ ಒಂದೂವರೆ ವರ್ಷದಲ್ಲಿ ಹಲವಾರು ಏರೋಸಾಲ್ ಸನ್‌ಸ್ಕ್ರೀನ್‌ಗಳನ್ನು ಮಾರುಕಟ್ಟೆಯಿಂದ ಹಿಂಪಡೆಯಲಾಗಿದೆ.

ಇವುಗಳಲ್ಲಿ ಜಾನ್ಸನ್ ಮತ್ತು ಜಾನ್ಸನ್‌ನ ನ್ಯೂಟ್ರೋಜೆನಾ, ಎಡ್ಜ್‌ವೆಲ್ ಪರ್ಸನಲ್ ಕೇರ್ ಕಂ. ಬನಾನಾ ಬೋಟ್ ಮತ್ತು ಬೀರ್ಸ್‌ಡಾರ್ಫ್ AG ಯ ಕಾಪರ್‌ಟೋನ್‌ ಕೂಡ ಇತ್ತು.

ಕಳೆದ ವರ್ಷ, ಪ್ರಾಕ್ಟರ್ ಹಾಗೂ  ಗ್ಯಾಂಬಲ್ 30 ಕ್ಕೂ ಹೆಚ್ಚು ಏರೋಸಾಲ್ ಸ್ಪ್ರೇ ಹೇರ್‌ಕೇರ್ ಉತ್ಪನ್ನಗಳನ್ನು ಹಿಂಪಡೆದಿದೆ. ಇವುಗಳಲ್ಲಿ ಡ್ರೈ ಶಾಂಪೂ ಮತ್ತು ಡ್ರೈ ಕಂಡಿಷನರ್ ಸೇರಿವೆ. ಈ ಉತ್ಪನ್ನಗಳಲ್ಲಿ ಬೆಂಜೀನ್ ಇರಬಹುದು ಎಂದು ಕಂಪನಿ ಎಚ್ಚರಿಕೆ ನೀಡಿತ್ತು.

ಕಂಪನಿಯು ಹನ್ನೆರಡು ಓಲ್ಡ್ ಸ್ಪೈಸ್ ಮತ್ತು ಸೀಕ್ರೆಟ್ ಬ್ರಾಂಡ್‌ಗಳ ಡಿಯೋಡರೆಂಟ್‌ಗಳು ಮತ್ತು ಸ್ಪ್ರೇಗಳನ್ನು ಹಿಂಪಡೆದಿದೆ. ಅವುಗಳಲ್ಲಿ ಬೆಂಜೀನ್ ಇರಬಹುದೆಂದು ಕಂಪನಿಯು ಹೆದರಿತ್ತು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು