ನಿಮ್ಮ ಮೊಂಡುತನ ಬಿಟ್ಟು, ಮೊದಲು ಭಾರತದೊಂದಿಗೆ ಮಾತುಕತೆ ನಡೆಸಿ: ಮಾಲ್ಡೀವ್ಸ್ ವಿರೋಧ ಪಕ್ಷದ ನಾಯಕ
ಭಾರತದ ಜತೆಗೆ ಸುಖಾಸುಮ್ಮನೆ ಸಂಬಂಧ ಹಾಳು ಮಾಡಿಕೊಂಡಿರುವ ಮಾಲ್ಡೀವ್ಸ್ ಅಧ್ಯಕ್ಷರಿಗೆ ಅಲ್ಲಿನ ವಿರೋಧ ಪಕ್ಷದ ನಾಯಕ ಸರಿಯಾಗಿ ಬಿಸಿ ಮುಟ್ಟಿಸಿದ್ದರೆ. ನಿಮ್ಮ ಮೊಂಡುತನ ಬಿಟ್ಟು, ಮೊದಲು ಭಾರತದೊಂದಿಗೆ ಮಾತುಕತೆ ನಡೆಸಿ, ಇದರಿಂದ ನಮ್ಮ ದೇಶದ ಆರ್ಥಿಕ ಪರಿಸ್ಥಿತಿ ತೊಂದರೆಯಲ್ಲಿದೆ ವಿರೋಧ ಪಕ್ಷದ ನಾಯಕ ಇಬ್ರಾಹಿಂ ಮೊಹಮ್ಮದ್ ಸೊಲಿಹ್ ಹೇಳಿದ್ದಾರೆ.

ನಮ್ಮ ದೇಶದ ಆರ್ಥಿಕ ಪರಿಸ್ಥಿತಿ ತೊಂದರೆಯಲ್ಲಿದೆ ನಿಮ್ಮ ಮೊಂಡುತನ ಬಿಟ್ಟು, ಮೊದಲು ಭಾರತದೊಂದಿಗೆ ಮಾತುಕತೆ ನಡೆಸಿ ಎಂದು ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರಿಗೆ ಅಲ್ಲಿನ ವಿರೋಧ ಪಕ್ಷದ ನಾಯಕ ಇಬ್ರಾಹಿಂ ಮೊಹಮ್ಮದ್ ಸೊಲಿಹ್ ಬುದ್ಧಿವಾದ ಹೇಳಿದ್ದಾರೆ. ನಿಮ್ಮ ಮೊಂಡುತನ ನಿಲ್ಲಿಸಬೇಕು ಮತ್ತು ಹಣಕಾಸಿನ ಸವಾಲುಗಳನ್ನು ಎದುರಿಸಲು ನೆರೆಹೊರೆ ರಾಷ್ಟ್ರದೊಂದಿಗೆ ಮಾತುಕತೆ ಮಾಡಬೇಕು ಎಂದು ಹೇಳಿದ್ದಾರೆ. ಚೀನಾ ಪರ ನಿಂತಿರುವ ಮೊಹಮ್ಮದ್ ಮುಯಿಝು ದ್ವೀಪಸಮೂಹ ರಾಷ್ಟ್ರಕ್ಕೆ ಸಾಲ ಪರಿಹಾರವನ್ನು ನೀಡುವಂತೆ ಭಾರತವನ್ನು ಒತ್ತಾಯಿಸಿದ ದಿನಗಳ ನಂತರ ಸೋಲಿಹ್ ಅವರು ಈ ಹೇಳಿಕೆಯನ್ನು ನೀಡಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಮುಯಿಝು, 62 ವರ್ಷದ ಸೊಲಿಹ್ ಅವರನ್ನು ಸೋಲಿಸಿದ್ದರು. ಮಾಫನ್ನುನಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವ ಮಾಲ್ಡೀವಿಯನ್ ಡೆಮಾಕ್ರಟಿಕ್ ಪಾರ್ಟಿ (ಎಂಡಿಪಿ) ಸಂಸದೀಯ ಅಭ್ಯರ್ಥಿಗಳಿಗೆ ಬೆಂಬಲವನ್ನು ನೀಡಲು ಮಾಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸೊಲಿಹ್ ಸಾಲ ಮರುರಚನೆಗಾಗಿ ಮುಯಿಜ್ಜು ಭಾರತದೊಂದಿಗೆ ಮಾತನಾಡಲು ಬಯಸುತ್ತಾರೆ ಎಂಬುದನ್ನು ಮಾಧ್ಯಮ ವರದಿಗಳನ್ನು ನೋಡಿದ್ದೇನೆ, ಆದರೆ ಆರ್ಥಿಕ ಸವಾಲುಗಳು ಭಾರತೀಯ ಸಾಲಗಳಿಂದ ಉಂಟಾಗುವುದಿಲ್ಲ ಎಂದು ಹೇಳಿದ್ದಾರೆ.
