ಬ್ರೆಜಿಲ್: ಲೈವ್ ಚರ್ಚೆಯ ವೇಳೆ ಮೇಯರ್ ಅಭ್ಯರ್ಥಿಗೆ ಥಳಿಸಿದ ಪ್ರತಿಸ್ಪರ್ಧಿ
ಮಾರ್ಕಲ್ ಅವರು ಚರ್ಚೆಯನ್ನು ತಮ್ಮ ಇನ್ನೊಂದು ಅಂತರ್ಜಾಲ ಕಾರ್ಯಕ್ರಮವನ್ನಾಗಿ ಪರಿವರ್ತಿಸುತ್ತಿದ್ದಾರೆ ಎಂದು ಡೇಟೆನಾ ಹೇಳಿದ್ದು, "ಈ ಚರ್ಚೆಗಳ ಸಂಪೂರ್ಣ ಭವಿಷ್ಯವನ್ನು ಹಾಳುಮಾಡುತ್ತಿದ್ದಾರೆ" ಎಂದು ಆರೋಪಿಸಿದರು. ಆಮೇಲೆ ಸಿಟ್ಟುಗೊಂಡ ಡೇಟೆನಾ ಮಾರ್ಕಲ್ ಅವರಿಗೆ ಕುರ್ಚಿಯಿಂದ ಬಲವಾಗಿ ಹೊಡೆದಿದ್ದಾರೆ.
ಸಾವೊ ಪೌಲೊ ಸೆಪ್ಟೆಂಬರ್ 17: ಸಾವೊ ಪೌಲೊದ ಮೇಯರ್‌ಗಾಗಿ ಸ್ಪರ್ಧಿಸುತ್ತಿರುವ ಸುದ್ದಿ ನಿರೂಪಕ ಸುದ್ದಿ ವಾಹಿನಿಯ ಚರ್ಚೆಯ ಸಮಯದಲ್ಲಿ ತನ್ನ ಎದುರಾಳಿಗೆ ಕುರ್ಚಿಯಿಂದ ಹೊಡೆದಿದ್ದಾರೆ. ಭಾನುವಾರ ಸಂಜೆ ನಡೆದ ಚರ್ಚೆ ವೇಳೆ ಜೋಸ್ ಲೂಯಿಜ್ ಡೇಟೆನಾ (José Luiz Datena) ಅವರು ಇನ್‌ಸ್ಟಾಗ್ರಾಮ್ ಇನ್ಫ್ಲೂಯೆನ್ಸರ್ , ಪ್ರತಿಸ್ಪರ್ಧಿ ಪಾಬ್ಲೊ ಮಾರ್ಕಲ್‌ಗೆ (Pablo Marçal) ಕುರ್ಚಿಯಿಂದ ಬಲವಾಗಿ ಹೊಡೆದಿದ್ದಾರೆ.
ಹಲ್ಲೆಗೊಳಾದ ಮಾರ್ಕಲ್ ಉಸಿರಾಟದ ತೊಂದರೆ ಅನುಭವಿಸುತ್ತಿರುವುದಾಗಿ ಹೇಳಿದ್ದು ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಸಹಾಯಕರು ಮಾರ್ಕಲ್ ಅವರ ಪಕ್ಕೆಲುಬು ಮುರಿದಿದೆ ಎಂದು ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಅವರ ಒಂದು ಬೆರಳಿಗೆ ತೀವ್ರ ಗಾಯವಾಗಿದೆ ಎಂದು ಎಂದು ತುರ್ತು ಅಧಿಕಾರಿಗಳು ಬ್ರೆಜಿಲಿಯನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
View this post on Instagram
ಪ್ರಸ್ತುತ ರಿಕಾರ್ಡೊ ನೂನ್ಸ್ ಮತ್ತು ಎಡಪಂಥೀಯ ಅಭ್ಯರ್ಥಿ ಗಿಲ್ಹೆರ್ಮ್ ಬೌಲೋಸ್ ಅವರ ನಂತರದ ಮೂರನೇ ಸ್ಥಾನದಲ್ಲಿರುವ ಮಾರ್ಕಲ್, ತನ್ನ ಪ್ರತಿಸ್ಪರ್ಧಿ ಟಿವಿ ನಿರೂಪಕರನ್ನು “ಅಸ್ಥಿರಗೊಳಿಸಲು” ಬಯಸುವುದಾಗಿ ಹೇಳಿದ್ದು, ಅವರನ್ನು ಚುನಾವಣಾ ಕಣದಿಂದ ಹೊರದಬ್ಬುತ್ತೇನೆ ಎಂದು ಹೇಳಿದ್ದಾರೆ. ಅಕ್ಟೋಬರ್ ಆರಂಭದಲ್ಲಿ ಚುನಾವಣೆ ನಡೆಯಲಿದೆ.
