ಕೊಹಿಸ್ತಾನದಲ್ಲಿ ಮರ್ಯಾದಾ ಹತ್ಯೆಗೆ ಕಾರಣವಾಯ್ತು ಮದುವೆಯ ಡ್ಯಾನ್ಸ್ ವಿಡಿಯೊ; ಜಗತ್ತನ್ನೇ ಬೆಚ್ಚಿಬೀಳಿಸಿದ ಕ್ರೈಂ ಸ್ಟೋರಿ

ಮದುವೆ ಮನೆಯಲ್ಲಿ ಮಾಡಿದ ಡ್ಯಾನ್ಸ್ ವಿಡಿಯೊವೊಂದು ಪಾಕಿಸ್ತಾನದಲ್ಲಿ ವೈರಲ್ ಆಗಿತ್ತು. ಆದರೆ ಈ ರೀತಿ ಮಾಡಿದ್ದು ತಪ್ಪು ಎಂದು ಆ ವಿಡಿಯೊದಲ್ಲಿ ಕಾಣಿಸಿಕೊಂಡಿದ್ದ ಮಹಿಳೆಯರನ್ನು ಹತ್ಯೆ ಮಾಡಲಾಗಿತ್ತು. ಅದು ಮರ್ಯಾದಾ ಹತ್ಯೆ. ಕೊಹಿಸ್ತಾನ್ ವೈರಲ್ ವಿಡಿಯೊ ಮತ್ತು ಜಗತ್ತನ್ನೇ ಬೆಚ್ಚಿಬೀಳಿಸಿದ ಮರ್ಯಾದಾ ಹತ್ಯೆ ಪ್ರಕರಣದ ಬಗ್ಗೆ ಇಲ್ಲಿದೆ ಮಾಹಿತಿ.

ಕೊಹಿಸ್ತಾನದಲ್ಲಿ ಮರ್ಯಾದಾ ಹತ್ಯೆಗೆ ಕಾರಣವಾಯ್ತು ಮದುವೆಯ ಡ್ಯಾನ್ಸ್ ವಿಡಿಯೊ; ಜಗತ್ತನ್ನೇ ಬೆಚ್ಚಿಬೀಳಿಸಿದ ಕ್ರೈಂ ಸ್ಟೋರಿ
ಕೊಹಿಸ್ತಾನ್ ವಿಡಿಯೊ ಪ್ರಕರಣ

