ಲೆಬನಾನ್​ನಲ್ಲಿ ಸರಣಿ ಸ್ಫೋಟ; 8 ಜನ ಸಾವು, 2750 ಹೆಚ್ಚು ಜನರಿಗೆ ಗಾಯ

|

Updated on: Sep 17, 2024 | 9:38 PM

ಲೆಬನಾನ್‌ನಾದ್ಯಂತ ಸಂವಹನಕ್ಕಾಗಿ ಬಳಸಲಾದ ಪೇಜರ್‌ಗಳು ಸ್ಫೋಟಗೊಂಡಿದ್ದರಿಂದ ಹೆಜ್ಬೊಲ್ಲಾ ಹೋರಾಟಗಾರರು ಮತ್ತು ವೈದ್ಯರು ಸೇರಿದಂತೆ 2750 ಜನರು ಗಾಯಗೊಂಡಿದ್ದಾರೆ. ಲೆಬನಾನ್‌ನಲ್ಲಿರುವ ಇರಾನ್‌ನ ರಾಯಭಾರಿ ದೇಶದಲ್ಲಿ ಪೇಜರ್‌ಗಳ ಸ್ಫೋಟದಲ್ಲಿ ಗಾಯಗೊಂಡಿದ್ದಾರೆ.

ಲೆಬನಾನ್​ನಲ್ಲಿ ಸರಣಿ ಸ್ಫೋಟ; 8 ಜನ ಸಾವು, 2750 ಹೆಚ್ಚು ಜನರಿಗೆ ಗಾಯ
ಲೆಬನಾನ್​ನಲ್ಲಿ ಸರಣಿ ಸ್ಫೋಟ
Follow us on

ಲೆಬನಾನ್: ಇಸ್ರೇಲ್ ಉದ್ವಿಗ್ನತೆಯ ನಡುವೆ ನಿಗೂಢ ಪೇಜರ್ ಸ್ಫೋಟಗಳಲ್ಲಿ ಹಿಜ್ಬುಲ್ಲಾ ಹೋರಾಟಗಾರರು, ಇರಾನ್‌ನ ಲೆಬನಾನ್ ರಾಯಭಾರಿ ಸೇರಿದಂತೆ ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ಲೆಬನಾನ್‌ನಾದ್ಯಂತ ಏಕಕಾಲದಲ್ಲಿ ಪೇಜರ್‌ಗಳ ಸ್ಫೋಟದ ದಾಳಿಯಲ್ಲಿ 8 ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 2,750 ಮಂದಿ ಗಾಯಗೊಂಡಿದ್ದಾರೆ. ಅವರಲ್ಲಿ 200 ಮಂದಿಗೆ ಗಂಭೀರ ಗಾಯಗಳಾಗಿವೆ.

ಗಾಜಾ ಯುದ್ಧದ ಜೊತೆಗೆ ಕಳೆದ ಅಕ್ಟೋಬರ್‌ನಿಂದ ಹಿಜ್ಬುಲ್ಲಾದೊಂದಿಗೆ ಸಂಘರ್ಷದಲ್ಲಿ ತೊಡಗಿರುವ ಇಸ್ರೇಲಿ ಮಿಲಿಟರಿಯಿಂದ ಯಾವುದೇ ತಕ್ಷಣದ ಪ್ರತಿಕ್ರಿಯೆಯಿಲ್ಲ. ಇರಾನ್ ಬೆಂಬಲಿತ ಲೆಬನಾನಿನ ಉಗ್ರಗಾಮಿ ಗುಂಪು ಹಿಜ್ಬುಲ್ಲಾ ಸದಸ್ಯರು ಸೇರಿದಂತೆ 2000ಕ್ಕೂ ಹೆಚ್ಚು ಜನರು ಇಂದು ಅವರ ಸಂವಹನ ಪೇಜರ್‌ಗಳು ನಿಗೂಢವಾಗಿ ಸ್ಫೋಟಗೊಂಡಾಗ ಗಾಯಗೊಂಡಿದ್ದಾರೆ.


ಇದನ್ನೂ ಓದಿ: ಇರಾನ್​ನಲ್ಲಿ ಬಸ್​ ಪಲ್ಟಿಯಾಗಿ 35 ಪಾಕಿಸ್ತಾನಿ ಪ್ರಯಾಣಿಕರು ಸಾವು

ಬೈರುತ್‌ನಲ್ಲಿ ನಡೆದ ಪೇಜರ್ ಸ್ಫೋಟದಲ್ಲಿ ಲೆಬನಾನ್‌ನಲ್ಲಿನ ಇರಾನ್ ರಾಯಭಾರಿ ಮೊಜ್ತಾಬಾ ಅಮಾನಿ ಕೂಡ ಗಾಯಗೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪ್ರಸಾರವಾಗುವ ವೀಡಿಯೊಗಳು ಮತ್ತು ಫೋಟೋಗಳು ಗಾಯಗೊಂಡ ವ್ಯಕ್ತಿಗಳು ನೆಲದ ಮೇಲೆ ಕುಳಿತು ಅಥವಾ ಮಲಗಿರುವುದನ್ನು ತೋರಿಸಿವೆ.
ಲೆಬನಾನ್‌ನ ಪೂರ್ವದಲ್ಲಿ ಹಿಜ್ಬುಲ್ಲಾ ಸದಸ್ಯನ 10 ವರ್ಷದ ಮಗಳು ಆಕೆಯ ತಂದೆಯ ಪೇಜರ್ ಸ್ಫೋಟಗೊಂಡಾಗ ಸಾವನ್ನಪ್ಪಿದ್ದಾಳೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