ಭಾನುವಾರ, ಮಾರ್ಕಲ್ ಪದೇ ಪದೇ ಡೇಟೆನಾ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣವನ್ನು ಉಲ್ಲೇಖಿಸಿದರು. 2019 ರಲ್ಲಿ, ಡೇಟೆನಾ ಕೆಲಸ ಮಾಡಿದ ಕಾರ್ಯಕ್ರಮದ ವರದಿಗಾರ್ತಿ ಪೊಲೀಸರ ಬಳಿಗೆ ಹೋದರು. ಅವರ ಬಗ್ಗೆ ಆಗಾಗ್ಗೆ ಲೈಂಗಿಕವಾಗಿ ಸೂಚಿಸುವ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ನಂತರ ವರದಿಗಾರ ಆರೋಪವನ್ನು ಹಿಂಪಡೆದರು.
ಮಾರ್ಕಲ್ ಅವರು ಚರ್ಚೆಯನ್ನು ತಮ್ಮ ಇನ್ನೊಂದು ಅಂತರ್ಜಾಲ ಕಾರ್ಯಕ್ರಮವನ್ನಾಗಿ ಪರಿವರ್ತಿಸುತ್ತಿದ್ದಾರೆ ಎಂದು ಡೇಟೆನಾ ಹೇಳಿದ್ದು, “ಈ ಚರ್ಚೆಗಳ ಸಂಪೂರ್ಣ ಭವಿಷ್ಯವನ್ನು ಹಾಳುಮಾಡುತ್ತಿದ್ದಾರೆ” ಎಂದು ಆರೋಪಿಸಿದರು. ಲೈಂಗಿಕ ಕಿರುಕುಳದ ಹೇಳಿಕೆಗಳು ಅವರ ಕುಟುಂಬಕ್ಕೆ ಗಮನಾರ್ಹವಾದ ಭಾವನಾತ್ಮಕ ಒತ್ತಡವನ್ನು ಉಂಟುಮಾಡಿದೆ ಎಂದು ಹೇಳುವ ಮೂಲಕ ಡೇಟೆನಾ ತನ್ನ ಎದುರಾಳಿಯನ್ನು ಟೀಕೆಗಳನ್ನು ಹಿಂತೆಗೆದುಕೊಳ್ಳುವಂತೆ ಕೇಳಿಕೊಂಡರು.
ಇದನ್ನೂ ಓದಿ: ಅಮೆರಿಕದ ಸ್ವಾಮಿನಾರಾಯಣ ದೇವಸ್ಥಾನ ಧ್ವಂಸ, ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಭಾರತ
ಪ್ರತಿಕ್ರಿಯೆಯಾಗಿ, ಮಾರ್ಕಲ್ ಡೇಟೆನಾವರನ್ನುದ್ದೇಶಿಸಿ “ಬೊಗಳುತ್ತಾರೆ ಆದರೆ ಕಚ್ಚುವುದಿಲ್ಲ” ಎಂದಿದ್ದಾರೆ.
“ನೀವು ಒಮ್ಮೆ ಚರ್ಚೆಯ ಸಮಯದಲ್ಲಿ ನನಗೆ ಕಪಾಳಮೋಕ್ಷ ಮಾಡಲು ನನ್ನತ್ತ ಬಂದಿದ್ದಿರಿ. ಆದರೆ ನಿಮಗೆ ಧೈರ್ಯ ಇರಲಿಲ್ಲ ಎಂದಿದ್ದಾರೆ. ಇಷ್ಟಕ್ಕೆ ಸಿಟ್ಟುಗೊಂಡ ಡೇಟೆನಾ ಒಂದು ಕುರ್ಚಿಯನ್ನು ಎತ್ತಿಕೊಂಡು ಮಾರ್ಕಲ್ ಅವರ ಬೆನ್ನಿಗೆ ಹೊಡೆದಿದ್ದಾರೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