Updated on: Apr 22, 2024 | 11:49 AM

ಇಸವಿ 2012. ಮದುವೆಯೊಂದರಲ್ಲಿ ಭಾಗವಹಿಸಲು ಸಂಬಂಧಿಕರು ಊರವರು ಎಲ್ಲರೂ ಸೇರಿದ್ದರು. ಆ ಗುಂಪಿನಲ್ಲಿದ್ದ ಐವರು ಹೆಂಗಸರು ಒಂದು ಕೋಣೆಯಲ್ಲಿ ನೆಲದ ಮೇಲೆ ಕುಳಿತು ಚಪ್ಪಾಳೆ ತಟ್ಟುತ್ತಾ ಯಾವುದೋ ಜಾನಪದ ಗೀತೆಯನ್ನು ಹಾಡುತ್ತಿದ್ದರು. ಈ ಹಾಡಿಗೆ ಯುವಕನೊಬ್ಬ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿದ. ಈ ಹಾಡು ಮತ್ತು ಕುಣಿತವನ್ನು ವ್ಯಕ್ತಿಯೊಬ್ಬರು ಫೋನ್​​​ನಲ್ಲಿ ಸೆರೆ ಹಿಡಿದಿದ್ದು, ಈ ವಿಡಿಯೊ ವೈರಲ್ ಆಗಿತ್ತು. ಆದರೆ ಅಲ್ಲಿ ನಡೆದದ್ದೇ ಬೇರೆ. ಈ ಒಂದು ಕಿರು ವಿಡಿಯೊದಿಂದಾಗಿ 8 ಜನರು ಹತ್ಯೆಯಾದರು. 2012 ಕೊಹಿಸ್ತಾನ್ ವಿಡಿಯೊ ಪ್ರಕರಣ ಎಂದು ಕರೆಯಲ್ಪಡುವ ಆಘಾತಕಾರಿ ಘಟನೆ ಪಾಕಿಸ್ತಾನವನ್ನು ಬೆಚ್ಚಿಬೀಳಿಸಿತು. ಅಂದ ಹಾಗೆ ಆ ಮುಗ್ಧ ಜನರು ಅದೇನು ತಪ್ಪು ಮಾಡಿದ್ದರು? ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ? ಇಲ್ಲಿದೆ ಮಾಹಿತಿ. ಅಂದವಾದ ಊರಿನ ಅನಿಷ್ಟ ಸಂಪ್ರದಾಯಗಳು ಪಾಕಿಸ್ತಾನದ ಜಿಲ್ಲೆ ಕೊಹಿಸ್ತಾನ್ ಅಂದವಾದ ಊರು. ಬೆಟ್ಟಗಳು, ಕಣಿವೆಗಳು ಮತ್ತು ಸುಂದರವಾದ ತೊರೆಗಳನ್ನು ಹೊಂದಿರುವ ಕೊಹಿಸ್ತಾನದ ನಿವಾಸಿಗಳು ಹಸು ಸಾಕಣೆ ಮತ್ತು ಕೃಷಿಯಿಂದ ಬದುಕು ಸಾಗಿಸುವ ಬುಡಕಟ್ಟು ಜನಾಂಗದವರು. ಇವರಿಗೆ ಶಿಕ್ಷಣ ಇಲ್ಲ, ಇಲ್ಲಿನವರು ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನೂ ನೀಡುವುದಿಲ್ಲ. ಮಹಿಳೆಯರು ಮನೆಗೆಲಸಕ್ಕಷ್ಟೇ ಸೀಮಿತವಾಗಿದ್ದಾರೆ. ಇವರು ಹೊರಗೆ ಹೋಗಲು, ಕೆಲಸ ಮಾಡಲು ಅಥವಾ ಕುಟುಂಬದ ಹೊರಗಿನ ಪುರುಷರೊಂದಿಗೆ ಸಂಪರ್ಕ ಹೊಂದುವಂತೆ ಇಲ್ಲ. ಎಲ್ಲದಕ್ಕೂ ನಿರ್ಬಂಧ, ಎಲ್ಲದಕ್ಕೂ  ಕಟ್ಟುಪಾಡುಗಳು. ಆಚರಣೆಗಳನ್ನು ಬಹಳ ಗಂಭೀರವಾಗಿ ಪರಿಗಣಿಸುವ ಈ ಪ್ರದೇಶದಲ್ಲಿ ಸರ್ಕಾರದ ನಿಯಂತ್ರಣ ಬಹಳ ಸೀಮಿತವಾಗಿದೆ. ಜಿರ್ಗಾ ಎಂದು ಕರೆಯಲ್ಪಡುವ ಬುಡಕಟ್ಟು ಮುಖ್ಯಸ್ಥರು ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅಷ್ಟೇ ಅಲ್ಲ ಕೊಹಿಸ್ತಾನ್ ಒಂದು ಸಮಾನಾಂತರ...

ಪೂರ್ಣ ಸುದ್ದಿಯನ್ನು ಓದಲು Tv9 ಆ್ಯಪ್ ಡೌನ್​ಲೋಡ್ ಮಾಡಿ

ಎಕ್ಸ್​ಕ್ಲೂಸಿವ್ ಸುದ್ದಿಗಳ ಅನ್​ಲಿಮಿಟೆಡ್ ಆಕ್ಸೆಸ್ Tv9 ಆ್ಯಪ್​ನಲ್ಲಿ ಮುಂದುವರೆಯಿರಿ