ಸೈಕಲ್​​ನಲ್ಲಿ ಹೋಗುತ್ತಿದ್ದಾಗ ಕಸದ ಲಾರಿಗೆ ಡಿಕ್ಕಿ ಹೊಡೆದು ಮೃತಪಟ್ಟ ಭಾರತೀಯ ಪಿಎಚ್‌ಡಿ ವಿದ್ಯಾರ್ಥಿನಿ

ಮಾರ್ಚ್ 19 ರಂದು ಚೈಸ್ತಾ ಕೊಚಾರ್ ಮನೆಗೆ ಸೈಕಲ್ ನಲ್ಲಿ ಹೋಗುತ್ತಿದ್ದಾಗ ಕಸದ ಲಾರಿಗೆ ಡಿಕ್ಕಿ ಹೊಡೆದಿದ್ದು, ಅಪಘಾತದ ವೇಳೆ ಅವರಿಗಿಂತ ಸೈಕಲ್ ನಲ್ಲಿ ಮುಂದಿದ್ದ ಪತಿ ಪ್ರಶಾಂತ್ ಆಕೆಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಅವರು ಬದುಕಲು ಸಾಧ್ಯವಾಗಲಿಲ್ಲ.

ಸೈಕಲ್​​ನಲ್ಲಿ ಹೋಗುತ್ತಿದ್ದಾಗ ಕಸದ ಲಾರಿಗೆ ಡಿಕ್ಕಿ ಹೊಡೆದು ಮೃತಪಟ್ಟ ಭಾರತೀಯ ಪಿಎಚ್‌ಡಿ ವಿದ್ಯಾರ್ಥಿನಿ
ಲಂಡನ್‌: ಕಸದ ಟ್ರಕ್ ಡಿಕ್ಕಿಯಾಗಿ ಭಾರತೀಯ ಪಿಎಚ್‌ಡಿ ವಿದ್ಯಾರ್ಥಿನಿ ಸಾವು
Follow us
ಸಾಧು ಶ್ರೀನಾಥ್​
|

Updated on: Mar 25, 2024 | 6:07 PM

ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ (ಎಲ್‌ಎಸ್‌ಇ) ಓದುತ್ತಿದ್ದ 33 ವರ್ಷದ ಭಾರತೀಯ ವಿದ್ಯಾರ್ಥಿನಿ (Indian student ) ಕಳೆದ ವಾರ ಲಂಡನ್‌ನಲ್ಲಿ (London) ಟ್ರಕ್‌ಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ. ಮೃತರನ್ನು ಸೆಲ್ಯುಲಾರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (COAI) ನ ಡೈರೆಕ್ಟರ್ ಜನರಲ್ ಲೆಫ್ಟಿನೆಂಟ್ ಜನರಲ್ ಡಾ.ಎಸ್.ಪಿ. ಕೊಚ್ಚರ್ (Cheistha Kochar) ಎಂದು ಗುರುತಿಸಲಾಗಿದೆ. ಕೋಚಾರ್ ಎಲ್‌ಎಸ್‌ಇ ಸಂಸ್ಥೆಯಲ್ಲಿ (London School of Economics -LSE) ಬಿಹೇವಿಯರಲ್ ಸೈನ್ಸ್‌ನಲ್ಲಿ ಪಿಎಚ್‌ಡಿ ಪಡೆಯುತ್ತಿದ್ದರು. ಈ ಹಿಂದೆ ಅವರು ನೀತಿ ಆಯೋಗ್‌ನಲ್ಲಿ (ಎನ್‌ಐಟಿಐ) ಕೆಲಸ ಮಾಡಿದ್ದರು ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ತಿಳಿಸಿದೆ. ಆಕೆಯ ತಂದೆ, ನಿವೃತ್ತ ಲೆಫ್ಟಿನೆಂಟ್ ಜನರಲ್ ಡಾ.ಎಸ್.ಪಿ. ಕೊಚ್ಚಾರ್ ಅವರು ತಮ್ಮ ಮಗಳನ್ನು ನೆನಪಿಸಿಕೊಂಡು ಭಾವನಾತ್ಮಕ ಲಿಂಕ್ಡ್‌ಇನ್ ಪೋಸ್ಟ್ ಅನ್ನು ಬರೆದಿದ್ದಾರೆ.

“ನಾನು ಇನ್ನೂ ಲಂಡನ್‌ನಲ್ಲಿ ನನ್ನ ಮಗಳು ಚೀಸ್ತಾ ಕೊಚ್ಚರ್ ಅವರ ಅವಶೇಷಗಳನ್ನು ಸಂಗ್ರಹಿಸಲು ಪ್ರಯತ್ನಿಸುತ್ತಿದ್ದೇನೆ. ಮಾರ್ಚ್ 19 ರಂದು ಅವರು ಪಿಎಚ್‌ಡಿ ಮಾಡುತ್ತಿದ್ದ ಎಲ್‌ಎಸ್‌ಇ ಸಂಸ್ಥೆಯಿಂದ ಸೈಕ್ಲಿಂಗ್ ಮಾಡುತ್ತಾ ವಾಪಸಾಗುತ್ತಿದ್ದಾಗ ಕಸದ ಟ್ರಕ್‌ ಆಕೆಯ ಮೇಲೆ ಸವಾರಿ ಮಾಡಿಕೊಂಡುಹೋಗಿದೆ ಎಂದಿದ್ದಾರೆ.

