ಇತ್ತೀಚೆಗೆ ಕಂಡು ಕೇಳರಿಯದ ಭಾರೀ ಭಯೋತ್ಪಾದನೆ, ಹತ್ತಾರು ಬಾಂಬು ಸ್ಪೋಟ, ನೂರಾರು ಮಂದಿ ಸಾವು

Moscow Terror attack: ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ಭಾರೀ ಭಯೋತ್ಪಾದಕ ದಾಳಿ (Moscow Terror attack) ನಡೆದಿದೆ. ಐವರು ಭಯೋತ್ಪಾದಕರು ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ಸಭಾಂಗಣಕ್ಕೆ (Concert hall) ನುಗ್ಗಿ ಮನಸೋಇಚ್ಛೆ ಗುಂಡಿನ ದಾಳಿ ನಡೆಸಿದ್ದಾರೆ. ಇತ್ತೀಚೆಗೆ ಕಂಡು ಕೇಳರಿಯದ ಭಾರೀ ಭಯೋತ್ಪಾದನೆ ಇದಾಗಿದ್ದು, ಹತ್ತಾರು ಬಾಂಬುಗಳು ಸ್ಪೋಟಗೊಂಡಿವೆ. ರಷ್ಯಾ ಇದನ್ನು ಭಯೋತ್ಪಾದಕ ಕೃತ್ಯ ಎಂದು ಸಾರಿದೆ.

ಇತ್ತೀಚೆಗೆ ಕಂಡು ಕೇಳರಿಯದ ಭಾರೀ ಭಯೋತ್ಪಾದನೆ, ಹತ್ತಾರು ಬಾಂಬು ಸ್ಪೋಟ, ನೂರಾರು ಮಂದಿ ಸಾವು
ಇತ್ತೀಚೆಗೆ ಕಂಡು ಕೇಳರಿಯದ ಭಾರೀ ಭಯೋತ್ಪಾದನೆ, ನೂರಾರು ಮಂದಿ ಸಾವು
Follow us
|

Updated on:Mar 23, 2024 | 6:15 AM

ಮಾಸ್ಕೋ, ಮಾರ್ಚ್​​ 23: ಭಾರತ ಸೇರಿದಂತೆ ಇಡೀ ಜಗತ್ತಿನಾದ್ಯಂತ ಇತ್ತೀಚೆಗೆ ಭಯೋತ್ಪಾದಕರ ಆಟಾಟೋಪಕ್ಕೆ ಕಡಿವಾಣ ಬಿದ್ದಿತ್ತು. ಆದರೆ ಭೀಕರ ಘಟನೆಯಲ್ಲಿ ರಷ್ಯಾದಲ್ಲಿ ಭಯೋತ್ಪಾದನೆ ನಡೆದಿದ್ದು, ಇಡೀ ಜಗತ್ತು ತಲ್ಲಣಗೊಂಡಿದೆ.  ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ಭಾರೀ ಭಯೋತ್ಪಾದಕ ದಾಳಿ (Moscow Terror attack) ನಡೆದಿದೆ. ಐವರು ಭಯೋತ್ಪಾದಕರು ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ಸಭಾಂಗಣಕ್ಕೆ (Concert hall) ನುಗ್ಗಿ ಮನಸೋಇಚ್ಛೆ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ದಾಳಿಯಲ್ಲಿ ಭಾರೀ ಸಾವುನೋವು ಸಂಭವಿಸಿದ್ದು ಸದ್ಯಕ್ಕೆ 50 ಜನರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಸಾವಿನ ಸಂಖ್ಯೆ 100ರ ಗಡಿ ದಾಟುವ ಅಪಾಯವಿದೆ. ಕಾರ್ಯಕ್ರಮ ನಡೆಯುತ್ತಿದ್ದಾಗ ಸಭಾಂಗಣದ ಒಳಗಡೆಯಿದ್ದ ಮಹಿಳೆಯರು ಮತ್ತು ಮಕ್ಕಳು ಎನ್ನದೆ ಕಂಡಕಂಡವರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದು ಬಾಂಬುಗಳನ್ನು ಎಸೆದಿದ್ದಾರೆ.

ನಾವೇ ಮಾಡಿದ್ದು ಎಂದ ಐಸಿಸ್ ಉಗ್ರ ಸಂಘಟನೆ: ರಷ್ಯಾ ರಾಜಧಾನಿ ಮಾಸ್ಕೋದ ಕನ್ಸರ್ಟ್ ಹಾಲ್‌ನಲ್ಲಿ ನಡೆದಿರುವ ಭಯೋತ್ಪಾದಕರ ದಾಳಿಯ ಹೊಣೆಯನ್ನು ಐಸಿಸ್ ಉಗ್ರ ಸಂಘಟನೆ ಹೊತ್ತುಕೊಂಡಿದೆ. ಮಾರ್ಚ್​​ 7ರಂದು ಅಮೆರಿಕವು ಭಯೋತ್ಪಾದಕ ದಾಳಿ ಬಗ್ಗೆ ರಷ್ಯಾವನ್ನು ಎಚ್ಚರಿಸಿತ್ತು.

ಗುಂಡಿನ ದಾಳಿ ಬಳಿಕ ಕಟ್ಟಡವು ಸ್ಫೋಟದಿಂದ ಹೊತ್ತಿ ಉರಿಯುತ್ತಿದೆ. ಹೊತ್ತಿ ಉರಿಯುತ್ತಿರುವ ಕಟ್ಟಡದಲ್ಲಿ ನೂರಾರು ಜನ ಸಿಲುಕಿರುವ ಅಂದಾಜಿದೆ. ಐವರು ಭಯೋತ್ಪಾದಕರ ಪೈಕಿ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಇತ್ತೀಚೆಗೆ ಕಂಡು ಕೇಳರಿಯದ ಭಾರೀ ಭಯೋತ್ಪಾದನೆ ಇದಾಗಿದ್ದು, ಹತ್ತಾರು ಬಾಂಬುಗಳು ಸ್ಪೋಟಗೊಂಡಿವೆ. ರಷ್ಯಾ ಇದನ್ನು ಭಯೋತ್ಪಾದಕ ಕೃತ್ಯ ಎಂದು ಸಾರಿದೆ.

(ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ)

Published On - 6:00 am, Sat, 23 March 24