ಭಾರತಕ್ಕೆ ನೀಡಬೇಕಾದ MVR 8 ಶತಕೋಟಿಗೆ ಹೋಲಿಸಿದರೆ, ಮಾಲ್ಡೀವ್ಸ್ ಚೀನಾದಿಂದ MVR 18 ಶತಕೋಟಿ ಸಾಲವನ್ನು ಪಡೆದಿದೆ. ಇದನ್ನು ಮರುಪಾವತಿ ಮಾಡಲು 25 ವರ್ಷ ಕಲಾವಕಾಶವನ್ನು ಪಡೆದಿದೆ. ನಾವು ಮೊಂಡುತನವನ್ನು ನಿಲ್ಲಿಸಬೇಕು ಮತ್ತು ಮಾತುಕತೆಗೆ ಪ್ರಯತ್ನಿಸಬೇಕು. ನಮಗೆ ಸಹಾಯ ಮಾಡುವ ಅನೇಕ ದೇಶಗಳಿವೆ. ಆದರೆ ನಮ್ಮ ದೇಶದ ಅಧ್ಯಕ್ಷರು ಅವರ ಜತೆಗೆ ರಾಜಿ ಮಾಡಿಕೊಳ್ಳಲು ಬಯಸುವುದಿಲ್ಲ. ಆದರೆ ಇದರಿಂದ ನಮ್ಮ ದೇಶದ ಸ್ಥಿತಿ ಯಾವ ಹಂತಕ್ಕೆ ಬಂದಿದೆ ಎಂಬುದು ಅರ್ಥವಾಗುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ: ಇದು ‘ಮೋದಿ ಕಿ ಗ್ಯಾರಂಟಿ’; ಪ್ರಧಾನಿ ನರೇಂದ್ರ ಮೋದಿ ಭೇಟಿಗಾಗಿ ಧನ್ಯವಾದ ಸಲ್ಲಿಸಿದ ಭೂತಾನ್ ಪಿಎಂ
ಸರ್ಕಾರ ಸಾರ್ವಜನಿಕರನ್ನು ವಂಚಿಸುತ್ತಿದೆ ಮತ್ತು ಎಂಡಿಪಿ ಸರ್ಕಾರ ಪ್ರಾರಂಭಿಸಿದ ಯೋಜನೆಗಳನ್ನು ಮರುಪ್ರಾರಂಭಿಸುತ್ತಿದೆ. ಇದೀಗ ಆ ಸುಳ್ಳುಗಳನ್ನು ಮುಚ್ಚಿಡಲು ಸಚಿವರು ಬೇರೆ ಸುಳ್ಳು ಹೇಳುತ್ತಿದ್ದಾರೆ. ಅಧ್ಯಕ್ಷೀಯ ಚುನಾವಣಾ ಪ್ರಚಾರದ ಸಮಯದಲ್ಲಿ ಮತ್ತು ನಂತರ ಮುಯಿಝು ಭಾರತವನ್ನು ಟೀಕಿಸಿದರು. ಅಧಿಕಾರ ಸಿಕ್ಕ ನಂತರ ಭಾರತ ಹಾಗೂ ಮಾಲ್ಡೀವ್ಸ್ ಸಂಬಂಧ ಹದಗೆಟ್ಟಿವೆ. ಮೇ 10 ರೊಳಗೆ ಮಾಲ್ಡೀವ್ಸ್‌ನಲ್ಲಿ ಮಾನವೀಯ ಮತ್ತು ವೈದ್ಯಕೀಯ ಸ್ಥಳಾಂತರಕ್ಕಾಗಿ ಬಳಸಲಾಗುವ ಮೂರು ವಾಯುಯಾನ ನಿರ್ವಹಿಸುವ 88 ಭಾರತೀಯ ಮಿಲಿಟರಿ ಸಿಬ್ಬಂದಿಯನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳುವಂತೆ ನಮ್ಮ ಅಧ್ಯಕ್ಷರು ಹೇಳಿದ್ದಾರೆ. ಮೊದಲ ಬ್ಯಾಚ್ 26 ಭಾರತೀಯ ಮಿಲಿಟರಿ ಸಿಬ್ಬಂದಿ ಈಗಾಗಲೇ ದ್ವೀಪ ರಾಷ್ಟ್ರವನ್ನು ತೊರೆದಿದ್ದಾರೆ. ಅವರ ಜಾಗಕ್ಕೆ ನಾಗರಿಕರನ್ನು ನೇಮಿಸಲಾಗಿದೆ.
ಭಾರತವು ಮಾಲ್ಡೀವ್ಸ್‌ನ ನಿಕಟ ಮಿತ್ರನಾಗಿ ಮುಂದುವರಿಯುತ್ತದೆ ಎಂದು ಈ ಹಿಂದೆ ಅವರು ಮಾಧ್ಯಮ ಸಂದರ್ಶನದಲ್ಲಿ ಹೇಳಿದ್ದರು. ಆದರೆ ಇಲ್ಲಿಯವರೆಗೆ ಯಾವುದೇ ಮಾತುಕತೆಯನ್ನು ನಡೆಸಿಲ್ಲ. ಆದರೆ ಇದೀಗ ಏಪ್ರಿಲ್ 21ರಂದು ಮಾಲ್ಡೀವ್ಸ್‌ನಲ್ಲಿ ನಡೆಯಲಿರುವ ಸಂಸತ್ ಚುನಾವಣೆಗೆ ಮುನ್ನ ಮುಯಿಝು ಅವರು ಭಾರತದ ಬಗ್ಗೆ ವೃದುವಾಗಿ ಮಾತನಾಡಿದ್ದಾರೆ. ಹೊಸ ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕು ತಿಂಗಳಾದರೂ ಅವರು ಇನ್ನೂ ಭಾರತಕ್ಕೆ ಭೇಟಿ ನೀಡಿಲ್ಲ. ಮಾಲ್ಡೀವ್ಸ್ ಅಧ್ಯಕ್ಷರ ಮೊದಲ ಸಾಗರೋತ್ತರ ಪ್ರವಾಸವು ಯಾವಾಗಲೂ ಭಾರತಕ್ಕೆ ಆಗಿತ್ತು. ಆದರೆ ಮೊಹಮ್ಮದ್ ಮುಯಿಝು ಅವರು ಜನವರಿಯಲ್ಲಿ ಚೀನಾಕ್ಕೆ ಭೇಟಿ ನೀಡಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಇಬ್ರಾಹಿಂ ಮೊಹಮ್ಮದ್ ಸೊಲಿಹ್ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:17 pm, Mon, 25 March 24




