ಇರಾನ್​ನಲ್ಲಿ ಬಸ್​ ಪಲ್ಟಿಯಾಗಿ 35 ಪಾಕಿಸ್ತಾನಿ ಪ್ರಯಾಣಿಕರು ಸಾವು

ಇರಾನ್​ನಲ್ಲಿ ಬಸ್ ಪಲ್ಟಿಯಾಗಿ ಪಾಕಿಸ್ತಾನದಿಂದ ಇರಾಕ್​ಗೆ ಹೊರಟಿದ್ದ 35 ಪ್ರಯಾಣಿಕರು ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಕನಿಷ್ಠ 18 ಮಂದಿ ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನದ ಡಾನ್ ನ್ಯೂಸ್ ವರದಿ ಮಾಡಿದೆ. ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.

ಇರಾನ್​ನಲ್ಲಿ ಬಸ್​ ಪಲ್ಟಿಯಾಗಿ 35 ಪಾಕಿಸ್ತಾನಿ ಪ್ರಯಾಣಿಕರು ಸಾವು
ಅಪಘಾತImage Credit source: Radio Pakistan
Follow us
|

Updated on: Aug 21, 2024 | 1:04 PM

ಪಾಕಿಸ್ತಾನದಿಂದ ಇರಾಕ್‌ಗೆ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ಇರಾನ್‌ನ ಯಾಜ್ದ್ ಪ್ರಾಂತ್ಯದಲ್ಲಿ ಉರುಳಿಬಿದ್ದಿದ್ದು, ಕನಿಷ್ಠ 35 ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಬಸ್ಸಿನಲ್ಲಿ 53 ಪ್ರಯಾಣಿಕರು ಇದ್ದರು, ಅವರಲ್ಲಿ ಹೆಚ್ಚಿನವರು ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಲರ್ಕಾನಾ ನಗರದವರು. ಇರಾನ್‌ನ ಸರ್ಕಾರಿ ಸ್ವಾಮ್ಯದ  ಐಆರ್​ಎನ್​ಎ ಸುದ್ದಿ ಸಂಸ್ಥೆ ಪ್ರಕಾರ, ಮಂಗಳವಾರ ರಾತ್ರಿ ಅಪಘಾತ ಸಂಭವಿಸಿದೆ.

ಅಪಘಾತದಲ್ಲಿ ಕನಿಷ್ಠ 18 ಮಂದಿ ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನದ ಡಾನ್ ನ್ಯೂಸ್ ವರದಿ ಮಾಡಿದೆ. ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಪಾಕಿಸ್ತಾನದ ಉಪಪ್ರಧಾನಿ ಮತ್ತು ವಿದೇಶಾಂಗ ಸಚಿವ ಇಶಾಕ್ ದಾರ್ ಅವರು ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಶಿಯಾ ಯಾತ್ರಿಕರು ಇರಾನ್‌ನ ಪವಿತ್ರ ನಗರವಾದ ಕೋಮ್‌ಗೆ ತೆರಳಿದ್ದರು. ಪಾಕಿಸ್ತಾನದಿಂದ ಬಂದ ಯಾತ್ರಿಕರು ಶಿಯಾ ಸಮುದಾಯಕ್ಕೆ ಸೇರಿದವರು. ಈ ದಿನದಂದು ಹೆಚ್ಚಿನ ಸಂಖ್ಯೆಯ ಶಿಯಾಗಳು ಕರ್ಬಲಾಕ್ಕೆ ಭೇಟಿ ನೀಡುತ್ತಾರೆ.

ಮತ್ತಷ್ಟು ಓದಿ: ಜಾರ್ಖಂಡ್ ಸಚಿವ ಚಂಪೈ ಸೊರೆನ್ ಬೆಂಗಾವಲು ವಾಹನ ಅಪಘಾತ, ಓರ್ವ ಸಾವು, ಐವರಿಗೆ ಗಾಯ

ಬಸ್‌ನ ಬ್ರೇಕ್ ಸರಿಯಾಗಿ ಹಾಕದಿರುವುದು ಅಪಘಾತಕ್ಕೆ ಕಾರಣವಾಗಿದ್ದು, ಚಾಲಕನ ನಿಯಂತ್ರಣ ತಪ್ಪಿ ಬಸ್ ಅಪಘಾತ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಅಪಘಾತದ ನಂತರ ಸ್ಥಳೀಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಗಾಯಗೊಂಡ ಪ್ರಯಾಣಿಕರನ್ನು ಆಸ್ಪತ್ರೆಗೆ ಕರೆದೊಯ್ದರು. ಈ ಪೈಕಿ ಏಳು ಮಂದಿಯ ಸ್ಥಿತಿ ಚಿಂತಾಜನಕವಾಗಿದೆ.

ಪಾಕಿಸ್ತಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಿಯಾಗಳಿದ್ದಾರೆ. ಶಿಯಾ ಯಾತ್ರಿಕರು ಇರಾನ್‌ನಿಂದ ಇರಾಕ್‌ಗೆ ಹೋಗುವ ಮಾರ್ಗವನ್ನು ಆರಿಸಿಕೊಳ್ಳುತ್ತಾರೆ. ಇಮಾಮ್ ಹುಸೇನ್ ಅವರ ಹುತಾತ್ಮರಾದ 40 ನೇ ದಿನದ ಸ್ಮರಣಾರ್ಥ ಅರ್ಬೈನ್ ಆಚರಣೆಗಾಗಿ ಪ್ರತಿ ವರ್ಷ ಲಕ್ಷಾಂತರ ಶಿಯಾಗಳು ಕರ್ಬಲಾಕ್ಕೆ ಭೇಟಿ ನೀಡುತ್ತಾರೆ. ಈ ಅಪಘಾತವು ಇರಾನ್‌ನ ರಸ್ತೆ ಸುರಕ್ಷತೆ ವಿಷಯವನ್ನು ಮತ್ತೊಮ್ಮೆ ಚರ್ಚೆಗೆ ತಂದಿದೆ. ದೇಶದಲ್ಲಿ ಪ್ರತಿ ವರ್ಷ ರಸ್ತೆ ಅಪಘಾತಗಳಲ್ಲಿ ಸರಾಸರಿ 17,000 ಸಾವುಗಳು ಸಂಭವಿಸುತ್ತಿವೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