ನವದೆಹಲಿ: ಚೀನಾದಲ್ಲಿ (China Covid-19 Cases) ದಿನದಿಂದ ದಿನಕ್ಕೆ ಮತ್ತೆ ಕೊವಿಡ್ ಕೇಸುಗಳ ಸಂಖ್ಯೆ ತಾರಕಕ್ಕೇರುತ್ತಿದೆ. ಇದರಿಂದಾಗಿ ಚೀನಾದಲ್ಲಿ ಲಾಕ್‌ಡೌನ್ (Lockdown) ಘೋಷಿಸಲಾಗಿದ್ದು, ಸೂಪರ್‌ಮಾರ್ಕೆಟ್‌ಗಳನ್ನು ಮುಚ್ಚಲಾಗಿದೆ. ಚೀನಾದ ಪ್ರಮುಖ ಹಣಕಾಸು ಕೇಂದ್ರವಾದ ಶಾಂಘೈನಲ್ಲಿ (Shanghai) 26 ದಶಲಕ್ಷಕ್ಕೂ ಹೆಚ್ಚು ನಿವಾಸಿಗಳು ಆಹಾರವನ್ನು ಸಂಗ್ರಹಿಸಲು ಪರದಾಡುತ್ತಿದ್ದಾರೆ. ಹೊಸ ಕೊರೋನಾ ವೈರಸ್ ಪ್ರಕರಣಗಳು 13,000ಕ್ಕಿಂತ ಹೆಚ್ಚಾದ ಹಿನ್ನೆಲೆಯಲ್ಲಿ ಚೀನಾ ತನ್ನ ಅತಿದೊಡ್ಡ ನಗರವಾದ ಶಾಂಘೈನಲ್ಲಿ ಕೊವಿಡ್ -19 ನಿರ್ಬಂಧಗಳನ್ನು ವಿಸ್ತರಿಸಿದೆ.
ಶಾಂಘೈನ ಪಶ್ಚಿಮ ಜಿಲ್ಲೆಗಳಲ್ಲಿ ಮಂಗಳವಾರ ಕೊನೆಗೊಳ್ಳಲಿದ್ದ ಎರಡನೇ ಹಂತದ ಲಾಕ್‌ಡೌನ್ ಅನ್ನು ಮತ್ತೆ ವಿಸ್ತರಿಸಲಾಗಿದೆ. ಚೀನಾದಲ್ಲಿ ರೋಗಲಕ್ಷಣಗಳಿಲ್ಲದ ಕೊವಿಡ್ -19 ಸೋಂಕಿತರಿಗೆ ಮನೆಯಲ್ಲಿಯೇ ಕ್ವಾರಂಟೈನ್ ಮಾಡಲು ಅನುಮತಿಸಬೇಕೆಂದು ಹಲವರು ಕರೆ ನೀಡಿದ್ದಾರೆ. ಶಾಂಘೈ ನಗರದ ಆರೋಗ್ಯ ಆಯೋಗದ ಅಧಿಕಾರಿ ವು ಕಿಯಾನ್ಯು ಈ ಬಗ್ಗೆ ಮಾಹಿತಿ ನೀಡಿದ್ದು, ಎರಡು ವರ್ಷಗಳ ಹಿಂದೆ ಸಾಂಕ್ರಾಮಿಕ ರೋಗವು ಭುಗಿಲೆದ್ದ ನಂತರ ಶಾಂಘೈ ಸಮಯದ ವಿರುದ್ಧ ಓಟ ನಡೆಸುತ್ತಲೇ ಇದೆ. ಇದೀಗ ಮತ್ತೆ ಚೀನಾದಲ್ಲಿ ಕೆಟ್ಟ ಪರಿಸ್ಥಿತಿಗಳು ಎದುರಾಗಿವೆ ಎಂದಿದ್ದಾರೆ.
ಸೂಪರ್ಮಾರ್ಕೆಟ್ ಸೇರಿದಂತೆ ಅಗತ್ಯ ವಸ್ತುಗಳ ಅಂಗಡಿಗಳನ್ನೂ ಬಂದ್ ಮಾಡಿರುವುದರಿಂದ ಜನರ ಮನೆಗಳಿಗೆ ಆಹಾರ ಮತ್ತು ದಿನನಿತ್ಯದ ವಸ್ತುಗಳ ವಿತರಣೆ ಮಾಡುವುದು ದೊಡ್ಡ ಸವಾಲಾಗಿದೆ. ಶಾಂಘೈ ನಗರದಲ್ಲಿನ ಪ್ರಮುಖ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಕೆಲಸ ಮಾಡುವ 11,000 ರೈಡರ್‌ಗಳು ಪ್ರತಿದಿನ ಕೋವಿಡ್ ನೆಗೆಟಿವ್ ನ್ಯೂಕ್ಲಿಯಿಕ್ ಆಸಿಡ್ ಮತ್ತು ಆಂಟಿಜೆನ್ ಪರೀಕ್ಷೆಗಳನ್ನು ಮಾಡಿಸಿಕೊಂಡರೆ ಕೆಲಸಕ್ಕೆ ಹೋಗಬಹುದು ಎಂದು ಸೂಚಿಸಲಾಗಿದೆ ಎಂದು ಜೀ ನ್ಯೂಸ್ ವರದಿ ಮಾಡಿದೆ.
ಶಾಂಘೈನಲ್ಲಿ 16,766 ಹೊಸ ಲಕ್ಷಣರಹಿತ ಕೋವಿಡ್-19 ಪ್ರಕರಣಗಳು ದಾಖಲಾಗಿವೆ. ಶಾಂಘೈನಲ್ಲಿ ಮಂಗಳವಾರ ದಾಖಲೆಯ 16,766 ಹೊಸ ಲಕ್ಷಣರಹಿತ ಕೊರೊನಾವೈರಸ್ ಪ್ರಕರಣಗಳು ದಾಖಲಾಗಿದ್ದವು. ರೋಗಲಕ್ಷಣದ ಕೊವಿಡ್ ಪ್ರಕರಣಗಳು ಕೂಡ ಹೆಚ್ಚುತ್ತಲೇ ಇವೆ. ಇದು ಚೀನಾದಲ್ಲಿ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲೂ ಭಾರೀ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.
ಚೀನಾದಲ್ಲಿ 1,415 ಹೊಸ ಕೋವಿಡ್-19 ಪ್ರಕರಣಗಳು ದಾಖಲಾಗಿವೆ. ಚೀನಾದಾದ್ಯಂತ ಸುಮಾರು 200 ಮಿಲಿಯನ್ ಜನರು ಲಾಕ್ಡೌನ್ಗೆ ಒಳಗಾಗಿದ್ದಾರೆ.
ಇದನ್ನೂ ಓದಿ: Covid-19 4th Wave: ಚೀನಾದಲ್ಲಿ ಹೆಚ್ಚಿದ ಕೊವಿಡ್ ಅಬ್ಬರ; 26 ಮಿಲಿಯನ್ ಜನಸಂಖ್ಯೆಯಿರುವ ಶಾಂಘೈ ಲಾಕ್‌ಡೌನ್
ಚೀನಾದಲ್ಲಿ ಕೊವಿಡ್: ಶಾಂಘೈ ನಗರ ಲಾಕ್‌ಡೌನ್, ಪ್ರಾಣಿಗಳನ್ನೂ ಮನೆಯಿಂದ ಹೊರಗೆ ಬಿಡುವಂತಿಲ್ಲ