ಚೈಸ್ತಾ ಕೊಚ್ಚರ್ ಹರಿಯಾಣದ ಗುರುಗ್ರಾಮ್ ನಿವಾಸಿಯಾಗಿದ್ದು, ದೆಹಲಿ ವಿಶ್ವವಿದ್ಯಾಲಯ, ಅಶೋಕ ವಿಶ್ವವಿದ್ಯಾಲಯ ಮತ್ತು ಪೆನ್ಸಿಲ್ವೇನಿಯಾ ಮತ್ತು ಚಿಕಾಗೋ ವಿಶ್ವವಿದ್ಯಾಲಯಗಳಲ್ಲಿ ತಮ್ಮ ಉನ್ನತ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ ಸೆಪ್ಟೆಂಬರ್ 2023 ರಲ್ಲಿ ಲಂಡನ್‌ಗೆ ತೆರಳಿದ್ದರು ಎಂದು ವರದಿಯಾಗಿದೆ.

ಎನ್‌ಐಟಿಐ ಆಯೋಗ್‌ನ ಮಾಜಿ ಸಿಇಒ ಅಮಿತಾಬ್ ಕಾಂತ್ ಅವರು ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಕೊಚಾರ್ ಸಾವಿನ ಸುದ್ದಿಯನ್ನು ಪೋಸ್ಟ್ ಮಾಡಿದ್ದಾರೆ.

Also Read: ಇತ್ತೀಚೆಗೆ ಕಂಡು ಕೇಳರಿಯದ ಭಾರೀ ಭಯೋತ್ಪಾದನೆ, ಹತ್ತಾರು ಬಾಂಬು ಸ್ಪೋಟ, ನೂರಾರು ಮಂದಿ ಸಾವು

ಕೋಚಾರ್ ಎಲ್‌ಎಸ್‌ಇ ಸಂಸ್ಥೆಯಲ್ಲಿ ಬಿಹೇವಿಯರಲ್ ಸೈನ್ಸ್‌ನಲ್ಲಿ ಪಿಎಚ್‌ಡಿ ಪಡೆಯುತ್ತಿದ್ದರು ಮತ್ತು ಎನ್‌ಐಟಿಐ ಆಯೋಗ್‌ನಲ್ಲಿ ಕೆಲಸ ಮಾಡಿದ್ದರು. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ (ಎಲ್‌ಎಸ್‌ಇ) ಓದುತ್ತಿದ್ದ 33 ವರ್ಷದ ಭಾರತೀಯ ವಿದ್ಯಾರ್ಥಿ ಕಳೆದ ವಾರ ಲಂಡನ್‌ನಲ್ಲಿ ಟ್ರಕ್‌ಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ. ಮೃತರನ್ನು ಸೆಲ್ಯುಲಾರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (COAI) ನ ಡೈರೆಕ್ಟರ್ ಜನರಲ್ ಲೆಫ್ಟಿನೆಂಟ್ ಜನರಲ್ ಡಾ.ಎಸ್.ಪಿ.ಕೊಚ್ಚರ್ ಎಂದು ಗುರುತಿಸಲಾಗಿದೆ.

“Cheistha Kochar ನನ್ನೊಂದಿಗೆ @NITIAayog ನಲ್ಲಿ #LIFE ಕಾರ್ಯಕ್ರಮದಲ್ಲಿ ಕೆಲಸ ಮಾಡಿದ್ದಳು. ಅವಳು #Nudge ಘಟಕದಲ್ಲಿದ್ದಳು ಮತ್ತು #LSE ನಲ್ಲಿ ಬಿಹೇವಿಯರ್​ ವಿಜ್ಞಾನದಲ್ಲಿ ತನ್ನ Ph.D ಮಾಡಲು ಹೋಗಿದ್ದಳು. ಲಂಡನ್‌ನಲ್ಲಿ ಸೈಕ್ಲಿಂಗ್ ಮಾಡುವಾಗ ಭೀಕರ ಅಪಘಾತದಲ್ಲಿ ನಿಧನರಾದರು. ಅವಳು ತೇಜಸ್ವಿ, ಅದ್ಭುತ ಮತ್ತು ಧೈರ್ಯಶಾಲಿ ಮತ್ತು ಯಾವಾಗಲೂ ಜೀವನೋತ್ಸಾಹದಿಂದ ತುಂಬಿತುಳುಕುತ್ತಿದ್ದಳು. ತುಂಬಾ ಬೇಗ ಹೊರಟುಹೋದಳು. RIP ಎಂದು ಅಮಿತಾಭ್ ಕಾಂತ್ ಮಮ್ಮಲ ಮರುಗಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್